BBK10: ನಾಮಿನೇಟ್ ಮಾಡುವ ಅಧಿಕಾರ ಕಳೆದುಕೊಂಡ ವಿನಯ್, ತನಿಷಾ ಅವಿ ಮತ್ತು ಪವಿ: ಇಲ್ಲಿದೆ ಅಸಲಿ ಕಾರಣ..
ಬಿಗ್‌ಬಾಸ್ ಮನೆಯಲ್ಲಿ ನಾಲ್ವರು ಸದಸ್ಯರು 9ನೇ ವಾರದಲ್ಲಿ ತಮ್ಮ ಎದುರಾಳಿ ಇನ್ನೊಬ್ಬ ಸದಸ್ಯರನ್ನು ನಾಮಿನೇಟ್ ಮಾಡುವ ಅಧಿಕಾರವನ್ನು ಕಳೆದುಕೊಂಡಿದ್ದಾರೆ.
ಬೆಂಗಳೂರು (ಡಿ.12): ಬಿಗ್‌ಬಾಸ್ ಮನೆಯಲ್ಲಿ ನಾಲ್ವರು ಸದಸ್ಯರು 9ನೇ ವಾರದಲ್ಲಿ ತಮ್ಮ ಎದುರಾಳಿ ಇನ್ನೊಬ್ಬ ಸದಸ್ಯರನ್ನು ನಾಮಿನೇಟ್ ಮಾಡುವ ಅಧಿಕಾರವನ್ನು ಕಳೆದುಕೊಂಡಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ಸೀಸನ್ 10ರ ಮನೆಯಲ್ಲಿ ಈಗಾಗಲೇ ಹಲವರು ಮನೆಯನ್ನು ಬಿಟ್ಟು ಹೋಗಿದ್ದಾರೆ. ಈ ಪೈಕಿ ಈಗ ಉಳಿದಿರುವುದು 12 ಜನರು ಮಾತ್ರ. ಈ ಪೈಕಿ 9ನೇ ವಾರಕ್ಕೆ ನಾಮಿನೇಷನ್ ಮಾಡುವ ಪ್ರಕ್ರಿಯನ್ನು ಮಾಡಲಾಗಿದ್ದು, ಅದರಲ್ಲಿ 4 ಜನರನ್ನು ನಾಮಿನೇಷನ್ ಮಾಡುವ ಅಧಿಕಾರದಿಂದ ಹೊರಗಿಡಲು ಬಿಗ್‌ಬಾಸ್ ಅಭಿಪ್ರಾಯ ಸಂಗ್ರಹದ ಟಾಸ್ಕ್ ಮಾಡಿದ್ದಾರೆ. ಈ ಪೈಕಿ ನಾಲ್ವರನ್ನು ಹೊರಗಿಡುವ ಬದಲಾಗಿ ಅಲ್ಲಿರುವ ಸದಸ್ಯರು 5 ಜನರನ್ನು ನಾಮಿನೇಷನ್ ಮಾಡುವ ಅಧಿಕಾರದಿಂದ ಹೊರಗಿಟ್ಟಿದ್ದಾರೆ.
ಕಾವ್ ಕಾವ್ ಕರಿತೈತಿ ಗೋವಾ.., ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಮತ್ತೊಂದು ಹಾಡು!
ಬಿಗ್‌ಬಾಸ್ ಮನೆಯಲ್ಲಿ ಈ ವಾರ ಉಳಿದಿರುವವರು ವಿನಯ್, ಕಾರ್ತಿಕ್, ನಮ್ರತಾಗೌಡ, ಮೈಕಲ್, ವರ್ತೂರು ಸಂತೋಷ್, ತುಕಾಲಿ ಸಂತೋಷ್, ತನಿಷಾ, ಸಂಗೀತಾ, ಡ್ರೋನ್ ಪ್ರತಾಪ್, ಅವಿನಾಶ್, ಪವಿ ಪೊವಪ್ಪ ಹಾಗೂ ಸಿರಿ ಅವರಿದ್ದಾರೆ. ಈ ಪೈಕಿ ಈ ವಾರ ಹೊರಗೆ ಹೋದ ಸ್ನೇಹಿತ್ ಅವರು ನಮ್ರತಾಗೌಡ ಅವರಿಗೆ ವಿಶೇಷ ಅಧಿಕಾರವನ್ನು ಕೊಟ್ಟು ನಾಮಿನೇಷನ್ ಪ್ರಕ್ರಿಯೆಗೆ ಒಳಗಾದಂತೆ ಮಾಡಿ ಹೋಗಿದ್ದಾರೆ. ಈಗ ಉಳಿದಿರುವವರ ಪೈಕಿ ನಾಲ್ವರನ್ನು ನಾಮಿನೇಷನ್ ಪ್ರಕ್ರಿಯೆಯಿಂದ ಹೊರಗಿಡಲು ಮಾಡಲಾದ ಚಟುವಟಿಕೆಯಲ್ಲಿ ಎಲ್ಲರ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ.
ನಾಮಿನೇಷನ್ ಪ್ರಕ್ರಿಯೆಯಲ್ಲಿ ಮತವನ್ನು ಹಾಕುವುದರಿಂದ ಹೊಡರಗಿಡಲಾದ ಸದಸ್ಯರ ಪೈಕಿ ಮೊದಲನೆಯದಾಗಿ ಅತಿಹೆಚ್ಚು 8 ಮತಗಳನ್ನು ಪಡೆದ ವಿನಯ್‌ಗೌಡ, 7 ಮತಗಳನ್ನು ಪಡೆದ ಪವಿ ಪೂವಪ್ಪ, 6 ಮತಗಳನ್ನು ಪಡೆದ ತನಿಷಾ, 5 ಮತಗಳನ್ನು ಪಡೆದ ಮೈಕೆಲ್ ಹಾಗೂ ಅವಿನಾಶ್ ಸೇರಿ ಐವರನ್ನು ನಾಮಿನೇಷನ್ ಮಾಡುವ ಅಧಿಕಾರದಿಂದ ಬಿಗ್‌ಬಾಸ್ ಹೊರಗಿಟ್ಟಿದ್ದಾರೆ.ಈ ಮೂಲಕ ಉಳಿದ ನಾಮಿನೇಟ್ ಮಾಡುವ ಅಧಿಕಾರದಲ್ಲಿ ಬಾಕಿ 7 ಮಂದಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಆದರೆ, ಯಾರು ನಾಮಿನೇಟ್ ಆಗುತ್ತಾರೆ ಎನ್ನುವುದು ಇಂದು ತಿಳಿಯಲಿದೆ.
ಕರ್ನಾಟಕದ ಸ್ವರ್ಗ ಕೂರ್ಗ್‌ನಲ್ಲಿ ಹೆಚ್ಚಾಗುತ್ತಿದೆ ಹೃದಯ ಸಂಬಂಧಿ ಕಾಯಿಲೆ: 5 ವರ್ಷದ ದತ್ತಾಂಶ ಇಲ್ಲಿದೆ ನೋಡಿ..
ಅವಿನಾಶ್‌ನನ್ನು ಮನೆಯಲ್ಲೇ ಇರುಲು ಅರ್ಹನಲ್ಲ ಎಂದ ವಿನಯ್: ಇನ್ನು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಂದ ಅವಿನಾಶ್ ಅವರು ನನಗೆ ಗೌರವ ಕೊಡ್ತಿಲ್ಲ ಎಂದು ಹೇಳಿದ್ದನ್ನು ಸೀರಿಯಸ್ ಆಗಿ ತೆಗೆದುಕೊಂಡ ವಿನಯ್ ಮಾತನಾಡುತ್ತಾ, ಅವಿನಾಶ್ ನಿಮಗೆ ಡಿಸ್‌ರೆಸ್ಪೆಟ್ ಮಾಡಿಲ್ಲ. ಈ ಬಿಗ್‌ಬಾಸ್ ಮನೆಯಲ್ಲಿ ಇರುವುದಕ್ಕೇ ಅರ್ಹತೆ ಇಲ್ಲ ಎಂದು ಹೇಳುವ ಮೂಲಕ ಅತಿಯಾದ ಉಡಾಫೆಯಾಗಿ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ.
ಕಣ್ಣಿಗೆ ಗಾಯ ಮಾಡಿದವರ ಮೇಲೆ ಆಕ್ರೋಶ ಹೊರಹಾಕಿದ ಸಂಗೀತಾ: ನನ್ನ ಕಣ್ಣನ್ನು ಹಾಳು ಮಾಡಬೇಕು ಎಂಬ ರಿವೇಂಜ್ ತೀರಿಸಿಕೊಳ್ಳುವುದು ನಿಮ್ಮ ಮನಸ್ಸಲ್ಲಿ ಇತ್ತು ಎಂದು ಕಾಣಿಸುತ್ತದೆ. ಆದರೆ, ನಮಗೆ ಇಷ್ಟು ನೋವಾದರೂ ಈವರೆಗೆ ಬಂದು ಒಂದು ಕ್ಷಮೆಯನ್ನೂ ಕೇಳಿಲ್ಲ ಎಂದು ಸಂಗೀತಾ ತಮ್ಮ ಕಣ್ಣಿಗೆ ಗಾಯವಾಗಿದ್ದರ ಬಗ್ಗೆ ಆಕ್ರೋಶ ಹೊರಗೆ ಹಾಕಿದ್ದಾರೆ.