ಬೆಂಕಿ ಜೊತೆ ಬಿರುಗಾಳಿಯ ಹೊಸ ಪ್ರೇಮ ಕಥೆ; ಬಲಗಾಲಿಟ್ಟು ಬರಲಿದೆ ಮನೆಮನೆಯಲ್ಲಿ ಗೌರಿಶಂಕರ!
ಕಥಾ ನಾಯಕ 'ಶಂಕರ' ಅಲಿಯಾಸ್ ಜೋಗಿ, ಹೆಣ್ಣು ಮಕ್ಳು ಅಂದ್ರೆ ನಾಲ್ಕುಗೋಡೆ ಮಧ್ಯೆ ಇರ್ಬೇಕು ಅಂತ ನಂಬಿರೋ ಮನೆತನದಲ್ಲಿ ಬೆಳೆದವ. ಈತ ನೋಡೋಕೆ ರಫ್ ಆದ್ರೆ ಮಗುವಿನಂತ ಮನಸ್ಸು. ತನಗನಿಸಿದ್ದನ್ನು ಮಾಡಲೇಬೇಕು ಅನ್ನೋ ಹಠವಾದಿ. ಒಂದು ಕಡೆ ಶಾಂತಿ, ಸಹನೆ, ತಾಳ್ಮೆಯಿಂದ ಕೂಡಿದ ಗೌರಿ ಪರಿವಾರ. ಮತ್ತೊಂದೆಡೆ ಅಧಿಕಾರ, ದರ್ಪ, ಹಣ ತುಂಬಿರೋ ಶಂಕರನ ಪರಿವಾರ.
ಕನ್ನಡ ಕಿರುತೆರೆಯಲ್ಲಿ ಸ್ಟಾರ್ ಸುವರ್ಣ ವಾಹಿನಿಯು ವಿಭಿನ್ನ ರೀತಿಯ ಸದಭಿರುಚಿಯುಳ್ಳ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ಪ್ರಸ್ತುತ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಎಲ್ಲಾ ಕಾರ್ಯಕ್ರಮಗಳು ಪ್ರೇಕ್ಷಕರ ಮನಗೆದ್ದು ಮನೆಮಾತಾಗಿದೆ. ಈ ಸಾಲಿಗೆ ಸೇರ್ಪಡೆಯಾಗುತ್ತಿರುವ ಹೊಸ ಕಥೆ 'ಗೌರಿಶಂಕರ'. ಈ ಹೊಸ ಧಾರಾವಾಹಿ ಇದೇ ಸೋಮವಾರದಿಂದ (13 ನವೆಂಬರ್ 2023) ರಾತ್ರಿ 7 ಗಂಟೆಗೆ ಪ್ರಸಾರವಾಗಲಿದೆ. ಸೀರಿಯಲ್ ಪ್ರೇಕ್ಷಕರಿಗೆ ಮನರಂಜನೆ ಹಬ್ಬವಾಗಲಿದೆ.
ಕರ್ನಾಟಕದ ಸುಂದರ ತಾಣ ಹಾಸನಾಂಬೆಯ ತವರೂರಾದ ಹಾಸನದಲ್ಲಿ ಈ ಕತೆಯು ಕೇಂದ್ರೀಕೃತವಾಗಿರುತ್ತದೆ. ಈ ಧಾರಾವಾಹಿಯ ನಾಯಕಿ 'ಗೌರಿ' ಸಮಾಜದಲ್ಲಿ ಘನತೆ ಗೌರವವನ್ನು ಹೊಂದಿರುವ ಪರಿವಾರದಲ್ಲಿ ಬೆಳೆದಿರುವ ಹುಡುಗಿ. ಈಕೆ ಯಾರನ್ನೂ ನೋಯಿಸದ ಮುಗ್ದ ಮನಸ್ಸಿನ ಕಣ್ಮಣಿ. ಆದರೆ ಸಮಯ ಬಂದರೆ ತನ್ನ ನಿಲುವನ್ನು ಸ್ಪಷ್ಟವಾಗಿ ಮಾತನಾಡಬಲ್ಲ ಧೈರ್ಯವಂತೆ ಕೂಡ. ಜೊತೆಗೆ ತಂದೆಯಂತೆ ತಾನು ಪ್ರೊಫೆಸರ್ ಆಗಬೇಕೆಂಬ ಕನಸನ್ನು ಹೊತ್ತಿರೋಳು.
ಇನ್ನು ಕಥಾ ನಾಯಕ 'ಶಂಕರ' ಅಲಿಯಾಸ್ ಜೋಗಿ, ಹೆಣ್ಣು ಮಕ್ಳು ಅಂದ್ರೆ ನಾಲ್ಕುಗೋಡೆ ಮಧ್ಯೆ ಇರ್ಬೇಕು ಅಂತ ನಂಬಿರೋ ಮನೆತನದಲ್ಲಿ ಬೆಳೆದವ. ಈತ ನೋಡೋಕೆ ರಫ್ ಆದ್ರೆ ಮಗುವಿನಂತ ಮನಸ್ಸು. ತನಗನಿಸಿದ್ದನ್ನು ಮಾಡಲೇಬೇಕು ಅನ್ನೋ ಹಠವಾದಿ. ಒಂದು ಕಡೆ ಶಾಂತಿ, ಸಹನೆ, ತಾಳ್ಮೆಯಿಂದ ಕೂಡಿದ ಗೌರಿ ಪರಿವಾರ. ಮತ್ತೊಂದೆಡೆ ಅಧಿಕಾರ, ದರ್ಪ, ಹಣ ತುಂಬಿರೋ ಶಂಕರನ ಪರಿವಾರ. ಈ ಎರಡೂ ತದ್ವಿರುದ್ಧ ಭಾವಗಳನ್ನು ಹೊಂದಿರುವ ಇವರಿಬ್ಬರ ನಡುವೆ ನಡೆಯುವ ಪ್ರೇಮಾಂಕುರ, ಘರ್ಷಣೆ, ಸಂಧಾನ, ಸಮಾಧಾನ ಮೊದಲಾದವು ಈ ಧಾರಾವಾಹಿಯ ಮುಖ್ಯಕಥಾ ಹಂದರ.
ನಟ ದರ್ಶನ್ ಬಗ್ಗೆ 'ಗರಡಿ' ಹೀರೋ ಸೂರ್ಯ ಹೀಗೆ ಹೇಳಿದ್ರಾ; ಭಾರೀ ವೈರಲ್ ಆಯ್ತು ನ್ಯೂಸ್!
'ಗೌರಿಶಂಕರ' ಧಾರಾವಾಹಿಯಲ್ಲಿ ನಾಯಕನಾಗಿ ಯಶವಂತ್, ನಾಯಕಿಯಾಗಿ ಕೌಸ್ತುಭಮಣಿ ನಟಿಸುತ್ತಿದ್ದಾರೆ. ಜೊತೆಗೆ ಜನಪ್ರಿಯ ಕಲಾವಿದರಾದ ವಿದ್ಯಾಮೂರ್ತಿ, ಮೋಹನ್, ಕೀರ್ತಿ ಭಾನು ಸೇರಿದಂತೆ ಇನ್ನು ಹಲವಾರು ಪರಿಚಿತ ಕಲಾವಿದರು ಅಭಿನಯಿಸುತ್ತಿದ್ದಾರೆ. ದೀಪಾವಳಿ ಹಬ್ಬದ ಸಂಭ್ರಮವನ್ನು ದುಪ್ಪಟ್ಟುಗೊಳಿಸಲು ಬರ್ತಿದೆ ಹೊಚ್ಚ ಹೊಸ ಧಾರಾವಾಹಿ 'ಗೌರಿಶಂಕರ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಈಗಾಗಲೇ ಸಾಕಷ್ಟು ಪ್ರೇಮಕಥೆ ಆಧಾರಿತ ಧಾರಾವಾಹಿಗಳು ಬರುತ್ತಿವೆ. ಭಕ್ತಿ, ಕಾಮಿಡಿ, ಕೌಟುಂಬಿಕ ಮೌಲ್ಯಗಳನ್ನು ಕಾಪಾಡುವ, ಬಗೆಬಗೆಯ ಭಾವಗಳನ್ನು ಉದ್ದೀಪನಗೊಳಿಸಬಲ್ಲ ಸೀರಿಯಲ್‌ಗಳು ನಿರಂತರವಾಗಿ ಪ್ರಸಾರ ಕಾಣುತ್ತಿವೆ. ಇನ್ಮುಂದೆ 'ಗೌರಿಶಂಕರ' ಹೆಸರಿನ ಇನ್ನೊಂದು ಧಾರಾವಾಹಿ ನಿಮ್ಮ ನೆಚ್ಚಿನ 'ಸ್ಟಾರ್ ಸುವರ್ಣ' ವಾಹಿನಿಯಲ್ಲಿ, 13 ನವೆಂಬರ್ 2023ರ ಸೋಮವಾರದಿಂದ ರಾತ್ರಿ 7 ಗಂಟೆಗೆ ಪ್ರಸಾರವಾಗಲಿದೆ.
ಐ ಆ್ಯಮ್ ದ ಲೀಡರ್, ಬ್ಲಡಿ ಲೀಡರ್; ಗುಡುಗಿದ ಡೇರ್ ಡೆವಿಲ್ ತನಿಷಾ ಮುಂದೆ ತಲೆತಗ್ಗಿಸಿ ನಿಂತಿದ್ಯಾರು?