Asianet Suvarna News Asianet Suvarna News

ಲಕ್ಷಣ ಸೀರಿಯಲ್‌ನಲ್ಲಿ ನಕ್ಷತ್ರ ಮೇಕಪ್ ಬದಲಾಗಿದ್ದು ಗಮನಿಸಿದ್ರಾ?

ಲಕ್ಷಣ ಸೀರಿಯಲ್‌ ಇದೀಗ ಕಥೆಯ ಕಾರಣಕ್ಕೆ ಬಹಳ ಜನರ ಮೆಚ್ಚಿನ ಸೀರಿಯಲ್ ಆಗಿದೆ. ಇದೀಗ ಈ ಸೀರಿಯಲ್‌ನ ಲೀಡ್ ಪಾತ್ರ ನಕ್ಷತ್ರ ಮೇಕಪ್‌ನಲ್ಲಿ ಬದಲಾವಣೆ ಆಗಿದೆ. ಬಹಳ ಸೂಕ್ಷ್ಮ ಇರುವ ವೀಕ್ಷಕರು ಇದನ್ನು ಪತ್ತೆ ಹಚ್ಚಿದ್ದಾರೆ.

Nakashatra makeup tone changed in Lakshana serial
Author
First Published Feb 3, 2023, 12:41 PM IST

ಲಕ್ಷಣ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿರೋ ಸೀರಿಯಲ್. ಇದರಲ್ಲಿ ಭೂಪತಿ ಮತ್ತು ನಕ್ಷತ್ರ ಜೋಡಿ ಕತೆ ಬಹಳ ಇಂಟರೆಸ್ಟಿಂಗ್ ಆಗಿದೆ. ಆದರೆ ಮೂಲ ಕತೆ ಸ್ವಲ್ಪ ಬೇರೆ ಥರ ಇದೆ. ಇದರಲ್ಲಿ ನಾಯಕಿ ಮೈ ಬಣ್ಣ ಕಪ್ಪು. ತನ್ನ ಬಣ್ಣದ ಕಾರಣಕ್ಕೆ ಈಕೆ ಒಂದಿಲ್ಲೊಂದು ಸಮಸ್ಯೆಗೆ ತುತ್ತಾಗುತ್ತಲೇ ಇರುತ್ತಾಳೆ. ಇದಕ್ಕಿಂತ ಇಂಟರೆಸ್ಟಿಂಗ್ ಅಂದರೆ ಈಕೆ ಹುಟ್ಟಿರೋದು ಆಗರ್ಭ ಶ್ರೀಮಂತ ದಂಪತಿಗೆ. ಆದರೆ ವೈದ್ಯರು ಮಾಡಿದ ತಪ್ಪಿಂದ ಈಕೆ ಕೆಳ ಮಧ್ಯಮ ವರ್ಗದ ಮನೆ ಸೇರ್ತಾಳೆ. ಅಲ್ಲಿ ಬೆಳೆಯಬೇಕಿದ್ದ ಮಗು ಶ್ರೀಮಂತ ದಂಪತಿ ಮನೆ ಸೇರುತ್ತೆ. ಹೀಗೆ ಬಡವರ ಮನೆ ಸೇರಿದ ಶ್ರೀಮಂತ ದಂಪತಿ ಮಗಳ ಬಗ್ಗೆ ಮನೆಯಲ್ಲೇ ಅನುಮಾನ. ಬೆಳ್ಳನೆಯ ಮೈಬಣ್ಣದ ತನಗೆ ಕಪ್ಪು ಬಣ್ಣದ, ಯಾವ ಹೋಲಿಕೆಯೂ ಇಲ್ಲದ ಈಕೆ ಹೇಗೆ ಮಗಳು ಅನ್ನೋದೇ ಅನುಮಾನ. ಈ ಅನುಮಾನದಿಂದ ತಾನು ಅಪ್ಪ ಅಂತ ಕರೆಯೋ ವ್ಯಕ್ತಿ ಕೈಯಿಂದಲೇ ಈಕೆ ಅವಮಾನ ಎದುರಿಸಬೇಕಾಗುತ್ತೆ. ಮುಂದೆ ಕೆಲಸದ ಜಾಗದಲ್ಲಿ, ಸಮಾಜದಲ್ಲಿ ಎಲ್ಲ ಕಡೆ ಹೀಗಳಿಕೆ.

ಆದರೆ ಬಿಳಿ ಆದ ಮಾತ್ರ ಆ ವ್ಯಕ್ತಿ ಚಂದ ಅಂತಾಗಲಿ, ಆ ವ್ಯಕ್ತಿ ಗ್ರೇಟ್ ಅಂತಾಗಲಿ ಅಲ್ಲ, ಮೈ ಬಣ್ಣಕ್ಕೂ ಸೌಂದರ್ಯಕ್ಕೂ, ವ್ಯಕ್ತಿತ್ವಕ್ಕೂ ಯಾವ ಸಂಬಂಧವೂ ಇರೋದಿಲ್ಲ ಅನ್ನೋದನ್ನು ಈ ನಕ್ಷತ್ರಾ ಪಾತ್ರದ ಮೂಲಕ ಹೇಳುವ ಪ್ರಯತ್ನವನ್ನು ಈ ಸೀರಿಯಲ್ ಟೀಮ್ ಮಾಡ್ತಿದೆ. ಹಾಗೆ ನೋಡಿದ್ರೆ ಬೇರೆಲ್ಲ ಸೀರಿಯಲ್‌ಗಳಿಗಿಂತ ಈ ಸೀರಿಯಲ್‌ ಡಿಫರೆಂಟ್ ಅಂತನಿಸೋದೇ ಈ ಸೀರಿಯಲ್ ಹೀರೋಯಿನ್ ಕಾರಣಕ್ಕೆ. ಬೇರೆ ಸೀರಿಯಲ್‌ನಲ್ಲಿ ಹೀರೋಯಿನ್ ಬಣ್ಣ ಬೆಳ್ಳಗೇ ಇರೋದು ಕಂಪಲ್ಶನ್ ಅನ್ನೋ ಪ್ರವೃತ್ತಿ ಇದ್ದರೆ ಈ ಪಾತ್ರಕ್ಕೆ ಕಪ್ಪು ಮೈ ಬಣ್ಣದ ಹುಡುಗಿಯನ್ನೇ ಆಯ್ಕೆ ಮಾಡಲಾಗಿದೆ. ಆ ಮೂಲಕ ಕಪ್ಪು ಮೈ ಬಣ್ಣ ಹೊಂದಿದವರಲ್ಲಿ ಸ್ಫೂರ್ತಿ ತುಂಬೋ ಕೆಲಸವನ್ನೂ ಈ ಸೀರಿಯಲ್ ಮಾಡ್ತಿದೆ ಅನ್ನಬಹುದು.

Lakshana serial: ನಕ್ಷತ್ರನೇ ಆರ್‌ ಜೆ ಸಖಿ, ಶ್ವೇತಾಗೆ ಛೀಮಾರಿ ಹಾಕಿದ ಭೂಪತಿ

ಇದೀಗ ನಕ್ಷತ್ರಾ ಪಾತ್ರದ ಮೇಕಪ್(Makeup) ಬದಲಾಗಿರೋದನ್ನು ವೀಕ್ಷಕರು ಗಮನಿಸಿದ್ದಾರೆ. ಈ ಬಗ್ಗೆ ಕಮೆಂಟ್‌ ಅನ್ನೂ ಮಾಡಿದ್ದಾರೆ. ಈ ಹಿಂದೆ ಇದ್ದ ನಕ್ಷತ್ರಾ ಸ್ಕಿನ್‌ ಟೋನ್‌ಗೂ ಈಗಿರೋದಕ್ಕೂ ವ್ಯತ್ಯಾಸ ಇರೋದನ್ನು ಬೊಟ್ಟು ಮಾಡಿದ್ದಾರೆ. ಮೊದಲಿನ ಸ್ಕಿನ್‌ ಟೋನ್ ಕೊಂಚ ಡಲ್ ಆಗಿ ಕಾಣ್ತಿತ್ತು. ಆದರೆ ಈಗ ಚಾಕೊಲೇಟ್ ಕಲರ್ ಗೆ ಬದಲಾಗಿದೆ. ಹೊಳಪು ಹೆಚ್ಚಾಗಿದೆ. ನಕ್ಷತ್ರಾಳ ಈ ಲುಕ್‌(Look) ವೀಕ್ಷಕರಿಗೂ ಇಷ್ಟ ಆಗಿದೆ. ಈ ಮೇಕಪ್‌ ಅನ್ನೇ ಕಂಟಿನ್ಯೂ ಮಾಡಿ, ಇದೇ ಸ್ಟೈಲ್ ಹೆಚ್ಚು ಸೂಟ್ ಆಗ್ತಿದೆ ಅನ್ನೋ ಮಾತನ್ನು ವೀಕ್ಷಕರು ಹೇಳ್ತಿದ್ದಾರೆ. ಇದೀಗ ಈ ಸೀರಿಯಲ್‌ನ ಕತೆಯಲ್ಲೂ ಬದಲಾವಣೆ ಆಗ್ತಿದೆ. ಈ ಹಿಂದೆ ಭೂಪತಿ ನಕ್ಷತ್ರ ಗಂಡ ಹೆಂಡತಿ ಆಗಿದ್ದರೂ ಇವರಿಬ್ಬರ ನಡುವೆ ಗಂಡ ಹೆಂಡತಿ ಸಂಬಂಧ ಇರಲಿಲ್ಲ. ಹಾಗಂತ ಇಬ್ಬರ ನಡುವೆ ದ್ವೇಷವೂ ಇರಲಿಲ್ಲ. ಆದರೆ ಸುತ್ತಲಿನ ವ್ಯಕ್ತಿಗಳು ಈ ಇಬ್ಬರೂ ಹತ್ತಿರವಾಗೋದನ್ನು ಪದೇ ಪದೇ ತಡೆಯುತ್ತಿದ್ದರು.

ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಶಕುಂತಳಾ ದೇವಿ ಅನಿವಾರ್ಯವಾಗಿ ನಕ್ಷತ್ರಳನ್ನು ತನ್ನ ಮನೆಯ ಸೊಸೆಯಾಗಿ ಸ್ವೀಕರಿಸಿದ್ದಾಳೆ. ಈ ಸ್ಥಾನಕ್ಕೆ ಹಪಹಪಿಸುತ್ತಿದ್ದ ಶ್ವೇತಾ ರೇಸ್‌ನಿಂದ ಹಿಂದೆ ಸರಿಯೋ ಹಾಗಾಗಿದೆ. ಇನ್ನೊಂದೆಡೆ ತಾನು ಬಹಳ ಇಷ್ಟ ಪಡುತ್ತಿದ್ದ ಆರ್‌ ಜೆ ಸಖಿ ನಕ್ಷತ್ರನೇ ಅಂತ ಗೊತ್ತಾದ್ಮೇಲೆ ಭೂಪತಿ ನಕ್ಷತ್ರಳನ್ನು ನೋಡೋ ರೀತಿಯಲ್ಲಿ ಬದಲಾವಣೆ ಕಾಣ್ತಿದೆ. ಇಂದಿನ ಪ್ರೋಮೋ(Promo)ದಲ್ಲಿ ಈ ಇಬ್ಬರ ನಡುವಿನ ರೊಮ್ಯಾಂಟಿಕ್ ಮೂವ್ ಅನ್ನು ವೀಕ್ಷಕರು ಬಹಳ ಎನ್‌ಜಾಯ್ ಮಾಡಿ ಕಮೆಂಟ್(Comment) ಮಾಡಿದ್ದಾರೆ.

 

ಈ ಸೀರಿಯಲ್ ನಕ್ಷತ್ರ ಪಾತ್ರವನ್ನ ವಿಜಯಲಕ್ಷ್ಮೀ ನಿರ್ವಹಿಸಿದ್ರೆ, ಭೂಪತಿಯಾಗಿ ಜಗನ್ ಇದ್ದಾರೆ. ಈ ಸೀರಿಯಲ್ ನಿರ್ಮಾಣವೂ ಅವರದ್ದೇ. ಪ್ರಿಯಾ ಷಟಮರ್ಷಣ್, ಸುಧಾ ಬೆಳವಾಡಿ, ಸುಕೃತಾ ಮೊದಲಾದವರು ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ.

Kannadathi : ಬದಲಾದ ಸಾನಿಯಾ ಕಂಡು ದಂಗಾದ ಹರ್ಷ, ವರೂ ಕೊಟ್ಳು ಬಿಗ್ ಶಾಕ್!

Follow Us:
Download App:
  • android
  • ios