ಲಕ್ಷ್ಮಿ ಪ್ರತ್ಯಕ್ಷಳಾದರೆ ನಟರಾದ ರಮೇಶ್, ಪ್ರೇಮಾ ನಿರ್ದೇಶಕ ತರುಣ್ ಹೀಗೆಲ್ಲಾ ವರ ಕೇಳ್ತಾರಂತೆ!
ಲಕ್ಷ್ಮಿ ಪ್ರತ್ಯಕ್ಷಳಾದರೆ ನಟರಾದ ರಮೇಶ್, ಪ್ರೇಮಾ ನಿರ್ದೇಶಕ ತರುಣ್ ಏನೇನು ವರ ಕೇಳ್ತಾರೆ? ಅವರ ಬಾಯಲ್ಲೇ ಕೇಳಿ...
ನಟಿಯರಾಗಬೇಕು ಎಂದು ಕನಸು ಕಂಡುಕೊಳ್ಳುವ ಬಹುದೊಡ್ಡ ವರ್ಗವೇ ಇದೆ. ನಟನೆಯಲ್ಲಿ ಆಸಕ್ತಿ ಇರುವವರು ಒಂದು ವರ್ಗವಾದರೆ, ನಟನೆಯಲ್ಲಿ ಎಲ್ಲರನ್ನೂ ಮೀರಿಸುವವರೂ ಹಲವಾರು ಮಂದಿ ಇದ್ದಾರೆ. ಇವರಿಗೆ ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳುವ ಆಸೆ ಇದ್ದರೂ ಅದಕ್ಕೆ ಸರಿಯಾದ ಮಾರ್ಗ ಯಾವುದು ಎಂದು ಗೊತ್ತಿರುವುದಿಲ್ಲ. ಯಾರನ್ನು ಸಂಪರ್ಕಿಸಬೇಕು, ಹೇಗೆ ಗುರುತಿಸಿಕೊಳ್ಳಬೇಕು, ಸುಲಭದ ಮಾರ್ಗ ಯಾವುದು ಎನ್ನುವುದು ತಿಳಿದಿರುವುದಿಲ್ಲ. ನಟನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಹಂಬಲ ಇರುವವರಿಗೆ ಜೀ ಕನ್ನಡ ವಾಹಿನಿ ಒಂದೊಳ್ಳೆ ಅವಕಾಶವನ್ನು ನೀಡಿದೆ. ಇದಾಗಲೇ ಹಲವಾರು ಕಂತುಗಳನ್ನು ಪೂರೈಸಿರುವ ಮಹಾನಟಿ ಹಲವಾರು ಕಂತುಗಳನ್ನು ಪೂರೈಸಿದ್ದು, ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಒಬ್ಬರಿಗಿಂತ ಒಬ್ಬರು ನಟಿಯರು ಸ್ಯಾಂಡಲ್ವುಡ್ ತಾರೆಯರನ್ನೂ ಮೀರಿಸುವ ರೀತಿಯಲ್ಲಿ ಪರ್ಫಾಮೆನ್ಸ್ ಕೊಡುತ್ತಿದ್ದಾರೆ. ಅಂತಿಮವಾಗಿ ಹತ್ತು ನಟಿಯರು ಇದಾಗಲೇ ತಮ್ಮ ಅದ್ಭುತ ಪ್ರತಿಭೆಯನ್ನು ತೋರಿಸಿದ್ದಾರೆ.
ಇಂಥ ಸಂದರ್ಭದಲ್ಲಿ ಆ್ಯಂಕರ್ ಅನುಶ್ರೀ ತೀರ್ಪುಗಾರರಾಗಿರುವ ರಮೇಶ್ ಅರವಿಂಗ್, ಪ್ರೇಮಾ ಮತ್ತು ನಿರ್ದೇಶಕ ತರುಣ್ ಸುಧೀರ್ ಅವರಿಗೆ ಪ್ರಶ್ನೆಯೊಂದನ್ನು ಇಟ್ಟಿದ್ದಾರೆ. ಅದರಲ್ಲಿ ಅವರು, ಒಂದು ವೇಳೆ ಮಲಗಿದಾಗ ಕನಸಿನಲ್ಲಿ ಲಕ್ಷ್ಮಿ ಪ್ರತ್ಯಕ್ಷಳಾಗಿ ನಿಮಗೆ ಒಂದು ವರ ಕೇಳಿದರೆ ಏನನ್ನು ಕೇಳುವಿರಿ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ರಮೇಶ್ ಅವರು, ಲಕ್ಷ್ಮಿ ಬಂದು ವರ ಕೇಳಿದ್ರೆ ನನಗೆ ಏನೂ ಸಮಸ್ಯೆ ಕೊಡಬೇಡ ಎಂದು ಕೇಳಲ್ಲ, ಆದ್ರೆ ಏನೇ ಸಮಸ್ಯೆ ಬಂದರೂ ಅದನ್ನು ಎದುರಿಸೋ ಶಕ್ತಿ ಕೊಡು ಎಂದು ಕೇಳುತ್ತೇನೆ. ನಾನು ಈಗ ಹ್ಯಾಪ್ಪಿ ಆಗಿದ್ದೇನೆ. ನನಗೆ ಸಿಕ್ಕಿರೋ ಎಲ್ಲಾ ವಿಷಯಗಳಲ್ಲಿಯೂ ತೃಪ್ತಿ ಇದೆ. ಎಡಿಷನಲ್ ಆಗಿ ಏನೂ ಬೇಕಿಲ್ಲ ಎಂದಿದ್ದಾರೆ.
ಆ್ಯಂಕರ್ ಅನುಶ್ರೀಗೆ ಈ ಪರಿ ಮೋಸ ಮಾಡೋದಾ ತೀರ್ಪುಗಾರರು? ಒಬ್ಬಂಟಿಯಾದ ನಟಿ ಕಣ್ಣೀರು
ಇದೇ ಪ್ರಶ್ನೆಯನ್ನು ಪ್ರೇಮಾ ಮುಂದಿಟ್ಟಾಗ ಅವರು ಕೂಡ ರಮೇಶ್ ಹೇಳಿದ್ದನ್ನೇ ಪುನರುಚ್ಚರಿಸಿದರು. ಪ್ರೇಮಾ ಅವರು, ಎಲ್ಲರೂ ಚೆನ್ನಾಗಿರಲಿ. ಏನೇ ಬಂದರೂ ಎದುರಿಸೋ ಶಕ್ತಿ ಕೊಡಲಿ ಎಂದು ದೇವರನ್ನು ಕೇಳುತ್ತೇನೆ ಎಂದರು. ಕೊನೆಗೆ ತರುಣ್ ಸುಧೀರ್ ಅವರು, ಅಮ್ಮಾ ಎಲ್ಲಾ ಕಡೆ ಓಡಾಡಿ ದಣಿದು ಬಂದಿದ್ಯಾ. ಇಲ್ಲೇ ಕುಳಿತುಕೋ. ಏನು ಸೇವೆ ಬೇಕಾದ್ರೂ ಮಾಡ್ತೀನಿ ಎನ್ನುತ್ತೇನೆ ಎಂದಿದ್ದಾರೆ. ಇದರ ಪ್ರೊಮೋ ಬಿಡುಗಡೆಯಾಗಿದೆ. ಇದನ್ನು ನೋಡುತ್ತಿದ್ದಂತೆಯೇ ನಟ ರಮೇಶ್ ಅವರು ಕೇಳುವ ವರವನ್ನೇ ಪ್ರೇಮಾ ಕಾಪಿ ಮಾಡಿದ್ದರು ಎಂದು ಕೆಲವರು ತಮಾಷೆ ಮಾಡುತ್ತಿದ್ದಾರೆ. ಇನ್ನು ಕೆಲವರು ತಾವು ಏನೆಲ್ಲಾ ವರ ಕೇಳುತ್ತೇನೆ ಎಂದು ಹೇಳುತ್ತಿದ್ದಾರೆ.
ಇನ್ನು ಮಹಾನಟಿ ಷೋ ಕುರಿತು ಹೇಳುವುದಾದರೆ, ಇದರಲ್ಲಿ 10 ಮಂದಿ ಆಯ್ಕೆಯಾಗಿರುವ ನಟಿಯರು ಕಿರುತೆರೆ ಕಲಾವಿದರ ಜೊತೆ ವಿವಿಧ ಫೇಮಸ್ ಹಾಡುಗಳಿಗೆ ಭರ್ಜರಿ ರೊಮ್ಯಾನ್ಸ್ ಮಾಡಿದ್ದಾರೆ. ಯಾವ ನಟಿಯರಿಗೂ ಕಡಿಮೆ ಇಲ್ಲದಂತೆ ಆಯ್ಕೆಯಾಗಿರುವ ಹತ್ತು ನಟಿಯರು ಪ್ರಯಣದಲ್ಲಿ ತೊಡಗಿಸಿಕೊಂಡಿದ್ದು ಪ್ರೇಕ್ಷಕರ ಮೈನವಿರೇಳಿಸುತ್ತಿದ್ದಾರೆ. ಮಾತ್ರವಲ್ಲದೇ ವಿವಿಧ ವಿಭಾಗಗಳಲ್ಲಿಯೂ ನಟಿಯರು ಸೈ ಎನಿಸಿಕೊಂಡಿದ್ದಾರೆ. ಇದಾಗಲೇ ವಿವಿಧ ಊರುಗಳಿಂದ ನೂರಾರು ಯುವತಿಯರು ಈ ಷೋನಲ್ಲಿ ತಮ್ಮ ಅದೃಷ್ಟಕ್ಕಾಗಿ ಆಡಿಷನ್ ಕೊಟ್ಟಿದ್ದರು. ಅವರಲ್ಲಿ ಕೆಲವರನ್ನು ಮಾತ್ರ ಆಯ್ಕೆ ಮಾಡಲಾಗಿದ್ದು, ಇದಾಗಲೇ ಹಲವಾರು ರೌಂಡ್ಗಳು ಮುಗಿದಿವೆ. ಈ ರೌಂಡ್ಸ್ಗಳಲ್ಲಿ ಕಲಾವಿದೆಯರು ಅದ್ಭುತ ಪ್ರತಿಭೆ ತೋರಿದ್ದಾರೆ. ತಮಗೆ ನೀಡಿರುವ ಹಲವಾರು ಟಾಸ್ಕ್ಗಳನ್ನು ಮುಗಿಸಿದ್ದಾರೆ. ಕೊನೆಯದಾಗಿ ಹತ್ತು ಕಲಾವಿದೆಯರು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು, ಇವರಲ್ಲಿ ಯಾರು ಮಹಾನಟಿಯಾಗಿ ಮಿಂಚುತ್ತಾರೋ ಕಾದು ನೋಡಬೇಕಿದೆ.
'ಮಹಾನಟಿ'ಗೆ ಬಂದ ನಟ ರಿಷಬ್ ಶೆಟ್ಟಿ: ಯಶಸ್ಸು, ಕೀರ್ತಿ, ಸಕ್ಸಸ್ ರೇಟ್ ಕುರಿತು ಮಾತುಕತೆ...