ಟಾಸ್ಕ್‌ ಕೊಡುವ ಬಿಗ್ ಬಾಸ್ ತಂಡಕ್ಕೆ ಬುದ್ಧಿ ಇಲ್ವಾ?; ಧನರಾಜ್‌ ತಪ್ಪೇ ಮಾಡಿಲ್ಲ ಎಂದು ಬ್ಯಾಟ್ ಬೀಸಿದ ನೆಟ್ಟಿಗರು

 ಧನರಾಜ್ ತಪ್ಪು ಮಾಡಿಲ್ಲ....ಟಾಸ್ಕ್‌ ಕೊಡುವವರು ಸರಿಯಾಗಿ ಕೊಟ್ಟಿಲ್ಲ. ಧನರಾಜ್ ಎಲಿಮಿನೇಟ್ ಆಗಬಾರದು ಎಂದ ನೆಟ್ಟಿಗರು....

Dhanaraj didnot cheat in mid week elimination fan question bigg boss task team about smartness

ಬಿಗ್ ಬಾಸ್ ಸೀಸನ್ 11ರಲ್ಲಿ ಮಿಡ್ ವೀಕ್ ಎಲಿಮಿನೇಷನ್‌ ಬಿಸಿ ಹೆಚ್ಚಾಗಿದೆ. ಟಿಕೆಟ್ ಟು ಫಿನಾಲೆ ಹಾಗೂ ಮಿಸ್ ವೀಕ್‌ ಎಲಿಮಿನೇಷನ್‌ ಪಡೆಯಲು ಪ್ರತಿಯೊಬ್ಬ ಸ್ಪರ್ಧಿ ಸಿಕ್ಕಾಪಟ್ಟೆ ಸ್ಮಾರ್ಟ್ ವರ್ಕ್ ಮಾಡಿದ್ದಾರೆ. ಕೆಲವರು ಗ್ರೇ ಏರಿಯಾ ಹುಡುಕಿದರೂ ಗ್ರೇ ಏರಿಯಾ ಎಂದು ಗೊತ್ತಾಗುತ್ತಿಲ್ಲ, ಕೆಲವರು ಗೊತ್ತಿಲ್ಲದೆ ಗ್ರೇ ಏರಿಯಾ ಹುಡುಕಿಕೊಂಡಿದ್ದಾರೆ. ಆದರೆ ಇಲ್ಲಿ ಗ್ರೇ ಏರಿಯಾ ಪದ ಕೊಟ್ಟಿದ್ದು ಯಾರು? ಯಾರು ಯಾರು ಗ್ರೇ ಏರಿಯಾ ಮಾಡಿದ್ದರೆ ಸೇಫ್ ಯಾರು ಮಾಡಿದ್ದರೆ ಟಾರ್ಗೆಟ್? ಧನರಾಜ್‌ ಮಾಡಿದ ತಪ್ಪನ್ನು ದೊಡ್ಡದು ಮಾಡಿದ್ದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. 

ಹೌದು! ಬಿಗ್ ಬಾಸ್ ಮನೆಯಲ್ಲಿ ಮಿಡ್ ವೀಕ್ ನಾಮಿನೇಷನ್‌ನಿಂದ ಸೇಫ್‌ ಆಗಲು ಕೊನೆಯ ಟಾಸ್ಕ್‌ನಲ್ಲಿ ಧನರಾಜ್ ಬುದ್ಧಿವಂತಿಕೆ ಬಳಸಿ ಗ್ರೇ ಏರಿಯಾ ಹುಡುಕಿಕೊಂಡಿದ್ದಾರೆ. ಆದರೆ ಇದನ್ನು ತಪ್ಪು ಎಂದು ಬಿಗ್ ಬಾಸ್ ಎತ್ತಿ ಹಾಡಿ ದೊಡ್ಡ ಚರ್ಚೆ ಶುರು ಮಾಡಿದ್ದಾರೆ. ಆದರೆ ಇಲ್ಲಿ ನೆಟ್ಟಿಗರಿಗೆ ಹಲವು ಪ್ರಶ್ನೆಗಳು ಹುಟ್ಟಿಕೊಂಡಿದೆ. ಬಿಗ್ ಬಾಸ್ ತಂಡದಲ್ಲಿ ಟಾಸ್ಕ್‌ಗಳನ್ನು ನಿರ್ಧಾರ ಮಾಡುವ ತಂಡದವರು ಯಾವ ಟಾಸ್ಕ್‌ನಲ್ಲಿ ಎಲ್ಲಿ ಆಯೋಜಿಸಬೇಕು ಎಂಬ ಅರಿವು ಇರಲಿಲ್ಲವಾ? ಕನ್ನಡಿ ಎದುರಿಗೆ ಟಾಸ್ಕ್‌ ಬೋರ್ಡ್‌ ಇಟ್ಟು ಸ್ಪರ್ಧಿಗಳು ಸ್ಮಾರ್ಟ್‌ನೆಸ್‌ನಿಂದ ನೋಡಿ ಕೆಲಸ ಮಾಡಿದ್ದರೆ ತಪ್ಪು ಏನಿದೆ? ಸ್ಪರ್ಧಿಗಳ ಕಣ್ಣಿಗೆ ಬಟ್ಟೆ ಕಟ್ಟಬೇಕಿತ್ತು ಇಲ್ಲವಾದರೆ ಎದುರು ಇರುವ ಕನ್ನಡಿಗಳನ್ನು ಕ್ಲೋಸ್ ಮಾಡಬೇಕಿತ್ತು. ಯಾವುದೂ ಮಾಡಲು ಆಗದಿದ್ದರೆ ಆಕ್ಟಿವಿಟಿ ಏರಿಯಾದಲ್ಲಿ ಆಯೋಜಿಸಬೇಕಿತ್ತು. ಬಿಗ್ ಬಾಸ್ ಮಾಡಿರುವ ತಪ್ಪಿಗೆ ಧನರಾಜ್‌ಗೆ ಶಿಕ್ಷೆ ಆಗಬಾರದು ಎನ್ನುತ್ತಿದ್ದಾರೆ ಫ್ಯಾನ್ಸ್. 

ಎಲಿಮಿನೇಷನ್‌ನಿಂದ ಪಾರಾದ ಧನರಾಜ್; ಮೋಸ ಮಾಡಿದ್ರೂ ಬಿಗ್ ಬಾಸ್ ಸುಮ್ಮನಿರುವುದು ಯಾಕೆ?

ಭವ್ಯಾ ಮತ್ತು ತ್ರಿವಿಕ್ರಮ್ ಆಟವಾಡುವಾಗ ಗೇಮ್ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎಂದು ಟಾಸ್ಕ್‌ನ ಮತ್ತೊಮ್ಮೆ ಆರಂಭಿಸಿದ್ದರು. ಇಲ್ಲಿ ಧನರಾಜ್ ತಪ್ಪು ಮಾಡುತ್ತಿದ್ದಾರೆ ಎಂದು ಅಷ್ಟೋ ಕ್ಯಾಮೆರಾ ಕಣ್ಣುಗಳಿಗೆ ಬಿದ್ದರೂ ಯಾಕೆ ಸುಮ್ಮನೆ ಇದ್ದರು? ಮತ್ತೊಮ್ಮೆ ಟಾಸ್ಕ್‌ ಆಡಿಸುವ ಅವಕಾಶ ಇತ್ತು ಅಲ್ವಾ? ಧನರಾಜ್ ತಪ್ಪು ಮಾಡಿದ್ದಾರೆ ಅಂದ್ರೆ ಇಷ್ಟು ದಿನ ಮಂಜು ಗ್ರೇ ಏರಿಯಾ ಹುಡುಕಿಕೊಂಡಾಗ ಯಾವ ಪಾಯಿಂಟ್ ಔಟ್ ಮಾಡಿಲ್ಲ? ಭವ್ಯಾ ಗೌಡ ಗ್ರೇ ಏರಿಯಾ ಹುಡುಕಿಕೊಂಡಾಗ ಯಾವ ತಪ್ಪು ಎಂದು ಹೇಳಿ ಸುಮ್ಮನಾದರು. ಫಿನಾಲೆ ವಾರಕ್ಕೆ ಹತ್ತಿರ ಇರುವಾಗ ಈ ರೀತಿ ಮಾಡುವುದು ತಪ್ಪು. ಇಲ್ಲಿ ವೈಯಕ್ತಿಕ ಟಾರ್ಗೆಟ್ ನಡೆಯುತ್ತಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ಡಾಕ್ಟರ್ ಮುಂದೆ ವಾಂತಿ ಮಾಡಿದ್ದೀನಿ, ನನಗೆ PCOD ಸಮಸ್ಯೆ ಇದೆ; ಆರೋಗ್ಯದ ಬಗ್ಗೆ ಚೈತ್ರಾ ಕುಂದಾಪುರ

Latest Videos
Follow Us:
Download App:
  • android
  • ios