ನನ್ನಮ್ಮ ಸೂಪರ್ ಸ್ಟಾರ್ ವಿನ್ನರ್ ವಂಶಿಕಾ ಮತ್ತು ಯಶಸ್ವಿನಿ, ಕೈ ಸೇರಿದ ಮೊತ್ತ ಎಷ್ಟು ಗೊತ್ತಾ?
ವಂಶಿಕಾ ಯಶಸ್ವಿನಿ ಕೈ ಸೇರಿತ್ತು ವಿನ್ನರ್ ಟ್ರೋಫಿ. ಮಾಸ್ಟರ್ ಆನಂದ್‌ನ ಮತ್ತೊಂದು ರೀತಿಯಲ್ಲಿ ಗುರುತಿಸುತ್ತಿರುವ ಜನರು..
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ರಿಯಾಲಿಟಿ ಶೋ ನನ್ನಮ್ಮ ಸೂಪರ್ ಸ್ಟಾರ್ ಗ್ರ್ಯಾಂಡ್ ಫಿನಾಲೆ ನಿನ್ನೆ ನಡೆದಿದೆ. ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಮತ್ತು ಪತ್ನಿ ಯಶಸ್ವಿನಿ ವಿನ್ನರ್ ಟ್ರೋಫಿ ಪಡೆದುಕೊಂಡಿದ್ದಾರೆ, ರನ್ನರ್ ಟ್ರೋಫಿ ಪುನೀತಾ ಮತ್ತು ಆರ್ಯ ಕೈ ಸೇರಿದೆ. ವಂಶಿಕಾಗೆ ಎಷ್ಟು ವೋಟ್ ಬಂದಿದೆ? ಸೋಷಿಯಲ್ ಮೀಡಿಯಾದಲ್ಲಿ ವಂಶಿಕಾ ಯಾವ ರೀತಿ ಯಶಸ್ಸು ಆಚರಿಸುತ್ತಿದ್ದಾಳೆ ಗೊತ್ತಾ?
ಮೊದಲ ಸ್ಥಾನ ಪಡೆದುಕೊಂಡ ವಂಶಿಕಾ ಮತ್ತು ಯಶಸ್ವಿನಿಗೆ ಗೋಲ್ಡ್ ಬಣ್ಣದ ವಿನ್ನರ್ ಟ್ರೋಫಿ ಮತ್ತು 5 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗಿದೆ. ಎರಡನೇ ಸ್ಥಾನ ಪಡೆದುಕೊಂಡವರಿಗೆ ಸಿಲ್ವರ್ ಟ್ರೋಫಿ ನೀಡಿದ್ದಾರೆ ಆದರೆ ಹಣ ಎಷ್ಟು ಎಂದು ಕ್ಲಾರಿಟಿ ಸಿಕ್ಕಿಲ್ಲ. ವಿನ್ನರ್ ಟ್ರೋಫಿ ಕೈ ಸೇರುತ್ತಿದ್ದಂತೆ ವಂಶಿಕಾ ಸ್ಟೇಜ್ ಮೇಲೆ ಕುಣಿದು ಕುಪ್ಪಳಿಸಿದ್ದಾಳೆ. ಟ್ರೋಫಿಯನ್ನು ಮರೆತು ಪ್ರಸಾರವಾಗುತ್ತಿದ್ದ ಹಾಡಿಗೆ ಹೆಜ್ಜೆ ಹಾಕಿದ್ದಾರೆ ಹಾಗೂ ಗೋಲ್ಡನ್ ಬಜರ್‌ನ ನೋಡುತ್ತಾ ನಿಂತು ಬಿಟ್ಟಿದ್ದಾಳೆ.
ಮೂರನೇ ಸ್ಥಾನದಲ್ಲಿ ವಿಂಧ್ಯಾ ಮತ್ತು ರೋಹಿತ್,ನಾಲ್ಕನೇ ಸ್ಥಾನದಲ್ಲಿ ಸುಪ್ರೀತಾ ಮತ್ತು ಇಬ್ಬನಿ, ಐದನೇ ಸ್ಥಾನದಲ್ಲಿ ಜಾಹ್ನವಿ ಮತ್ತು ಗ್ರಂಥ್, ಆರನೇ ಸ್ಥಾನದಲ್ಲು ನಂದಿನಿ ಮತ್ತಿ ಅದ್ವಿಕ್. ಎರಡನೇ ಸ್ಥಾನದಲ್ಲಿ ರೋಹಿತ್ ಇರಬೇಕಿತ್ತು ಎಂದು ಕೆಲವು ಹೇಳುತ್ತಾರೆ ಇನ್ನೂ ಕೆಲವರು ಆರ್ಯ ಮೊದಲ ಸ್ಥಾನ ಪಡೆಯಬೇಕಿತ್ತು ಎಂದು ಹೇಳುತ್ತಾರೆ. ವಿನ್ನರ್ ಸ್ಥಾನ ಯಾರೇ ಪಡೆದುಕೊಂಡರೂ ನೆಗೆಟಿವ್ ಆಂಡ್ ಪಾಸಿಟಿವ್ ಕಾಮೆಂಟ್ ಇದ್ದೇ ಇರುತ್ತದೆ.
'ಮಾಸ್ಟರ್ ಆನಂದ್ ಬಾಲ್ಯದಲ್ಲಿ ತಂದೆ ಚಿತ್ರೀಕರಣಕ್ಕೆ ಜೊತೆಯಾಗಿ ಹೋಗುತ್ತಿದ್ದರು ತಾಯಿ ನೋಟ್ಸ್ ಬರೆಯುತ್ತಿದ್ದರು ಆದರೆ ವಂಶಿಕಾ ವಿಚಾರದಲ್ಲಿ ಎರಡೂ ನಾನೇ ಮಾಡುತ್ತಿರುವುದು ಅದಕ್ಕೆ ನನಗೆ ದೊಡ್ಡ ಚಾಲೆಂಜ್ ಅಗಿದೆ. ಇವಳು ಹೆಣ್ಣುಮಗು ನಾನು ಜೊತೆಗೆ ಹೋಗಲೇ ಬೇಕು ಇದು ನನ್ನ ಡ್ಯೂಟಿ ನಾನು ಜೊತೆ ಇರಲೇಬೇಕು' ಎಂದು ಯಶಸ್ವಿನಿ ಮಗಳ ಬಗ್ಗೆ ಮಾತನಾಡಿದ್ದಾರೆ.
Vanshika Ear Piercing: ಮಾಸ್ಟರ್ ಆನಂದ್ ಪುತ್ರಿ ಕಿವಿ ಚುಚ್ಚುವ ವಿಡಿಯೋ ವೈರಲ್!'ನನ್ನ ಮಗಳಿಂದ ನನಗೆ ಈ ಅವಕಾಶ ಸಿಕ್ತು. ಮಕ್ಕಳು ಹುಟ್ಟಿದ ಮೇಲೆ ಚೇಂಜ್ ಓವರ್ ಆಗುತ್ತೆ ಅಂತ ಹೇಳುತ್ತಾರೆ ಹಾಗೆ ನನ್ನ ಲೈಫ್‌ನಲ್ಲೂ ಆಗಿದ್ದು. ಅವಳಿಗ ಏನೇ ಹೇಳಿಕೊಟ್ಟರೂ ಬೇಗ ಕಲಿಯುತ್ತಾಳೆ ಏನೇ ಕೇಳಿದರೂ ತಕ್ಷಣ ಪ್ರತಿಕ್ರಿಯೆ ಕೊಡುತ್ತಾಳೆ.ನನ್ನಮ್ಮ ಸೂಪರ್ ಸ್ಟಾರ್ ಚಿತ್ರೀಕರಣ ಮಾಡುವಾಗ ಆಕೆಗೆ ತುಂಬಾನೇ ಸುಲಭವಾಯ್ತು. ವಂಶಿಕಾ ಹುಟ್ಟಿದ ದಿನ ನನಗೆ ನೆನಪಿದೆ. ನಾನು ಹೆರಿಗೆ ನೋವು ಶುರುವಾದಾಗ ಆಸ್ಪತ್ರೆ ದಾಖಲಾದೆ. ಅನಸ್ಥೇಶಿಯಾ ಕೊಡ್ತಾರೆ ಅದು ವರ್ಕ್ ಆಗಲಿಲ್ಲ ಆಪರೇಷ್ ಆದ್ಮೇಲೆ ಆನಂದ್ ಬಂದು ಹತ್ತು ಸಲ ಕೇಳ್ತಿದ್ದಾರೆ ಮಗು ಯಾವುದು ನಿನಗೆ ಗೊತ್ತು ಆಗಿಲ್ವಾ ಅಂತ ನಾನು ಮೊದಲು ಹೇಳಪ್ಪ ಅಂದೆ ಆಗ ಹೆಣ್ಣು ಮಗು ಅಂತ ಹೇಳಿದರು. ಮಗುನ ಕೈಗೆ ಕೊಟ್ಟರು ಮೈ ಕೈ ಕಾಲು ಎಲ್ಲಾ ಕೆಂಪು ಕೆಂಪು ಇತ್ತು. ಹೆಣ್ಣು ಮಗು ಬೇಕು ಅಂತ ಆಸೆ ಇತ್ತುಆದರೆ ಆಕೆ ನಟಿ ಆಗಬೇಕು ಅನ್ನೋ ಪ್ಲ್ಯಾನ್ ಎಲ್ಲಾ ಏನು ಮಾಡಿರಲಿಲ್ಲ.' ಎಂದು ಯಶಸ್ವಿನಿ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.