ಬಿಗ್‌ಬಾಸ್‌ ಮನೆಯೊಳಗೆ ಹೋಗಬೇಕಾದರೆ ಹಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ. ಮುಖ್ಯವಾಗಿ ಇಲ್ಲಿ ಯಾವುದೇ ಮೊಬೈಲ್‌ ಬಳಕೆಗೆ ಅವಕಾಶವಿರುವುದಿಲ್ಲ. ಆದ್ರೆ ಇತ್ತೀಚಿಗೆ ವೈರಲ್ ಆಗಿರೋ ಫೋಟೋ, ಬಿಗ್‌ ಬಾಸ್‌ನಲ್ಲಿಸ್ಪರ್ಧಿಗಳು  ಕದ್ದುಮುಚ್ಚಿ ಮೊಬೈಲ್‌ ಬಳಸ್ತಾರಾ ಅನ್ನೋ ಪ್ರಶ್ನೆಯನ್ನುಂಟು ಮಾಡಿದೆ.

ಬಿಗ್‌ಬಾಸ್‌ ಮನೆಯೊಳಗೆ ಹೋಗಬೇಕಾದರೆ ಹಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ. 108 ದಿನಗಳ ಕಾಲ ನಡೆಯುವ ಈ ರಿಯಾಲಿಟಿ ಶೋನಲ್ಲಿ ಹಲವು ಕಠಿಣ ನಿಯಮಗಳನ್ನು ಸ್ಪರ್ಧಿಗಳು ಪಾಲಿಸಲೇಬೇಕಾಗುತ್ತದೆ. ಈ ಬಗ್ಗೆ ಮೊದಲೇ ಸ್ಪರ್ಧಿಗಳಿಗೆ ತಿಳಿಸಲಾಗಿರುತ್ತದೆ. ಮಾತ್ರವಲ್ಲ ನಿಯಮದ ಬಗ್ಗೆ ಮೊದಲೇ ಬಾಂಡ್ ಬರೆಯಿಸಿ ಸ್ಪರ್ಧಿಗಳಿಂದ ಸೈನ್ ಮಾಡಿಸಿರುತ್ತಾರೆ ಎಂದು ಸಹ ಹೇಳುತ್ತಾರೆ. ಬಿಗ್‌ ಬಾಸ್‌ನಲ್ಲಿ ಮುಖ್ಯವಾಗಿ ಪಾಲನೆಯಾಗುವ ನಿಯಮಗಳಲ್ಲೊಂದು ಇಲ್ಲಿ ಯಾವುದೇ ಮೊಬೈಲ್‌ ಬಳಕೆಗೆ ಅವಕಾಶವಿರುವುದಿಲ್ಲ. ಹೊರಗಿನ ಜಗತ್ತಿನೊಂದಿಗೆ ಪೋನ್ ಮೂಲಕ ಸಂಪರ್ಕ ಸಂಪೂರ್ಣ ನಿಷಿದ್ಧ.

ಬಿಗ್‌ ಬಾಸ್‌ ಮನೆಯಲ್ಲಿ ಹೊರಗಿನ ಯಾವ ಸಂಪರ್ಕವೂ ಸಿಗದಂತೆ ಸ್ಪರ್ಧಿಗಳನ್ನು ಇರಿಸಲಾಗುತ್ತದೆ. ಬಿಗ್‌ಬಾಸ್ ಮನೆಯ ಹೊರಗೆ ನಡೆಯುವ ಯಾವುದೇ ಘಟನೆಗಳನ್ನು ಕಾರ್ಯಕ್ರಮದ ನಿರೂಪಕ ಕಿಚ್ಚ ಸುದೀಪ್ ಸ್ಪರ್ಧಿಗಳಿಗೆ ತಿಳಿಸುತ್ತಾರೆ. ಬಿಗ್‌ಬಾಸ್‌ ಮನೆಯಲ್ಲಿ ಏನೇ ಆದರೂ ಮೊಬೈಲ್‌ ಬಳಸುವುದೇ ಇಲ್ಲ ಎಂದು ಪ್ರೇಕ್ಷಕರು ಸಹ ಅಂದುಕೊಂಡಿದ್ದಾರೆ. 

10 ರೂಪಾಯಿಗೂ ಯಾರಿಗೂ ಬೇಡವಾದ್ರಾ ಕಾರ್ತಿಕ್​? ಅವ್ರೂ ರಿಜೆಕ್ಟ್, ಇವ್ರೂ​ ರಿಜೆಕ್ಟ್​...

ಸಂಗೀತ ಶೃಂಗೇರಿ ಪಕ್ಕ ಪ್ಲಗ್‌ನಲ್ಲಿ ಕಾಣ್ತಿದೆ ಚಾರ್ಜರ್‌?
ಆದರೆ ಇತ್ತೀಚಿಗೆ ಸಂಗೀತ ಶೃಂಗೇರಿ ಬಿಗ್‌ಬಾಸ್‌ ಮನೆಯೊಳಗಿರುವ ಪೋಟೋ ವೈರಲ್ ಆಗಿದೆ. ಆದರೆ ಅಚ್ಚರಿಯ ವಿಚಾರ ಅಂದ್ರೆ ಈ ಫೋಟೋದಲ್ಲಿ ಸಂಗೀತ ಕುಳಿತಿರುವ ಸಮೀಪವೇ ಪ್ಲಗ್‌ನಲ್ಲಿ ಚಾರ್ಜರ್‌ ಕಾಣುತ್ತಿದೆ. ಇದು ನೋಡಲು ಥೇಟ್‌ ಮೊಬೈಲ್‌ ಚಾರ್ಜರ್‌ನಂತೆಯೇ ಕಾಣುತ್ತಿರುವುದು ನೆಟ್ಟಿಗರಲ್ಲಿ ಹಲವಾರು ಪ್ರಶ್ನೆಯನ್ನು ಮೂಡಿಸಿದೆ.

ಸೋಷಿಯಲ್‌ ಮೀಡಿಯಾದಲ್ಲಿ ಈ ಫೋಟೋ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ವೈರಲ್‌ ಆದ ಫೋಟೋ ನೋಡಿದವರಿಗೆ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಗಳು ಗುಟ್ಟಾಗಿ ಮೊಬೈಲ್‌ ಬಳಸುತ್ತಾರಾ ಎಂಬ ಅನುಮಾನ ಉಂಟಾಗಿದೆ. ಬೆಡ್‌ ಮೇಲೆ ಸಂಗೀತಾ ಶೃಂಗೇರಿ ಕುಳಿತಿದ್ದಾರೆ. ಅವರ ಹಿಂದಿರುವ ಪ್ಲಗ್‌ನಲ್ಲಿ ಚಾರ್ಜ್‌ ಕಾಣುತ್ತಿದೆ. ಈ ಫೋಟೋಗೆ ಹಲವರು ಕಾಮೆಂಟ್‌ ಮಾಡಿದ್ದಾರೆ. 

BBK10: ನಾಮಿನೇಟ್ ಮಾಡುವ ಅಧಿಕಾರ ಕಳೆದುಕೊಂಡ ವಿನಯ್, ತನಿಷಾ ಅವಿ ಮತ್ತು ಪವಿ: ಇಲ್ಲಿದೆ ಅಸಲಿ ಕಾರಣ..

ಕೆಲವರು ಅದು ಮೊಬೈಲ್‌ ಚಾರ್ಜರ್‌ ಎಂದೇ ವಾದ ಮಾಡಿದ್ದಾರೆ.ಮತ್ತೊಂದಿಷ್ಟು ಮಂದಿ ಅದು ಚಾರ್ಜರ್‌ ಅಲ್ಲ, ಟ್ರಿಮ್ಮರ್‌ ಎಂದು ಹೇಳಿದ್ದಾರೆ. ಅಸಲಿಗೆ ಇದು ಟ್ರಿಮ್ಮರ್‌ ಚಾರ್ಜರ್‌ ಆಗಿದ್ದು. ಬಿಗ್‌ ಬಾಸ್‌ ಮನೆಯಲ್ಲಿ ಸ್ಪರ್ಧಿಗಳು ಯಾವುದೇ ಫೋನ್‌ ಬಳಕೆ ಮಾಡುತ್ತಿಲ್ಲ ಎಂದು ಹೇಳಲಾಗ್ತಿದೆ.