Asianet Suvarna News Asianet Suvarna News

ವೈಷ್ಣವ್ ಓಡಿಸಿಕೊಂಡು ಹೋದ ಮಹಾಲಕ್ಷ್ಮೀ; ಕೀರ್ತಿ ಕಂಡು ಬೆಚ್ಚಿಬಿದ್ದರು ಯಾಕೆ?

ಅವನಿಂದ ಮೊಬೈಲ್ ಕಸಿದುಕೊಂಡು ಈ ಸಮಸ್ಯೆಯಿಂದ ಪಾರಾಗಲು ಪ್ಲಾನ್ ಮಾಡುತ್ತಿದ್ದಾಳೆ ಮಹಾಲಕ್ಷ್ಮೀ. ಆದರೆ, ಅಷ್ಟು ಸುಲಭವಾಗಿ ವೈಷ್ಣವ್ ಕೈಯಿಂದ ಅವಳಿಗೆ ಮೊಬೈಲ್ ಸಿಗುವುದೇ? ಅವನನ್ನು ಆಟ ಆಡಿಸಿ ಅವನ ಕೈಯಿಂದ ಮೊಬೈಲ್ ಪಟಾಯಿಸಿಕೊಂಡ ಮಹಾಲಕ್ಷ್ಮೀ, ಅಲ್ಲಿಂದ ದೂರ ಹೋಗಲು ಯತ್ನಿಸುತ್ತಿದ್ದಾಳೆ. 

Colors kannada serial Lakshmi Baramma promo gets viral srb
Author
First Published Nov 10, 2023, 6:49 PM IST

ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿರುವ 'ಲಕ್ಷ್ಮೀ ಬಾರಮ್ಮ' ಸೀರಿಯಲ್ ಹೊಸ ತಿರುವು ಪಡೆಯುತ್ತಿದೆ. ಕಾಲಕಳೆದಂತೆ ವೈಷ್ಣವ್ ಮತ್ತು ಮಹಾಲಕ್ಷ್ಮೀ ಮಧ್ಯೆ ಅನ್ಯೋನ್ಯತೆ ಸೃಷ್ಟಿಯಾಗುತ್ತಿದೆ. ಅವರಿಬ್ಬರ ಮಧ್ಯೆ ಬಂದು ವೈಷ್ಣವ್ ಪಡೆಯಲು ಕೀರ್ತಿ ಪ್ರಯತ್ನಿಸುತ್ತಿದ್ದರೂ ಅದು ಅವಳಿಗೆ ಕಬ್ಬಿಣದ ಕಡಲೆಯಾಗಿ ಬದಲಾಗುತ್ತಿದೆ. ಏನೋ ಒಂದು ಕಾರಣ ಸಿಕ್ಕು ವೈಷ್ಣವ್ ಮತ್ತು ಮಹಾಲಕ್ಷ್ಮೀ ಪರಸ್ಪರ ಹತ್ತಿರವಾಗುತ್ತಲೇ ಇದ್ದಾರೆ. ಅವರಿಬ್ಬರನ್ನು ಬೇರ್ಪಡಿಸಲು ಬಗೆಬಗೆಯಾಗಿ ಪ್ಲಾನ್ ಮಾಡುತ್ತಿದ್ದಾಳೆ ಕೀರ್ತಿ. 

ಇಂದಿನ ಸಂಚಿಕೆಯ ಪ್ರೋಮೋದಲ್ಲಿ, ವೈಷ್ಣವ್ ತನ್ನ ಮೊಬೈಲಿನಲ್ಲಿ ಮಹಾಲಕ್ಷ್ಮೀ ಫೋಟೋ ತೆಗೆದುಕೊಂಡು ಅವಳನ್ನು ಕಾಡಿಸಲು ಟ್ರೈ ಮಾಡುತ್ತಿದ್ದಾನೆ. 'ನನ್ನ ಫೋಟೋ ತೆಗ್ದು ಕಾಡುಪಾಪ ಅಂದ್ಯಲ್ಲಾ, ನೋಡು ಈಗ.. ನಿನ್ನ ಫೋಟೋ ತಗೊಂಡಿದೀನಿ, ವೀಡಿಯೋ ಮಾಡಿ ಇಟ್ಕೊಂಡಿದೀನಿ.. ಅದನ್ನ ಮನೆಯವ್ರಿಗೆ ಎಲ್ರಿಗೂ ತೋರಿಸ್ತೀನಿ, ಇರು..'ಎಂದು ಮಹಾಲಕ್ಷ್ಮೀಯನ್ನು ಕೀಟಲೆ ಮಾಡುತ್ತಿದ್ದಾನೆ. ಅವಳಿಗೆ ಆತಂಕ ಶುರುವಾಗಿದೆ. 

ಅವನಿಂದ ಮೊಬೈಲ್ ಕಸಿದುಕೊಂಡು ಈ ಸಮಸ್ಯೆಯಿಂದ ಪಾರಾಗಲು ಪ್ಲಾನ್ ಮಾಡುತ್ತಿದ್ದಾಳೆ ಮಹಾಲಕ್ಷ್ಮೀ. ಆದರೆ, ಅಷ್ಟು ಸುಲಭವಾಗಿ ವೈಷ್ಣವ್ ಕೈಯಿಂದ ಅವಳಿಗೆ ಮೊಬೈಲ್ ಸಿಗುವುದೇ? ಅವನನ್ನು ಆಟ ಆಡಿಸಿ ಅವನ ಕೈಯಿಂದ ಮೊಬೈಲ್ ಪಟಾಯಿಸಿಕೊಂಡ ಮಹಾಲಕ್ಷ್ಮೀ, ಅಲ್ಲಿಂದ ದೂರ ಹೋಗಲು ಯತ್ನಿಸುತ್ತಿದ್ದಾಳೆ. ಅದೇ ವೇಳೆಗೆ ಕೀರ್ತಿ ಅವರ ಮನೆಯೊಳಗೆ ಬರುತ್ತಿದ್ದಾಳೆ. ಅದರ ಅರಿವಿಲ್ಲದ ಈ ಜೋಡಿ ಹಿಡಿಯುವ-ತಪ್ಪಿಸಿಕೊಳ್ಲುವ ಆಟದಲ್ಲಿ ತಲ್ಲೀನರಾಗಿದ್ದಾರೆ. 

ಬೆಂಕಿ ಜೊತೆ ಬಿರುಗಾಳಿಯ ಹೊಸ ಪ್ರೇಮ ಕಥೆ; ಬಲಗಾಲಿಟ್ಟು ಬರಲಿದೆ ಮನೆಮನೆಯಲ್ಲಿ ಗೌರಿಶಂಕರ!

ವೈಷ್ಣವ್ ಮೊಬೈಲ್ ತೆಗೆದುಕೊಂಡು ಓಡಿದ ಮಹಾಲಕ್ಷ್ಮೀ, ಸರಿಯಾಗಿ ಕೀರ್ತಿ ಸಮೀಪ ಹೋಗುತ್ತಿದ್ದಂತೆ ಅವಳನ್ನು ಹಿಂಬಾಲಿಸಿದ ವೈಷ್ಣವ್ ಅಲ್ಲಿಗೆ ಬರುತ್ತಾನೆ. ಕೀರ್ತಿ ಅವರಿಬ್ಬರ ಆಟ ನೋಡಿ ಶಾಕ್ ಆಗಿ ಕಂಬದಂತೆ ನಿಂತುಬಿಟ್ಟಿದ್ದಾಳೆ. ಆದರೆ, ಅವರಿಬ್ಬರೂ ತಮ್ಮ ಆಟ ಮುಂದುವರೆಸಿದ್ದಾರೆ. ಒಂದು ಟೈಮಲ್ಲಿ, ವೈಷ್ಣವ್ ಮಹಾಲಕ್ಷ್ಮೀ ಕೈಯಿಂದ ಮೊಬೈಲ್ ಕಸಿದುಕೊಳ್ಳುವಲ್ಲಿ ಸಫಲನಾಗುತ್ತಾನೆ. 

ಐ ಆ್ಯಮ್ ದ ಲೀಡರ್, ಬ್ಲಡಿ ಲೀಡರ್; ಗುಡುಗಿದ ಡೇರ್ ಡೆವಿಲ್‌ ತನಿಷಾ ಮುಂದೆ ತಲೆತಗ್ಗಿಸಿ ನಿಂತಿದ್ಯಾರು?

ಆಗ ಕೀರ್ತಿಯನ್ನು ಮಾತನಾಡಿಸಿದ ವೈಷ್ಣವ್‌ಗೆ, ಮಹಾಲಕ್ಷ್ಮೀಗೆ ಟ್ರೈನಿಂಗ್ ಕೊಡಲು ಕೋರಿಯಾಗ್ರಫರ್ ಬರುವುದು ತಿಳಿಯುತ್ತದೆ, ಕೀರ್ತಿ ಪ್ಲಾನ್ ಗೊತ್ತಿಲ್ಲದ ವೈಷ್ಣವ್ ತುಂಬಾ ಖುಷಿ ಪಡುತ್ತಿದ್ದಾನೆ. ಮುಂದೇನು ಎಂದು ತಿಳಿಯಲು ಇಂದಿನ ಸಂಚಿಕೆ ನೋಡಬೇಕು. 

Follow Us:
Download App:
  • android
  • ios