ಮನೆಯಲ್ಲಿ ಪೂಜೆಗೆ ಇಡಬೇಕು ಅಂದುಕೊಂಡಿದ್ದ ಬಂಗಾರದ ಸರವನ್ನು ದೀಪಿಕಾ ಕದ್ದಿದ್ದಾಳೆ. ತುಳಸಿಯ ಮೇಲೆ ಆರೋಪ ಬರಬೇಕೆಂದು ಮಾಡಿದ್ದಾಳೆ.  ಆದರೆ?  

ಮನೆಯಲ್ಲಿ ಪೂಜೆಗೆ ಇಡಬೇಕು ಅಂದುಕೊಂಡಿದ್ದ ಬಂಗಾರದ ಸರವನ್ನು ದೀಪಿಕಾ ಕದ್ದಿದ್ದಾಳೆ. ಹೀಗೆ ಕದ್ದಿರೋ ಸರವನ್ನು ಆಕೆ ಶಾರ್ವರಿ ಕಪಾಟಿನಲ್ಲಿ ಇರಿಸಿದ್ದಾಳೆ. ಸರ ಕದಿಯುವ ಪ್ಲ್ಯಾನ್​ ಶಾರ್ವರಿ ಮತ್ತು ದೀಪಿಕಾ ಇಬ್ಬರದ್ದೂ ಆಗಿತ್ತು. ಅದಕ್ಕೆ ಕಾರಣವೂ ಇದೆ. ಅದೇನೆಂದರೆ, ಇಡೀ ಮನೆಯ ಕೀಲಿ ತುಳಸಿಯ ಕೈಯಲ್ಲಿ ಇದೆ. ತುಳಸಿ ಮನೆಯ ಯಜಮಾನಿಯನ್ನಾಗಿ ಮಾಡಿರುವುದನ್ನು ಈ ಅತ್ತೆ-ಸೊಸೆ ಸಹಿಸುತ್ತಿಲ್ಲ. ಇದೇ ಕಾರಣಕ್ಕೆ ತುಳಸಿಯ ಮೇಲೆ ಕಿಡಿ ಕಾರುತ್ತಿದ್ದಾರೆ. ಆಕೆ ಮನೆಯ ಜವಾಬ್ದಾರಿ ಹೊರುವಷ್ಟು ಶಕ್ಯಳಲ್ಲ ಎನ್ನುವುದನ್ನು ಸಾಬೀತು ಮಾಡಲು ಪ್ಲ್ಯಾನ್​ ಹೆಣೆಯುತ್ತಲೇ ಇದ್ದಾರೆ. ಆದರೆ ಬಹುಶಃ ಈ ಬಾರಿ ಅದು ಉಲ್ಟಾ ಹೊಡೆದಂತೆ ಕಾಣುತ್ತಿದೆ.

Add Asianetnews Kannada as a Preferred SourcegooglePreferred

ಪೂಜೆಯ ಸಮಯದಲ್ಲಿ ಒಡವೆ ನೋಡಿದಾಗ ಅದು ಕಾಣೆಯಾಗಿದೆ. ಮನೆಯ ಕೀಲಿ ತುಳಸಿ ಕೈಯಲ್ಲಿ ಇರುವ ಕಾರಣ, ಎಲ್ಲರ ದೃಷ್ಟಿ ಅವಳ ಮೇಲೆ ಬಿದ್ದಿದೆ. ಆದರೆ ಅಷ್ಟರಲ್ಲಿಯೇ ಶಾರ್ವರಿ ಮಗಳು ತಾನು ಈ ಸರವನ್ನು ನೋಡಿರುವುದಾಗಿ ಹೇಳಿದ್ದಾಳೆ. ಅಮ್ಮನ ಕಪಾಟಿನಲ್ಲಿ ಸರ ಇದ್ದುದನ್ನು ನೋಡಿದುದಾಗಿ ಹೇಳಿದ್ದಾಳೆ. ಇದನ್ನು ಕೇಳಿ ಶಾರ್ವರಿ ಶಾಕ್​ ಆಗಿದ್ದಾಳೆ. ದೀಪಿಕಾಗೂ ಗರಬಡಿದಂತಾಗಿದೆ. ಇದರ ಪ್ರೊಮೋ ಅನ್ನು ಜೀ ಕನ್ನಡ ವಾಹಿನಿ ಬಿಡುಗಡೆಮಾಡಿದೆ. ಶ್ರೀರಸ್ತು ಶುಭಮಸ್ತು ಸೀರಿಯಲ್​ನ ಈ ಪ್ರೊಮೋ ನೋಡಿ ಕರ್ಮ ರಿಟರ್ನ್ಸ್​ ಅನ್ನೋದು ಇದಕ್ಕೇ ಅಂತಿದ್ದಾರೆ ನೆಟ್ಟಿಗರು. ಸದ್ಯ ಪ್ರೊಮೋ ನೋಡಿದರೆ ತಾನೇ ಹೆಣೆದಿರುವ ಬಲೆಯಲ್ಲಿ ಶಾರ್ವರಿ ಬಿದ್ದ ಹಾಗೆ ಕಾಣಿಸುತ್ತಿದೆ. ಮುಂದೇನು ಗೊತ್ತಿಲ್ಲ, ಇದರಿಂದ ತಪ್ಪಿಸಿಕೊಳ್ಳುತ್ತಾಳೋ ಎನ್ನುವುದು ಈಗಿರುವ ಪ್ರಶ್ನೆ. ಈಕೆ ತಪ್ಪಿಸಿಕೊಳ್ಳಲಿ ಬಿಡಲಿ... ತುಳಸಿಯ ಮೇಲೆ ಮಾತ್ರ ಯಾವ ಆರೋಪ ಬರಬಾರದು ಎನ್ನುತ್ತಿದ್ದಾರೆ ಫ್ಯಾನ್ಸ್​. 

ಫ್ರೆಂಡ್​ ಅಪ್ಪನಾಗುವ ಹೊತ್ತು... ಮಾತಲ್ಲಿ ವರ್ಣಿಸಲಾಗದ ರಾಮ್​- ಸಿಹಿಯ ಈ ಕ್ಯೂಟ್​ ಸಂಬಂಧ ಹೀಗೆ ಇರುತ್ತಾ?

ಇದಕ್ಕೂ ಮುನ್ನ ಅಮ್ಮನನ್ನು ಮಗ ಸಮರ್ಥ್​ ಬಚಾವು ಮಾಡಿದ್ದ. ಆದರೆ ಈಗ ಹೇಗೆ ತುಳಸಿ ತಪ್ಪಿಸಿಕೊಳ್ಳುತ್ತಾಳೆ ಎನ್ನುವುದು ಪ್ರಶ್ನೆ. ಅಮ್ಮ ತುಳಸಿ ಗಂಡನ ಮನೆಯಲ್ಲಿ ಪಡುತ್ತಿರುವ ಕಷ್ಟವನ್ನು ಮಗ ಸಮರ್ಥ್​ಗೆ ನೋಡಲು ಆಗುತ್ತಿಲ್ಲ. ಅಮ್ಮನ ಮೇಲೆ ಎದುರಿಗೆ ದ್ವೇಷದಂತೆ ಮಾತನಾಡುತ್ತಿದ್ದರೂ, ಒಳಗೇ ಅಮ್ಮನ ಮೇಲೆ ಅದಕ್ಕಿಂತಲೂ ಹೆಚ್ಚು ಪ್ರೀತಿ ಇದೆ ಅವನಿಗೆ. ಅಮ್ಮನಿಗೆ ಏನೇ ಸಣ್ಣ ನೋವಾದರೂ ಅದನ್ನು ಆತ ಸಹಿಸಿಕೊಳ್ಳುವುದಿಲ್ಲ. ತನ್ನ ಅಮ್ಮ ಈ ಮನೆಯಲ್ಲಿ ಖುಷಿಯಿಂದ ಇಲ್ಲ ಎನ್ನುವ ಸತ್ಯ ಅವನಿಗೂ ಗೊತ್ತು. ಆದರೆ ಅಮ್ಮ ತಮಗೆ ಹೇಳದೇ ಮದುವೆಯಾಗಿ ಹೋದಳು ಎನ್ನುವ ಚಿಕ್ಕ ನೋವು ಇದೆ. ಇದೇ ಕಾರಣಕ್ಕೆ ತುಳಸಿ ಎದುರಿಗೆ ಬಂದಾಗ ಮೇಡಂ, ಯಜಮಾನಿ ಎಂದೆಲ್ಲಾ ಮಾತಿನಲ್ಲಿಯೇ ಚುಚ್ಚುತ್ತಾನೆ. ಆದರೆ ಅಮ್ಮನಿಗೆ ಸ್ವಲ್ಪ ನೋವಾದರೂ ಸಹಿಸಿಕೊಳ್ಳುವುದು ಆತನಿಂದ ಸಾಧ್ಯವಿಲ್ಲ. ಆದರೆ ಈಗ ಅಮ್ಮನ ಮೇಲೆ ಬಹುದೊಡ್ಡ ಆರೋಪ ಬಂದುಬಿಟ್ಟಿದೆ. ಅದನ್ನು ಸಮರ್ಥ್​ ಹೇಗೆ ನಿಭಾಯಿಸುತ್ತಾನೆ ಎನ್ನುವುದು ಅವನ ಮುಂದಿರುವ ಚಾಲೆಂಜ್​ ಆಗಿತ್ತು.

ಆದರೆ ಈಗ ಆ ಚಾಲೆಂಜ್​ನಲ್ಲಿ ಸಮರ್ಥ್​ ಗೆದ್ದಿದ್ದಾನೆ. ಅಮ್ಮನ ಮಾನ ಉಳಿಸಿದ್ದಾನೆ. ತನ್ನ ಮಗ ತನಗಾಗಿ ಚಾಲೆಂಜ್​ ತೆಗೆದುಕೊಂಡಿರುವುದನ್ನು ನೋಡಿ ತುಳಸಿಯ ಕಣ್ತುಂಬಿ ಬಂದಿತ್ತು. ತನಗಾಗಿ ಮಗ ಚಾಲೆಂಜ್​ ತೆಗೆದುಕೊಂಡು ನಿದ್ದೆ ಮಾಡದೇ ರಾತ್ರಿಪೂರ್ತಿ ಕುಳಿತಾಗ ಈ ಅಮ್ಮ ಆದ್ರೂ ಹೇಗೆ ನಿದ್ದೆ ಮಾಡಿಯಾಳು? ರಾತ್ರಿಪೂರ್ತಿ ಜಾಗರಣೆ ಮಾಡಿದ್ದಾಳೆ. ಮಗನಿಗೆ ನಿದ್ದೆ ಬರದಂತೆ ನೋಡಿಕೊಂಡಿದ್ದಾಳೆ. ಈ ಮಗನಿಗೋ ಅಮ್ಮನ ಮೇಲೆ ಹುಸಿಕೋಪ. ಆದರೂ ಅಕ್ಕರೆ, ಅಮ್ಮ ನಿದ್ದೆ ಮಾಡುತ್ತಿದ್ದಂತೆಯೇ ಮಡಿಲ ಮೇಲೆ ಮಲಗಿಸಿಕೊಂಡಿದ್ದಾನೆ. ಮಾರನೆಯ ದಿನ ಫೈಲ್​ ರೆಡಿ ಆಗಿದ್ದು ನೋಡಿ ಎಲ್ಲರಿಗೂ ಅಚ್ಚರಿ. ನಿನಗೆ ಹೇಳಿದಂತೆ ಪಾರ್ಟಿ ಕೊಡಿಸುವೆ ಅಂದಿದ್ದಾನೆ ಅವಿ. ಆದರೆ ಇದಕ್ಕೆಲ್ಲಾ ಸಮರ್ಥ್​ ಒಪ್ಪುವವನಲ್ಲ. ನಿಮಗೆ ಏನಾದರೂ ಕೊಡಬೇಕು ಎನ್ನಿಸಿದ್ರೆ ಅದು ಈ ಮೇಡಂಗೆ (ಅಮ್ಮ) ಏನೂ ಹೇಳಬೇಡಿ, ಅಷ್ಟೇ ಸಾಕು ಎಂದಿದ್ದಾನೆ. ಈ ಅಮ್ಮ-ಮಗನ ಪ್ರೀತಿಗೆ ಯಾರ ಕಣ್ಣೂ ಬೀಳದಿರಲಪ್ಪ ದೇವ್ರೇ ಅನ್ನುತ್ತಿದ್ದಾರೆ ಫ್ಯಾನ್ಸ್. ಇದರ ಮಧ್ಯೆಯೇ ಈಗ ತುಳಸಿಗೆ ಇನ್ನೊಂದು ಚಾಲೆಂಜ್​ ಎದುರಾಗಿದೆ. 

ಸದ್ಗುರು ನೋಡಿ ದೇವರೇ ಕುಸಿದು ಬಿದ್ದಂತೆ ಭಾಸವಾಯ್ತು: ಕಂಗನಾ ಭಾವುಕ- ಆರೋಗ್ಯದ ಮಾಹಿತಿ ನೀಡಿದ ಪುತ್ರಿ