ಶಾಂತಂ ಪಾಪಂ ಎಪಿಸೋಡ್‌ 1 ವೈರಲ್. ಸೋಷಿಯಲ್ ಮೀಡಿಯಾ ಸರಿಯಾಗಿ ಬಳಸಿಲ್ಲ ಅಂದ್ರೆ ಹೀಗೆಲ್ಲಾ ಸಮಸ್ಯೆ ಆಗುತ್ತೆ.... 

ಕಲರ್ಸ್‌ ವಾಹಿನಿಯಲ್ಲಿ ಹಲವು ವರ್ಷಗಳಿಂದ ಶಾಂತಂ ಪಾಪಂ ಸೀರಿಸ್‌ ಪ್ರಸಾರವಾಗುತ್ತಿದೆ. ನೈಘ ಕ್ರೈಂ ಘಟನೆಗಳನ್ನು ಕಥೆ ಮೂಲಕ ಜನರಿಗೆ ತಿಳಿಸಿ ಪ್ರಪಂಚ ಹೇಗಿದೆ ಏನೆಲ್ಲಾ ಸಮಸ್ಯೆಗಳು ಆಗುತ್ತದೆ ಎಂದು ತಿಳಿಸುವ ಸಲುವಾಗಿ ಈ ಧಾರಾವಾಹಿ ಪ್ರಸಾರ ಮಾಡುತ್ತಾರೆ. ಅದರಲ್ಲಿ ಮೊದಲ ಎಪಿಸೋಡ್‌ನಲ್ಲಿ ಫೇಸ್‌ಬುಕ್‌ ತಂದಿಟ್ಟ ಸಂಕಷ್ಟದ ಕಥೆಯನ್ನು ಹೇಳಿದ್ದಾರೆ.

ಅಂಕಿತಾ ಅನ್ನೋ ಹುಡುಗಿ ಕಾಲೇಜ್‌ಗೆ ಕಾಲಿಡುತ್ತಿದ್ದಂತೆ ಫೇಸ್‌ಬುಕ್‌ ಸೇರಿಕೊಳ್ಳುತ್ತಾಳೆ ಸಾಲು ಸಾಲು ಹುಡುಗರ ಫ್ರೆಂಡ್‌ ರಿಕ್ವೆಸ್ಟ್‌ ಬರುತ್ತಿದ್ದಂತೆ ಖುಷಿಯಿಂದ ಒಪ್ಪಿಕೊಳ್ಳುತ್ತಾಳೆ. ಅದರಲ್ಲಿ ಗೌತಮ್ ಅನ್ನೋ ಹೆಸರಿನ ಹುಡುಗನನ್ನು ಪ್ರೀತಿಸಲು ಆರಂಭಿಸುತ್ತಾಳೆ ತುಂಬಾ ತುಂಬಾ ಕ್ಲೋಸ್ ಆದ ಮೇಲೆ ಇಬ್ಬರ ನಡುವೆ ಸಲುಗೆ ಬೆಳೆಯುತ್ತದೆ. ಪ್ರೀತಿ ಮತ್ತೊಂದು ದಾರಿ ಹಿಡಿಯುತ್ತದೆ ಫೇಸ್‌ಬುಕ್‌ ಮೂಲಕವೇ ತಮ್ಮ ಪ್ರೈವೇಟ್‌ ಫೋಟೋಗಳನ್ನು ಬಾಯ್‌ಫ್ರೆಂಡ್‌ ಜೊತೆ ಹಂಚಿಕೊಳ್ಳುತ್ತಾಳೆ ಆದರೆ ಅಲ್ಲಿ ಏನ್ ಆಯ್ತೋ ಏನೋ ಆ ಫೋಟೋಗಳು ಮಹೇಶ್ ಅನ್ನೋ ವ್ಯಕ್ತಿ ಕೈ ಸೇರುತ್ತದೆ. ಮಹೇಶ್ ಮತ್ತು ಗೌತಮ್‌ ಸ್ನೇಹಿತರು ಹೇಗೆ ಫೋಟೋ ಶೇರ್ ಆಯ್ತು ಗೊತ್ತಿಲ್ಲ ಆದರೆ ಇದರಿಂದ ಅಂಕಿತಾಗೆ ತೊಂದರೆ ಶುರುವಾಗುತ್ತೆ. 

ನನ್ನ ಆಟಾಡೋ ಗೊಂಬೆ ಅಂದ್ಕೊಂಡಿದ್ದೀರಾ? ಅಬ್ಬಬ್ಬಾ, ಅಮೃತಧಾರೆಯಲ್ಲಿ ಛಾಯಾ ಸಿಂಗ್ ಎಕ್ಸ್‌ಪ್ರೆಶನ್‌ನೋಡಿ!

ಆಗಾಗ ಅಂಕಿತಾಗೆ ಕರೆ ಮಾಡಿ ನಾನು ಹೇಳಿದ ಕಡೆ ಬರ ಬೇಕು ನಾನು ಯಾವಾಗ ಇಷ್ಟ ಆಗುತ್ತದೆ ಅವತ್ತು ಡಿಲೀಟ್ ಮಾಡುವೆ ಹೇಳಿದ ರೀತಿ ನಡೆದುಕೊಳ್ಳಬೇಕು ಎಂದು ಡಿಮ್ಯಾಂಡ್ ಮಾಡುತ್ತಾನೆ. ಅಲ್ಲಿಗೆ ಬಿಡದ ಅಂಕಿತಾ ಗೌತಮ್‌ನ ಭೇಟಿ ಮಾಡಿ ಪ್ರಶ್ನೆ ಮಾಡುತ್ತಾಳೆ ನನಗೆ ಏನೂ ಗೊತ್ತಿಲ್ಲ ಹೇಗೆ ಆಯ್ತು ಅನ್ನೋದು ನನಗೆ ಗೊತ್ತಿಲ್ಲ ಎಂದು ಹೇಳಿದ ಗೌತಮ್ ಈ ಸಮಸ್ಯೆಗೆ ಪರಿಹಾರ ಸಿಗುವುದಕ್ಕೆ ಜೋತಿಷಿ ನಾಗರಾಜ್‌ ಬಗ್ಗೆ ಹೇಳಿ ಪರಿಚಯ ಮಾಡಿಕೊಡುತ್ತಾರೆ. ತಕ್ಷಣವೇ ಅಂಕಿತಾ ನಾಗರಾಜ್‌ ಭೇಟಿ ಮಾಡಿ ಸಂಪೂರ್ಣ ಸಮಸ್ಯೆ ಹೇಳಿಕೊಳ್ಳುತ್ತಾಳೆ, ಇದಕ್ಕೆ ಪರಿಹಾರ ಕೊಡುವುದಾಗಿ ನಾಗರಾಜ್‌ ಮಾತು ಕೊಡುತ್ತಾರೆ. ಮಹೇಶ್‌ ಮತ್ತು ಗೌತಮ್‌ರನ್ನು ಭೇಟಿ ಮಾಡಿ ನಾಗರಾಜ್‌ ಹೊಡೆದು ಬಡಿದು ಸಮಸ್ಯೆ ಸರಿ ಮಾಡುತ್ತಾರೆ ಆದರೆ ಅಷ್ಟರಲ್ಲಿ ಅಂಕಿತಾ ಪ್ರೆಗ್ನೆಂಟ್ ಅನ್ನೋ ವಿಚಾರ ತಿಳಿಯುತ್ತದೆ. 

ಅಂಕಿತಾ ಪ್ರೆಗ್ನೆಂಟ್‌ ಅನ್ನೊ ವಿಚಾರವನ್ನು ಹಾಸ್ಟಲ್‌ ವಾರ್ಡನ್‌ ಅಂಕಿತಾ ಪೋಷಕರಿಗೆ ಹೇಳುತ್ತಾರೆ ಆಕೆ ನನ್ನ ಮಗಳೇ ಅಲ್ಲ ನನಗೆ ಅವಳು ಬೇಡ ಎಂದು ಪೋಷಕರು ಹೊರಟು ಬಿಡುತ್ತಾರೆ ಹಾಸ್ಟಲ್‌ನಲ್ಲೂ ಜಾಗವಿಲ್ಲ ಅಂಕಿತಾ ಹೊರ ಬರುತ್ತಾಳೆ ಆಗ ಅಂಕಿತಾ ಸಹಾಯಕ್ಕೆ ಬರುವುದು ನಾಗರಾಜ್‌. ಅಂಕಿತಾ ಮತ್ತು ನಾಗರಾಜ್ ಮದುವೆ ಮಾಡಿಕೊಂಡು ಮನೆಗೆ ಬಂದರೂ ಪೋಷಕರು ಹೊರ ಕಳುಹಿಸುತ್ತಾರೆ. ಒಂದೆರಡು ತಿಂಗಳು ಕಳೆಯುತ್ತಿದ್ದಂತೆ ಅಂಕಿತಾಳನ್ನು ನೋಡಬೇಕು ಎಂದು ಪೋಷಕರು ಹಂಬಲಿಸುತ್ತಾರೆ ಆಗ ಸಿಗುವುದು ನಾಗರಾಜ್‌ ಮನೆ ವಿಳಾಸ. ಮನೆಗೆ ಬಳಿ ಹೋಗಿ ನೋಡಿದರೆ ನಾಗರಾಜ್‌ ಮತ್ತೊಂದು ಸಂಸಾರ ಮಾಡುತ್ತಿರುತ್ತಾನೆ. ಪೋಷಕರು ವಿಚಾರಿಸಿದಾಗ ತಿಳಿಯುತ್ತದೆ ನಾಗರಾಜ್‌ಗೆ ಈಗಾಗಲೆ ಮದುವೆಯಾಗಿರುತ್ತದೆ ಅಂಕಿತಾಳಿಗೆ ಹೇಳದೆ ಎರಡನೇ ಮದುವೆ ಮಾಡಿಕೊಂಡಿರುತ್ತಾನೆ. ಯಾವಾಗ ನಾಗರಾಜ್‌ ಮೊದಲ ಪತ್ನಿಗೆ ಅನುಮಾನ ಬರುತ್ತದೆ ಆಗ ಆಕೆಯನ್ನು ದೂರ ಮಾಡುತ್ತಾನೆ. ಅಲ್ಲದೆ ಅಂಕಿತಾ ಒಂದೇ ಸಮ ಅಳುತ್ತಿರುತ್ತಾಳೆ ಮಾನಸಿಕವಾಗಿ ಕುಗ್ಗಿರುತ್ತಾಳೆ ಎಂದು rehabilitation centre ಸೇರಿಸುತ್ತಾನೆ. 

ಎಷ್ಟು ಟ್ರೋಲ್ ಮಾಡ್ತೀರಾ ಮಾಡಿ ರಶ್ಮಿಕಾ ಮಂದಣ್ಣ ರಿಯಾಕ್ಷನ್‌ ಮಾತ್ರ ಹೀಗಿರುತ್ತಂತೆ; ನಿಮ್ಮ ಅಭಿಪ್ರಾಯ?

ಅಷ್ಟರಲ್ಲಿ ಪೋಷಕರು ನಾಗರಾಜ್‌ ವಿರುದ್ಧ ದೂರು ನೀಡಿರುತ್ತಾರೆ. ಪೊಲೀಸ್ ವಿಚಾರಣೆ ನಂತರ ಅಂಕಿತಾ ಯಾವ rehabilitation centreನಲ್ಲಿ ಇರುವುದು ಎಂಬ ಮಾಹಿತಿ ಬಿಟ್ಟು ಕೊಡುತ್ತಾನೆ. ಅಂಕಿತಾಳನ್ನು ಮನೆಗೆ ಕರೆದುಕೊಂಡು ಹೋಗುತ್ತಾರೆ 7 ತಿಂಗಳಿಗೆ ಮಗುವಿಗೆ ಜನ್ಮ ನೀಡಿ ಅಂಕಿತಾ ಇಹಲೋಕ ತ್ಯಜಿಸುತ್ತಾಳೆ. ಈ ಕಾಲದಲ್ಲಿ ಪ್ರತಿಯೊಬ್ಬರ ಬಳಿ ಮೊಬೈಲ್ ಇರುತ್ತದೆ ಅದನ್ನು ಹೇಗೆ ಬಳಸಿಕೊಳ್ಳಬೇಕು ಯಾವ ರೀತಿ ಬಳಸಿಕೊಳ್ಳಬೇಕು ಅನ್ನೋದು ತಿಳಿದರೆ ಜೀವನ ಚೆನ್ನಾಗಿರುತ್ತದೆ ಇಲ್ಲವಾದರೆ ಏನ್ ಏನೂ ದುರಂತಗಳನ್ನು ಎದುರಿಸಬೇಕಾಗುತ್ತದೆ ಅನ್ನೋ ಒಳ್ಳೆ ಸಂದೇಶ ಸಾರಲು ಈ ಎಪಿಸೋಡ್‌ ಮಾಡಿದ್ದರು. ಈ ಎಪಿಸೋಡ್‌ನಲ್ಲಿ ನೈಜ ಘಟನೆಯಲ್ಲಿದ್ದ ವ್ಯಕ್ತಿಗಳ ಹೆಸರನ್ನು ಬದಲಾಯಿಸಿ ತೋರಿಸಲಾಗಿದೆ.