ಎಷ್ಟು ಟ್ರೋಲ್ ಮಾಡ್ತೀರಾ ಮಾಡಿ ರಶ್ಮಿಕಾ ಮಂದಣ್ಣ ರಿಯಾಕ್ಷನ್ ಮಾತ್ರ ಹೀಗಿರುತ್ತಂತೆ; ನಿಮ್ಮ ಅಭಿಪ್ರಾಯ?
ವೈರಲ್ ಆಗುತ್ತಿದೆ ರಶ್ಮಿಕಾ ಮಂದಣ್ಣ ರಿಯಾಕ್ಷನ್. ಯಾವ ವಿಚಾರಕ್ಕೆ ಈ ಕಪಿ ಮುಖ ಎಂದು ಕಾಲೆಳೆದ ನೆಟ್ಟಿಗರು....
ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಕನ್ನಡ ಚಿತ್ರಂಗಕ್ಕೆ ಕಾಲಿಟ್ಟು ಈಗ ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾ ರಂಗವನ್ನು ರೂಲ್ ಮಾಡುತ್ತಿದ್ದಾರೆ. ಹೀಗಾಗಿ ಮೂರು ಮೂರು ರಾಜ್ಯಗಳಲ್ಲಿ ಮನೆ ಮಾಡಿಕೊಂಡು ತಮ್ಮ ಪ್ರೀತಿಯ ಶ್ವಾನಗಳ ಜೊತೆ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅಕ್ಟಿವ್ ಆಗಿರುವ ರಶ್ಮಿಕಾ ಮಂದಣ್ಣ ದಿನಕ್ಕೊಂದು ನೆಗೆಟಿವ್ ಟ್ರೋಲ್ ಎದುರಿಸುತ್ತಾರೆ. ಕೆಲಮೊಮ್ಮೆ ರಿಯಾಕ್ಟ್ ಮಾಡುವ ರಶ್ಮು ಮುಟ್ಟು ನೋಡಿಕೊಳ್ಳುವಂತೆ ಉತ್ತರ ಕೊಡುತ್ತಾರೆ. ಈಗ ಅದೇ ರೀತಿ ಮತ್ತೊಮ್ಮೆ ಮಾಡಿದ್ದಾರೆ.
ಟ್ವಿಟರ್‌ನಲ್ಲಿ ಅಫೀಶಿಯಲ್ ಸಿನಿಮಾ ಅಪ್ಡೇಟ್ ಕೊಡುವ ರಶ್ಮಿಕಾ ಮಂದಣ್ಣ ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ನಲ್ಲಿ ಕೂಲ್ ಆಗಿರುವ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ ಆದರೆ ಇನ್‌ಸ್ಟಾದಲ್ಲಿರುವುದು ಎಫ್‌ಬಿಯಲ್ಲಿ ಇರುವುದು ಅಷ್ಟು ಯೂನಿಯಕ್‌ನೆಸ್ ಕಾಪಾಡಿಕೊಳ್ಳುತ್ತಾರೆ. ಇದೀಗ ರಶ್ಮಿಕಾ ಮತ್ತೊಂದು ಕೂಲ್ ಫೋಟೋ ಹಾಕಿ ಸರಿಯಾಗಿ ಕ್ಯಾಪ್ಶನ್ ಕೊಟ್ಟಿದ್ದಾರೆ.
ಬಿದಿರು ಬೊಂಬೆ ತರ ಕಾಣ್ತಿದ್ದೀರಿ; ರಶ್ಮಿಕಾ ಮಂದಣ್ಣ ಏನ್ ಮಾಡಿದ್ರೂ ಸಮಸ್ಯೆ ಗುರು
'ಇತ್ತೀಚಿಗೆ ನಡೆಯುತ್ತಿರುವ ವಿಚಾರಗಳಿಗೆ ನಾನು ನೀಡಿದ ರಿಯಾಕ್ಷನ್ ಇಷ್ಟೆ' ಎಂದು ಬರೆದುಕೊಂಡಿದ್ದಾರೆ. ನೀಲಿ ಬಣ್ಣದ ಡೆನಿಮ್‌ಗೆ ವೈಟ್ ಟೀ-ಶರ್ಟ್ ಧರಿಸಿರುವ ರಶ್ಮಿಕಾ ಮಂದಣ್ಣ ಫ್ಲೋರಲ್ ಬಣ್ಣದ ಸೋಫಾ ಮೇಲೆ ಕುಳಿತುಕೊಂಡಿದ್ದಾರೆ. ಸಾಕ್ಸ್ ಇಲ್ಲದೆ ಶೂ ಧರಿಸಿರುವ ರಶ್ಮಿಕಾ ಮನೆಯಲ್ಲಿರುವುದಾ ಅಥವಾ ಹೊರಗಿನಾ ಫೋಟೋನಾ ಎಂದು ಪ್ರಶ್ನೆ ಮಾಡಿದ್ದಾರೆ. 'ರಶ್ಮಿಕಾ ನೀನು ಏನೇ ಮಾಡಿದರೂ ಕ್ಯೂಟ್' ಎಂದು ಹೇಳುವ ಅಭಿಮಾನಿಗಳಿದ್ದರೆ ಮತ್ತೊಂದು ಕಡೆ 'ನೀನು ಮಾಡುವ ಡಬ್ಬ ಕೆಲಸಗಳಿಗೆ ಯಾಕೆ ಈ ಕಪಿ ಮುಖ ಮಾಡಿಕೊಳ್ಳುವೆ' ಎಂದು ಕಾಲೆಳೆದಿದ್ದಾರೆ.
ಕನ್ನಡ ಮಾತನಾಡಿ ಟ್ರೋಲ್:
ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ ಪ್ರಶ್ನೆಗಳನ್ನು ಕೇಳಿ ಎಂದು ಅಭಿಮಾನಿಗಳ ಒಂದಿಷ್ಟು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. 'ಎಲ್ಲರೂ ಹೇಗಿದ್ದೀರಾ? ನಾನು ಚೆನ್ನಾಗಿದ್ದೀನಿ ಯಾವಾಗಲೂ ನೌತಾ ಇರಿ.
ನಾನು ಪೊಸೆಸಿವ್ ಅಮ್ಮ; ಸಮಂತಾಳ ಆರೋಗ್ಯದ ಬಗ್ಗೆ ರಶ್ಮಿಕಾ ಮಂದಣ್ಣ ಫಸ್ಟ್ ರಿಯಾಕ್ಷನ್ ವೈರಲ್
ಗಡ ಶೇವ್ ಮಾಡಿಲ್ಲ ಎಂದು ಟ್ರೋಲ್:
ಕಾಲೇಜು ದಿನಗಳಲ್ಲಿ ಬಹಳ ಸೆಲ್ಫಿ ತೆಗೆದುಕೊಳ್ಳುತ್ತಿದ್ದೆ. ಇತ್ತೀಚೆಗೆ ಅದು ಕಡಿಮೆಯಾಗಿದೆ ಎಂದು ಈಚೆಗಷ್ಟೇ ಹೇಳಿಕೊಂಡಿದ್ದ ನಟಿ, ಈಗ ಒಂದು ಸೆಲ್ಫಿ ತೆಗೆದುಕೊಂಡಿರುವುದೇ ಬಹಳ ಸುದ್ದಿಯಾಗಿದೆ. ಇದಕ್ಕೆ ಕಾರಣ, ಈಕೆ ಮೇಕಪ್ ಇಲ್ಲದೇ ಸೆಲ್ಫಿ ತೆಗೆದುಕೊಂಡಿದ್ದಾರೆ ಎಂದು ಅಲ್ಲ, ಬದಲಿಗೆ ಆಗಿರುವುದೇ ಬೇರೆ. ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ಮೇಕ್ಅಪ್ ಇಲ್ಲದ ಫೋಟೋ ಹಂಚಿಕೊಂಡು ನಟಿ ಪೇಚಿಗೆ ಸಿಲುಕಿದ್ದಾರೆ. ಆಗಿದ್ದೇನೆಂದರೆ, ಮೇಕಪ್ ಇಲ್ಲದಿದ್ದರೂ ನಟಿ ಸರಿಯಾಗಿ ಫೇಷಿಯಲ್ ಮಾಡಬೇಕಿತ್ತು. ಏಕೆಂದರೆ ಅವರ ಗಡ್ಡದ ಬಳಿ ಕೂದಲು ಬೆಳೆಯುತ್ತದೆ. ಆದರೆ ಸೆಲ್ಫಿ ತೆಗೆದುಕೊಳ್ಳುವಾಗ ಅದನ್ನು ಅವರು ಗಮನಿಸಿದಂತೆ ಇಲ್ಲ. ಹೀಗಾಗಿ ಕೆಳಗಿನ ದವಡೆಯ ಬಳಿ ಕೆನ್ನೆಯ ಕೆಳಗಿನ ಭಾಗದಲ್ಲಿ ಕೂದಲು ಕಾಣಿಸುತ್ತಿದೆ. ಇದು ತೀರಾ ಸೂಕ್ಷ್ಮವಾಗಿ ನೋಡಿದರಷ್ಟೇ ಕಾಣಿಸುತ್ತದೆ.