Asianet Suvarna News Asianet Suvarna News

ಮಧ್ಯರಾತ್ರಿ 12 ಗಂಟೆಗೆ ಆಡಿಷನ್, 2.30ಗೆ ಸೆಲೆಕ್ಟ್‌; ಅವಕಾಶ ಗಿಟ್ಟಿಸಿಕೊಂಡ ಘಟನೆ ಬಿಚ್ಚಿಟ್ಟ 'ಬೃಂದಾವನ' ನಟ

 ದಿಢೀರನೆ ನಾಯಕನನ್ನು ಬದಲಾಯಿಸಿದ ಬೃಂದಾವನ ಸೀರಿಯಲ್. ಅವಕಾಶ ಸಿಕ್ಕಿದು ಹೇಗೆಂದು ರಿವೀಲ್ ಮಾಡಿದ ವರುಣ್ ಆರಾಧ್ಯ.....

Colors Kannada Brundhavana Varun Aradhya talks about audition vcs
Author
First Published Dec 6, 2023, 1:41 PM IST

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬೃಂದಾವನ ಧಾರಾವಾಹಿ ಆರಂಭವಾದಾಗ ಬಿಗ್ ಬಾಸ್ ಖ್ಯಾತಿಯ ವಿಶ್ವನಾಥ್ ಆಕಾರ್ಶ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಮದುವೆ ಸನ್ನಿವೇಶ ಬರುವ ಸಮಯಕ್ಕೆ ನಾಯಕ ನಟನನ್ನು ಬದಲಾಯಿಸಿ ಬಿಟ್ಟರು. ದಿಢೀರನೆ ಆಕಾರ್ಶ್ ಪಾತ್ರಕ್ಕೆ ಟಿಕ್‌ಟಾಕ್‌ ರೀಲ್ಸ್‌ ಖ್ಯಾತಿಯ ವರುಣ್ ಆರಾಧ್ಯನನ್ನು ಕರೆ ತಂದು. ಹೀಗಾಗಿ ಹಲವು ಈ ಅವಕಾಶ ಹೇಗೆ ಸಿಕ್ಕಿದ್ದು ಎಂದು ಪ್ರಶ್ನೆ ಮಾಡಿದ್ದಕ್ಕೆ ವಿಡಿಯೋ ಮೂಲಕ ಕ್ಲಾರಿಟಿ ನೀಡಿದ್ದಾರೆ.

'ದೀಪಾವಳಿ ಹಬ್ಬದ ಊಟ ಮುಗಿಸಿಕೊಂಡು ಮಲಗಿಕೊಂಡಿದ್ದೆ. ರಾತ್ರಿ 12.30ಗೆ ಕರೆ ಮಾಡಿ ಸೀರಿಯಲ್‌ನಲ್ಲಿ ನಟಿಸುವ ಇಂಟ್ರೆಸ್ಟ್‌ ಇದ್ಯಾ ...ಅವಕಾಶ ಇದೆ ಎಂದು ಫೋನ್ ಮಾಡಿದರು. ರಾತ್ರಿ ಆ ಸಮಯದಲ್ಲಿ ಮಾಡಿದಕ್ಕೆ ನಾನು ಗಾಬರಿ ಆಗಿದೆ ಆ ಸಮಯದಲ್ಲಿ ಆಡಿಷನ್‌ಗೆ ಬರೆಲು ಹೇಳಿದರು. ನನ್ನ ಸ್ನೇಹಿತರನ್ನು ಕರೆದುಕೊಂಡು ನಾಗರಭಾವಿಯಲ್ಲಿ ನಿರ್ದೇಶಕರಾದ ರಾಮ್‌ಜೀ ಹೇಳಿದ ಸ್ಥಳಕ್ಕೆ ಹೋದೆ. ಕೈಗೆ ಒಂದು ಸ್ಕ್ರಿಪ್ಟ್‌ ಕೊಟ್ಟರು ಆಡಿಷನ್ ಮಾಡಿದೆ...ಮಧ್ಯರಾತ್ರಿ 2.30ಕ್ಕೆ ಸೆಲೆಕ್ಟ್‌ ಆಗಿರುವೆ ಎಂದು ಹೇಳಿದರು. ನಾನು ಫುಲ್ ಶಾಕ್ ಆಗಿಬಿಟ್ಟಿ..ಅಲ್ಲದೆ ಬೆಳಗ್ಗೆನಿಂದ ಶೂಟಿಂಗ್ ಎಂದು ಹೇಳಿದರು. ಅಷ್ಟೊತ್ತರಲ್ಲಿ ಮನೆಗೆ ಬಂದು ಅಕ್ಕ ಮತ್ತು ಅಮ್ಮ ಮಲಗಿದ್ದರು, ಅವರನ್ನು ಎಬ್ಬಿಸಿ ಸೆಲೆಕ್ಟ್‌ ಅನ್ನೋ ವಿಚಾರ ಹೇಳಿದೆ. ಬೆಳಗ್ಗೆ ಶೂಟಿಂಗ್ ಇತ್ತು...ಹೇರ್ ಕಟ್ ಮಾಡಿಸಬೇಕು ಮತ್ತು ಗಡ್ಡ ಟ್ರಿಮ್ ಮಾಡಬೇಕು ಎಂದು ಹೇಳಿದರು ಅದೂ ಮಾಡಿಸಿಕೊಂಡು ಬೆಳಗ್ಗೆ ಶೂಟಿಂಗ್ ಸ್ಥಳಕ್ಕೆ ಹೋದೆ ಮರು ದಿನವೇ ಪ್ರಸಾರ ಮಾಡಲು ಶುರು ಮಾಡಿದ್ದರು. ಮೊದಲ ದೃಶ್ಯವೇ ಮದುವೆ ಮನೆ ಸೀನ್ ಅಗಿತ್ತು' ಎಂದು ವರುಣ್ ಮಾತನಾಡಿದ್ದಾರೆ.

ತಂದೆ ಆಟೋ ಓಡಿಸುತ್ತಿದ್ದ ವರುಣ್ ಆರಾಧ್ಯ; 'ಬೃಂದಾವನ' ಸೀರಿಯಲ್ ಸಿಗೋಕೆ ಇದೇ ಕಾರಣ?

'ವರುಣ್ ಈಗಾಗಲೆ ಸಾಕಷ್ಟು ಆಡಿಷನ್ ಕೊಟ್ಟಿದ್ದಾನೆ ಯಾವುದು ಸೆಲೆಕ್ಟ್ ಆಗಿಲ್ಲ. ರಾತ್ರಿ ಕರೆ ಬಂದಿದೆ ಹೋಗಿ ಬರ್ತೀನಿ ಅಂತ ಹೇಳಿದಾಗಲೂ ನಾವು ಏನೋ ಸುಳ್ಳು ಅಂದುಕೊಂಡೆ ಆದರೆ ಮಧ್ಯರಾತ್ರಿ ಎಬ್ಬಿಸಿ ಬೃಂದಾವನ ಸೀರಿಯಲ್‌ಗೆ ಸೆಲೆಕ್ಟ್‌ ಆದೆ ಎಂದು ಹೇಳಿದ. ಆರಂಭದಿಂದಲೂ ನಾನು ನೋಡುತ್ತಿದ್ದ ಸೀರಿಯಲ್ ಅದು ಈಗ ಸೆಲೆಕ್ಟ್ ಆಗಿದ್ದಾನೆ ಅಂತ ಕೇಳಿ ಖುಷಿ ಆಯ್ತು. ದೀಪಾವಳಿ ಹಬ್ಬಕ್ಕೆ ಬಂದ ಬಿಗ್ ಸರ್ಪ್ರೈಸ್‌ ಇದು' ಎಂದು ವರುಣ್ ಸಹೋದರಿ ಚೈತ್ರಾ ಮಾತನಾಡಿದ್ದಾರೆ.

 

ಬ್ರೇಕಪ್‌ ಬೆನ್ನಲೆ ಬಿಗ್ ಬಾಸ್‌ಗೆ ಕಾಲಿಡುತ್ತಿರುವ ವರ್ಷಾ-ವರುಣ್; ಬೈಯೋರು ಯಾರಿಲ್ಲ ಎಂದ ನೆಟ್ಟಿಗರು!

'ದೀಪಾವಳಿ ಹಬ್ಬದ ದಿನ ಯುಟ್ಯೂಬ್ ಸಿಲ್ವರ್ ಬಟನ್ ಬಂದಿತ್ತು. ಈಗ ರಾತ್ರಿ ಲಕ್ಷ್ಮಿ ಬಾಗಿಲು ತಟ್ಟಿ ಅವಕಾಶ ಕೊಟ್ಟಿದ್ದಾಳೆ. ದೀಪಾವಳಿ ಎರಡನೇ ದಿನ ವರುಣ್ ತಂದೆ ಅವರಿಗೆ ಎಡೆ ಇಟ್ಟು ಪೂಜೆ ಮಾಡಬೇಕಿತ್ತು ಎಲ್ಲಾ ಸಾಮಾಗ್ರಿ ತಂದುಕೊಡುತ್ತೀನಿ ಎಂದು ಹೇಳಿದ್ದ. ಇದ್ದಕ್ಕಿದ್ದಂತೆ ಅವಕಾಶ ಸಿಕ್ಕ ಶೂಟಿಂಗ್‌ನಲ್ಲಿ ಬ್ಯುಸಿಯಾಗಿಬಿಟ್ಟ. ಯುಟ್ಯೂಬ್ ಮಾಡಲು ಸಮಯವಿಲ್ಲ. ಜಿಮ್‌ನ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ವರುಣ್‌ಗೆ ಅವಕಾಶ ಸಿಕ್ಕಿದ್ದು ತುಂಬಾ ಖುಷಿ ಹಲವು ವರ್ಷಗಳಿಂದ ಪ್ರಯತ್ನ ಮಾಡುತ್ತಿದ್ದ. ಟಿವಿಯಲ್ಲಿ ನೋಡಿ ಆ ನಂತರ ಜಿಯೋ ಸಿನಿಮಾದಲ್ಲಿ ನೋಡುತ್ತೀನಿ. ಖುಷಿ ಇದೆ. ಹೀಗೆ ನಮ್ಮನ್ನು ಸಪೋರ್ಟ್ ಮಾಡಿ' ಎಂದು ವರುಣ್ ತಾಯಿ ಮಾತನಾಡಿದ್ದಾರೆ. 

 

Follow Us:
Download App:
  • android
  • ios