ಪ್ರಚಾರ ಮಾಡಲು ಹೋಗಿ ಸಂಕಷ್ಟಕ್ಕೆ ಸಿಲುಕಿಕೊಂಡ ನಯನಾ. ದಯವಿಟ್ಟು ಯಾರೂ ಮೆಸೇಜ್ ಮಾಡಬೇಡಿ ಎಂದು ಮನವಿ.....

ಕನ್ನಡ ಜನಪ್ರಿಯ ಹಾಸ್ಯ ಕಾರ್ಯಕ್ರಮ ಕಾಮಿಡಿ ಕಿಲಾಡಿಗಳಲ್ಲಿ ಮಿಂಚಿರುವ ನಯನಾ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಕಾಮಿಡಿ ಕಾರ್ಯಕ್ರಮದ ನಂತರ ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಿರುವ ನಯನಾ ಆಗಾಗ ಆನ್‌ಲೈನ್‌ನಲ್ಲಿ ಕೆಲವೊಂದು ಬ್ರ್ಯಾಂಡ್ ಪ್ರಮೋಷನ್ ಮಾಡುತ್ತಾರೆ. ಮೇಕಪ್ ಆರ್ಟಿಸ್ಟ್‌ಗಳ ಜೊತೆ ಕೈ ಜೋಡಿಸಿ ಫೋಟೋಶೂಟ್ ಮಾಡಿಸುತ್ತಾರೆ. ಈ ನಡುವೆ ಪ್ರಚಾರ ಮಾಡಿರುವ ಬ್ರ್ಯಾಂಡ್‌ ಒಂದು ಜನರಿಗೆ ಮೋಸ ಮಾಡುತ್ತಿದೆ ಎಂದು ವಿಡಿಯೋ ಮಾಡಿದ್ದಾರೆ.

'ಸುಮಾರು ದಿನಗಳಿಂದ ಕೆಲವರು ನನಗೆ ಮೆಸೇಜ್ ಮತ್ತು ಕಾಲ್ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ನಾನು ಪ್ರತಿಷ್ಠಿತ ಬ್ರ್ಯಾಂಡ್‌ ಒಂದ ಮಾಡಲಿಂಗ್ ಪ್ರಮೋಷನ್ ವಿಡಿಯೋ ಮಾಡಿದ್ದೆ. ಅದು ನಿಜನಾ ಸುಳ್ಳಾ ಅಥವಾ ನಾವು ಅದಕ್ಕೆ ಪ್ರತಿಕ್ರಿಯೆ ನೀಡಬಹುದಾ ಎಂದು ಅನೇಕರು ಕೇಳಿದ್ದೀರಿ ಅದಿಕ್ಕೆ ಉತ್ತರ ಕೊಡಲು ನಾನು ವಿಡಿಯೋ ಮಾಡುತ್ತಿರುವೆ. ಮಾಡಲಿಂಗ್ ಸ್ಪರ್ಧಿ ಇದೆ ಎಂದು ಹಾಕಿದ್ದೆ...ಅದು ಸಂಪೂರ್ಣವಾಗಿ ಫೇಕ್ ಯಾರು ಅದನ್ನು ನಂಬಿ ಮೋಸ ಹೋಗಬೇಡಿ' ಎಂದು ನಯನಾ ಮಾತನಾಡಿದ್ದಾರೆ. 

ಮಧ್ಯರಾತ್ರಿ 12 ಗಂಟೆಗೆ ಆಡಿಷನ್, 2.30ಗೆ ಸೆಲೆಕ್ಟ್‌; ಅವಕಾಶ ಗಿಟ್ಟಿಸಿಕೊಂಡ ಘಟನೆ ಬಿಚ್ಚಿಟ್ಟ 'ಬೃಂದಾವನ' ನಟ

'ಈಗಾಗಲೆ ಅನೇಕರು ಸಂಪರ್ಕ ಮಾಡಿ ಫೇಕ್‌ ಎಂದು ತಿಳಿದುಕೊಂಡು ನನಗೆ ಮೇಸೇಜ್ ಮಾಡಿದ್ದೀರಿ. ಕೆಲವೊಂದು ಪ್ರೂಫ್‌ಗಳು ಈಗಾಗಲೆ ನನ್ನ ಕೈ ಸೇರಿದೆ. ದಯವಿಟ್ಟು ಯಾರೂ ಮೋಸ ಹೋಗಬೇಡಿ. ಆ ಪೇಜ್‌ನ ಫಾಲೋ ಮಾಡಬೇಡಿ..ನಿಮ್ಮಿಂದ ಸಹಾಯ ಪಡೆದುಕೊಂಡ ಮೇಲೆ ನಿಮಗೆ ಯಾವ ಕೆಲಸನೂ ಸಿಗುವುದಿಲ್ಲ. ಒಂದು ಸಲ ನಿಮ್ಮಿಂದ ಕೆಲಸ ಆದ ಮೇಲೆ ಯಾವುದೇ ಕಾರಣಕ್ಕೂ ಮತ್ತೊಮ್ಮೆ ಪ್ರತಿಕ್ರಿಯೆ ನೀಡುವುದಿಲ್ಲ' ಎಂದು ನಯನಾ ಹೇಳಿದ್ದಾರೆ.

ಸಿನಿಮಾ ಚೆನ್ನಾಗಿದೆ ಆದ್ರೂ ಓಡ್ತಿಲ್ಲ ಅನ್ನೋ ಅಧಿಕಾರ ನಿಮಗಿಲ್ಲ: ಶೆಟ್ರು ಗ್ಯಾಂಗ್‌ಗೆ ಓಂ ಪ್ರಕಾಶ್ ಸಪೋರ್ಟ್‌

ಪ್ರಚಾರ ಮಾಡುವ ಮುನ್ನ ಪರಿಶೀಲಿಸಿ ಕೆಲಸ ಮಾಡಿ ಹಣಕ್ಕಾಗಿ ಏನ್ ಬೇಕಿದ್ದರೂ ಮಾಡಿ ಜನರ ದಾರಿ ತಪ್ಪಿಸುತ್ತೀರಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಲ್ಲದೆ ಕೆಲವು ತಿಂಗಳುಗಳ ಹಿಂದೆ ಮುದ್ದಾದ ಹೆಣ್ಣು ಮಗುವಿಗ ಜನ್ಮ ನೀಡಿದ ನಯನಾ ಸದ್ಯ ಮದರ್‌ಹುಡ್ ಎಂಜಾಯ್ ಮಾಡುತ್ತಿದ್ದಾರೆ. ಫೋಟೋಶೂಟ್ ಮಾಡಿಸಿ ಮಗಳ ಫೋಟೋ ಕೂಡ ರಿವೀಲ್ ಮಾಡಿದ್ದಾರೆ. 

View post on Instagram