ಬಿಗ್‌ಬಾಸ್ ಮನೆಯಲ್ಲಿ ಹರಾಜು ಪ್ರಕ್ರಿಯೆ ಬಲು ಜೋರಾಗಿ ನಡೆಯುತ್ತಿದೆ. ಇದೀಗ ಕಾರ್ತಿಕ್ ಅವರನ್ನು ಖರೀದಿ ಮಾಡಲು ಯಾರೂ ಉತ್ಸುಕತೆ ತೋರದ ಪ್ರೊಮೋ ರಿಲೀಸ್ ಆಗಿದೆ.
ಐಪಿಎಲ್ನ ಆಟಗಾರರ ಹರಾಜು ನಡೆಯುತ್ತಿದ್ದಂತೆಯೇ, ಇತ್ತ ಬಿಗ್‌ಬಾಸ್ ಮನೆಯಲ್ಲಿಯು ಸ್ಪರ್ಧಿಗಳ ಹರಾಜು ಕೂಡ ನಡೆದಿದೆ. ಇದಾಗಲೇ ಹಲವು ದಿನಗಳಿಂದ ವಿಭಿನ್ನ ರೀತಿಯ ಟಾಸ್ಕ್ಗಳು ನಡೆಯುತ್ತಿದ್ದು, ಜಗಳಗಳ ಭರಾಟೆಯೂ ಜೋರಾಗಿ ಇದೆ. ಕಾದಾಟ, ಕಿತ್ತಾಟ, ಡ್ಯಾಮೇಜಿಂಗ್ ಎಲ್ಲವೂ ಹೇರಳವಾಗಿ ಬಿಗ್‌ಬಾಸ್ ಮನೆಯಲ್ಲಿ ಇದಾಗಲೇ ನಡೆಯುತ್ತಿದೆ. ಇದೀಗ ಆಟಗಾರರ ಖರೀದಿ ಬಲು ಜೋರಾಗಿ ನಡೆಯುತ್ತಿದೆ. ಐಪಿಎಲ್ ಹರಾಜು ಪ್ರಕ್ರಿಯೆಯಂತೆ, ಇವರಿಬ್ಬರೂ ಕೂಡ ಪ್ರತ್ಯೇಕವಾಗಿ ತಮ್ಮ ತಮ್ಮ ತಂಡಕ್ಕೆ ಆಟಗಾರರನ್ನು ಖರೀದಿಸಬೇಕು ಎಂದು ಬಿಗ್‌ಬಾಸ್ ಸೂಚಿಸಿದ್ದು, ಇದಕ್ಕಾಗಿ ಸಂಗೀತಾ ಮತ್ತು ತನಿಷಾ ಇಬ್ಬರಿಗೂ ಟಿಕೆಟ್ ನೀಡಲಾಗಿತ್ತು. ಈ ಟಾಸ್ಕ್ಗೆ ಸಂಗೀತಾ ಮತ್ತು ತನಿಷಾ ಅವರನ್ನು ನಾಯಕರನ್ನಾಗಿ ಮಾಡಲಾಗಿದೆ. ಬಿಗ್‌ಬಾಸ್ ಅಣತಿಯಂತೆ ಇವರಿಬ್ಬರೂ ಪ್ರತ್ಯೇಕವಾಗಿ ತಮ್ಮ ತಮ್ಮ ತಂಡಕ್ಕೆ ಆಟಗಾರರನ್ನು ಖರೀದಿಸುವುದು ಟಾಸ್ಕ್ ಆಗಿದೆ.
ಇದೀಗ ಬಿಡ್ಡಿಂಗ್ ಭರ್ಜರಿಯಾಗಿ ನಡೆಯುತ್ತಿತ್ತು. ಒಂದು ದಿನದ ಟಾಸ್ಕ್ ಮುಗಿದ ನಂತರ ತನಿಷಾ ಮತ್ತು ಸಂಗೀತಾ ಅವರು ಬಿಗ್‌ಬಾಸ್ ಅಣತಿಯಂತೆ ಮತ್ತೊಂದು ಬಿಡ್ಡಿಂಗ್ ಪ್ರಕ್ರಿಯೆ ಶುರು ಮಾಡಿದ್ದಾರೆ. ವಿನಯ್ ಮತ್ತು ನಮ್ರತಾ ಅವರನ್ನು ಹೊರತುಪಡಿಸಿ ಎಲ್ಲ ಆಟಗಾರರ ಪೈಕಿ ತಲಾ ಮೂವರು ಆಟಗಾರರನ್ನು ಖರೀದಿಸಬೇಕು ಎಂದು ಬಿಗ್‌ಬಾಸ್ ಹೇಳಿದ್ದಾರೆ. ಈ ಹಿಂದೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಸಂಗೀತಾ ಮೊದಲಿಗೆ ನಮ್ರತಾ ಅವರನ್ನು ಖರೀದಿ ಮಾಡಿದ್ದರೆ ತನಿಷಾ ವಿನಯ್ ಅವರನ್ನು ಖರೀದಿಸಿದ್ದರು. ತನಿಷಾ ಮತ್ತು ಸಂಗೀತಾ ಇಬ್ಬರೂ ತಮ್ಮ ತಂಡಕ್ಕೆ ಬರುವಂತೆ ಕಾರ್ತಿಕ್ನನ್ನು ಮನವೊಲಿಸಿದ್ದರು. ನಂತರ ಭಾರಿ ಚರ್ಚೆ ನಡೆದಿತ್ತು. ಕೊನೆಗೆ ಕಾರ್ತಿಕ್ ಸಂಗೀತಾ ತಂಡಕ್ಕೆ ಹೋಗುವ ಮನಸ್ಸು ಮಾಡಿದ್ದರು. ಹೀಗೆ ಸಂಗೀತಾ ಅವರ ತಂಡಕ್ಕೆ ಕಾರ್ತಿಕ್ ಹೋಗುವ ಮೊದಲು ಇಬ್ಬರ ಮಧ್ಯೆ ಸಾಕಷ್ಟು ಚರ್ಚೆಗಳು ನಡೆದಿದ್ದವು.
ಬಿಗ್‌ಬಾಸ್ ಗೆದ್ದು ಇತಿಹಾಸ ಸೃಷ್ಟಿಸಿದ ಬೆನ್ನಲ್ಲೇ ರೈತನ ಮಗ ಜೈಲಿಗೆ! 9 ಕೇಸ್ ದಾಖಲು: ಅಷ್ಟಕ್ಕೂ ಆಗಿದ್ದೇನು?
ಇದೀಗ ಎರಡನೆಯ ಹಂತದಲ್ಲಿ ಎಲ್ಲಾ ಉಲ್ಟಾ ಪಲ್ಟಾ ಆಗಿದೆ. ಕಾರ್ತಿಕ್ ಅವರನ್ನು ಕೊಂಡುಕೊಳ್ಳುವ ಸರದಿ ಬಂದಾಗ ತನಿಷಾ ಮತ್ತು ಸಂಗೀತಾ ಇಬ್ಬರೂ ಬಿಡ್ ಮಾಡಲೇ ಇಲ್ಲ! ಆರಂಭದಲ್ಲಿ ಕಾರ್ತಿಕ್ಗಾಗಿ ಅಷ್ಟೆಲ್ಲಾ ಚರ್ಚೆ ನಡೆಸಿದವರು ಇದೀಗ ಹೀಗೆ ಏಕೆ ಮಾಡಿದರು ಎಂದು ಫ್ಯಾನ್ಸ್ ಆತಂಕದಿಂದ ಪ್ರಶ್ನಿಸುವಂತಾಗಿದೆ. ಈ ಸಂದರ್ಭದಲ್ಲಿ ತನಿಷಾ, ‘ನನ್ನ ಕಳಪೆ ಖರೀದಿ ಕಾರ್ತಿಕ್ ಅವರು’ ಎನ್ನುವ ಮೂಲಕ ಮಾತಿನ ಚಾಟಿ ಬೀಸಿದ್ದಾರೆ. ಈ ಮಾತನ್ನು ಕೇಳುತ್ತಿದ್ದಂತೆಯೇ ತುಕಾಲಿ ಸಂತೋಷ್, ಅವನಿಗೋಸ್ಕರ ಗುದ್ದಾಡಿದ ಅದೇ ಫ್ರೆಂಡ್ಸು ಅವನನ್ನೇ ಹತ್ ರೂಪಾಯಿಗೂ ಕೇಳಿಲ್ವಲ್ಲ ಎಂದಿದ್ದಾರೆ. ಆತನ ಕೈಲಿ ಓಡಲು ಆಗ್ತಿಲ್ಲ ಎಂದ ತಕ್ಷಣ ಬಿಟ್ಬಿಟ್ರಲ್ಲಾ ಎಂದರು. ಇದಕ್ಕೆ ಕಾರಣ ಮೊದಲ ಸಲ ಕಾರ್ತಿಕ್ಗೆ ಡಿಮ್ಯಾಂಡ್ ಜಾಸ್ತಿ ಇದ್ದು, ಇಬ್ಬರೂ ಅವರನ್ನೇ ಕೇಳುತ್ತಿದ್ದರು. ಆದರೆ ಇದೀಗ ಅವರೇ ಬೇಡ ಎನ್ನುವಂತಾಗಿದೆ!
ಹೀಗೆ ಆಗಲು ಒಂದು ಕಾರಣವೂ ಇದೆ. ಅದೇನೆಂದರೆ, ಈ ಮೊದಲದು ಕಾರ್ತಿಕ್ ಹಣಕ್ಕಾಗಿ ಪಕ್ಷ ಬದಲಿಸಿದ್ದರು ಎನ್ನುವ ಸಿಟ್ಟು. ಕಾರ್ತಿಕ್ ಮೊದಲು ಸಂಗೀತಾರಿಂದ ಹಣ ತೆಗೆದುಕೊಂಡು ನಂತರ ತನಿಷಾ ಹೆಚ್ಚು ಹಣ ಕೊಡುತ್ತಾರೆಂದು ಅವರ ತಂಡ ಸೇರ್ಪಡೆಗೊಂಡಿದ್ದರು. ಈ ಸಂದರ್ಭದಲ್ಲಿ ಸಾಕಷ್ಟು ಚರ್ಚೆಯಾಗಿತ್ತು. ಈಗ ಇದೇ ಕಾರಣಕ್ಕೆ ಯಾರೂ ಅವರಿಗೆ ಬೇಡವಾಗಿದೆ. ಹಾಗಾದರೆ ಸಂಗೀತಾ ಮತ್ತು ತನಿಷಾ ಖರೀದಿ ಮಾಡಿದ್ದು ಯಾರನ್ನು? ಮುಂದೆ ಏನಾದ್ರೂ ಟ್ವಿಸ್ಟ್ ಇದೆಯಾ ಎನ್ನುವುದನ್ನು ಪ್ರೊಮೋ ಬಿಟ್ಟುಕೊಟ್ಟಿಲ್ಲ. ಅದನ್ನು ಟಿವಿಯಲ್ಲಿಯೇ ನೋಡಬೇಕಿದೆ ಬಿಗ್‌ಬಾಸ್ ಪ್ರೇಮಿಗಳು!
ಐಶ್- ಅಭಿ ಮದ್ವೆ ದಿನ ನಡೆದಿತ್ತು ಹೈಡ್ರಾಮಾ: ಮಣಿಕಟ್ಟು ಸೀಳಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಜಾಹ್ನವಿ ಕಪೂರ್!
