ಲೋ ತಾಂಡವ್, ಶ್ರೇಷ್ಠಾ ಬೇಕೇನೋ ನಿನಗೆ? ಕೋಲು ಹಿಡಿದು ಬಂದ ಅಜ್ಜಿ ಕೋಪಕ್ಕೆ ತಾಂಡವ್ ಸುಸ್ತೋ ಸುಸ್ತು!
ಮುದ್ದಾದ ಪತ್ನಿ, ಮಕ್ಕಳನ್ನು ಬಿಟ್ಟು ತಾಂಡವ್, ಶ್ರೇಷ್ಠಾಳ ಹಿಂದೆ ಹೋಗಿರುವುದಕ್ಕೆ ಭಾಗ್ಯಲಕ್ಷ್ಮಿ ಸೀರಿಯಲ್ ಅಭಿಮಾನಿ ಅಜ್ಜಿಯೊಬ್ಬರು ತಾಂಡವ್ಗೆ ಹೇಗೆ ಕ್ಲಾಸ್ ತೆಗೆದುಕೊಂಡಿದ್ದಾರೆ ನೋಡಿ!
ಇಬ್ಬರು ಬೆಳೆದು ನಿಂತ ಮಕ್ಕಳು, ಮುದ್ದಾದ ಪತ್ನಿಯನ್ನು ಬಿಟ್ಟು ಬೇರೊಬ್ಬಳ ಹಿಂದೆ ಬಿದ್ದಿರೋ ತಾಂಡವ್, ಇದೀಗ ಆ ಲವರ್ ಜೊತೆ ಹಸೆಮಣೆ ಏರಿದ್ದಾನೆ. ತನ್ನ ಭಾವ ತಾಂಡವ್ ಶ್ರೇಷ್ಠಾಳ ಹಿಂದೆ ಬಿದ್ದಿರೋದು ತಿಳಿದಿದ್ದರೂ ಇಲ್ಲಿಯವರೆಗೆ ಸುಮ್ಮನಿದ್ದ ಭಾಗ್ಯಳ ತಂಗಿ ಪೂಜಾ ಈಗ ಮದುವೆ ತಪ್ಪಿಸಲು ಬಂದಿದ್ದಾರೆ. ಅದೇ ಇನ್ನೊಂದೆಡೆ ತಾಂಡವ್ ಅಮ್ಮ ಕುಸುಮಾಗೂ ವಿಷಯ ಗೊತ್ತಾಗಿದೆ. ಇದರ ಅರಿವಾಗುತ್ತಿದ್ದಂತೆಯೇ, ಕೈಯಲ್ಲಿ ಕತ್ತಿ ಹಿಡಿದು ಪೂಜಾ ಜೊತೆ ಟ್ರ್ಯಾಕ್ಟರ್ ಮೇಲೆ ಕುಸುಮಾ ಮದುವೆ ಮನೆಗೆ ಎಂಟ್ರಿ ಕೊಟ್ಟಿದ್ದಾಳೆ! ಕಾಳಿಯವತಾರ ತಾಳಿದ್ದಾಳೆ. ಇನ್ನೇನು ತಾಂಡವ್ ಶ್ರೇಷ್ಠಾಳ ಕುತ್ತಿಗೆಗೆ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿಯೇ ಎಂಟ್ರಿ ಕೊಟ್ಟಿರೋ ಕುಸುಮಾ ಮತ್ತು ಪೂಜಾ, ಮದುವೆಯನ್ನು ನಿಲ್ಲಿಸಿದ್ದಾರೆ. ಮದುವೆ ಮನೆಯ ಎಲ್ಲಾ ಸಾಮಗ್ರಿಗಳನ್ನೂ ಚೆಲ್ಲಾಪಿಲ್ಲಿ ಮಾಡಿದ್ದಾಳೆ ಕುಸುಮಾ.
ಇದು ಸೀರಿಯಲ್ ಕಥೆಯಾದರೆ, ಇತ್ತ ಕಲರ್ಸ್ ಕನ್ನಡ ವಾಹಿನಿಯ ಅನುಬಂಧ ಅವಾರ್ಡ್ ನಡೆಯುತ್ತಿದೆ. ಅದಕ್ಕೆ ಆಗಮಿಸಿರುವ ಅಜ್ಜಿಯೊಬ್ಬರು ವೇದಿಕೆಯ ಮೇಲೆ ತಾಂಡವ್ ಬೆವರು ಇಳಿಸಿದ್ದಾರೆ. ಏ ತಾಂಡವ್, ಭಾಗ್ಯ ಇರುವಾಗ ಇನ್ನೊಬ್ಬಳು ಯಾಕೋ ನಿನಗೆ ಎಂದು ಗದರಿದ್ದಾಳೆ. ನನ್ನ ಎದುರಿಗೆ ಬಾರೋ ಮಾಡ್ತೇನೆ ನಿನಗೆ ಎಂದು ಬೆತ್ತ ಹಿಡಿದು ಗದರಿದ್ದಾಳೆ. ಅಲ್ಲೇ ಇದ್ದ ಶ್ರೇಷ್ಠಾಳನ್ನೂ ಕರೆದು ಅವಳಿಗೂ ಆವಾಜ್ ಹಾಕಿದ್ದಾರೆ ಅಜ್ಜಿ. ಇದರ ಪ್ರೊಮೋ ಬಿಡುಗಡೆಯಾಗುತ್ತಲೇ ಅಜ್ಜಿಗೆ ನೆಟ್ಟಿಗರು ಭೇಷ್ ಭೇಷ್ ಎನ್ನುತ್ತಿದ್ದಾರೆ. ನೀವು ನಮ್ಮ ಮನಸ್ಸಿನಲ್ಲಿ ಇದ್ದುದನ್ನು ಹೇಳಿದ್ದೀರಿ ಎನ್ನುತ್ತಿದ್ದಾರೆ. ಅಷ್ಟಕ್ಕೂ ಈ ಅಜ್ಜಿ ಇಲ್ಲಿಗೆ ಬಂದು ವೇದಿಕೆ ಮೇಲೆ ತಮ್ಮ ಆ್ಯಕ್ಟಿಂಗ್ ಕೌಶಲವನ್ನು ತೋರಿಸಿದ್ದಾರಷ್ಟೇ. ಈ ಅಜ್ಜಿಯನ್ನು ನೋಡಿ ಅಲ್ಲಿದ್ದವರು ನಕ್ಕು ಸುಸ್ತಾಗಿದ್ದರೆ, ನಟನಾ ಕೌಶಲಕ್ಕೆ ತಲೆದೂಗಿದ್ದಾರೆ.
ಲವ್ ಮ್ಯಾರೇಜ್ ಇಷ್ಟ ಎಂದ ಭಾಗ್ಯಲಕ್ಷ್ಮಿ ಪೂಜಾಗೆ ಕನಸಿನ ಹುಡುಗ ಹೀಗಿರ್ಬೇಕಂತೆ ನೋಡಿ...
ಇನ್ನು ಸೀರಿಯಲ್ ವಿಷಯಕ್ಕೆ ಬರುವುದಾದರೆ, ಶ್ರೇಷ್ಠಾ ಮತ್ತು ತಾಂಡವ್ ಮದುವೆ ಅತ್ತ ನಡೆಯುತ್ತಿದ್ದರೆ, ಇತ್ತ ಅಮ್ಮ ಕುಸುಮಾಳಿಗೆ ಶ್ರೇಷ್ಠಾ ಮದ್ವೆಯಾಗ್ತಿರೋದು ತನ್ನ ಮಗನೇ ಎನ್ನುವ ಸತ್ಯ ತಿಳಿದಿರುವುದು. ಈ ಮದುವೆಯನ್ನು ನಿಲ್ಲಿಸಲು ಆಟೋದಲ್ಲಿ ಬರುತ್ತಿದ್ದಳು. ಆದರೆ ಆಟೋ ಅಪಘಾತಕ್ಕೀಡಾಗಿ ಅಲ್ಲಿಗೆ ಪೊಲೀಸರು ಬಂದರು. ಪೊಲೀಸರು ತನಿಖೆ ಎಂದೆಲ್ಲಾ ಹೇಳಿದಾಗ ಕುಸುಮಾ ತನ್ನ ಬಂಗಾರದ ಬಳೆಯನ್ನು ಪೊಲೀಸರಿಗೆ ಕೊಟ್ಟು ಅಲ್ಲಿಂದ ಓಡೋಡಿ ಕಲ್ಯಾಣ ಮಂಟಪಕ್ಕೆ ಬಂದಿದ್ದಾಳೆ. ಭಾಗ್ಯ-ಕುಸುಮಾ ಬಂದೇ ಬರುತ್ತಾರೆ ಎನ್ನುವ ಕಾರಣಕ್ಕೆ ಬಾಗಿಲಿನಲ್ಲಿ ಬಾಡಿಗಾರ್ಡ್ ನಿಯೋಜನೆ ಮಾಡಿದ್ದಾಳೆ ಶ್ರೇಷ್ಠಾ. ಅವರು ಕುಸುಮಾಳನ್ನು ನೋಡುತ್ತಿದ್ದಂತೆಯೇ ಅವಳನ್ನು ತಡೆಯಲು ಮುಂದಾಗಿದ್ದಾರೆ.
ಇಷ್ಟಾಗುತ್ತಿದ್ದಂತೆಯೇ ಸೆಕ್ಯುರಿಟಿ ಗಾರ್ಡ್ಗಳು ಆಕೆಯನ್ನು ತಳ್ಳಿದ್ದಾರೆ. ಮದುವೆ ನಿಲ್ಲಿಸಲು ಬಂದಿರೋ ಪೂಜಾ ಕುಸುಮತ್ತೆಯ ಕೈ ಹಿಡಿದಿದ್ದಾಳೆ. ಇಬ್ಬರೂ ಸೇರಿ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಇತ್ತ ಸುಂದ್ರಿ ಗಂಡ ಪೂಜಾಳನ್ನು ಕಿಡ್ನ್ಯಾಪ್ ಮಾಡಿಸಿದ್ದ. ಶ್ರೇಷ್ಠಾ ದುಡ್ಡು ಕೊಟ್ಟು ಹೀಗೆ ಮಾಡಿಸಿದ್ದಾಳೆ. ಏಕೆಂದರೆ ಆಕೆಗೆ ಎಲ್ಲ ಸತ್ಯ ಗೊತ್ತಿದೆ ಎಂದು. ಈ ವಿಷಯ ಸುಂದ್ರಿಗೆ ತಿಳಿದು ಭಾಗ್ಯಳಿಗೆ ತಿಳಿಸಿದ್ದಾಳೆ. ಭಾಗ್ಯ ತನ್ನ ತಂಗಿಯನ್ನು ಬಿಡಿಸಿಕೊಂಡು ಹೋಗಲು ಬಂದಿದ್ದಾಳೆ. ಅಲ್ಲಿ ಅವಳಿಗೆ ಸುಂದ್ರಿ ಅರ್ಧಂಬರ್ಧ ಸತ್ಯ ಹೇಳಿದ್ದಾಳೆ. ತಾಂಡವ್ ತರುಣ್ ಹೆಸರಿನಲ್ಲಿ ಇರುವುದು, ಶ್ರೇಷ್ಠಾ ಮದ್ವೆಯಾಗ್ತಿರೋದು ಭಾಗ್ಯಳ ಗಂಡನನ್ನೇ ಎನ್ನುವ ಸತ್ಯ ಹೇಳಲಿಲ್ಲ. ಬದಲಾಗಿದೆ ತರುಣ್ಗೆ ನಾವು ನಿಜವಾದ ಅಪ್ಪ-ಅಮ್ಮ ಅಲ್ಲ. ಶ್ರೇಷ್ಠಾ ದುಡ್ಡು ಕೊಟ್ಟ ಕಾರಣ ಹೀಗೆ ಮಾಡಿರುವುದಾಗಿ ಹೇಳಿದ್ದಾಳೆ. ಆದರೆ ಅಲ್ಲಿ ನಡೆಯುತ್ತಿರುವುದು ನಿನ್ನ ಗಂಡನ ಮದ್ವೆ ಎನ್ನುವುದು ಹೇಳಿಲ್ಲ. ಅವಳು ಮದುವೆ ಮಂಟಪಕ್ಕೆ ಬರುವುದು ಬಾಕಿ ಇದೆ. ಭಾಗ್ಯಳೂ ಮದುವೆ ಮಂಟಪಕ್ಕೆ ಬರ್ತಾಳಾ? ಗಂಡನ ನಿಜ ವಿಷಯ ಅವಳಿಗೂ ಗೊತ್ತಾಗತ್ತಾ? ಶ್ರೇಷ್ಠಾ ಏನು ಮಾಡುತ್ತಾಳೆ. ತಾಳಿ ಕಟ್ಟಲು ರೆಡಿಯಾಗಿರೋ ತಾಂಡವ್ ಮುಂದಿನ ನಿರ್ಧಾರ ಏನು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಆ ದರೆ, ಇದರ ನಡುವೆಯೇ ಭಾಗ್ಯಳಿಗೆ ಇಂಥ ಗಂಡ ಬೇಕೆ ಎನ್ನುವ ಚರ್ಚೆ ಕೂಡ ನಡೆಯುತ್ತಿದೆ. ಇಷ್ಟೆಲ್ಲಾ ಮಾಡಿದರೂ ಶ್ರೇಷ್ಠಾಳ ಹಿಂದೆ ಬಿದ್ದಿರೋ ತಾಂಡವ್ನನ್ನು ಯಾವ ಕಾರಣಕ್ಕೂ ಭಾಗ್ಯ ತನ್ನಜೀವನದಲ್ಲಿ ಎಂಟ್ರಿ ಕೊಡಿಸುವುದು ಸರಿಯಲ್ಲ. ಇಂಥ ಗಂಡ ಇದ್ದರೆಷ್ಟು ಬಿಟ್ಟರೆಷ್ಟು ಎನ್ನುತ್ತಿದ್ದಾರೆ ರೊಚ್ಚಿಗೆದ್ದ ಕಮೆಂಟಿಗರು. ಅವನು ಶ್ರೇಷ್ಠಾಳನ್ನೇ ಮದುವೆಯಾಗಬೇಕು. ಆಗ ಇದೆ ಅವನಿಗೆ ಮಾರಿಹಬ್ಬ.