ಚೆಲುವು ಎಂದರೆ ಬಾಯಿ ಬಿಡುವ ಲೋಕ ಬಾಲಿವುಡ್. ಇಲ್ಲಿನ ನಾಯಕಿಯರು ತಾವು ಸುಂದರವಾಗಿದ್ದರೂ ಇನ್ನಷ್ಟು ಬ್ಯೂಟಿಯಾಗಿ ಕಾಣಿಸಿಕೊಳ್ಳಬೇಕು ಅಂತ ಪ್ಲಾಸ್ಟಿಕ್ ಸರ್ಜರಿಗಳ ಮೊರೆ ಹೋಗುತ್ತಾರೆ. ಅದು ಎಷ್ಟೇ ಫೇಕ್ ಆಗಿರಲಿ, ಯಾತನಾಮಯ ಆಗಿರಲಿ- ತಮ್ಮ ಮುಖವನ್ನೋ ಎದೆಯನ್ನೋ ಶಸ್ತ್ರಚಿಕಿತ್ಸೆಯ ಚೂರಿ ಕತ್ತರಿಗಳಿಗೆ ಒಪ್ಪಿಸಲು ಹಿಂಜರಿಯುವುದಿಲ್ಲ. ಆದರೆ ಇನ್ನಷ್ಟು ಬ್ಯೂಟಿಫುಲ್ಲಾಗಿ ಕಾಣಿಸಿಕೊಳ್ಳುವ ಇವರ ಆಸೆ ಕೆಲವೊಮ್ಮೆ ಮಾತ್ರ ಈಡೇರುತ್ತದೆ. ಇನ್ನು ಹಲವರ ಕೆರಿಯರ್‌ಗೆ, ಬಾಳಿಗೆ ಪ್ಲಾಸ್ಟಿಕ್ ಸರ್ಜರಿ ದುರಂತವಾಗಿ ಪರಿಣಮಿಸಿದೆ. ಹಾಗಿದ್ರೆ ಪ್ಲಾಸ್ಟಿಕ್ ಸರ್ಜರಿಯಿಂದ ತಮ್ಮ ಕರಿಯರ್ ಢಮಾರ್ ಮಾಡಿಕೊಂಡವರು ಯಾರು ತಿಳಿಯೋಣವೇ? 

ಅನುಷ್ಕಾ ಶರ್ಮಾ
ಅನುಷ್ಕಾ ಶರ್ಮಾ ಮುಖ ಚೆನ್ನಾಗಿಯೇ ಇತ್ತು. ಆದರೆ ತಮ್ಮ ತುಟಿಗಳ ಬಗ್ಗೆ ಆಕೆಗೆ ಕೀಳರಿಮೆ ಇತ್ತು. ಅವು ಸಣ್ಣದಾಗಿವೆ ಎಂಬ ಭಾವನೆ ಇತ್ತು. ಅದನ್ನು ಸರಿಪಡಿಸಿಕೊಳ್ಳಲು ಲಿಪ್ ಸರ್ಜರಿ ಮಾಡಿಸಿಕೊಂಡಳು. ಆದರೆ ಆ ಬಳಿಕ ಆಕೆಯ ತುಟಿಗಳು ಬಾತುಕೋಳಿಯ ತುಟಿಗಳ ಥರ ಆಗಿಬಿಟ್ಟವು. ಕರಣ್ ಜೋಹರ್ ಶೋನಲ್ಲಿ ಸರ್ಜರಿಯ ಬಳಿಕ ಆಕೆ ಕಾಣಿಸಿಕೊಂಡಾಗ ಆಕೆಯನ್ನು ಎಲ್ಲರೂ ಗೇಲಿ ಮಾಡಿದ್ದೇ ಮಾಡಿದ್ದು. ಆದ್ರೆ ಅನುಷ್ಕಾ ತಾನು ಸರ್ಜರಿ ಮಾಡಿಸಿಕೊಂಡಿಲ್ಲ ಎಂದೇ ವಾದಿಸಿದಳು. ಅದು ಕೇವಲ ತುಟಿಯನ್ನು ಸ್ವಲ್ಪ ದಪ್ಪ ಮಾಡುವ ಒಂದು ಸಣ್ಣ ಶಸ್ತ್ರಕ್ರಿಯೆ ಅಂದಳು. ನಂತರವೇನೂ ಹಿಂದಿ ಚಿತ್ರಗಳಲ್ಲಿ ಆಕೆಗೆ ಬೇಡಿಕೆಯೇನೂ ಹೆಚ್ಚಾಗಲಿಲ್ಲ.  

ಆನೆ ಬಂತೊಂದು ಆನೆ.. ಜೊತೆಗೆ ಬೆತ್ತಲೆ ರಾಣಿನೂ ಬಂದ್ರು! ...

ಕೊಯೆನಾ ಮಿತ್ರಾ
ಕೊಯೆನಾ ಮಿತ್ರಾ ಅಪರೂಪದ ಬಂಗಾಲಿ ಸುಂದರಿಯಾಗಿದ್ದಳು. ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದು ಬಂದಿದ್ದಳು. ಕೆಲವು ಸಿನಿಮಾಗಳಲ್ಲೂ ನಟಿಸಿ, ಭರವಸೆಯ ತಾರೆ ಎಂದು ಹೆಸರು ಮಾಡಿದ್ದಳು. ಅವಳ ಮುಖ ಪರ್‌ಫೆಕ್ಟಾಗಿಯೇ ಇತ್ತು. ಆದರೆ ಯಾರೋ ಏನೋ ಆಕೆಯ ಮೂಗಿನ ಬಗ್ಗೆ ಕೊಂಕು ಮಾತಾಡಿರಬೇಕು. ಅದು ದಪ್ಪವಾಗಿದೆ ಎಂಬ ಕೊರಗು ಆಕೆಗೆ ಶುರುವಾಯಿತು. ಮೂಗು ಸರ್ಜರಿ ಮಾಡಿಸಿಕೊಂಡಳು. ಆದರೆ ಸಪೂರಗೊಳಿಸಲಾದ ಮೂಗು ಆಕೆಯ ಉರುಟು ಮುಖಕ್ಕೆ ಹೊಂದಿಕೊಳ್ಳಲೇ ಇಲ್ಲ. ಈಗ ಆಕೆ ಬಾಲಿವುಡ್‌ನ ಯಾವ ಮೂಲೆಯಲ್ಲೂ ಕಾಣಿಸಿಕೊಳ್ಳುತ್ತಿಲ್ಲ. 

ಅಯೇಷಾ ಟಕಿಯಾ
ಅಯೇಷಾ ಟಕಿಯಾ ಮುಖ ಪರಮ ಸುಂದರವಾಗಿತ್ತು. ಯಾವುದು ಎಲ್ಲಿರಬೇಕೋ ಅಲ್ಲಿದ್ದು, ಲಕ್ಷಾಂತರ ಮಂದಿಯ ಮನಸ್ಸನ್ನೂ ಆಕೆ ಕದ್ದಿದ್ದಳು. ಸುಂದರವಾದ ಕಂಗಳೂ ಇದ್ದವು. ತುಟಿಗಳಿಗೆ ಪ್ರಾಬ್ಲೆಮ್ಮೇ ಇರಲಿಲ್ಲ. ಆದರೆ ಆಕೆ ಏಕಾಏಕಿ ಲಿಪ್ ಜಾಬ್‌ ಮಾಡಿಸಿಕೊಂಡಳು. ಅವಳ ತುಟಿಗಳು ಮಾಟಗಾತಿಯ ತುಟಿಗಳಂತೆ ವಿಕಾರವಾಗಿ ಉಬ್ಬಿಕೊಂಡವು. ಇಂದು ಆಕೆಯ ಮುಖ ಮೊದಲಿನಂತಿಲ್ಲ. ಆಕೆ ಕೂಡ ಯಾವ ಸಿನಿಮಾದಲ್ಲೂ ನಟಿಸುತ್ತಿಲ್ಲ. 

'ನನ್ನಂತ ರೆಬಲ್ ಇಲ್ಲ.. 15ನೇ ವಯಸ್ಸಿನಲ್ಲಿ ಅಪ್ಪನ ವಿರುದ್ಧವೇ ತಿರುಗಿಬಿದ್ದಿದ್ದೆ' ...

ರಾಖಿ ಸಾವಂತ್
ರಾಖಿ ಸಾವಂತ್ ಮೊದಲು ಐಟಂ ಗರ್ಲ್ ಆಗಿ ಬಾಲಿವುಡ್‌ಗೆ ಪರಿಚಯಗೊಂಡಳು. ವಿವಾದಗಳಿಂದ ಪ್ರಸಿದ್ಧಳಾದಳು. ಇನ್ನೇನು ಹೀರೋಯಿನ್ ಆಗಬೇಕು ಅನ್ನುವಷ್ಟರಲ್ಲಿ ತನ್ನ ರೂಪದ ಬಗ್ಗೆ ಕೀಳರಿಮೆ ಆರಂಭವಾಯಿತು ಆಕೆಗೆ. ತುಟಿ ಕೆತ್ತಿಸಿಕೊಂಡಳು. ಮೂಗು ಕೊಯ್ಯಿಸಿಕೊಂಡಳು. ಕಪೋಲಗಳನ್ನು ಕೆಳಗೆ ಕೆತ್ತಿಸಿ ತೆಗೆದು ಮೇಲೆ ಅಂಟಿಸಿಕೊಂಡು ಡಿಂಪಲ್ ಸೃಷ್ಟಿಸಲು ಯತ್ನಿಸಿದಳು. ಹುಬ್ಬುಗಳನ್ನು ವಿಸ್ತಾರಗೊಳಿಸಿದಳು, ಗಲ್ಲವನ್ನು ಇನ್ನಷ್ಟು ಚೂಪಾಗಿಸಲು ಯತ್ನಿಸಿದಳು, ಹೀಗೇ ಹಲವು ಸರಣಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಳು. ಇದೆಲ್ಲದರಿಂದ ಮುಖ ವಿಕಾರವಾಯಿತು. ಈಗ ನಡೆದಾಡುವ ಬಟ್ಟೆಯಂಗಡಿಯ ಗೊಂಬೆಯಂತೆ ಕಾಣುತ್ತಾಳೆ.  

ಇಶಾ ಡಿಯೋಲ್
ಹೇಮಾಮಾಲಿನಿಯ ಮಗಳು ಇಶಾ ಡಿಯೋಲ್ ತನ್ನ ತುಟಿಗಳ ಸರ್ಜರಿ ಮಾಡಿಸಿಕೊಂಡಿದ್ದಾಳೆ. ಆದರೆ ಅದೂ ವಿಫಲವಾಗಿದೆ, ಆಕೆಯ ಬಾಲಿವುಡ್‌ ಕೆರಿಯರ್‌ನ ಹಾಗೆಯೇ.

ಉಮ್ರಾವ್ ಜಾನ್ ಪಾತ್ರಕ್ಕೆ ಐಶ್ವರ್ಯಾ ಅಲ್ಲ, ಮೊದಲು ಆಯ್ಕೆಯಾಗಿದ್ದು ಈ ನಟಿ! ...

ಗೌಹರ್‌ ಖಾನ್
ಈಕೆಯ ಮುಖ ನಿಜಕ್ಕೂ ಸುಂದರವಾಗಿತ್ತು. ತುಟಿಗಳು ಆಕೆಯ ಮುಖಕ್ಕೆ ತುಸುವೇ ದೊಡ್ಡದಾಗಿದ್ದರೂ ಸೂಮದರವಾಗಿದ್ದವು. ಆದರೆ ತುಟಿಗಳನ್ನು ಸಣ್ಣಗಾಗಿಸಿಕೊಳ್ಳುವ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡದ್ದು ಆಕೆಗೆ ದುಬಾರಿಯಾಗಿ ಪರಿಣಮಿಸಿತು. ಮಾಡೆಲ್ ಆಗಿದ್ದ ಆಕೆ ಇದರಿಂದಾಗಿ ಫ್ಯಾಶನ್ ಶೋದಿಂದ ಹೊರನಡೆಯಬೇಕಾಗಿಯೂ ಬಂತು. 

ಸೋಫಿಯಾ ಹಯಾತ್
ಮಾಡೆಲ್ ಕಂ ನಟಿಯಾಗಿದ್ದ ಈಕೆ ಕ್ರಿಕೆಟರ್ ರೋಹಿತ್ ಶರ್ಮಾ ಜತೆ ಡೇಟಿಂಗ್ ನಡೆಸಿ ಸುದ್ದಿಯಾದಳು. ಫಿಲಂಗಳಲ್ಲಿ ನಟಿಸಲು ಮುಂದಾದಾಗ ತುಟಿ ಸರ್ಜರಿ ಮಾಡಿಸಿಕೊಂಡಳು. ಅನಾಹುತವಾಯಿತು. ತುಟಿಗಳು ಒಣಗಿದ ಮೈದಾಹಿಟ್ಟಿನಂತೆ ಉಬ್ಬಿಕೊಂಡು, ವಿಕಾರವಾಗಿ ಕಂಡವು.