ಕ್ರೇಜಿ ಸ್ಟಾರ್ ರವಿಚಂದ್ರನ್ ರಣಧೀರ ಚಿತ್ರದ ಬಗ್ಗೆ ಹಂಚಿಕೊಂಡಿದ್ದಾರೆ. ಚಿತ್ರಕ್ಕೆ ಹೆಚ್ಚು ಖರ್ಚು ಮಾಡಿದಾಗ ತಂದೆ ವೀರಸ್ವಾಮಿ ಪ್ರಶ್ನಿಸಿದರು. ಪ್ರೇಮಲೋಕದಂತೆ ಇದು ಇಷ್ಟವಾಗುತ್ತೋ ಎಂದು ಅನುಮಾನ ವ್ಯಕ್ತಪಡಿಸಿದರು. ಆದರೆ ರವಿಚಂದ್ರನ್ ಸಿನಿಮಾ ಮೇಲೆ ನಂಬಿಕೆ ಇಟ್ಟು ಮುಂದುವರೆದರು. ಹಂಸಲೇಖ ಸಹಾಯದಿಂದ ಹಾಡನ್ನು ಸೇರಿಸಿ, ಜನರಿಗೆ ಅರ್ಥ ಮಾಡಿಸಿದರು. ಸಿನಿಮಾ ದೊಡ್ಡ ಯಶಸ್ಸನ್ನು ಕಂಡಿತು, ಹುಬ್ಬಳ್ಳಿಯಲ್ಲಿ ಎರಡು ವರ್ಷ ಪ್ರದರ್ಶನಗೊಂಡಿತು.

ಕ್ರೇಜಿ ಸ್ಟಾರ್ ರವಿಚಂದ್ರನ್ ಸಿನಿಮಾಗಳು ಅಂದ್ರೆ ನಿಜಕ್ಕೂ ಒಂದು ಕ್ರೇಜ್ ಸೃಷ್ಟಿ ಮಾಡಿತ್ತು. ಆ ಕಾಲದಲ್ಲೇ ಸೂಪರ್ ಹಿಟ್ ಬಿಗ್ ಬಜೆಟ್‌ ಸಿನಿಮಾಗಳನ್ನು ನೀಡಿದ್ದರು. ಪ್ರೇಮಲೋಕ ಚಿತ್ರಕ್ಕೆ 1 ಕೋಟಿ ಖರ್ಚು ಓಕೆ ಆದರೆ ರಣಧೀರ ಚಿತ್ರಕ್ಕೆ 1.50 ಕೋಟಿ ಯಾಕೆ? ಸಿನಿಮಾ ನೋಡಲು ಜನರು ಬರ್ತಾರ ಎಂದು ತಂದೆ ನಿರ್ಮಾಪಕ ವೀರಸ್ವಾಮಿ ಪ್ರಶ್ನೆ ಮಾಡಿದಾಗ ರವಿಚಂದ್ರನ್ ರಿಯಾಕ್ಟ್ ಮಾಡಿದ ರೀತಿಯನ್ನು ಭರ್ಜರಿ ಬ್ಯಾಚುಲರ್ಸ್‌ ಕಾರ್ಯಕ್ರಮಲ್ಲಿ ಹಂಚಿಕೊಂಡಿದ್ದಾರೆ. 

'ನಾನು ರಣಧೀರ ಸಿನಿಮಾ ಮಾಡುವಾಗ ನನಗೆ 25 ವರ್ಷ ಅಷ್ಟೇ. ಕುದುರೆ ಮುಖದಲ್ಲಿ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬಂದಿದ್ದೆ. ಆಗ ಸಮಯದಲ್ಲಿ ನನ್ನ ತಂದೆ ನನ್ನನ್ನು ಪಕ್ಕದ್ದಲ್ಲಿ ಕೂರಿಸಿಕೊಂಡು ಚಿತ್ರಕ್ಕೆ ಎಷ್ಟು ಖರ್ಚು ಮಾಡುತ್ತಿರುವೆ ಎಂದು ಪ್ರಶ್ನೆ ಮಾಡಿದ್ದರು. ನಾನು ಗೊತ್ತಲ್ಲ ಅಂತ ಹೇಳಿದೆ. ಪ್ರೇಮಲೋಕಕ್ಕೆ ಒಂದು ಕೋಟಿ ರೂಪಾಯಿ ಖರ್ಚು ಆಗಿತ್ತು. ಅದನ್ನು ಎರಡು ಭಾಷೆಯಲ್ಲಿ ಮಾಡಲಾಗಿತ್ತು. ಹೇಗೋ ನಾವು ಅಲ್ಲಿ ಗೆದ್ದುಬಿಟ್ಟಿ ಆದರೆ ರಣಧೀರ ರಿಮೇಕ್ ಸಿನಿಮಾ ಆ ಹಿಂದಿ ಸಿನಿಮಾ (ಹೀರೋ) ಆಗಲೇ 25 ವಾರಗಳ ಪ್ರದರ್ಶನ ಕಂಡಿತ್ತು. ಆಗಲೂ ಥಿಯೇಟರ್‌ನಲ್ಲಿ ಓಡುತ್ತಿತ್ತು. ಅದನ್ನು ರಿಮೇಕ್ ಮಾಡಿ ಮುಕ್ಕಾಲು ಕೋಟಿ ರೂಪಾಯಿ ಖರ್ಚು ಮಾಡಿದ್ದೆ. ಈ ಸಿನಿಮಾದಿಂದ ನಮಗೆ ದುಡ್ಡು ಬರುವುದಿಲ್ಲ ಅಂತ ತಂದೆ ಹೇಳ್ತಾರೆ ಆದರೆ ಅದು ನನ್ನ ತಲೆಗೂ ಹೋಗುವುದಿಲ್ಲ. ಸಿನಿಮಾ ಮೇಲೆ ನಂಬಿಕೆ ನನ್ನನ್ನು ಬಿಟ್ಟುಕೊಡಲಿಲ್ಲ. ರಣಧೀರ ಸಿನಿಮಾ ಸಂಪೂರ್ಣವಾಗಿ ರೆಡಿ ಆದ ಮೇಲೆ ಮೊದಲು ತಂದೆಗೆ ಕರೆದು ತೋರಿಸಿದ ಆದರೆ ಅವರಿಗೆ ಅದು ಹಿಡಿಸೋದಿಲ್ಲ. ಇದನ್ನು ನನಗೆ ಹೇಳುವುದಕ್ಕೆ ಅವರಿಗೆ ಗೊತ್ತಾಗುವುದಿಲ್ಲ. 6-7 ತಿಂಗಳು ಲೆಕ್ಕವಿಲ್ಲದೆ ಮಗ ಹಗಲು ರಾತ್ರಿ ಕೆಲಸ ಮಾಡಿದ್ದಾನೆ ಅವನಿಗೆ ಸಿನಿಮಾ ಚೆನ್ನಾಗಿಲ್ಲ ಅಂತ ಹೇಗೆ ಹೇಳೋದಿ ಅನ್ನೋ ಪ್ರಶ್ನೆ ನಮ್ಮ ತಂದೆಗೆ ಇತ್ತು' ಎಂದು ರವಿಚಂದ್ರನ್ ಮಾತನಾಡಿದ್ದಾರೆ.

ಮರೆತೆಯಾ ಅಂಬಿ ಋಣ? ದರ್ಶನ್‌ಗೆ ಫ್ಯಾನ್ಸ್ ಛೀಮಾರಿ; ಫುಲ್ ವಿಡಿಯೋ ನೋಡಿ

 'ನನ್ನನ್ನು ಕರೆದು ನೋಡು ರಣಧೀರ ಸಿನಿಮಾ ಪ್ರೇಮಲೋಕದ ಥರ ಅಲ್ಲ ...ಜನರು ತಲೆಯಲ್ಲಿ ಪ್ರೇಮಲೋಕ ಇಟ್ಟುಕೊಂಡು ಈ ಸಿನಿಮಾ ನೋಡಲು ಬರುತ್ತಾರೆ.ತಂದೆ ಮಾತುಗಳನ್ನು ಕೇಳಿಸಿಕೊಂಡು ಹಂಸಲೇಖ ಕೂಡ ಗಾಬರಿ ಆಗಿಬಿಟ್ಟರು.ಅಪ್ಪ ಎಲ್ಲೂ ಸಿನಿಮಾ ಚೆನ್ನಾಗಿಲ್ಲ ಅಂತ ಹೇಳಿಲ್ಲ ಆದರೆ ಪ್ರೇಮಲೋಕ ಸಿನಿಮಾ ರೀತಿ ಇಲ್ಲ ಎಂದು ಹೇಳಿದ್ದು ಎಂದು ಹಂಸಲೇಖಗೆ ಹೇಳಿದೆ. ಮೂರನೇ ದಿನ ಮತ್ತೆ ಸಿನಿಮಾ ಶೂಟಿಂಗ್ ಶುರು ಮಾಡಿದೆ. ಇದು ಪ್ರೇಮಲೋಕ ಅಲ್ಲ ಇದು ರಣಧೀರ ಅನ್ನೋದು ಜನರಿಗೆ ಅರ್ಥ ಮಾಡಿಸಬೇಕು ಎಂದುಕೊಂಡೆ. ಅದನ್ನು ಹಂಸಲೇಖ ಒಂದು ಹಾಡಿಗೆ ಮೂಲಕ ಬರೆದುಕೊಟ್ಟರು. ಒಂದಿಷ್ಟು ಮಕ್ಕಳ ಜೊತೆ ಶೂಟಿಂಗ್ ಮಾಡಲು ಶುರು ಮಾಡಿದೆ ಆ ಸಾಂಗ್ ಇಡೀ ಸಿನಿಮಾ 10 ರಿಂದ 15 ಸಾರಿ ಬಳಸಿದ್ದೇನೆ. ರಣಧೀರದಲ್ಲಿ ಮ್ಯೂಸಿಕ್ ಕಡಿಮೆ ಆಯ್ತು ಅನ್ನೋ ಅರ್ಥದಲ್ಲಿ ತಂದೆ ಹೇಳಿದ್ದರು ಆ ಸಂಗೀತವನ್ನೇ ಸಿನಿಮಾದಲ್ಲಿ ಇನ್ನೂ ಜಾಸ್ತಿ ನಾವು ತುಂಬಿಸಿದೆವು.ಇವತ್ತು ನಮಗೆ ಇಷ್ಟವಾಗದಿದ್ದ ಟಪ್ ಅಂತ ಬೈದು ಬಿಡುತ್ತೀವಿ. ಚೆನ್ನಾಗಿಲ್ಲ ಅಂತ ನೇರವಾಗಿ ಹೇಳುತ್ತೀವಿ ಆದರೆ ನಮ್ಮ ತಂದೆ ಮಗನಿಗೆ ನೋಯಿಸಬಾರದು ಮತ್ತು ಇರೋದನ್ನು ಹೇಳಲೇಬೇಕು ಅಂತ ಬೇರೆ ರೀತಿಯಲ್ಲಿ ನನಗೆ ಹೇಳುತ್ತಾರೆ. ಆ ರೀತಿ ಹೇಳಿದ್ದಕ್ಕೆ ರಣಧೀರ ಸಿನಿಮಾ ಆಯ್ತು. ಆ ಕಾಲದಕ್ಕೆ ಈ ಸಿನಿಮಾ ದೊಡ್ಡ ದಾಖಲೆಗಳನ್ನು ಬರೆದಿತ್ತು. ಹುಬ್ಬಳ್ಳಿಯಲ್ಲೇ 2 ವರ್ಷ ಪ್ರದರ್ಶನ ಕಂಡಿತ್ತು' ಎಂದು ರವಿಚಂದ್ರನ್ ಹೇಳಿದ್ದಾರೆ. \

ಜನರ ಅನುಕಂಪ ದೂರ ಕರ್ಕೊಂಡು ಹೋಗಲ್ಲ, ಆ ಘಟನೆ ನಂತರ ನಗುವುದಕ್ಕೆ ಭಯ ಆಗುತ್ತಿತ್ತು: ಮೇಘನಾ ರಾಜ್