ಕಲರ್ಸ್ ಕನ್ನಡದ ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ವೈಷ್ಣವ್ ಹೆಂಡತಿ ಪರ ನಿಂತಿದ್ದು ವೀಕ್ಷಕರಿಗೆ ಅಚ್ಚರಿ ಮೂಡಿಸಿದೆ. ಕಾವೇರಿ ಲಕ್ಷ್ಮಿಯನ್ನು ಕೆಟ್ಟವಳಾಗಿಸಲು ಸಂಚು ರೂಪಿಸುತ್ತಾಳೆ. ನಿತಿನ್ ಲಕ್ಷ್ಮಿಯನ್ನು ಮದುವೆಯಾಗಲು ಕಾವೇರಿಯ ಸಹಾಯ ಪಡೆಯುತ್ತಾನೆ. ಕೀರ್ತಿ ಕಾವೇರಿಯ ಪ್ಲ್ಯಾನ್ ವಿಫಲಗೊಳಿಸುತ್ತಾಳೆ. ಕೊನೆಗೆ ವೈಷ್ಣವ್ ಸಮಯಕ್ಕೆ ಸರಿಯಾಗಿ ಬಂದು ನಿತಿನ್‌ನನ್ನು ಸೋಲಿಸಿ, ಲಕ್ಷ್ಮಿ ತನ್ನ ಹೆಂಡತಿ ಎಂದು ಸಾರ್ವಜನಿಕವಾಗಿ ಹೇಳುತ್ತಾನೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮಿ ಬಾರಮ್ಮ ಧಾರಾವಾಹಿ ಒಂದು ರೀತಿಯಲ್ಲಿ ಸಖತ್ ಬೋರಿಂಗ್ ಆಗಿದೆ ಎಂದು ವೀಕ್ಷಕರು ಕಾಮೆಂಟ್ ಮಾಡಲು ಶುರು ಮಾಡಿದ್ದರು. ಅಲ್ಲದೆ ಸದಾ ಅಮ್ಮನ ಹಿಂದೆ ಬಿದ್ದಿರುವ ವೈಷ್ಣವ್ ಬರೀ ಕಾಲು ಎಳೆಸಿಕೊಳ್ಳುವುದೇ ಆಯ್ತು. ಯಾವಾಗ ಬುದ್ದಿ ಬರುತ್ತೆ ಅಂತ ಜನರು ಕಾಯುತ್ತಿದ್ದರು ಆದರೆ ಇಂದಿನ ಎಪಿಸೋಡ್‌ನಲ್ಲಿ ಹೆಂಡತಿ ಪರವಾಗಿ ನಿಂತುಕೊಂಡಿರುವುದು ನೋಡಿ ಫುಲ್ ಶಾಕ್ ಆಗಿದ್ದಾರೆ. 'ಸ್ವಂತ ಬುದ್ಧಿ ಇಲ್ಲ ಪೆದ್ದ, ದಡ್ಡ, ಅಮ್ಮನ ಮಾತು ಕೇಳುವ ಗಲಾಮಾ, ಹೆಂಡತಿ ಪರ ತಗೋ ಗಂಡಸೇ, ನೀನು ಗಂಡ್ಸೇ ಆಗಿದೆ ಮುಂದೆ ಬಾ' ಹೋಗೆ ಸಾಕಷ್ಟು ನೆಗೆಟಿವ್ ಕಾಮೆಂಟ್‌ಗಳನ್ನು ವೈಷ್ಣವ್ ಎದುರಿಸಿದ್ದರು. ಈ ಸೀನ್ ನೋಡಿದ ಮೇಲೆ ಕಡೆಗೂ ಗಂಡ್ಸು ಅಂತ ಪ್ರೂವ್ ಮಾಡಿಬಿಟ್ಟೆ ಎಂದಿದ್ದಾರೆ ವೀಕ್ಷಕರು.
ಹೌದು! ಒಂದಲ್ಲ ಒಂದು ರೀತಿಯಲ್ಲಿ ಲಕ್ಷ್ಮಿ ಕೆಟ್ಟವಳಾಗಬೇಕು ಎಂದು ಕಾವೇರಿ ಪ್ಲ್ಯಾನ್ ಮಾಡುತ್ತಲೇ ಇರುತ್ತಾರೆ. ಅದರಲ್ಲೂ ಮಗನ ದೃಷ್ಟಿಯಲ್ಲಿ ನಾನು ಮಾತ್ರ ಸರಿಯಾಗಿ ಇರಬೇಕು ಬೇರೆ ಯಾರೂ ಚೆನ್ನಾಗಿ ಇರಬಾರದು ಅನ್ನೋ ಅಮ್ಮ ಅಂದ್ರೆ ಇವಳೇ ಇರಬೇಕು. ಲಕ್ಷ್ಮಿ ಮಾನವನ್ನು ಬೀದಿಯಲ್ಲಿ ಹರಾಜ್ ಹಾಕಬೇಕು ಎಂದು ಕಾವೇರಿ ಪುಂಡರನ್ನು ಕರೆಸುತ್ತಾಳೆ. ಬಹಳ ಸಮಯದಿಂದ ಲಕ್ಷ್ಮಿ ಹಿಂದೆ ಬಿದ್ದಿದ್ದು ನಿತಿನ್. ಕಾವೇರಿ ಮಾಡುತ್ತಿರುವ ಪ್ಲ್ಯಾನ್ ತಿಳಿದುಕೊಂಡು ಲಕ್ಷ್ಮಿಯನ್ನು ಸೇಫ್ ಮಾಡಿದರೆ ಖಂಡಿತಾ ಮದುವೆ ಆಗಲು ಇಷ್ಟ ಪಡುತ್ತಾಳೆ ಎಂದು ನಿರ್ಧರಿಸುತ್ತಾನೆ. ಆದರೆ ಈ ಪ್ಲ್ಯಾನ್‌ಗೆ ಸಂಪೂರ್ಣವಾಗಿ ಬ್ರೇಕ್ ಹಾಕಿದ್ದು ಗೆಳತಿ ಕೀರ್ತಿ. ಕೀರ್ತಿ ಎಂಟ್ರಿ ಕೊಟ್ಟಿದ್ದಕ್ಕೆ ಕಾವೇರಿ ಮಾಡಿದ ಪ್ಲ್ಯಾನ್ ಫುಲ್ ಫ್ಲಾಪ್ ಆಗುತ್ತದೆ. ಅಲ್ಲಿದೆ ಸತ್ಯ ವೃಷ್ಣವ್ ತಲುಪುತ್ತದೆ.
1.50 ಕೋಟಿ ವೆಚ್ಚದ ರಣಧೀರ ಸಿನಿಮಾ ಓಡಲ್ಲ ಅಂತ ರವಿಚಂದ್ರನ್‌ಗೆ ತಂದೆ ವಾರ್ನ್ ಮಾಡಿದ್ರಂತೆ; ನಿಜಕ್ಕೂ ಏನ್ ಆಯ್ತು?
ಸರಿಯಾದ ಸಮಯದಕ್ಕೆ ವೈಷ್ಣವ್ ಎಂಟ್ರಿ ಕೊಡದಿದ್ದರೆ ಲಕ್ಷ್ಮಿಗೆ ನಿತಿನ್ ತಾಳಿ ಕಟ್ಟುಬಿಡುತ್ತಿದ್ದ. ಕೋಪದಲ್ಲಿ ನಿತಿನ್‌ಗೆ ಗನ್ ಇಟ್ಟುಶೂಟ್ ಮಾಡಬೇಕು ಎಂದು ವೈಷ್ಣವ್ ಎಂಟ್ರಿ ಕೊಡುತ್ತಾನೆ. ನಿನಗೆ ತಾಕತ್ತು ಇದ್ರೆ ನೀನು ಗಂಡ್ಸೇ ಆಗಿದ್ರೆ ಗನ್ ಪಕ್ಕಕ್ಕಿಟ್ಟು ಬಾ ಎಂದು ನಿತಿನ್ ಸವಾಲ್ ಹಾಕುತ್ತಾನೆ.ಗನ್ ಪಕ್ಕಕ್ಕೆ ಇಟ್ಟು ವೈಷ್ಣವ್ ಫೈಟ್ ಮಾಡುತ್ತಾನೆ. ಕೊನೆಗೂ ಸೋತ ನಿತಿನ್ 'ನಿನ್ನ ತಾಕತ್ತನ್ನು ಒಪ್ಪಿಕೊಂಡೆ. ನಿನ್ನ ಪೌರುಷವನ್ನು ಪ್ರೂವ್ ಮಾಡಿದ್ದೀಯಾ' ಎಂದು ದೂರ ಓಡುತ್ತಾನೆ. ಆಗ 'ನಾವು ಗಂಡ ಹೆಂಡತಿ. ಸುಳ್ಳು ಸುದ್ದಿಯನ್ನು ನಂಬಬೇಡಿ. ನಾವು ಜೋಡಿಯಾಗಿದ್ದೀವಿ' ಎಂದು ವೈಷ್ಣವ್ ಹೇಳುತ್ತಾನೆ.
ಮರೆತೆಯಾ ಅಂಬಿ ಋಣ? ದರ್ಶನ್‌ಗೆ ಫ್ಯಾನ್ಸ್ ಛೀಮಾರಿ; ಫುಲ್ ವಿಡಿಯೋ ನೋಡಿ
