ಬ್ರಹ್ಮಗಂಟು ಸೀರಿಯಲ್‌: ಚಿರುಗೆ ಡಿವೋರ್ಸ್‌ ಕೊಡ್ತಾಳಂತೆ ದೀಪ, ಇದು ಸೌಂದರ್ಯಾ ಕನಸಾ?

ಬ್ರಹ್ಮಗಂಟು ಸೀರಿಯಲ್‌ ಸೀರಿಯಸ್ ಆಗಿ ಡಿವೋರ್ಸ್‌ ಲೆವೆಲ್‌ಗೆ ಬಂದು ನಿಂತಿದೆ. ಆದರೆ ಇದು ರಿಯಲ್ಲಾ ಕನಸಾ ಅನ್ನೋ ಪ್ರಶ್ನೆ ಇದೆ. ಅಷ್ಟಕ್ಕೂ ಇಲ್ಲಿ ಆಗಿರೋದಾದ್ರೂ ಏನು?
 

Divorce episode starts in Brahmagantu kannada TV Serial bni

ಬ್ರಹ್ಮಗಂಟು ಸೀರಿಯಲ್‌ನಲ್ಲಿ ಡಿವೋರ್ಸ್‌ ಪರ್ವ ಶುರುವಾಗಿದೆ. ಒಂದು ಹೈ ಮೊಮೆಂಟ್‌ನಲ್ಲಿ ಚಿರು ಈ ಕೂಡಲೇ ನಂಗೆ ಡಿವೋರ್ಸ್‌ ಬೇಕು ಅಂದಿದ್ದಾನೆ. ಭಯದಿಂದ ನಡುಗುತ್ತಾ ದೀಪಾ ಕೊಡ್ತೀನಿ ಅಂತಿದ್ದಾಳೆ. ಇದ್ಯಾಕೋ ಸರಿಯಿಲ್ಲ ಅಂತ ವೀಕ್ಷಕರು ಈ ಸಂಶೋಧನಾ ಕೆಲಸ ಶುರು ಹಚ್ಚಿಕೊಂಡಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಬ್ರಹ್ಮಗಂಟು ಸೀರಿಯಲ್ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಪ್ರೈಮ್ ಟೈಮ್‌ನಲ್ಲಿ ಬರದೇ ಇದ್ರೂ ಈ ಸೀರಿಯಲ್ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸುವುದರಲ್ಲಿ ಏನೂ ಕಡಿಮೆ ಆಗಿಲ್ಲ. ರಾತ್ರಿ ಹತ್ತು ಗಂಟೆಗೆ ಪ್ರಸಾರ ಆಗೋ ಈ ಸೀರಿಯಲ್‌ ಟಿಆರ್‌ಪಿಯಲ್ಲೂ ಆಗಾಗ ಮೇಲಕ್ಕೆ ಜಿಗಿಯೋದುಂಟು. ಸದ್ಯದ ಕಥೆ ನೋಡಿದರೆ ಇದರ ಟಿಆರ್‌ಪಿ ಇನ್ನೂ ಹೆಚ್ಚಾಗೋ ಸಾಧ್ಯತೆ ಇದೆ. ದೀಪ ಎಂಬ ತೀರಾ ಸಾಮಾನ್ಯ ಲುಕ್‌ನ ಹುಡುಗಿಯ ಕಥೆ ಸುತ್ತ ಇದು ಸುತ್ತುತ್ತಲೇ ಇದೆ. ಆಕೆ ಸುಂದರವಾಗಿ ಇಲ್ಲ ಅನ್ನೋ ಏಕೈಕ ಕಾರಣಕ್ಕೆ ಸಫರ್ ಆಗುತ್ತಲೇ ಇರುತ್ತಾಳೆ. ಮಹಾ ಸುಂದರಿ ಅತ್ತಿಗೆಯ ಕೈಗೊಂಬೆ ಆಗಿರುವ ಇವಳ ಗಂಡನೂ ಇವಳ ಸಪೋರ್ಟ್‌ಗೆ ಬರುತ್ತಿಲ್ಲ. ಹೊರ ನೋಟದಲ್ಲಿ ಸಾಮಾನ್ಯ ಹೆಣ್ಮಗಳಾದರೂ ಗುಣದಲ್ಲಿ ಮಹಾ ಸೌಂದರ್ಯವತಿ ಆಗಿರುವ ಈಕೆ ಶುರುವಲ್ಲಿ ತನ್ನ ಒಳ್ಳೆತನದಿಂದಲೇ ಎಲ್ಲದಕ್ಕೂ ಬಲಿಪಶು ಆಗ್ತಾ ಹೋಗ್ತಾಳೆ.

ಪತಿ ಎದುರು ಲಕ್ಷ್ಮೀನಿವಾಸ ಚಿನ್ನುಮರಿ ನವರಸ ಪ್ರದರ್ಶನ! ಪತ್ನಿಯ ಅಭಿನಯಕ್ಕೆ ಮನಸೋತ ಪ್ರತ್ಯಕ್ಷ್
  
ಆದರೆ ಒಂದು ಹಂತದಲ್ಲಿ ಅವಳ ತಂದೆ ತಾಯಿಗೆ ಅವಮಾನವಾದಾಗ ಇಡೀ ಮನೆಯ ಸದಸ್ಯರ ವಿರುದ್ಧ ದನಿ ಎತ್ತಿ ತನ್ನ ಹಕ್ಕು ಸ್ಥಾಪಿಸಿಕೊಳ್ಳೋದಕ್ಕೆ ಮುಂದಾಗ್ತಾಳೆ. ಸೋ ಅತ್ತಿಗೆ ಸಿಕ್ಕಾಪಟ್ಟೆ ಸ್ಟ್ರಾಂಗ್, ಒಂದಿಲ್ಲೊಂದು ಕಾಟ ಕೊಡ್ತಾನೆ ಇರ್ತಾಳೆ. ಇವಳು ಅತ್ತೆಯ ಸವಾಲಿಗೆ ಪಾಟಿ ಸವಾಲು ಹಾಕುತ್ತಾ ಮುನ್ನುಗ್ಗುತ್ತಿದ್ದಾಳೆ. ಅಂಥಾ ಟೈಮಲ್ಲೇ ಹೀಗಾಗ್ಬಿಟ್ಟಿದೆ. ಅಂದರೆ ಗಂಡ ಎಲ್ಲರೆದುರು ಡಿವೋರ್ಸ್‌ ಕೊಡಿ ಅಂತ ಗರ್ಜಿಸಿದ್ದಾನೆ. ಇಷ್ಟು ಸಮಯ ಹುಲಿಯಂತೆ ಆಡ್ತಿದ್ದ ಇವಳು ಈಗ ಇಲಿಯಂತೆ ಕಂಗಾಲಾಗಿ ಕೊಡ್ತೀನಿ ಅಂದು ಬಿಟ್ಟಿದ್ದಾಳೆ. ಗಂಡ ಹಾಗೆ ಗರ್ಜಿಸೋದಕ್ಕೆ ಕಾರಣ ಇದೆ. ತಾನೊಂದು ಅದ್ಭುತ ಕಾಸ್ಟ್ಯೂಮ್ ಡಿಸೈನ್ ಮಾಡಿ ಅದಕ್ಕೆ ಖ್ಯಾತ ಫಾರಿನ್‌ ಉದ್ಯಮಿಗಳನ್ನು ಕರೆದು ಬ್ಯುಸಿನೆಸ್ ಮಾಡಲು ಮುಂದಾಗ್ತಾನೆ ಚಿರು. ಆದರೆ ಈ ಡಿಸೈನ್‌ ನೋಡಿ ಏನೋ ಕಾಮೆಂಟ್‌ ಮಾಡೋ ದೀಪಾಗೆ ಅತ್ತಿಗೆ ಸಾಧ್ಯ ಇದ್ದರೆ ನೀನು ಇದೇ ಥರ ಕಾಸ್ಟ್ಯೂಮ್ ರೆಡಿ ಮಾಡು ಅಂತಾಳೆ. ಇವಳು ರೆಡಿ ಮಾಡ್ತಾಳೆ. ಆದರೆ ಗಂಡಂಗೆ ತೋರಿಸೋ ಮೊದಲೇ ಅವಳನ್ನು ಗಂಡ ಚಿರು ಹೊರಗೆ ಕರೀತಾನೆ. 

ಪುಟ್ಟಕ್ಕನ ಮಗಳು ಸ್ನೇಹಾ ಮತ್ತೆ ವಾಪಸ್​! ಸೀರಿಯಲ್​ ತಂಗಿ ಸುಮಾ ಜೊತೆ ನೋಡಿ ಫ್ಯಾನ್ಸ್​ ಫುಲ್​ ಖುಷ್​...

ಇದೇ ಟೈಮಲ್ಲಿ ಕೆಲಸದ ಹೆಣ್ಣುಮಗಳು ದೀಪಾ ಡಿಸೈನ್‌ ಮಾಡಿರುವ ಚಿರು ಮಾಡಿರುವಂಥಾ ಡ್ರೆಸ್‌ ಅನ್ನೇ ಕೆಲಸದವಳು ತೊಟ್ಟುಕೊಂಡು ಡ್ರಿಂಕ್ಸ್‌ ಸರ್ವ್‌ ಮಾಡೋದಕ್ಕೆ ಬರ್ತಾಳೆ. ಅತಿಥಿಗಳು ಆಸ್ ಯೂಶುವಲ್‌ ಕಿರುಚಾಡ್ತಾರೆ, ಮನೆಯವರೆಲ್ಲ ದೀಪಾ ವಿರುದ್ಧ ತಿರುಗಿ ಬೀಳ್ತಾರೆ. ಚಿರು ಎಲ್ಲರೆದುರು ಅವಮಾನ ಮಾಡಿದ ದೀಪಾಗೆ ಡಿವೋರ್ಸ್‌ ಕೊಡಿ ನಂಗೆ ಅಂತ ಗರ್ಜಿಸುತ್ತಾನೆ. ದೀಪಾ ಕೊಡ್ತೀನಿ ಅಂತಾಳೆ. ಇದಕ್ಕೆ ಕಾಯ್ತಿದ್ದ ಅತ್ತಿಗೆ ಮುಖದಲ್ಲಿ ನಗೆ ಅರಳುತ್ತೆ. ಅಲ್ಲಿಗೆ ಜೀ ಪ್ರಸಾರ ಮಾಡಿರೋ ಪ್ರೊಮೋ ಮುಕ್ತಾಯವಾಗುತ್ತೆ. ಇದೆಲ್ಲ ಅತ್ತಿಗೆ ಸೌಂದರ್ಯಾ ಮಾಡಿರೋ ಕುತಂತ್ರ ಅಂತ ವೀಕ್ಷಕರಿಗೆ ಗೊತ್ತು. ಆದರೆ ಇದು ನಿಜಕ್ಕೂ ನಡೀತಾ ಇಲ್ಲ, ಅತ್ತಿಗೆ ಕನಸು ಕಾಣ್ತಿದ್ದಾಳಾ ಅನ್ನೋದರ ಬಗ್ಗೆ ಅನುಮಾನ ಇದೆ. ಹೆಚ್ಚಿನ ಬುದ್ಧಿವಂತ ವೀಕ್ಷಕರು ಇದು ಡೆಫಿನೇಟ್ಲಿ ಅತ್ತಿಗೆ ಕನಸೇ ಆಗಿರುತ್ತೆ, ದೀಪಾ ಡಿವೋರ್ಸ್‌ ಕೊಡೋ ಚಾನ್ಸೇ ಇಲ್ಲ ಅಂತಿದ್ದಾರೆ. ಸತ್ಯ ಏನು ಅನ್ನೋದು ಕೆಲವೇ ದಿನಗಳಲ್ಲಿ ಗೊತ್ತಾಗಲಿಕ್ಕಿದೆ.

 


 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Latest Videos
Follow Us:
Download App:
  • android
  • ios