Asianet Suvarna News Asianet Suvarna News

ನಾಲ್ಕು ಗೋಡೆ ಮಧ್ಯೆ ಕಾಲು ಹಿಡ್ಕೊಳಲು ರೆಡಿ... ಕನಸಿನ ಹುಡುಗಿಯ ಕ್ವಾಲಿಟಿ ಹೇಳಿದ ನಿರ್ದೇಶಕ ತರುಣ್​ ಸುಧೀರ್​

ತಾವು ಮದುವೆಯಾಗಲಿರುವ ಹುಡುಗಿ ಹೇಗಿರಬೇಕು ಎನ್ನುವ ಬಗ್ಗೆ ಮಾತನಾಡಿದ್ದಾರೆ ನಿರ್ದೇಶಕ ತರುಣ್​ ಸುಧೀರ್​. ಅವರು ಹೇಳಿದ್ದೇನು?
 

Director Tarun Sudhir has talked about how the girl he is going to marry should be suc
Author
First Published Jul 7, 2024, 12:19 PM IST

ಸದ್ಯ ಸ್ಯಾಂಡಲ್​ವುಡ್​ನಲ್ಲಿ ಮೋಸ್ಟ್​ ಎಲಿಬಿಜಿಬಲ್​ ಬ್ಯಾಚುಲರ್​ ಎನಿಸಿಕೊಂಡವರಲ್ಲಿ ಖ್ಯಾತ ನಿರ್ದೇಶಕ ತರುಣ್​ ಸುಧೀರ್​ ಒಬ್ಬರು. ಸದ್ಯ ಮಹಾನಟಿ ರಿಯಾಲಿಟಿ ಷೋನಲ್ಲಿ ತೀರ್ಪುಗಾರರಾಗಿರುವ ಆಗಮಿಸುತ್ತಿರುವ ತರುಣ್​ ಅವರು ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಕಾಟೇರಾ ಚಿತ್ರದಿಂದಲೂ ಸಕತ್​ ಫೇಮಸ್​ ಆದವರು. ಇವರಿಗೆ ಈಗ 41 ವರ್ಷ ವಯಸ್ಸು. ಇವರ ಮದುವೆಯ ಬಗ್ಗೆ ಆಗಾಗ್ಗೆ ಪ್ರಶ್ನೆಗಳು ಏಳುತ್ತಲೇ ಇರುತ್ತವೆ. ಇತ್ತೀಚಿಗಷ್ಟೇ ಇವರ ತಾಯಿ ಮಾಲತಿ ಅವರು, ಮಗನ ಮದುವೆಯ ಬಗ್ಗೆ ಮಾತನಾಡಿದ್ದರು. ಸೋನಲ್‌ ಮಂಥೆರೋ (sonal monteiro) ಎಂಬುವವರ ಜೊತೆ ಮಗನ ಮದುವೆಯಾಗಲಿದೆ ಎಂದಿದ್ದರು. ಡೇಟ್​ ಇನ್ನೂ ಫಿಕ್ಸ್​ ಆಗಿಲ್ಲ. ಸೊಲಾನ್‌ ಅವರ ಸಂಬಂಧಿಕರೆಲ್ಲಾ ದುಬೈನಿಂದ ಬರಬೇಕು. ಅವರೆಲ್ಲಾ ಮಾತನಾಡಬೇಕು. ಅದೆಲ್ಲಾ ಆದ ಮೇಲೆ ತಾನೆ ಅಂತಿಮ ನಿರ್ಧಾರವಾಗುತ್ತದೆ ಎಂದಿದ್ದರು. ಇದರ ಜೊತೆ ತಮಗೆ ಯಾರೇ ಸೊಸೆಯಾಗಿ ಬಂದರೂ ಸರಿ, ಮಗನ ಖುಷಿ ಮುಖ್ಯ ಎಂದಿದ್ದರು. 

ಇದರ ನಡುವೆಯೇ, ಇವರಿಬ್ಬರ ಮದುವೆ ಆಗಸ್ಟ್​ ತಿಂಗಳಿನಲ್ಲಿ ನಡೆಯುತ್ತದೆ ಎನ್ನುವ ಸುದ್ದಿಯೂ ಇದೆ.  ಮೂಲಗಳ ಪ್ರಕಾರ,  ನಟ ದರ್ಶನ್‌ರಿಂದಲೇ ತರುಣ್‌ ಸುಧೀರ್‌ ಹಾಗೂ ಸೋನಲ್‌ ನಡುವೆ ಪ್ರೀತಿ ಹುಟ್ಟಿಕೊಂಡಿತ್ತು ಎನ್ನಲಾಗಿದೆ. ರಾಬರ್ಟ್‌ ಸಿನಿಮಾ ಸೆಟ್‌ನಲ್ಲಿ ತಮಾಷೆಯಾಗಿ ದರ್ಶನ್‌, ತರುಣ್‌ ಹಾಗೂ ಸೋನಲ್‌ಗೆ ರೇಗಿಸುತ್ತಿದ್ದರು. ಇದೇ ಇವರಿಬ್ಬರ ನಡುವೆ ಪ್ರೀತಿ ಹುಟ್ಟಲು ಕಾರಣವಾಗಿದೆ ಎನ್ನಲಾಗಿದೆ. ಅವರ ತಾಯಿ ಕೂಡ, ಮಗನ ಮದುವೆಯ ಬಗ್ಗೆ ಮಾತನಾಡುತ್ತಾ, ಮೊದಲಿನಂದನೂ ನನಗೊಂದು ಆಸೆ ಇತ್ತು. ನನ್ನ ಮಗನಿಗೆ ನಾನು ಇರುವಾಗಲೇ ಮದುವೆಯಾಗಲಿ ಎನ್ನುವುದೇ ಒಂದು ಆಸೆ ಇತ್ತು. ಈ ಆಗುತ್ತಾನೆ ಅಂದರೆ ತುಂಬಾ ಸಂತೋಷ. ಒಂದು ಅಥವಾ ಎರಡು ತಿಂಗಳೊಳಗೆ ತರುಣ್‌ ಸುಧೀರ್‌ ಹಾಗೂ ಸೊಲಾನ್‌ ಅವರ ಮದುವೆ ಆಗುತ್ತದೆ ಎಂದಿದ್ದರು. 

ಲಕ್ಷ್ಮಿ ಪ್ರತ್ಯಕ್ಷಳಾದರೆ ನಟರಾದ ರಮೇಶ್​, ಪ್ರೇಮಾ ನಿರ್ದೇಶಕ ತರುಣ್​ ಹೀಗೆಲ್ಲಾ ವರ ಕೇಳ್ತಾರಂತೆ!

ಆದರೆ ಈ ಬಗ್ಗೆ ಇದುವರೆಗೆ ತರುಣ್​ ಸುಧೀರ್​ ಏನನ್ನೂ ಹೇಳಲಿಲ್ಲ. ಕಲರ್ಸ್​ ಕನ್ನಡ ವಾಹಿನಿಯ ಚಿತ್ತಾರಾ ಸ್ಟಾರ್​ ಅವಾರ್ಡ್​ನಲ್ಲಿ ತರುಣ್​ ಸುಧೀರ್​ ಅವರಿಗೆ ಬೆಸ್ಟ್​ ಡೈರೆಕ್ಟರ್​ ಅವಾರ್ಡ್​ ನೀಡಲಾಗಿದೆ.   ಕುತೂಹಲದ ವಿಷಯ ಏನೆಂದರೆ, ಈ ಸಂದರ್ಭದಲ್ಲಿ ಆ್ಯಂಕರ್​ ನಿರಂಜನ್​ ಅವರು ಮದುವೆಯ ಬಗ್ಗೆ ಪ್ರಶ್ನೆ ಮಾಡಿದಾಗ ತರುಣ್​ ಅವರು, ಸೋನಲ್​ ವಿಷಯವನ್ನು ಹೇಳಲಿಲ್ಲ. ಬದಲಿಗೆ ತಮ್ಮ ಕನಸಿನ ಹುಡುಗಿ ಅಂದರೆ  ಮದುವೆಯಾಗುವ ಹುಡುಗಿಯ ಕ್ವಾಲಿಟಿ ಹೇಗಿರಬೇಕು ಎನ್ನುವ ಬಗ್ಗೆ ತಿಳಿಸಿದ್ದಾರೆ. 

ಕಾಟೇರಾ ಚಿತ್ರದ ನಿರ್ದೇಶನಕ್ಕೆ ಅವರಿಗೆ ಈ ಅವಾರ್ಡ್​ ಸಿಕ್ಕಿದೆ. ಇಡೀ ತಂಡಕ್ಕೆ ಧನ್ಯವಾದ ಸಲ್ಲಿಸುವ ಮೂಲಕ ತರುಣ್​ ಅವರು, ತಾವು ಮದುವೆಯಾಗುವ ಹುಡುಗಿ ಹೇಗಿರಬೇಕು  ಎಂದು ಹೇಳಿದ್ದಾರೆ.  ನನಗೆ ಮದುವೆ ಆಗಬಾರದು ಅಂತೇನೂ ಇಲ್ಲ. ಅಂಥ ಡಿಸಿಷನ್​ ನಾನು ಮಾಡಿಲ್ಲ ಎನ್ನುತ್ತಲೇ ನಾನು ಇಷ್ಟಪಟ್ಟಂಥ ಹುಡುಗಿ ಸಿಕ್ಕಿರೆ ಖಂಡಿತವಾಗಿಯೂ ಮದುವೆಗೆ ರೆಡಿ ಎಂದಿದ್ದಾರೆ. ಇವರ ಕನಸಿನ ಹುಡುಗಿಯಲ್ಲಿ ಎರಡೇ ಕ್ವಾಲಿಟಿ ಇದ್ದರೆ ಸಾಕಂತೆ. ಮೊದಲನೆಯದ್ದು ತಮ್ಮ ಕೆಲಸವನ್ನು ಗೌರವಿಸಬೇಕು. ಇನ್ನೊಂದೆಂದರೆ ನನಗೆ ಅಮ್ಮನೇ ಎಲ್ಲ. ಆದ್ದರಿಂದ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಇಷ್ಟು ಇದ್ದರೆ ಸಾಕು. ಅಂಥ ಹುಡುಗಿಯನ್ನು ನಾನು ಮದುವೆಯಾಗುತ್ತೇನೆ. ಬೇಕಿದ್ದರೆ ನಾಲ್ಕು ಗೋಡೆಗಳ ನಡುವೆ ಕಾಲು ಹಿಡಿದುಕೊಳ್ಳಲೂ ರೆಡಿ ಎಂದು ತಮಾಷೆ ಮಾಡಿದ್ದಾರೆ. ಅದಕ್ಕೆ ಆ್ಯಂಕರ್​ ನಿರಂಜನ್​ ಅವರು ಇಂಥ ಕ್ವಾಲಿಟಿಯ ಹುಡುಗಿ ಯಾರಾದ್ರೂ ಇದ್ದಾರಾ ಎಂದು ಪ್ರಶ್ನೆ ಮಾಡಿದ್ದಾರೆ. 

ನಕಲಿ ರಮೇಶ್​, ಪ್ರೇಮಾ, ನಿಶ್ವಿಕಾರನ್ನು ನೋಡಿ ಅಸಲಿ ನಟರು ಸುಸ್ತೋ ಸುಸ್ತು- ನಕ್ಕು ನಲಿದಾಡಿದ ನೆಟ್ಟಿಗರು

Latest Videos
Follow Us:
Download App:
  • android
  • ios