Asianet Suvarna News Asianet Suvarna News

ಪತ್ನಿಯಿಂದ ಕೇಸ್ ದಾಖಲು: ಜೈಲು ಸೇರಿದ ಖ್ಯಾತ ಕಿರುತೆರೆ ನಟ

  • ಪತಿಯ ವಿರುದ್ಧ ಕೇಸ್ ದಾಖಲಿಸಿದ ಖ್ಯಾತ ಕಿರುತೆರೆ ನಟಿ
  • ನಟ ಕರಣ್ ಮೆಹ್ರಾ ಅರೆಸ್ಟ್
Actor Karan Mehra Granted Bail in Case Filed By Wife Nisha Rawal dpl
Author
Bangalore, First Published Jun 1, 2021, 5:34 PM IST

ಪತ್ನಿ ನಿಶಾ ರಾವಲ್ ಸಲ್ಲಿಸಿದ ದೂರಿನ ಅನ್ವಯ ಅರೆಸ್ಟ್ ಆಗಿದ್ದ ಯೆ ರಿಷ್ಟಾ ಕ್ಯಾ ಕೆಹ್ಲತಾ ಹೈ ನಟ ಕರಣ್ ಮೆಹ್ರಾ ಅವರಿಗೆ ಜಾಮೀನು ನೀಡಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಸೋಮವಾರ ರಾತ್ರಿ ಗೋರೆಗಾಂವ್‌ನಲ್ಲಿ ನಟಿ ನಿಶಾ ದೂರು ದಾಖಲಿಸಿದ ನಂತರ ಕರಣ್‌ನನ್ನು ಬಂಧಿಸಲಾಗಿತ್ತು. ಅವರಿಬ್ಬರ ನಡುವಿನ ಗಲಾಟೆ ಪರಿಣಾಮ ದೂರು ದಾಖಲಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಕಿರಣ್ ಮೈಮೇಲೆ 3 ಕೆಲಕ್ಷದ ಚಿನ್ನ; ಗೊತ್ತಿಲ್ಲದ ಗಾಡಿ ಹತ್ತಿ ಭಯದಿಂದ ಒದ್ದಾಡಿದ ರಂಜನಿ!

ಕರಣ್ ಅವರನ್ನು ಜೂನ್ 1 ರ ಮಂಗಳವಾರ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ವಿವಾದದ ನಂತರ, ಕರಣ್ ನಿಶಾಳನ್ನು ಗೋಡೆಗೆ ತಳ್ಳಿದನೆಂದು ಆರೋಪಿಸಲಾಗಿದೆ. ನಿಶಾ ತಲೆಗೆ ಪೆಟ್ಟಾಗಿದೆ ಎಂದು ವರದಿಯಾಗಿದೆ, ನಂತರ ನಟಿ ಪೊಲೀಸರನ್ನು ಸಂಪರ್ಕಿಸಿದ್ದಾರೆ.

ಈ ಹಿಂದೆ ಕರಣ್ ಮತ್ತು ನಿಶಾ ಅವರ ದಾಂಪತ್ಯ ಜೀವನದಲ್ಲಿ ತೊಂದರೆ ಇದೆ ಎಂಬ ವದಂತಿಗಳು ಹಬ್ಬಿದ್ದವು. ಕರಣ್ ಮತ್ತು ನಿಶಾ ಕೆಲವು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ 2012 ರಲ್ಲಿ ಮದುವೆಯಾದರು. ಅವರಿಗೆ ನಾಲ್ಕು ವರ್ಷದ ಮಗ ಕವಿಶ್ ಇದ್ದಾರೆ.

Follow Us:
Download App:
  • android
  • ios