ಶ್ವೇತಾಗೆ ಕೊಲೆ ಬೆದರಿಕೆ ಹಾಕಿದ ಡೆವಿಲ್; ಮೊಬೈಲ್ ಕ್ಯಾಮೆರಾದಲ್ಲಿ ಫುಲ್ ರೆಕಾರ್ಡ್?
ಡೆವಿಲ್ ಮುಖ ಬಯಲು ಮಾಡಲು ಮುಂದಾದ ಶ್ವೇತಾ. ಡೀಲ್ ಮಾಡ್ಕೊಂಡಿಲ್ಲ ಅಂದ್ರೆ ಇಬ್ಬರಲ್ಲಿ ಒಬ್ಬರ ಕೊಲೆ ಕನ್ಫರ್ಮ್....
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷಣ ಧಾರಾವಾಹಿ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಶ್ವೇತಾನೇ ವಿಲನ್ ಎನ್ನುವಷ್ಟರಲ್ಲಿ ಭಾರ್ಗವಿ ಎಂಟ್ರಿಯಾಗುತ್ತದೆ. ನಕ್ಷತ್ರಾಳನ್ನು ಭೂಪತಿ ಮನೆಯವರು ಒಪ್ಪಿಕೊಂಡರು ಆದರೆ ಮೌರ್ಯ ದೂರ ಉಳಿದುಬಿಟ್ಟನು. ನಕ್ಷತ್ರಾ ಸಾಕು ತಂದೆ ತಾಯಿ ಎಲ್ಲಿ? ಹೀಗೆ ಪ್ರತಿಯೊಂದರಲ್ಲೂ ಸಸ್ಪೆನ್ಸ್ ಕ್ರಿಯೇಟ್ ಮಾಡಿರುವ ಧಾರಾವಾಹಿ ಇದಾಗಿದ್ದು ಟಿಆರ್‌ಪಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ.
ಇಷ್ಟು ದಿನ ಸಿಎಸ್ ಚಂದ್ರಶೇಖರ್ ಮತ್ತು ಭೂಪತಿ ಕುಟುಂಬದವರನ್ನು ಆಟವಾಡಿಸುತ್ತಿದ್ದ ಡೆಬಿಲ್ ಯಾರೆಂದು ಶ್ವೇತಾ ಪತ್ತೆ ಮಾಡಿದ್ದಾಳೆ. ಚಂದ್ರಶೇಖರ್ ಸಹೋದರಿ ಭಾರ್ಗವಿನೇ ಡೆವಿಲ್ ಎಂದು ತಿಳಿದು ಶಾಕ್ ಆಗಿರುವ ಶ್ವೇತಾ ತಕ್ಷಣವೇ ಮಾಸ್ಟರ್ ಪ್ಲ್ಯಾನ್ ಮಾಡಿ ತಮ್ಮ ಬೇಳೆ ಬೇಯಿಸಿಕೊಂಡಿದ್ದಾಳೆ.
ಲಕ್ಷಣ ಸೀರಿಯಲ್‌ನಲ್ಲಿ ನಕ್ಷತ್ರ ಮೇಕಪ್ ಬದಲಾಗಿದ್ದು ಗಮನಿಸಿದ್ರಾ?
'ಸಿಎಸ್ ಆರತಿ ನನ್ನ ಹೆಸರಿಗೆ ಆಸ್ತಿ ಬರೆಯುವೆ ಎಂದು ಹೇಳಿದಾಗ ನೀನು ಯಾಕೆ ಅಡ್ಡ ಬಂದೆ ಎಂದು ಈಗ ಅರ್ಥವಾಗುತ್ತಿದೆ. ಅರ್ಧ ಆಸ್ತಿ ನನ್ನ ಹೆಸರಿಗೆ ಬಂದ್ರೆ ನಿನಗೆ ಸಮಸ್ಯೆ ಆಗುತ್ತದೆ ಎಂದು ಆಸ್ತಿ ಪೇಪರ್‌ನ ಹರಿದು ಬಿಸಾಡಿದೆ. ಎಷ್ಟು ದೊಡ್ಡ ಡ್ರಾಮಾ ಮಾಡಿದೆ ಭಾರ್ಗವಿ. ನಮ್ಮ ಜೊತೆಗಿದ್ದು ನಮಗೆ ಎಷ್ಟು ಮೋಸ ಮಾಡಿದೆ ಅಲ್ವಾ ಭಾರ್ಗು ಅಲಿಯಾ ಡೆವಿಲ್. ನಿನ್ನ ಕೈಯಲ್ಲಿ ಏನು ಮಾಡಲು ಆಗುತ್ತೆ?' ಎಂದು ಶ್ವೇತಾ ಪ್ರಶ್ನೆ ಮಾಡುತ್ತಾಳೆ.
'ನೀನು ಇಷ್ಟು ಬುದ್ಧಿವಂತೆ ಎಂದು ಗೊತ್ತಿರಲಿಲ್ಲ ಶ್ವೇತಾ. ಎಲ್ಲಾನು ಚೆನ್ನಾಗಿ ತಿಳಿದುಕೊಂಡಿರುವೆ. ನಾನೇ ಡೆವಿಲ್ ಏನು ಇವಾಗ? ನಿನ್ನ ಕೈಯಲ್ಲಿ ಏನು ಮಾಡಲು ಸಾಧ್ಯ? ನನ್ನ ಮೇಲೆ ಸತ್ಯ ತಿಳಿದುಕೊಂಡು ಗ್ರಹಚಾರವನ್ನು ನಿನ್ನ ಮೈ ಮೇಲೆ ಎಳೆದುಕೊಂಡಿರುವ ಶ್ವೇತಾ. ನಾನು ಮನಸ್ಸು ಮಾಡಿದರೆ ಇಲ್ಲೇ ನಿನ್ನ ಪ್ರಾಣ ಮುಗಿಸುವೆ. ನೀನು ನಾನು ಬೆಳೆಸಿರುವ ಹುಳ...ನನ್ನ ಮುಂದೆ ಬುಸುಗೂಡಬೇಡ' ಎಂದು ಭಾರ್ಗವಿ ಸಿಟ್ಟು ಮಾಡಿಕೊಳ್ಳುತ್ತಾಳೆ.
ಕಪ್ಪಾಗಿರುವುದಕ್ಕೆ ಅವಮಾನ ಎದುರಿಸಿರುವೆ, ಮಧ್ಯೆರಾತ್ರಿ ಅಮ್ಮ ಅಳುತ್ತಿದ್ದಳು: ಲಕ್ಷಣ ಭಾವುಕ ಕ್ಷಣ
'ನಾನು ನೀನು ಸಾಕಿರುವ ಹುಡುಗಿ ಭಾರ್ಗವಿ. ಪ್ರಾಣ ತೆಗೆಯುವ ಬೊಗಳೆ ಮಾತು ಬೇಡ. ಸಿಎಸ್ ಮನೆಯಲ್ಲಿರುವ ಕಾರಣ ನೀನು ಡೆವಿಲ್ ರೀತಿ ಇರಲು ಸಾಧ್ಯವಿಲ್ಲ ಭಾರ್ಗವಿ ರೀತಿ ವರ್ತಿಸಬೇಕು. ನಿನ್ನ ಗುಟ್ಟು ಯಾರಿಗೂ ಹೇಳಬಾರದು ಅಂದ್ರೆ ನಾನು ಹೇಳಿದ ರೀತಿಯಲ್ಲಿ ವರ್ತಿಸಬೇಕು. ಹೇಳಿದಷ್ಟು ಕೇಳಬೇಕು ಅಷ್ಟೆ. ನೀನು ಒಂದಿಷ್ಟು ಕೆಲಸಗಳನ್ನು ಮಾಡಿದರೆ ಮಾತ್ರ ನಿನ್ನನ್ನು ಉಳಿಸಿಕೊಳ್ಳಬೇಕ ಬೇಡ್ವೋ ಎಂದು ಯೋಚನೆ ಮಾಡುವೆ' ಎನ್ನುತ್ತಾಳೆ ಶ್ವೇತಾ.
ಧಾರಾವಾಹಿಯಲ್ಲಿ ನಕ್ಚತ್ರ ಮತ್ತು ಶ್ವೇತಾಳ ಪಾತ್ರವನ್ನು ವಿಭಿನ್ನವಾಗಿ ತೋರಿಸಲಾಗಿದೆ. ಕಪ್ಪು ಬಣ್ಣದಲ್ಲಿರುವ ನಕ್ಷತ್ರಾ ಪಕ್ಕಾ ಹಳ್ಳಿ ಹುಡುಗಿ ರೀತಿ ಸೀರೆ ಧರಿಸಿ ಮೇಕಪ್ ಇಲ್ಲದೆ ತೋರಿಸಿದ್ದಾರೆ. ಬಣ್ಣವಿರುವ ಶ್ವೇತಾ ಹಾಟ್ ಡ್ರೆಸ್ ಧಿರಿಸಿ ಪಕ್ಕಾ ಸಿಟಿ ಹುಡುಗಿ ರೀತಿ ತೋರಿಸಿದ್ದಾರೆ.