ಅಪ್ಪನ ಹುಡುಕುತ್ತಿರುವೆ, ಸಾಯುವ ಮುನ್ನ ಒಮ್ಮೆಯಾದರೂ ನೋಡಬೇಕು: ನಟಿ ವೈಷ್ಣವಿ
ಸದಾ ನಗು ನಗುತ್ತಿರುವ ವೈಷ್ಣವಿ ತಂದೆ ಇಲ್ಲದ ಜೀವನ ನೆನಪಿಸಿಕೊಂಡು ಬಿಗ್ ಬಾಸ್ ಮಿನಿ ಸೀಸನ್‌ನಲ್ಲಿ ಕಣ್ಣೀರಿಟ್ಟಿದ್ದಾರೆ.
ಬಿಗ್ ಬಾಸ್ ಮಿನಿ ಸೀಸನ್ ಎರಡು ವಾರಗಳಿಂದ ಪ್ರಸಾರವಾಗುತ್ತಿದೆ. ಕಿರುತೆರೆ ನಟ, ನಟಿಯರ ನಮ್ಮ ಮನಸ್ಸಿನಲ್ಲಿ ಉಳಿದುಕೊಂಡಿರುವ ಒಂದು ವಿಚಾರವನ್ನು ಹಂಚಿಕೊಳ್ಳಬೇಕಿದೆ. ಮಿಥುನ ರಾಶಿ ಖ್ಯಾತಿಯ ವೈಷ್ಣವಿ ಒಮ್ಮೆಯಾದರೂ ತಂದೆಯನ್ನು ನೋಡಬೇಕು ಎಂದು ಕಣ್ಣೀರಿಟ್ಟಿದ್ದಾರೆ. ಕಿರಿಯ ವಯಸ್ಸಿನವರನ್ನು ಕಿಂಡಲ್ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
'ನನ್ನ ತಂದೆ ನಮ್ಮ ಜೊತೆಗಿಲ್ಲ. ನಾನು ಹುಟ್ಟಿದಾಗಿನಿಂದ ಅವರ ಮುಖ ನೋಡಿಲ್ಲ. ಅವರ ಹೆಸರು ತಿಳಿದ ಕೂಡಲೇ ನಾನು 10ನೇ ಕ್ಲಾಸ್‌ನಲ್ಲಿದ್ದಾಗ ಫೇಸ್‌ಬುಕ್ ಅಕೌಂಟ್ ಓಪನ್ ಮಾಡಿದೆ. ಅವರನ್ನು ಈಗಲೂ ಹುಡುಕುತ್ತಿರುವೆ. ಅವರು ಸಿಕ್ಕಿಲ್ಲ. ನನ್ನ ಬೈಯೋದಕ್ಕಾಗಲಿ ಕೇರ್ ಮಾಡೋಕ್ಕಾಗಲಿ ಕುಟುಂಬ ಇಲ್ಲ. ನನಗೆ ಅಮ್ಮ ಮತ್ತು ಅಜ್ಜಿ ಇದ್ದಾರೆ. ಅಪ್ಪ ಅಂದ್ರೆ ಏನು ಅಂತ ನಾನು ಚಿಕ್ಕವಯಸ್ಸಿನಲ್ಲಿ ಕೇಳುತ್ತಿದ್ದೆ. ಅಮ್ಮನ ಸ್ಥಾನದಲ್ಲಿ ನಾನಿದ್ದರೆ ಕೆರೆನೋ, ಬಾವಿನೋ ನೋಡಿಕೊಳ್ಳಬೇಕಿತ್ತು ಅವರು ಅಷ್ಟು ಸ್ಟ್ರಾಂಗ್ ಇದ್ದಾರೆ.' ಎಂದು ಫ್ಯಾಮಿಲಿಯಿಂದ ಮಾನಸಿವಾಗಿ ನೊಂದ ವಿಚಾರವನ್ನು ವೈಷ್ಣವಿ ಹಂಚಿಕೊಂಡಿದ್ದಾರೆ.
'ಮಿಥುನರಾಶಿ'ಯಲ್ಲಿ ಆಟೋ ಓಡ್ಸೋ ರಾಶಿ ಅದೃಷ್ಟ ಹಿಂಗಿದೆ ನೋಡಿ!'ಸ್ಕೂಲ್‌ನಲ್ಲಿ ಕಾಲೇಜಿನಲ್ಲಿ ನನ್ನನ್ನು ತುಂಬಾ ಹೀಯಾಳಿಸುತ್ತಿದ್ದರು. ನನ್ನ ಮೂಲೆಗುಂಪು ಮಾಡುತ್ತಿದ್ದರು. ನಾನು ಡಿಪ್ರೆಸ್ ಆಗಿದ್ದೆ. ಒಬ್ಬರು ಒಂದು ದಿನ ಬಂದು ಏನು ಅಂತ ವಿಚಾರಿಸಿಲ್ಲ. ಇದುವರೆಗೂ ನನ್ನ ಭಾವನೆ ಹಂಚಿಕೊಳ್ಳಲು ಯಾರೂ ಇಲ್ಲ ನನಗೆ. ಅಜ್ಜಿಗೆ ವಯಸ್ಸಾಗಿದೆ, ಅಮ್ಮ ಆಗಲೇ ಸಾಕಷ್ಟು ನೋವು ಅನುಭವಿಸುತ್ತಿದ್ದಾರೆ. ನಾನು ಒಂದು ಸಲವಾದರೂ ನನ್ನ ಅಪ್ಪನನ್ನ ನೋಡಬೇಕು. ಸಾಯೋಕೆ ಮುಂಚೆ ನಾನು ನಮ್ಮ ಅಪ್ಪನನ್ನು ನೋಡಬೇಕು. ಒಂದೇ ಒಂದು ಬಾರಿ ನನ್ನ ಲೈಫ್‌ನಲ್ಲಿ ನಾನು ಅವರನ್ನ ಅಪ್ಪ ಅಂತ ಕರೆಯಬೇಕು ಅಂತ ತುಂಬಾ ಆಸೆ ಇದೆ' ಎಂದು ವೈಷ್ಣವಿ ಬಿಕ್ಕಿಬಿಕ್ಕಿ ಅತ್ತಿದ್ದಾರೆ.