ಕನ್ನಡದಲ್ಲೂ ದೆವ್ವ, ತೆಲುಗಿನಲ್ಲೂ ದೆವ್ವ. ದೆವ್ವ ಮೈ ಮೇಲೆ ಬರುವ ಪಾತ್ರದಲ್ಲಿ ಈಕೆಯ ಮಸ್ತಾದ ಅಭಿನಯ, ಅದಕ್ಕೆ ಬರೋ ಟಿಆರ್‌ಪಿ ನೋಡಿಯೇ ಈ ಥರದ ರೋಲ್‌ಗಳು ಈಕೆಯ ಹುಡುಕಿಕೊಂಡು ಬರ್ತಿದ್ದಾವಾ ಅನ್ನೋದು ಈಕೆಯ ಅಭಿಮಾನಿಗಳ ಡೌಟು.

ಲಕ್ಷ್ಮೀ ಬಾರಮ್ಮ ಸೀರಿಯಲ್ ನಾಯಕಿ ಭೂಮಿಕಾ ರಮೇಶ್ ಕೈ ತುಂಬಾ ಪಾತ್ರಗಳಿವೆ. ಅವರು ಕನ್ನಡ ಸೀರಿಯಲ್, ತೆಲುಗು ಸೀರಿಯಲ್ ಜೊತೆಗೆ ಕನ್ನಡ ಸಿನಿಮಾದಲ್ಲೂ ಬ್ಯುಸಿ. ಇನ್ನೂ ಇಪ್ಪತ್ತೊಂದು ವರ್ಷ ವಯಸ್ಸಿನ ಈ ಪ್ರತಿಭಾವಂತ ನಟಿ ಭರತನಾಟ್ಯದಲ್ಲೂ ಎಕ್ಸ್‌ಪರ್ಟ್‌. 'ಲಕ್ಷ್ಮಿ ಬಾರಮ್ಮ' ಸೀರಿಯಲ್‌ನಲ್ಲಿ ನಾಯಕಿ ಲಕ್ಷ್ಮಿಯಾಗಿ ನಟಿಸಿ ಕಿರುತೆರೆ ವೀಕ್ಷಕರ ಮನೆ, ಮನ ಸೆಳೆದಿರುವ ಈಕೆ ಸದ್ಯ ಕೈತುಂಬ ಅವಕಾಶಗಳನ್ನು ಹಿಡಿದು ನಿಂತಿದ್ದಾರೆ. ಮೊದಲ ಧಾರಾವಾಹಿಯಲ್ಲಿಯೇ ನಾಯಕಿಯಾಗಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದ ಭೂಮಿಕಾ ರಮೇಶ್ ಕಳೆದ ವರ್ಷದ ಅನುಬಂಧ ಅವಾರ್ಡ್ಸ್‌ನಲ್ಲಿ ಜನ ಮೆಚ್ಚಿದ ಹೊಸ ಪರಿಚಯ ಪ್ರಶಸ್ತಿಯನ್ನು ಕೂಡಾ ಪಡೆದುಕೊಂಡಿದ್ದರು. ಕಿರುತೆರೆಯ ಜೊತೆಗೆ ಬೆಳ್ಳಿತೆರೆಯಲ್ಲಿಯೂ ನಟಿಸಬೇಕು ಎಂಬುದು ಈಕೆಯ ಬಹುದಿನದ ಕನಸಾಗಿತ್ತು. ಆಕೆಯ ಕನಸು ಕೂಡಾ ಇದೀಗ ನನಸಾಗಿದೆ. ನಾಗರಾಜ್‌ ಎಂ. ಜಿ ಗೌಡ ನಿರ್ದೇಶನದ 'ಡಿಸೆಂಬರ್ 24' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಸ್ಯಾಂಡಲ್‌ವುಡ್‌ಗೂ ಕಾಲಿಟ್ಟಿದ್ದಾರೆ ಭೂಮಿಕಾ ರಮೇಶ್.

ಜೊತೆಗೆ ತೆಲುಗಿನ 'ಮೇಘಸಂದೇಶಂ' ಧಾರಾವಾಹಿಯಲ್ಲಿ ನಾಯಕಿ ಭೂಮಿಯಾಗಿ ಕಾಣಿಸಿಕೊಳ್ಳುವ ಮೂಲಕ ಪರಭಾಷೆಯ ಕಿರುತೆರೆಗೆ ಕಾಲಿಟ್ಟಿರುವ ಭೂಮಿಕಾ ರಮೇಶ್ ಅಲ್ಲೂ ನಟನಾ ಛಾಪನ್ನು ಪಸರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕನ್ನಡ ಸೀರಿಯಲ್ ಜೊತೆಗೆ ತೆಲುಗು ಸೀರಿಯಲ್‌ನಲ್ಲಿ ಬಣ್ಣ ಹಚ್ಚುತ್ತಿರುವ ಭೂಮಿಕಾ ಅವರ ಕಿರುತೆರೆ ಪಯಣ ಶುರುವಾಗಿದ್ದು ರಿಯಾಲಿಟಿ ಶೋ ಮೂಲಕ. ಮೊದಲ ಬಾರಿಗೆ ತೆಲುಗು ರಿಯಾಲಿಟ ಶೋವಿನಲ್ಲಿ ಕಾಣಿಸಿಕೊಂಡಾಗ ಈಕೆ ಕೇವಲ ನಾಲ್ಕನೇ ತರಗತಿಯ ವಿದ್ಯಾರ್ಥಿನಿ ಆಗಿದ್ದಳು.

ತೊಂಡೆಕಾಯಿಯನ್ನು ಆ ಅಂಗಕ್ಕೆ ಹೋಲಿಸಿ ಹಿಂಟ್ ಕೊಟ್ಟ ಲಕ್ಷ್ಮೀ ನಿವಾಸದ ಸಂತೋಷ್, ನಗುತ್ತಲೇ ಥೂ ಅಂತಿರೋ ನೆಟ್ಟಿಗರು

ಮುಂದೆ ತೆಲುಗಿನ ಮಗದೊಂದು ರಿಯಾಲಿಟಿ ಶೋ 'ಸೈ ಅಂಟೆ ಸೈ' ಶೋವಿನಲ್ಲಿ ಮಿಂಚಿದ ಈಕೆ ಕನ್ನಡ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದು ಡ್ಯಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋ ಮೂಲಕ. ರಿಯಾಲಿಟಿ ಶೋ ಸ್ಪರ್ಧಿಯಾಗಿದ್ದಾಗ ಪಾಶ್ಚಾತ್ಯ ನೃತ್ಯವನ್ನು ಕಲಿತಿದ್ದ ಭೂಮಿಕಾ ರಮೇಶ್ ನಂತರವಷ್ಟೇ ಭರತನಾಟ್ಯ ನೃತ್ಯವನ್ನು ಕಲಿಯಲಾರಂಭಿಸಿದರು. ಇದೀಗ ಸೀನಿಯರ್ ಮುಗಿಸಿ ವಿದ್ವತ್ತಿನ ಹಂತವನ್ನು ಕಲಿಯುತ್ತಿರುವ ಭೂಮಿಕಾ ರಮೇಶ್ ಅವರು ತಾವು ಅಂದುಕೊಂಡಂತೆ ಬಣ್ಣದ ಬದುಕಿನಲ್ಲಿ ಬದುಕು ರೂಪಿಸಿಕೊಂಡಿದ್ದಾರೆ.

ಈಗ ಪ್ರಶ್ನೆ ಅದಲ್ಲ, ಸದ್ಯಕ್ಕೀಗ ಭೂಮಿಕಾ ರಮೇಶ್ ಕಿರುತೆರೆಯ ದೆವ್ವ ಮೈಮೇಲೆ ಬರುವ ಪಾತ್ರದ ಮೂಲಕವೇ ಸಖತ್ ಫೇಮಸ್ ಆಗ್ತಿದ್ದಾರೆ. ಕನ್ನಡದ ಲಕ್ಷ್ಮೀ ಬಾರಮ್ಮ ಸೀರಿಯಲ್‌ನಲ್ಲಿ ಕೀರ್ತಿ ದೆವ್ವ ಆಗಾಗ ಈಕೆಯ ಮೈಮೇಲೆ ಬಂದು ಏನೇನೋ ಸತ್ಯಗಳನ್ನ ಹೇಳಿಸಲು ಟ್ರೈ ಮಾಡುತ್ತ ಇರುತ್ತೆ. ಈ ಪಾತ್ರದಲ್ಲಿ ಭೂಮಿಕಾ ನಟನೆ ಯಾವ ಲೆವೆಲ್‌ಗೆ ಜನಪ್ರಿಯ ಆಗಿದೆ ಅಂದರೆ ತೆಲುಗಿನಲ್ಲಿ ಅವರು ನಟಿಸುತ್ತಿರುವ 'ಮೇಘ ಸಂದೇಸಂ' ಸೀರಿಯಲ್‌ನಲ್ಲೂ ಈಕೆಯನ್ನು ದೆವ್ವ ಮೆಟ್ಟಿಕೊಂಡಿದೆ. ಇದರಲ್ಲಿ ನಾಯಕಿ ಭೂಮಿ ಪಾತ್ರದ್ಲಲಿರುವ ಈಕೆ ಒಬ್ಬ ಬಿಲಿಯನೇರ್ ಮಗಳಾದರೂ ಕುತಂತ್ರದಿಂದ ಅನಾಥೆಯಾಗಿ ಬದುಕುತ್ತಿರುತ್ತಾಳೆ. ಆದರೆ ಈಕೆಯ ತೀರಿಹೋದ ಅಮ್ಮನೇ ಇವಳ ದೇಹದಲ್ಲಿ ಬಂದು ಮನೆಯವರಿಗೆ ಏನೇನೋ ಸಂದೇಶ ಕೊಡಲಾರಂಭಿಸುತ್ತಾಳೆ. ಸೋ ಕನ್ನಡದಲ್ಲೂ ದೆವ್ವ, ತೆಲುಗಿನಲ್ಲೂ ದೆವ್ವ. ದೆವ್ವ ಮೈ ಮೇಲೆ ಬರುವ ಪಾತ್ರದಲ್ಲಿ ಈಕೆಯ ಮಸ್ತಾದ ಅಭಿನಯ, ಅದಕ್ಕೆ ಬರೋ ಟಿಆರ್‌ಪಿ ನೋಡಿಯೇ ಈ ಥರದ ರೋಲ್‌ಗಳು ಈಕೆಯ ಹುಡುಕಿಕೊಂಡು ಬರ್ತಿದ್ದಾವಾ ಅನ್ನೋದು ಈಕೆಯ ಅಭಿಮಾನಿಗಳ ಡೌಟು.

ಬಿಗ್ ಬಾಸ್ ಕನ್ನಡ 11: ಕಿಚ್ಚನ ಕ್ಲಾಸ್, ಯಾರಿಗೆಲ್ಲಾ ಬಿಸಿ ಮುಟ್ಟಿಸಿದ್ರು?

ಇನ್ನು ಈಕೆ ಇದೀಗ ನಟಿಸಿರುವತ್ತಿರುವ ಸಿನಿಮಾ 'ಡಿಸೆಂಬರ್ ೨೪' ಸಹ ಹಾರರ್ ಥ್ರಿಲ್ಲರ್ ಶೈಲಿಯ ಸಿನಿಮಾ. ಮೆಡಿಕಲ್ ರಿಸರ್ಚ್‌ಗೆ ಸಂಬಂಧಪಟ್ಟ ಕಥೆ ಇದೆ. ಹುಲಿಯೂರು ದುರ್ಗದಲ್ಲಿ ನಡೆದ ನೈಜ ಘಟನೆಯೊಂದು ಈ ಸಿನಿಮಾಕ್ಕೆ ಪ್ರೇರಣೆಯಂತೆ. ಇದೂ ಹಾರರ್ ಆಗಿರುವ ಕಾರಣ ಇಲ್ಲೂ ಭೂಮಿಯನ್ನು ದೆವ್ವದ ಅವತಾರದಲ್ಲಿ ನೋಡಬಹುದಾ? ಅನ್ನೋ ನಿರೀಕ್ಷೆಯಲ್ಲಿದ್ದಾರೆ ಭೂಮಿಕಾ ಫ್ಯಾನ್ಸ್.

View post on Instagram