Asianet Suvarna News Asianet Suvarna News

ಐ ಆ್ಯಮ್ ದ ಲೀಡರ್, ಬ್ಲಡಿ ಲೀಡರ್; ಗುಡುಗಿದ ಡೇರ್ ಡೆವಿಲ್‌ ತನಿಷಾ ಮುಂದೆ ತಲೆತಗ್ಗಿಸಿ ನಿಂತಿದ್ಯಾರು?

ಬಿಗ್ ಬಾಸ್ ಮನೆಯಲ್ಲಿ ಧೈರ್ಯವಂತೆಯಾಗಿ, ಬ್ರಿಲಿಯಂಟ್‌ ಆಗಿ ಆಡುತ್ತಿರುವ ತನಿಷಾ ವಿರುದ್ಧ ವೈಯಕ್ತಿಕ ತೇಜೋವಧೆಗೆ ಇಳಿದ ಸ್ನೇಹಿತ್ ಈಗ ಸೋಷಿಯಲ್ ಮೀಡಿಯಾ ಸೇರಿದಂತೆ, ಎಲ್ಲರ ಕಣ್ಣಲ್ಲಿ ವಿಲನ್ ಆಗಿ ಕಾಣಿಸುವಂತಾಗಿದೆ. ಈ ಮೊದಲು ವಿನಯ್ ಓಲೈಸಲು ಹೋಗಿ ಸ್ವತಃ ಕಿಚ್ಚ ಸುದೀಪ್ ಅವರಿಂದ ಅವಮಾನಕ್ಕೆ ಗುರಿಯಾಗಿದ್ದರು ಸ್ನೇಹಿತ್.

Tanisha Kuppanda gets angry towords Snehith Gowda in Bigg Boss Kannada Season 10 srb
Author
First Published Nov 9, 2023, 6:58 PM IST

ನೀನು ಮಾತನಾಡಿರೋ ಮಾತಿಂದ ನನಗೆ ಎಷ್ಟು ಹರ್ಟ್ ಆಗಿದೆ ಗೊತ್ತಾ? ನಿನ್ನೆ ಮಧ್ಯರಾತ್ರಿ ಆಚೆ ಹೋಗಿ ನಾನು ಒಬ್ಳೇ ಕುಳಿತು ಎಷ್ಟು ಅತ್ತಿದೀನಿ ಗೊತ್ತಾ? ನನ್ ಬಗ್ಗೆ ಏನು ಗೊತ್ತಿದೆ ಅಂತ ಮಾತಾಡಿದ್ರಿ ನೀವು? ಇದಕ್ಕಿಂತ ಮೊದ್ಲು ನನ್ನ ನೋಡಿದೀರಾ ನೀವು? ಹೇಗೆ ಬೆಳೆದು ಬಂದಿದೀನಿ ನಾನು, ಯಾವ ಫ್ಯಾಮಿಲಿಯಿಂದ ಬೆಳೆದು ಬಂದಿದೀನಿ ನಾನು, ಯಾರು ನನ್ನ ಬಗ್ಗೆ ಎಷ್ಟು ತಿಳ್ಕೊಂಡಿದಾರೆ, ಎಷ್ಟು ವಿಷ್ಯ ತಿಳ್ಕೊಂಡಿದಾರೆ, ಏನಾದ್ರೂ ಇಷ್ಟು..? ಇಲ್ಲಿ ಬಂದ್ಮೇಲೆ ನೋಡಿದೀರಲ್ವಾ ನೀವು?

ಹೌದಾ ಇಲ್ವಾ? ಇಲ್ಲಿ ಬಂದ್ಮೇಲೆ ಅಲ್ವಾ ನೀವು ನನ್ನ ನೋಡಿರೋದು? ಇಷ್ಟು ಯೋಚ್ನೆ ಮಾಡ್ಲಿಲ್ಲಾ ಅಲ್ವಾ ನೀವು! ಇನ್ನೊಬ್ರ ಫ್ಯಾಮಿಲಿ ಬಗ್ಗೆ ಅಲ್ಲ ನೀವು ಮಾತಾಡ್ಬೇಕಾಗಿರೋದು. ವಾಟ್ ಆರ್ ಯೂ ಗೈಸ್? ತಂಡದಲ್ಲಿ ಇದೀರಾ, ತಂಡ ಮಾಡಿದಾರೆ ಟಾಸ್ಕ್‌ಗೋಸ್ಕರ.. ಪರ್ಸನಲ್ ವಿಷ್ಯಗಳನ್ನ ತೆಗೆದು ಇಷ್ಟ ಬಂದಂಗೆ ಮಾತಾಡೋದಕ್ಕಲ್ಲ. ನಾನು ಸ್ನೇಹಿತ್‌ಗೋಸ್ಕರ ಯಾವ್ ತ್ಯಾಗ ಮಾಡೋಕೆ ಬಂದಿಲ್ಲ. ಅಥವಾ, ಇನ್ನೊಬ್ರಿಗೋಸ್ಕರ ಇನ್ಯಾವ್ದೋ ಬೆಂಡ್ ಆಗೋಕೆ ಬಂದಿಲ್ಲ. 

ತುಕಾಲಿ ಸಂತೋಷ್‌ ಜತೆ ಡೇಟಿಂಗ್ ಬಯಸಿದ ಕಾರ್ತಿಕ್ ಮಹೇಶ್, ಪಪ್ಪಿ ತೆಗೆದುಕೊಳ್ಳಲು ಭಾರೀ ಪೈಪೋಟಿ!

ಇನ್ ಮೈ ಹೋಲ್‌ ಮೈ ಲೈಫ್ ಐ ಆಮ್ ದ ಲೀಡರ್, ಬ್ಲಡಿ ಲೀಡರ್' ಎಂದು ಕಣ್ಣೀರು ಹಾಕುತ್ತಾ ಸ್ನೇಹಿತ್ ಎದುರು ನಟಿ, ಬಿಗ್ ಬಾಸ್ ಸ್ಪರ್ಧಿ ತನಿಷಾ ಹೇಳುತ್ತಿದ್ದರೆ ಸಂಗೀತಾ ಸೇರಿದಂತೆ ಪಕ್ಕದಲ್ಲಿ ನಿಂತಿದ್ದ ಹಲವು ಸ್ಪರ್ಧಿಗಳು ಫುಲ್ ಸೈಲೆಂಟ್ ಮೋಡ್‌ಗೆ ಜಾರಿದ್ದಾರೆ. ತನಿಷಾ ವೈಯಕ್ತಿಕ ವಿಷಯವನ್ನು ಟಾರ್ಗೆಟ್ ಮಾಡಿ ಸ್ನೇಹಿತ್ ಏನೋ ಮಾತನಾಡಿದ್ದಾರೆ ಎಂಬುದು ತನಿಷಾರ ಈ ಮಾತುಗಳ ಮೂಲಕ ಎಲ್ಲರಿಗೂ ಕನ್ಫರ್ಮ್‌ ಆಗಿದೆ. ಯಾವತ್ತೂ ಡೇರ್ ಡೆವಿಲ್ ಎಂಬಂತೆ ಇರುತ್ತಿದ್ದ ತನಿಷಾ, ಅಷ್ಟೊಂದು ಎಮೋಶನಲ್ ಆಗಿ ಕಣ್ಣೀರು ಸುರಿಸಿದ್ದು ನೋಡಿ ಅಲ್ಲಿದ್ದ ಸ್ಪರ್ಧಿಗಳು ಸ್ಟನ್ ಆಗಿದ್ದಾರೆ. 

ಬಿಗ್ ಬಾಸ್ ಮನೆಯಲ್ಲಿ ಬಾಡಿತು ನಗೆಯ ಹೂವು, ಹರಡುತ್ತಿದೆ ಬಿಸಿ ಬಿಸಿ ಹೊಗೆ!

ಬಿಗ್ ಬಾಸ್ ಮನೆಯಲ್ಲಿ ಧೈರ್ಯವಂತೆಯಾಗಿ, ಬ್ರಿಲಿಯಂಟ್‌ ಆಗಿ ಆಡುತ್ತಿರುವ ತನಿಷಾ ವಿರುದ್ಧ ವೈಯಕ್ತಿಕ ತೇಜೋವಧೆಗೆ ಇಳಿದ ಸ್ನೇಹಿತ್ ಈಗ ಸೋಷಿಯಲ್ ಮೀಡಿಯಾ ಸೇರಿದಂತೆ, ಎಲ್ಲರ ಕಣ್ಣಲ್ಲಿ ವಿಲನ್ ಆಗಿ ಕಾಣಿಸುವಂತಾಗಿದೆ. ಈ ಮೊದಲು ವಿನಯ್ ಓಲೈಸಲು ಹೋಗಿ ಸ್ವತಃ ಕಿಚ್ಚ ಸುದೀಪ್ ಅವರಿಂದ ಅವಮಾನಕ್ಕೆ ಗುರಿಯಾಗಿದ್ದ ಸ್ನೇಹಿತ್ ಇದೀಗ ತನಿಷಾ ವಿಷಯದಲ್ಲಿ ಎಡವಿ ಮತ್ತೊಮ್ಮೆ ಅಪರಾಧಿ ಎನಿಸಿಕೊಂಡಿದ್ದಾರೆ ಎನ್ನಬಹುದು. 

Follow Us:
Download App:
  • android
  • ios