ಮಿಥುನ್ ವ್ಯಕ್ತಿತ್ವದ ಹುಡುಕಾಟದಲ್ಲಿ ಕಳೆದು ಹೋದ ರಾಶಿ. ಧಾರಾವಾಹಿ ಮುಕ್ತಾಯವಾಗುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸುತ್ತಿರುವ ವೀಕ್ಷಕರು.
ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಮಿಥುನರಾಶಿ (Mithunarashi) ಧಾರಾವಾಹಿ ಶೀಘ್ರದಲ್ಲಿಯೇ ಅಂತ್ಯವಾಗಲಿದೆ ಎಂದು ಹೇಳಲಾಗುತ್ತಿದೆ. 900 ಎಪಿಸೋಡ್‌ಗಳನ್ನು ತಲುಪುವ ಹಂತದಲ್ಲಿದ್ದ ಧಾರಾವಾಹಿ ಮುಕ್ತಾಯವಾಗುತ್ತಿರುವುದಕ್ಕೆ ಸೂಕ್ತ ಕಾರಣ ಸಿಕ್ಕಿಲ್ಲ. ಆದರೆ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ (Social Media) ಬೇಸರ ವ್ಯಕ್ತ ಪಡಿಸುತ್ತಿದ್ದಾರೆ.
ಕಲರ್ಸ್ ಕನ್ನಡದಲ್ಲಿ (Colors Kannada0 ಹೊಸ ಹೊಸ ಧಾರಾವಾಹಿಗಳು ಆರಂಭವಾಗುತ್ತಿರುವ ಕಾರಣ ಮಿಥುನ ರಾಶಿ ಅಂತ್ಯವಾಗುತ್ತಿದೆ ಎನ್ನಲಾಗಿದೆ. ಕಲಾವಿದರು ಅಥವಾ ತಂತ್ರಜ್ಞರು ಇದರ ಬಗ್ಗೆ ಯಾವುದೇ ಮಾಹಿತಿ ಬಿಟ್ಟು ಕೊಟ್ಟಿಲ್ಲ. ಹೀಗಾಗಿ ಅಧಿಕೃತ ಮಾಹಿತಿಗೆ ವೀಕ್ಷಕರು ಕಾಯುತ್ತಿದ್ದಾರೆ. ಅಲ್ಲos ಇಷ್ಟು ದಿನಗಳಿಂದ ಎಳೆದುಕೊಂಡು ಬರುತ್ತಿದ್ದ ಸತ್ಯಗಳನ್ನು ಈಗ ರಿವೀಲ್ ಮಾಡಲಾಗುತ್ತಿದೆ. ಹೀಗಾಗಿ ಇದೂ ಒಂದು ಸೂಚನೆ ಎನ್ನಬಹುದು.
ಮೊದಲ ಸಿನಿಮಾ; ಮಂಗಳೂರಿನ ಹಳೇ ಮನೇಲಿ ಶೂಟಿಂಗ್ ಆರಂಭಿಸಿದ ಸ್ವಾಮಿನಾಥನ್ ಆನಂತರಾಮನ್!
2019ರಲ್ಲಿ ಮಿಥುನ ರಾಶಿ ಧಾರಾವಾಹಿ ಆರಂಭವಾಗಿದ್ದು. ಮಾಡೆಲ್ ಸ್ವಾಮಿನಾಥನ್ ಅನಂತರಾಮನ್ (Swamynathan Anantharaman) , ವೈಷ್ಣವಿ, ಹಿರಿಯ ನಟಿ ಹರಿಣಿ ಶ್ರೀಕಾಂತ್ (Harini Shrikanth), ರಿಯಾಲಿಟಿ ಶೋ (Reality Show) ಸ್ಪರ್ಧಿ ಕೋಳಿ ರಮ್ಯಾ, ದೀಪಾ ಕಟ್ಟೆ (Deepa Katte) ಸೇರಿ ದೊಡ್ಡ ಕಲಾವಿದರ ದಂಡಿದೆ ಈ ಧಾರಾವಾಹಿಯಲ್ಲಿ. ಪ್ರತಿಯೊಬ್ಬ ಪಾತ್ರಧಾರಿಯೂ ಆರಂಭದಿಂದ ತಂಡದ ಜೊತೆ ಕೆಲಸ ಮಾಡುತ್ತಿದ್ದಾರೆ. ರಾಶಿ ಸಹೋದರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಸಂಪದಾ (Sampada) ಅವರಿಗೆ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಸಿನಿಮಾದಲ್ಲಿ ನಟಿಸುವ ಅವಕಾಶವೂ ಸಿಕ್ಕಿತ್ತು ಎಂದು ಧಾರಾವಾಹಿಗೆ ಗುಡ್ ಬೈ ಹೇಳಿದ್ದರು.
![]()
ಇಡೀ ಮನೆ ಜವಾಬ್ದಾರಿಯನ್ನು ಹೊತ್ತು, ಪಕ್ಕಾ ಲೋಕಲ್ ಜೀವನ ನಡೆಸುತ್ತಿರುವ ರಾಶಿ ಪಕ್ಕಾ ಶಂಕರ್ ನಾಗ್ (Shankar Nag) ಅಭಿಮಾನಿ. ಹೀಗಾಗಿ ಏನ್ ಏನೋ ಕೆಲಸ ಮಾಡಿಕೊಂಡು ಜೀವನ ಮಾಡುವ ಬದಲು ಆಟೋ (Auto Driver) ಓಡಿಸುತ್ತಾಳೆ. ದುಡ್ಡಿನ ವ್ಯಾಮೋಹ ಇರುವ ಸಹೋದರಿ ಸುರಕ್ಷಾಗೆ ಮಿಥುನ್ ಎಂಬ ಸಿರಿವಂತ ಹುಡುಗನ ಜೊತೆ ಮದುವೆ ನಿಶ್ಚಯವಾಗುತ್ತದೆ. ಆದರೆ ತನ್ನ ಜಾತಕ ಹೊಂದಿಕೆ ಆಗದ ವಿಚಾರವನ್ನು ಮುಚ್ಚಿಟ್ಟು ತಪ್ಪು ಮಾಡುತ್ತಾರೆ. ಆದರೆ ವಿಲನ್ ಮೂಲಕ ರಿವೀಲ್ ಆದಾಗ ಮಿಥುನ್, ರಾಶಿಯನ್ನೇ ಮದುವೆಯಾಗುತ್ತಾನೆ.
ಅಪ್ಪನ ಹುಡುಕುತ್ತಿರುವೆ, ಸಾಯುವ ಮುನ್ನ ಒಮ್ಮೆಯಾದರೂ ನೋಡಬೇಕು: ನಟಿ ವೈಷ್ಣವಿ
ಮದುವೆ (Marriage) ನಂತರ ಮಿಥುನ್ ಮತ್ತು ರಾಶಿ ಪ್ರೀತಿಸಲು ಆರಂಭಿಸುತ್ತಾರೆ. ಸುರಕ್ಷಾ ಪ್ರೀತಿಸುತ್ತಿದ್ದ ಹುಡುಗನೇ ಮಿಥುನ್ ಸಹೋದರ ಎಂದು ತಿಳಿದುಕೊಂಡು, ಸುರಕ್ಷಾ ಮದುವೆ ಪ್ಲ್ಯಾನ್ ಮಾಡುತ್ತಾಳೆ. ರಾಶಿ ಇರುವ ಮನೆ ಸೇರಿಕೊಂಡರೆ ಆಸ್ತಿಯನ್ನು ಹೊಡೆದುಕೊಳ್ಳಬಹುದು ಎಂದು ಪ್ಲ್ಯಾನ್ ಮಾಡುತ್ತಾಳೆ ಸುರಕ್ಷಾ. ಈ ವೇಳೆ ರಾಶಿ ಮನೆ ಬಿಟ್ಟು ಹೋಗುವಂತೆ ತುಂಬಾನೇ ಟಾರ್ಚರ್ ಕೊಡುತ್ತಾಳೆ. ಅತ್ತೆ- ಸೊಸೆ ನಡುವೆ ತಂದಿಟ್ಟು, ಮಜಾ ತೆಗೆದುಕೊಳ್ಳುತ್ತಾಳೆ. ಒಂದು ಸಮಯದಲ್ಲಿ ಸುರಕ್ಷಾ ನಿಜವಾದ ಮುಖವನ್ನು ಮಿಥುನ್ ಬಯಲು ಮಾಡುತ್ತಾನೆ. ಅಂದಿನಿಂದ ಸುರಕ್ಷಾ ಆ ಮನೆಯಲ್ಲಿ ಯಾವ ಲೆಕ್ಕಕ್ಕೂ ಇಲ್ಲ. ಸಹೋದರಿ ಏನೇ ತಪ್ಪು ಮಾಡಿದ್ದರೂ, ಕ್ಷಮಿಸುವ ರಾಶಿ ಆಕೆಯನ್ನು ಮತ್ತೆ ಮನೆಗೆ ಕರೆದುಕೊಂಡು ಬರುತ್ತಾಳೆ. ಪತಿಯ ಆಫೀನ್‌ನಲ್ಲಿ ರಾಶಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ, ದೊಡ್ಡ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾಳೆ.
ರಾಶಿ ವೃತ್ತಿ ಜೀವನದಲ್ಲಿ ಬೆಳೆಯುತ್ತಿರುವುದನ್ನು ನೋಡಿ ಸಹಿಸಿಕೊಳ್ಳಲು ಆಗದೆ ಮತ್ತೆ ಸುರಕ್ಷಾ (Suraksha) ಎಂಟ್ರಿ ಕೊಡುತ್ತಾರೆ. ಆದರೆ ಈ ಸಲ ಮಿಥುನ್ ಟಾರ್ಗೆಟ್ ಆಗುತ್ತಾನೆ. ಸಹುದ್ಯೋಗಿ ಜೊತೆ ಮಿಥುನ್ ವರ್ತಿಸುತ್ತಿರುವ ರೀತಿಯನ್ನು ಪದೇ ಪದೇ ಹೈಲೈಟ್ ಮಾಡಿ, ಅವರಿಬ್ಬರ ಸಂಬಂಧವನ್ನು ಒಡೆಯುವ ಪ್ರಯತ್ನ ಮಾಡುತ್ತಾರೆ. ನಾದಿನಿ ಸಹಾಯದಿಂದ ಸಂಪೂರ್ಣ ಸತ್ಯ ತಿಳಿದು ಬರುತ್ತದೆ. ಧಾರಾವಾಹಿ ಇಲ್ಲಿಗೆ ಅಂತ್ಯವಾಗಲಿದೆಯಾ ಅಥವಾ ಮತ್ತೊಂದು ಹೊಸ ಟ್ವಿಸ್ಟ್ ಕೊಡುತ್ತಾರಾ ಎಂದು ಕಾದು ನೋಡಬೇಕಿದೆ.
