ತುಕಾಲಿ ಮಾನಸಗೆ ಕಾಮಿಡಿ ಕಲಿಸಿದ ಗುರು ಯಾರು ಗೊತ್ತಾ?

ಗಿಚ್ಚಿ ಗಿಲಿಗಿಲಿ ಸೀಸನ್-3ರ ನಾನ್ ಕಾಮಿಡಿಯನ್ ವಿಭಾಗದಲ್ಲಿ ತುಕಾಲಿ ಮಾನಸ ರನ್ನರ್ ಅಪ್ ಆಗಿದ್ದಾರೆ. ಆದರೆ ಅವರಿಗೆ ಕಾಮಿಡಿ ನಟನೆಯನ್ನು ಕಲಿಸಿದ ಗುರು ಯಾರು ಎಂಬುದು ಇಲ್ಲಿದೆ. ತುಕಾಲಿ ಮಾನಸ ಅವರ ನಟನೆಯಲ್ಲಾದ ಬದಲಾವಣೆಗೆ ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Do you know who is guru who taught Tukali Manasa comedy sat

ಬೆಂಗಳೂರು (ಸೆ.17): ಗಿಚ್ಚಿ ಗಿಲಿಗಿಲಿ ಸೀಸನ್-3ರ ನಾನ್ ಕಾಮಿಡಿಯನ್ ವಿಭಾಗದಲ್ಲಿ ತುಕಾಲಿ ಮಾನಸ ಅವರು ರನ್ನರ್ ಅಪ್ ಆಗಿದ್ದಾರೆ. ಯಾವುದೇ ವೇದಿಕೆಯಲ್ಲಿ ಕಾಣಿಸಿಕೊಂಡರೂ ಕಾಮಿಡಿ ಮಾಡಲು ಬರದೇ ತನ್ನ ಮುಗ್ದ ಮಾತುಗಳಿಂದಲೇ ಜನರನ್ನು ನಗಿಸುತ್ತಿದ್ದ ತುಕಾಲಿ ಮಾನಸಾಗೆ ಹಾಸ್ಯವನ್ನು ಕಲಿಸಿದ ಗುರು ಯಾರು ಗೊತ್ತಾ? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಮಾಹಿತಿ..

ಗಿಚ್ಚಿ ಗಿಲಿಗಿಲಿ ಸೀಸನ್ 3ರಲ್ಲಿ ಹಲವು ಘಟನಾನುಘಟಿ ಕಾಮಿಡಿಯನ್‌ಗಳು ಸ್ಪರ್ಧಿಸಿದ್ದರು. ಅದರಲ್ಲಿ ಪಾವಗಡ ಮಂಜು, ಹುಲಿ ಕಾರ್ತಿಕ್, ಚಂದ್ರಪ್ರಭ ಮತ್ತು ತುಕಾಲಿ ಸಂತೋಷ್, ವಿನೋದ್ ಗೊಬ್ರಗಾಲ, ರಾಘವೇಂದ್ರ ಸೇರಿ ಹಲವರಿದ್ದರು. ಆದರೆ, ಇದರಲ್ಲಿ ಹುಲಿ ಕಾರ್ತಿಕ್ ವಿನ್ನರ್ ಆಗಿದ್ದಾರೆ. ಹುಲಿ ಕಾರ್ತಿಕ್‌ಗೆ ಬರೋಬ್ಬರಿ 10 ಲಕ್ಷ ರೂ, ಮೌಲ್ಯದ ಚಿನ್ನದ ಬೆಲ್ಟ್ ಅನ್ನು ಕೊಡಲಾಗಿದೆ. ಇನ್ನು ಈ ಸೀಸನ್‌ನಲ್ಲಿ ನಾನ್ ಕಾಮಿಡಿಯನ್ ವಿಭಾಗದಲ್ಲಿಯೂ ಹಲವಿ ಜನರು ಆಗಮಿಸಿದ್ದರು. ಅದರಲ್ಲಿ ತುಕಾಲಿ ಸಂತು ಅವರ ಪತ್ನಿ ತುಕಾಲಿ ಮಾನಸ ಕೂಡ ಕಂಟೆಸ್ಟೆಂಟ್ ಆಗಿ ಬಂದಿದ್ದು, ಇದೀಗ ರನ್ನರ್ ಅಪ್ ಪ್ರಶಸ್ತಿ ಗೆದ್ದಿದ್ದಾಳೆ. ಈ ಮೂಲಕ 3 ಲಕ್ಷ ರೂ. ಮೌಲದ್ಯ ಬೆಳ್ಳಿಯ ಬೆಲ್ಟ್ ಅನ್ನು ತನ್ನದಾಗಿಸಿಕೊಂಡಿದ್ದಾಳೆ. ನಿಜಕ್ಕೂ ತುಕಾಲಿ ಮಾನಸ ಅವರ ನಟನೆಯಲ್ಲಾದ ಬದಲಾವಣೆ ನೋಡಿದರೆ ನಿಜಕ್ಕೂ ಈ ಪ್ರಶಸ್ತಿಗೆ ಅರ್ಹಳೆಂದು ಕಾಣುತ್ತಿದೆ. ಆದರೆ, ಮಾನಸಾಗೆ ಈ ಕಾಮಿಡಿ ನಟನೆಯನ್ನು ಕಲಿಸಿದ ಗುರು ಯಾರು ಗೊತ್ತಾ.? ಇಲ್ಲಿದೆ ನೋಡಿ ಗುರುಗಳ ವಿವರ..

ಯಾರೂ ಕೂಡ ಮೋಸ ಹೋಗಬೇಡಿ ಕಳಕಳಿಯ ಮನವಿ ಮಾಡಿದ್ರು ಗಿಚ್ಚಿಗಿಲಿಗಿಲಿ ತುಕಾಲಿ ಸಂತು ಪತ್ನಿ ಮಾನಸ

ಗಂಡನೇ ಗುರುವಾಗಿ ಕಲಿಸಿದ ಪಾಠ ಯಶಸ್ವಿ:
ಒಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತದೆ. ಆದರೆ, ತುಕಾಲಿ ಮಾನಸ ಅವರ ವಿಚಾರದಲ್ಲಿ ಒಬ್ಬ ಯಶಸ್ವಿ ಮಹಿಳೆಯ ಹಿಂದೆ ಒಬ್ಬ ಪುರುಷ ಇದ್ದಾನೆ ಎಂದು ಹೇಳಬಹುದು. ತುಕಾಲಿ ಮಾನಸ ಅವರ ಹಾಸ್ಯ ನಟನೆಯ ಕಲಿಕೆ, ಪ್ರದರ್ಶನ ಹಾಗೂ ಕಾಮಿಡಿ ವೇದಿಕೆಗಳನ್ನು ಸಮಪರ್ಕವಾಗಿ ಬಳಸಿಕೊಳ್ಳುವ ಶೈಲಿಯನ್ನು ಕಲಿತುಕೊಳ್ಳಲು ತುಕಾಲಿ ಸಂತೋಷ್ ಅವರು ತಮ್ಮ ಹೆಂಡತಿಗೆ ತಿದ್ದಿ ಹೇಳಿದ್ದಾರೆ. ಇನ್ನು ತುಕಾಲಿ ಸಂತೋಷ್ ತಾನೂ ಕೂಡ ಒಬ್ಬ ಗಿಚ್ಚಿ ಗಿಲಿ ಗಿಲಿ ವೇದಿಕೆ ಕಂಟೆಸ್ಟೆಂಟ್ ಆಗಿ ಪ್ರಾಕ್ಟೀಸ್ ಮಾಡುತ್ತಾ ತನ್ನ ಹೆಂಡತಿ ಮಾನಸಗೂ ಪ್ರತಿನಿತ್ಯ ನಟನೆಯ ಬಗ್ಗೆ ಗುರುವಾಗಿ ಹೇಳಿಕೊಟ್ಟಿದ್ದಾರೆ. ಇದರ ಫಲವೇ ತುಕಾಲಿ ಮಾನಸ ಗಿಚ್ಚಿ ಗಿಲಿ ಗಿಲಿ ರನ್ನರ್ ಅಪ್ ಆಗಲು ಕಾರಣವಾಗಿದೆ.

ಲೋ ತಾಂಡವ್​, ಶ್ರೇಷ್ಠಾ ಬೇಕೇನೋ ನಿನಗೆ? ಕೋಲು ಹಿಡಿದು ಬಂದ ಅಜ್ಜಿ ಕೋಪಕ್ಕೆ ತಾಂಡವ್​ ಸುಸ್ತೋ ಸುಸ್ತು!

ಆರಂಭದಲ್ಲಿ ನಟನೆಯೇ ಬರುತ್ತಿರಲಿಲ್ಲ:  ಗಿಚ್ಚಿ ಗಿಲಿಗಿಲಿ ಆರಂಭದಲ್ಲಿ ನಟನೆಯೇ ಬರುತ್ತಿರಲಿಲ್ಲ. ಒಂದು ಡೈಲಾಗ್ ಕೂಡ ನೆನಪು ಉಳಿಯುತ್ತಿರಲಿಲ್ಲ. ಕಾಮಿಡಿ ವೇದಿಕೆಗೆ ಮಾನಸ ಸೂಟ್ ಆಗುವುದಿಲ್ಲ ಎಂದವರೂ ಇದ್ದರು. ಆದರೆ, ನಾಲ್ಕೈದು ವಾರಗಳು ಕಳೆದ ನಂತರ ಮಾನಸ ಅವರಲ್ಲಿ ಭಾರೀ ಬದಲಾವಣೆ ಕಂಡುಬಂದಿತ್ತು. ಕೆಲವು ಡೈಲಾಗ್, ಸೂಕ್ತ ಡ್ರೆಸ್ಸಿಂಗ್ ಸೆನ್ಸ್, ಸಮಯಕ್ಕೆ ತಕ್ಕಂತೆ ಡೈಲಾಗ್ ಡೆಲಿವರಿ ಮಾಡುವುದನ್ನು ಮೈಗೂಡಿಸಿಕೊಂಡರು. ಇದಾದ ನಂತರ ಫೈನಲ್ ಬರುವ ವೇಳೆಗೆ ಹಾಸ್ಯ ಕಲಾವಿದರಿಗೆ ಅಗತ್ಯವಿರುವ ಎಲ್ಲ ಹಾವ ಭಾವಗಳನ್ನು ಮೈಗೂಡಿಸಿಕೊಂಡಿದ್ದು, ಉತ್ತಮ ನಟನೆಯನ್ನೂ ಮಾಡಲಾರಂಭಿಸಿದರು. ಇದನ್ನು ನೋಡಿದ ವೀಕ್ಷಕರು ಮಾನಸ ಅವರಲ್ಲಿ ಉಂಟಾದ ಬದಲಾವಣೆಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು.

Do you know who is guru who taught Tukali Manasa comedy sat

Latest Videos
Follow Us:
Download App:
  • android
  • ios