‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಅಂತ್ಯ ಆಗ್ತಿದೆ ಎಂದು ವಾಹಿನಿಯೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಅಂತ್ಯ ಆಗ್ತಿರೋದು ಈಗ ಪಕ್ಕಾ ಆಗಿದೆ. ವಾಹಿನಿಯೇ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದು, ಅಂತಿಮ ಸಂಚಿಕೆಗಳು ಯಾವಾಗ ಪ್ರಸಾರ ಆಗಲಿದೆ ಎಂದು ಕೂಡ ಹೇಳಿದೆ. ಈ ಬಗ್ಗೆ ಕಲರ್ಸ್ ಕನ್ನಡ ವಾಹಿನಿಯೇ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದೆ.
ವಾಹಿನಿ ಹೇಳಿದ್ದೇನು?
"ಕನ್ನಡಿಗರ ಮನ ಮುಟ್ಟಿದ, ಜನ ಮೆಚ್ಚಿದ ಕತೆ - ಲಕ್ಷ್ಮೀ ಬಾರಮ್ಮ ಅಂತಿಮ ಸಂಚಿಕೆಗಳನ್ನ ಮಿಸ್ ಮಾಡ್ಲೇಬೇಡಿ...ಲಕ್ಷ್ಮೀ ಬಾರಮ್ಮ ಧಾರಾವಾಹಿಯನ್ನು ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7:30ಗೆ ನೋಡಿ" ಎಂದು ವಾಹಿನಿಯು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಈ ಪೋಸ್ಟ್ ನೋಡಿ ಅನೇಕರು "ನಾವು ಲಕ್ಷ್ಮೀ ಬಾರಮ್ಮ ಧಾರಾವಾಹಿಯನ್ನು ಮಿಸ್ ಮಾಡಿಕೊಳ್ತೀವಿ" ಎಂದು ಕಾಮೆಂಟ್ ಮಾಡಿದ್ದಾರೆ.
ಒಟ್ಟಿಗೆ ಡಿನ್ನರ್ ಮಾಡಿದ ʼಲಕ್ಷ್ಮೀ ಬಾರಮ್ಮʼ ಟೀಂ; ಧಾರಾವಾಹಿ ಮುಕ್ತಾಯದ ಸುಳಿವು ಕೊಡ್ತಿದ್ಯಾ ಈ ಫೋಟೋ?
ವೀಕ್ಷಕರು ಏನು ಹೇಳ್ತಿದ್ದಾರೆ?
- "ಚೆನ್ನಾಗಿತ್ತು. ಲಕ್ಷ್ಮೀ ಮೇಲೆ ಕೀರ್ತಿ ಬಂದ ಎಪಿಸೋಡ್ ಅಂತು ಸಖತ್ತಾಗಿತ್ತು. ನಂ 1 ಸೀರಿಯಲ್ ಆಗಿತ್ತು. ಆದ್ರೂ ವೈಷ್ಣವ್, ಲಕ್ಷ್ಮೀ, ಕೀರ್ತಿಯನ್ನು ಮಿಸ್ ಮಾಡ್ಕೊಳ್ತೀವಿ. ಕೀರ್ತಿ, ಲಕ್ಷ್ಮೀ, ವೈಷ್ಣವ್ ಪಾತ್ರಕ್ಕೆ ಸರಿಯಾದ ನ್ಯಾಯ ಕೊಡ್ಲಿಲ್ಲ. ವೈಷ್ಣವ್ ಕೊನೆ ತನಕ ಹೀಗೆ ಬಂದ. ಕೀರ್ತಿ ಪಾತ್ರವನ್ನು ನೆಗ್ಲೆಟ್ ಮಾಡಿದ್ದು, ಮತ್ತೆ ಲಕ್ಷ್ಮೀಯನ್ನು ಹೈಲೈಟ್ ಮಾಡೋಕೆ ಕೀರ್ತಿಯನ್ನು ಬಲಿ ಪಶು ಮಾಡಿದ್ದು ಇದಕ್ಕೆ ಕಾರಣ. ಮಿಸ್ ಯು ಕೀರ್ತಿ ವೈಷ್ಣವ್, ಲಕ್ಷ್ಮಿ.
- ಮಿಸ್ ಯು ಲಕ್ಷ್ಮೀ ಬಾರಮ್ಮ. ಲಕ್ಷ್ಮೀ ಬಾರಮ್ಮ ಅಕ್ಕ-ತಂಗಿಯರ ಧಾರವಾಹಿ ಎರಡೂ ಒಂದೇ ಸಲ ಮುಗಿದಿದ್ರೆ ಚೆನ್ನಾಗಿರ್ತಿತ್ತು. ಭಾಗ್ಯಲಕ್ಷ್ಮೀ ಅಷ್ಟೇ ನೋಡಿದ್ರೆ ಲಕ್ಷ್ಮೀಯನ್ನು ಮಿಸ್ ಮಾಡ್ಕೊಳ್ತೀವಿ. ಕ್ಲೈಮಾಕ್ಸ್. ಎಪಿಸೋಡ್ ಆದ್ರೂ. ಸೂಪರ್ ಆಗಿವೆ. ಸೂಪರ್ ಡೂಪರ್ ಸೀರಿಯಲ್ ಅಂತ್ಯ ಆಗಬಾರದಿತ್ತು. ಕೀರ್ತಿ ಲಕ್ಷ್ಮೀ ಮಾಡೋ ಡಾನ್ಸ್‌ಗೋಸ್ಕರ ನಾನು ವೇಟ್ ಮಾಡ್ತಾ ಇದೀನಿ. ಸೂಪರ್ ಸೀರಿಯಲ್. ಈ ಸೀರಿಯಲ್‌ನಲ್ಲಿ ಅವರಿಬ್ಬರ ಡ್ಯಾನ್ಸ್ ನೋಡೋದೇ ಎಷ್ಟೋ ಚೆಂದ. ಆದರೆ ಇನ್ನು ಮುಂದೆ ಅಂತ ಡ್ಯಾನ್ಸ್ ಮಾಡೋ ಯಾವ ಸೀರಿಯಲ್ ಬರಲ್ಲ.
- ಕಷ್ಟ ಪಟ್ಟು ಅಭಿನಯ ಮಾಡಿ ಒಂದು ಮಟ್ಟಕ್ಕೆ ತಂದಿದ್ದು ಲಕ್ಷ್ಮೀ, ಕೀರ್ತಿ. ವೈಷ್ಣವ್ ಇಲ್ಲಿ ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲ ಆಗಿತ್ತು.
ಉತ್ತರ ಕರ್ನಾಟಕದ ಗಾಯಕ ಬಾಳು ಬೆಳಗುಂದಿ ಇದೀಗ ಸಿನಿಮಾ ಹಾಡಿನ ಗಾಯಕ; ಚಾನ್ಸ್ ಕೊಟ್ಟ ಅರ್ಜುನ್ ಜನ್ಯ!
ಯಾಕೆ ಸೀರಿಯಲ್ ಅಂತ್ಯ ಆಗ್ತಿದೆ?
ಈ ಧಾರಾವಾಹಿಯ ಕೊನೆಯ ದಿನದ ಶೂಟಿಂಗ್ ಆಗಿದೆ, ಶೂಟಿಂಗ್ ಬಳಿಕ 'ಲಾಸ್ಟ್ ಡೇ ಲಕ್ಷ್ಮೀ ಬಾರಮ್ಮ' ಎಂದು 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಕಲಾವಿದರೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದರು. ಆಗಲೇ ಈ ಸೀರಿಯಲ್ ಅಂತ್ಯ ಆಗ್ತಿದೆ ಎನ್ನುವ ಸುಳಿವು ಸಿಕ್ಕಿತ್ತು. ಆ ನಂತರದಲ್ಲಿ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಕಲಾವಿದರಾದ ನಟಿ ಸುಷ್ಮಾ ನಾಣಯ್ಯ, ನಟಿ ಭೂಮಿಕಾ ರಮೇಶ್, ರಜನಿ ಪ್ರವೀಣ್, ನಟಿ ಲಾವಣ್ಯಾ ಹೀರೆಮಠ ಮುಂತಾದವರು ಒಟ್ಟಿಗೆ ಡಿನ್ನರ್ ಮಾಡಿದ್ದರು. ಸೀರಿಯಲ್ ಕಲಾವಿದರು ಸೆಟ್‌ನಿಂದ ಆಚೆ ಎಲ್ಲರೂ ಒಟ್ಟಿಗೆ ಸೇರೋದು ಅಪರೂಪ. ಹಾಗಾಗಿ ಇವರೆಲ್ಲ ಊಟಕ್ಕೆ ಸೇರಿರೋದು ಸಾಕಷ್ಟು ಅನುಮಾನ ಮೂಡಿಸಿತ್ತು. ಕಲಾವಿದರು ಈ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ʼಲಕ್ಷ್ಮೀ ಬಾರಮ್ಮʼ ( Lakshmi Baramma kannada Serial ) ಧಾರಾವಾಹಿಗೆ ಒಳ್ಳೆಯ ಟಿಆರ್‌ಪಿ ಸಿಗುತ್ತಿತ್ತು. ಈ ಸೀರಿಯಲ್ ಹೇಗೆ ಇಷ್ಟು ಬೇಗ ಅಂತ್ಯ ಆಗುವುದು ಎನ್ನೋದು ಈಗ ಇರುವ ಪ್ರಶ್ನೆ ಆಗಿದೆ. ಕಲಾವಿದರು ಬೇರೆ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿ ಇದ್ದಾರೆ ಅಂತ ಸೀರಿಯಲ್ ಮುಗಿಸ್ತಿದ್ದಾರಾ? ಎನ್ನುವ ಪ್ರಶ್ನೆ ಎದ್ದಿದೆ. ʼಭಾಗ್ಯಲಕ್ಷ್ಮೀʼ ಧಾರಾವಾಹಿ ಜೊತೆಯಲ್ಲಿ ಈ ಸೀರಿಯಲ್ ಮರ್ಜ್ ಆಗಲಿದೆಯಾ? 'ಭಾಗ್ಯಲಕ್ಷ್ಮೀ' ಧಾರಾವಾಹಿಯಲ್ಲಿ ಆಗಾಗ ಲಕ್ಷ್ಮೀ ಕಾಣಿಸಿಕೊಳ್ತಾಳಾ ಎಂದು ಕಾದು ನೋಡಬೇಕಿದೆ.
