ಯಾಕೆ ದುಪಟ್ಟಾ ಹಾಕಲ್ಲ ಎಂದ ನೆಟ್ಟಿಗರಿಗೆ ನಟಿಯ ಖಡಕ್ ಆನ್ಸರ್ ದಿವ್ಯಾಂಕ ತ್ರಿಪಾಠಿ ಕೊಟ್ರು ಬೋಲ್ಡ್ ಉತ್ತರ

ದಿವ್ಯಾಂಕಾ ತ್ರಿಪಾಠಿ ಅವರು ಸೋಷಿಯಲ್ ಮೀಡಿಯಾದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರು ಜನಪ್ರಿಯ ಟಿವಿ ನಟಿಯರಲ್ಲಿ ಒಬ್ಬರು. ಆಕೆಯ ಅಭಿಮಾನಿಗಳು ನಟಿಯ ಡ್ರೆಸ್ಸಿಂಗ್ ರೀತಿಯನ್ನು ಇಷ್ಟಪಡುತ್ತಾರೆ. ನಟಿ ಹೆಚ್ಚಾಗಿ ಸಾಂಪ್ರದಾಯಿಕ ಉಡುಪಿನಲ್ಲಿ ಕಾಣುತ್ತಾರೆ.

ಸರಳ ಉಡುಪಿನಲ್ಲಿಯೂ ಅವಳು ಸುಂದರವಾಗಿ ಕಾಣುವ ಸಂದರ್ಭಗಳಿವೆ. ಆದರೆ ಕ್ರೈಂ ಪೆಟ್ರೋಲ್ ಶೋನಲ್ಲಿ ದುಪಟ್ಟಾ ಧರಿಸದಿದ್ದಕ್ಕಾಗಿ ಟ್ರೋಲ್‌ಗಳಲ್ಲಿ ಒಬ್ಬರು ಆಕೆಯನ್ನು ಪ್ರಶ್ನಿಸಿದ್ದಾರೆ. ನೀವ್ಯಾಕೆ ದುಪಟ್ಟಾ ಹಾಕಲ್ಲ ಎಂದು ಪ್ರಶ್ನಿಸಿದ್ದಾರೆ.

ಪತ್ನಿಯಿಂದ ಕೇಸ್ ದಾಖಲು: ಜೈಲು ಸೇರಿದ ಖ್ಯಾತ ಕಿರುತೆರೆ ನಟ.

ಆದರೆ ನಟಿ ಅಭಿಮಾನಿಗಳಿಗೆ ಸೂಕ್ತ ಉತ್ತರ ನೀಡಿದ್ದಾರೆ. ಯಾಕೆಂದರೆ ನಿಮ್ಮಂತಹ ಜನರು ದುಪಟ್ಟಾ ಇಲ್ಲದೆ ಮಹಿಳೆಯರನ್ನು ಗೌರವಿಸುವುದನ್ನು ಕಲಿಯಬಹುದು. ಮಹಿಳೆಯರು ಏನು ಧರಿಸಬೇಕು ಎಂಬ ನಿಲುವನ್ನು ತೆಗೆದುಕೊಳ್ಳುವ ಬದಲು ನಿಮ್ಮ ಮನಸ್ಥಿತಿಯನ್ನು ಬದಲಾಯಿಸುವಂತೆ ನಾನು ವಿನಂತಿಸುತ್ತೇನೆ. ನನ್ನ ದೇಹ, ನನ್ನ ಗೌರವ, ನನ್ನ ಇಷ್ಟ! ನಿಮ್ಮ ಸಭ್ಯತೆ, ನಿಮ್ಮ ಹಾರೈಕೆ ಎಂದಿದ್ದಾರೆ ನಟಿ

Scroll to load tweet…
View post on Instagram