ಬೆಳ್ಳಿ ತೆರೆಗೆ ಕಾಲಿಡುತ್ತಿರುವ ಕಿರುತೆರೆ ನಟ. ಆಯುರ್ವೇದ ವೈದ್ಯ ಪಾತ್ರ. ಆದರೆ ಸಿನಿಮಾ ಹೆಸರು ಅನೌನ್ಸ್ ಮಾಡಿಲ್ಲ..
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮಿಥುನ ರಾಶಿ' ಧಾರಾವಾಹಿ ದಿನೇ ದಿನೇ ವೀಕ್ಷಕರ ಮನಸ್ಸು ಗೆಲ್ಲುತ್ತಿದೆ. ಅದರಲ್ಲೂ ಪ್ರಮುಖ ಪಾತ್ರಧಾರಿ ಸ್ವಾಮಿನಾಥನ್ ಆನಂತರಾಮನ್ ಹುಡುಗಿಯರ ಮನಸ್ಸು ಗೆದ್ದಿರುವ ಚಾಕೊಲೇಟ್ ಬಾಯ್. ಇದೀಗ ಸ್ವಾಮಿನಾಥನ್ ಬೆಳ್ಳಿ ತೆರೆಗೂ ಎಂಟ್ರಿ ಕೊಡುತ್ತಿದ್ದಾರೆ.
ಆಯುರ್ವೇದ ವೈದ್ಯನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸ್ವಾಮಿನಾಥನ್ ಇತ್ತೀಚಿಗೆ ಮಂಗಳೂರಿನ ಪ್ರಾಚೀನ ಮನೆಯೊಂದರಲ್ಲಿ ಚಿತ್ರೀಕರಣ ಆರಂಭಿಸಿದ್ದಾರೆ. ಕೆಲವೊಂದು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. 'ನಾನು ಬೆಳ್ಳಿ ತೆರೆಗೆ ಎಂಟ್ರಿ ಕೊಡಲು ಸಾಕಷ್ಟು ಕಥೆಗಳನ್ನು ಕೇಳುತ್ತಿದ್ದೆ. ಆದರೆ ಯಾವುದೂ ಮನಸ್ಸು ಮುಟ್ಟಿರಲಿಲ್ಲ. ಕಮರ್ಷಿಯಲ್ ಡ್ರಾಮಾಗಿಂತ ಈ ಕಥೆ ಸೂಕ್ತ ಎಂದೆನಿಸಿತ್ತು. ಎರಡು ಗಂಟೆಗಳ ಕಾಲ ಚಿತ್ರಕಥೆ ಹೇಳಿದರು. ನಾನು ತಕ್ಷಣವೇ ಒಪ್ಪಿಕೊಂಡೆ,' ಎಂದು ಸ್ವಾಮಿನಾಥನ್ ಹೇಳಿದ್ದಾರೆ.
ಸ್ವಾಮಿನಾಥನ್ ಜೊತೆ ನಟ ರಾಘವೇಂದ್ರ ರಾಜ್‌ಕುಮಾರ್ ಕೂಡ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಐದು ಭಾಷೆಗಳಲ್ಲಿ ಈ ಚಿತ್ರ ಬಿಡುಗಡೆ ಮಾಡಲಾಗುತ್ತಿದೆ. ಮೂರು ಕಥೆಗಳಿವೆ. ದೆವ್ವದ ಚಟುವಟಿಕೆಗಳು, ಇದರಲ್ಲಿದೆ ಒಂದು ಜೋಡಿ ಒಬ್ಬ ರಿಸರ್ಚ್ ಮಾಡುವ ವೈದ್ಯ. ಮತ್ತೊಂದು ಅಡುಗೆ ಮಾಡುವವರ ಕುಟುಂಬದ ಸುತ್ತ ಕಥೆ ನಡೆಯಲಿವೆ, ಎಂದು ಈ ಹಿಂದೆ ನಿರ್ದೇಶಕ ಪರಮೇಶ್ ಹೇಳಿದ್ದರು.
ಮೆಕ್ಯಾನಿಕಲ್ ಎಂಜಿನಿಯರಿಂಗ್ ಹುಡ್ಗ ಮಿಥುನ್ ಕಣ್ಸೆಳೆದ ಆಟೋ ಹುಡುಗಿ ಯಾರು?
ಸಿನಿಮಾ ಹಾಗೂ ಧಾರಾವಾಹಿ ಚಿತ್ರೀಕರಣವನ್ನು ಸ್ವಾಮಿನಾಥನ್ ಸಮನಾಗಿ ನಿಭಾಯಿಸುತ್ತಿದ್ದಾರೆ. ಪರಮೇಶ್ ಅವರು ಈ ಹಿಂದೆ ಕಮರಟ್ಟು ಚೆಕ್ ಪೋಸ್ಟ್ ಮತ್ತು ಮಾಮು ಟೀ ಅಂಗಡಿ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.
