ತೊಂಡೆಕಾಯಿಯನ್ನು ಆ ಅಂಗಕ್ಕೆ ಹೋಲಿಸಿ ಹಿಂಟ್ ಕೊಟ್ಟ ಲಕ್ಷ್ಮೀ ನಿವಾಸದ ಸಂತೋಷ್, ನಗುತ್ತಲೇ ಥೂ ಅಂತಿರೋ ನೆಟ್ಟಿಗರು
ಜೀ ಕನ್ನಡ ಅವಾರ್ಡ್ ಫಂಕ್ಷನ್‌ನ ಟಾಸ್ಕ್ ಒಂದರಲ್ಲಿ ಲಕ್ಷ್ಮೀ ನಿವಾಸದ ಸಂತೋಷ್ ಅಲಿಯಾಸ್ ಮಂಜು ಹೆಗಡೆ ತೊಂಡೆಕಾಯಿ ಬಗ್ಗೆ ಹಿಂಟ್ ಕೊಡುವಾಗ ಹೀಗಂದುಬಿಟ್ಟಿದ್ದಾರೆ. ನೆಟ್ಟಿಗರು ಥೂ ಅಂತ ಮುಸಿ ನಗ್ತಿದ್ದಾರೆ.
ಲಕ್ಷ್ಮೀ ನಿವಾಸ ಸೀರಿಯಲ್ ನೋಡುವ ವೀಕ್ಷಕರಿಂದ ಅತೀ ಹೆಚ್ಚು ಬೈಗುಳ ತಿನ್ನೋದು ಜಯಂತ್ ಗಿಂತಲೂ ಹೆಚ್ಚಾಗಿ ಸಂತೋಷ್. ಅವಿಭಕ್ತ ಕುಟುಂಬದ ಬೇಜಾವಾಬ್ದಾರಿ ಮಗನ ಪಾತ್ರದಲ್ಲಿ ಮಂಜು ಹೆಗಡೆ ಬಹಳ ಚೆನ್ನಾಗಿ ಅಭಿನಯಿಸಿದ್ದಾರೆ. ಸಂತೋಷ್ ಅನ್ನೋ ಪಾತ್ರದ ಶೇಡ್‌ಗಳನ್ನು ಬಹಳ ಚೆನ್ನಾಗಿ ಅರ್ಥ ಮಾಡಿಕೊಂಡು ಅದಕ್ಕೆ ತಕ್ಕಂಥ ಅಭಿನಯಿಸೋ ಅವರ ನಟನೆಗೆ ಸಿಗೋ ಬೈಗುಳಗಳು ಅಷ್ಟಿಷ್ಟಲ್ಲ. ಆ ಗ್ರೇ ಶೇಡ್ ಪಾತ್ರಕ್ಕೆ ಇದಕ್ಕಿಂತ ಹೆಚ್ಚಿನ ಮೆಚ್ಚುಗೆ ಮತ್ತೊಂದಿಲ್ಲ. ಇವರ ಪತ್ನಿಯ ವೀಣಾ ಪಾತ್ರಕ್ಕೆ ಲಕ್ಷ್ಮೀ ಹೆಗಡೆ ಬಣ್ಣ ಹಚ್ಚಿದ್ದಾರೆ. ಅವರ ನಟನೆಯಂತೂ ಪಾಸಿಟಿವ್ ಆಂಗಲ್ ನಿಂದ ಹೆಚ್ಚಿನ ನಾರಿಯರ ಮೋಸ್ಟ್ ಫೇವರಿಟ್ ಪಾತ್ರ. ಸಂತೋಷ್ ಈ ಸೀರಿಯಲ್‌ನ ಅತೀ ಹೆಚ್ಚು ಮಂದಿ ಹೇಟ್ ಮಾಡೋ ಪಾತ್ರ ಆದರೆ, ವೀಣಾ ಪಾತ್ರ ಈ ಸೀರಿಯಲ್ ವೀಕ್ಷಕರು ಸೊಸೆ ಅಂದ್ರೆ ಹೀಗಿರಬೇಕು ಅಂದುಕೊಳ್ಳುವ ಪಾತ್ರ.
ಈ ರೋಲ್‌ಗೆ ಲಕ್ಷ್ಮೀ ಹೆಗಡೆ ಯಾವ ಲೆವೆಲ್‌ಗೆ ನ್ಯಾಯ ಸಲ್ಲಿಸಿದ್ದಾರೆ ಅಂದ್ರೆ ನೆಟ್ಟಿಗರು ಅವರ ಪರ್ಸನಲ್ ಲೈಫು, ಫ್ಯಾಮಿಲಿ, ಗಂಡ, ಅತ್ತೆ ಇವ್ರನ್ನೆಲ್ಲ ಇಂಟರ್‌ನೆಟ್‌ನಲ್ಲಿ ಹುಡುಕಿದ್ದೇ ಹುಡುಕಿದ್ದು. ಅಲ್ಲಿ ಏನೂ ಸಿಗದೆ ಯೂಟ್ಯೂಬ್‌ನಲ್ಲೂ ಸಿಗದೆ ಒದ್ದಾಡಿದ್ದು. ಇರಲಿ, ಸಂತೋಷ್ ಪಾತ್ರಧಾರಿ ಬಗೆಗೂ ಈ ಥರದ ಸರ್ಕಸ್ ಗಳೆಲ್ಲ ನಡೆದಿದೆ. ಆದರೆ ಜೀ ಕನ್ನಡದ ಅವಾರ್ಡ್ ಫಂಕ್ಷನ್‌ನಲ್ಲಿ ಅವರು ಕೊಟ್ಟ ಉತ್ತರಕ್ಕೆ ಮಾತ್ರ ಮುಖ ಮುಚ್ಚಿ ನಗೋ ಹಾಗಾಗಿದೆ.
ತಲೆ ಮೇಲೆ ಕೈಹೊತ್ತು ಕುಳಿತ ಹನುಮಂತ, ಮುಗ್ಧನ ಮೇಲೆ ಮೃಗಗಳ ದಾಳಿ ಎಂದ ಫ್ಯಾನ್ಸ್
ಹಳ್ಳಿ ಕಡೆ ಅಡಲ್ಟ್ ಜೋಕ್‌ಗಳೆಲ್ಲ ಕಾಮನ್. ಸಿಟಿಯಲ್ಲಿ ಅದು ಸ್ವಲ್ಪ ಪಾಲಿಶ್ಡ್ ವರ್ಶನ್‌ನಲ್ಲಿರುತ್ತೆ. ಆದರೆ ಹಳ್ಳಿಯಿಂದ ಸಿಟಿಗೆ ಬಂದವರು ಎಷ್ಟೋ ಸಲ ಬಾಯ್ತಪ್ಪಿ ಆ ಮಾತನ್ನು ಎಲ್ಲರ ಮುಂದೆ ಆಡಿ ಬಿಡ್ತಾರೆ. ಕೆಲವೊಮ್ಮೆ ಅಚಾನಕ್ ಆಗಿ ಕೇಳಿ ಬರೋ ಪ್ರಶ್ನೆಗೆ ಟಪಕ್ಕಂತ ಈ ಬಗೆಯ ಉತ್ತರ ಕೊಡೋದೂ ಇದೆ. ಆ ಪ್ರಶ್ನೆಗೆ ಉತ್ತರ ಕೊಡುವಾಗ ಬೆಳೆದ ಪರಿಸರದ ಸ್ಟೈಲ್ ಬಂದು ಅದು ಬೇರೆ ಥರ ಆಗೋದೂ ಇದೆ. ಇನ್ನು ಲಕ್ಷ್ಮೀ ಹೆಗಡೆ ಮತ್ತು ಮಂಜು ಹೆಗಡೆ ಇಬ್ಬರೂ ಉತ್ತರ ಕನ್ನಡದವರು. ಒಂದೇ ಸಮುದಾಯದಿಂದ ಬಂದವರು. ಮಂಜು ಹೆಗಡೆ ನೀನಾಸಂ ಕಲಾವಿದರಾದ ಲಕ್ಷ್ಮೀ ಹೆಗಡೆ ಗಾಯಕಿಯಾಗಿ ಬಂದು ನಾಯಕಿಯಾಗಿ ಬೆಳೆದು ಈಗ ವೀಣತ್ತಿಗೆ ಪಾತ್ರದ ಮೂಲಕ ಎಲ್ಲರ ಮನೆಯ ಸೊಸೆಯ ಪ್ರತಿಬಿಂಬದ ಹಾಗೆ ಇದ್ದಾರೆ.
ಇರಲಿ, ಜೀ ಕನ್ನಡ ಅವಾರ್ಡ್ ಫಂಕ್ಷನ್‌ನಲ್ಲಿ ನಿರೂಪಕ ಅಕುಲ್ ನಾನಾ ಬಗೆಯ ಟಾಸ್ಕ್‌ಗಳನ್ನು ನಾಯಕ, ನಾಯಕಿಯರಿಗೆ ನೀಡಿದರು. ಅದರಲ್ಲೊಂದು ನೋಡದೇ ತರಕಾರಿ ಹೆಸರು ಹೇಳೋ ಟಾಸ್ಕ್. ನಾಯಕಿಯರ ಕಣ್ಣಿಗೆ ಬಟ್ಟೆ ಕಟ್ಟಿರ್ತಾರೆ. ನಾಯಕರು ವಿವಿಧ ತರಕಾರಿಗಳನ್ನು ಎಕ್ಸ್‌ಪ್ಲೇನ್ ಮಾಡಬೇಕು. ನಾಯಕಿಯರು ಅದೇನು ಅಂತ ಗೆಸ್ ಮಾಡಿ ಹೇಳಬೇಕು. ರಾಮ ಮತ್ತು ಸೀತಾ ಜೋಡಿಯಲ್ಲಿ ರಾಮ ಹೇಳಿದ ವಿವರ ಕೇಳಿ ಸೀತಾ ಆಲ್ ಮೋಸ್ಟ್ ಎಲ್ಲಕ್ಕೂ ಸರಿಯುತ್ತರ ಕೊಡ್ತಾರೆ. ಆದರೆ ಬ್ರಹ್ಮಗಂಟುವಿನ ದೀಪಾ ಮತ್ತು ಚಿರು ಜೋಡಿ ಇದರಲ್ಲಿ ಕೊಂಚ ಹಿಂದುಳೀತಾರೆ. ಆದರೆ ಹಿಲೇರಿಯಸ್ ಅಂತ ಅನಿಸಿದ್ದು ಸಂತೋಷ್ ಮತ್ತು ವೀಣಾ ಜೋಡಿ.
ದರ್ಶನ್ 'ಕಲಾಸಿಪಾಳ್ಯ' ಡೈರೆಕ್ಟರ್ ಓಂ ಪ್ರಕಾಶ್ ರಾವ್ ಈಗೇನ್ ಮಾಡ್ತಿದಾರೆ, ಏನ್ ಕಥೆ?
ಇದರಲ್ಲಿ ಸಂತೋಷ್ ಕವರ್ ಓಪನ್ ಮಾಡಿದಾಗ ಅವರಿಗೆ ಕಾಣ ಸಿಕ್ಕ ತರಕಾರಿ ತೊಂಡೆಕಾಯಿ. ಅವರನ್ನು ಮಕ್ಕಳ ಆ ಅಂಗಕ್ಕೆ ಹೋಗಿ ಹಿಂಟ್ ಕೊಟ್ಟಾಗ ಕಕ್ಕಾಬಿಕ್ಕಿಯಾಗುವ ಸರದಿ ಲಕ್ಷ್ಮೀ ಹೆಗಡೆ ಅವರದ್ದು. ಅವರೂ ಹಳ್ಳಿ ಹಿನ್ನೆಲೆಯಿಂದ ಬಂದ ಕಾರಣ ಈ ಥರ ಜೋಕ್ ಕೇಳಿ ಅಭ್ಯಾಸವಿದ್ದ ಕಾರಣ ಕೊಂಚ ಮುಜುಗರವಾದರೂ ನಾಚಿಕೆಪಟ್ಟುಕೊಂಡೇ ಉತ್ತರ ಹೇಳಿದರು. ಆಮೇಲೆ ಇದಕ್ಕಿಂತ ಮಜಾ ಅನಿಸಿದ್ದು ಅಕುಲ್ ತೆಗೆದುಕೊಟ್ಟ ಮುಂದಿನ ತರಕಾರಿ. ಸೋರೆಕಾಯಿ ಕೊಟ್ಟು ಇದನ್ನೇನು ಅಂತಾರೋ ಗೊತ್ತಿಲ್ಲ ಅಂದಿದ್ದು ಮತ್ತಷ್ಟು ನಗೆ ಉಕ್ಕಿಸಿತು. ಆದರೆ ಈ ಬಾರಿ ಹೆಚ್ಚೇನೂ ಜೋಕ್ ಮಾಡದೇ ಸಂತೋಷ್ ತರಕಾರಿ ಬಗ್ಗೆ ವಿವರಿಸಿದ್ರು. ಲಕ್ಷ್ಮೀ ಅದೇನು ಅಂತ ಗೆಸ್ ಮಾಡಿದ್ರು. ಈ ಕಾನ್ಸೆಪ್ಟ್ ಜನರಿಗೆ ಇಷ್ಟವಾಗಿದ್ದಂತೂ ಹೌದು. ಅದಕ್ಕಿಂತಲೂ ಹೆಚ್ಚಾಗಿ ನಗೆ ತರಿಸಿದ್ದು ಸಂತೋಷ್ ಅಲಿಯಾಸ್ ಮಂಜು ಹೆಗಡೆ ಅವರ ಈ ಹಳ್ಳಿ ಸ್ಟೈಲ್ ಕಾಮಿಡಿ.