Kannadathi: ಡಾ.ದೇವ್ ಪಾತ್ರಧಾರಿ ವಿಜಯ ಕೃಷ್ಣ ಸೀರಿಯಲ್‌ನಿಂದ ಔಟ್! ಹೇಮಂತ್ ಎಂಟ್ರಿ..
ಕನ್ನಡತಿ ಸೀರಿಯಲ್‌ನಲ್ಲಿ ಒಂದೆಡೆ ಹರ್ಷ ಭುವಿ ಮದುವೆಯ ಸಂಭ್ರಮ. ಇನ್ನೊಂದೆಡೆ ಈ ಮದುವೆ ಮುರಿದು ಹರ್ಷನ ಕೊರಳಿಗೆ ಹೂಮಾಲೆ ಹಾಕಲು ನಿಂತಿರುವ ವರೂಧಿನಿ. ಆದರೆ ಈ ನಡುವೆ ಸದ್ದಿಲ್ಲದೇ ಡಾ ದೇವ್ ಪಾತ್ರಧಾರಿ ಬದಲಾಗಿದ್ದಾರೆ. ಈ ಹಿಂದಿ್ದ ವಿಷ್ಣ ಕೃಷ್ಣ ಬದಲಿಗೆ ಹೇಮಂತ್ ಎಂಟ್ರಿ ಕೊಟ್ಟಿದ್ದಾರೆ.
ಕಲರ್ಸ್ ಕನ್ನಡ(Colors Kannada)ದ ಜನಪ್ರಿಯ ಧಾರಾವಾಹಿ 'ಕನ್ನಡತಿ'(Kannadathi) ಯಲ್ಲಿ ನಾಯಕ ನಾಯಕಿ ಮದುವೆ ಸಂಭ್ರಮ. ಇನ್ನೊಂದು ಕಡೆ ಇಲ್ಲಿಯವರೆಗೆ ನಾಪತ್ತೆಯಾಗಿದ್ದ ಡಾ ದೇವ್ ಈಗ ಪ್ರತ್ಯಕ್ಷನಾಗಿದ್ದಾನೆ. ಆದರೆ ಹಳೇ ದೇವ್ ಬದಲಿಗೆ ಹೊಸ ದೇವ್. ಹೌದು, ಕನ್ನಡತಿ ಸೀರಿಯಲ್‌ನಲ್ಲಿ ನಾಯಕ ಹರ್ಷನ ಅಣ್ಣ ಡಾ ದೇವ್ ಪಾತ್ರಧಾರಿ ವಿಜಯ ಕೃಷ್ಣ(Vijaykrishna) ಸೀರಿಯಲ್‌ನಿಂದ ಹೊರ ನಡೆದಿದ್ದಾರೆ. ಸಾಮಾನ್ಯವಾಗಿ ಸೀರಿಯಲ್‌ನಿಂದ ಕಲಾವಿದರು ಹೊರನಡೆಯೋದು ಇತ್ತೀಚೆಗೆ ಕಾಮನ್(Common). ಕೆಲವು ವರ್ಷಗಳ ಹಿಂದೆ ಪ್ರಸಾರವಾಗುತ್ತಿದ್ದ 'ಲಕ್ಷ್ಮೀ ಬಾರಮ್ಮ'(Lakshmi Baramma) ಸೀರಿಯಲ್‌ನಲ್ಲಂತೂ ಹೀರೋ(Hero) ಚಂದನ್ ಪಾತ್ರಕ್ಕೆ ಮೂರ್ನಾಲ್ಕು ಮಂದಿ ಬದಲಾಗಿದ್ದರು. ನಟ ನಟಿಯರು ಬೇರೆ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿ ಆಗೋದು, ಕಾಂಟ್ರಾಕ್ಟ್(Contract) ಮುಗಿಯೋದು, ಸೀರಿಯಲ್ ಟೀಮ್ ಜೊತೆಗೆ ಮನಸ್ತಾಪ ಆಗೋದು.. ಹೀಗೆ ಕಾರಣಗಳು ಏನೇನೋ ಇರುತ್ತವೆ. ಈ ಹಿಂದೆ ಕನ್ನಡತಿ ಸೀರಿಯಲ್‌ನಲ್ಲೇ ಈ ಥರ ಬದಲಾವಣೆಗಳಾಗಿವೆ. ಈ ಸೀರಿಯಲ್‌ನ ಮುಖ್ಯ ಪಾತ್ರಧಾರಿ, ವಿಲನ್ ಪಾತ್ರದಲ್ಲಿ ವೀಕ್ಷಕರನ್ನು ರೊಚ್ಚಿಗೆಬ್ಬಿಸುತ್ತಿದ್ದ ಸಾನಿಯಾ ಬದಲಾಗಿದ್ದರು. ಅದ್ಭುತವಾಗಿ ಈ ಪಾತ್ರ ನಟಿಸುತ್ತಿದ್ದ ರಮೋಲ ಇದ್ದಕ್ಕಿದಂತೆ ಸೀರಿಯಲ್ ಟೀಮ್‌ಗೆ ಗುಡ್ ಬೈ(Good bye) ಹೇಳಿದ್ದರು. ಇದೀಗ ಇನ್ನೊಬ್ಬ ಮುಖ್ಯ ಪಾತ್ರಧಾರಿ ಡಾ ದೇವ್ ಸರದಿ. ಆ ಪಾತ್ರದಲ್ಲಿ ಹೊಸ ನಟ ಹೇಮಂತ್ ಬಂದಿದ್ದಾರೆ. ಈ ಬದಲಾವಣೆಗೆ ಕಾರಣ ಏನು?
Kannadathi: ಹರ್ಷನ ಅಣ್ಣ ದೇವ್ ಎಲ್ಲಿ ಹೋದ? ಹರ್ಷ ಭುವಿ ಮದ್ವೆಗೂ ಬರೋಲ್ವಾ?
ಹಾಗೆ ನೋಡಿದರೆ ಹತ್ತಿರತ್ತಿರ ಒಂದು ವರ್ಷದಿಂದ ಡಾ ದೇವ್ ಪಾತ್ರವೇ ಸೀರಿಯಲ್‌ನಲ್ಲಿ ಬರುತ್ತಿರಲಿಲ್ಲ. ಅವರ ಪತ್ನಿ ಡಾ ತಾಪ್ಸಿ ಮಾತ್ರ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಇದೀಗ ಹರ್ಷ ಭುವಿ ಮದುವೆ ಸಂಭ್ರಮ. ಸೀರಿಯಲ್ ಟೀಮ್‌ನವರು ಡಾ ದೇವ್ ಪಾತ್ರವನ್ನು ಮರೆ ಮಾಚಿದರೂ ಜನ ಆ ಪಾತ್ರ ಮರೆತಿರಲಿಲ್ಲ. ಹರ್ಷ ಭುವಿ ಮದ್ವೆಗೂ ಯಾಕೆ ಡಾ ದೇವ್ ಬರಲಿಲ್ಲ ಅಂತ ಪ್ರಶ್ನಿಸುತ್ತಲೇ ಇದ್ದರು. ಸೀರಿಯಲ್ ಟೀಮ್ ಕೊನೆಗೂ ದೇವ್ ಪಾತ್ರಕ್ಕೆ ಜೀವ ಕೊಟ್ಟಿದೆ. ಆದರೆ ಹಳೆ ದೇವ್ ಜಾಗದಲ್ಲಿ ಹೊಸ ದೇವ್ ಬಂದಿದ್ದಾರೆ. ಇನ್ನೊಂದೆಡೆ ಹರ್ಷ ಭುವಿಯ ಮದುವೆ ಕಾರ್ಯಕ್ರಮಗಳು ಶಾಸ್ತ್ರಬದ್ಧವಾಗಿ ನಡೆಯುತ್ತಿದೆ. ಆ ಶಾಸ್ತ್ರಗಳಿಗೆ ಏನು ಅರ್ಥ ಅಂತ ಹೇಳುವ ಮೂಲಕ ಮದುವೆಯನ್ನೂ ಅರ್ಥಪೂರ್ಣವಾಗಿ ನಡೆಸಲಾಗುತ್ತಿದೆ. ಸೀರಿಯಲ್ ತಂಡದ ಈ ಪ್ರಯತ್ನಕ್ಕೆ ಎಲ್ಲೆಡೆ ಮೆಚ್ಚುಗೆ ಹರಿದುಬರುತ್ತಿದೆ. ಈ ನಡುವೆ ಡ್ರಾಮಾ(Drama)ವೂ ಜೋರಾಗಿ ನಡೆಯುತ್ತಿದೆ. ವರೂಧಿನಿ ಭುವಿಗೆ ಕಷ್ಟ ಕಾಲದಲ್ಲಿ ಹಣದ ಸಹಾಯ ಮಾಡಿದ್ದಾಳೆ. ಬೇರೆ ವಿಧಿಯಿಲ್ಲದೇ ಈ ವಿಚಾರವನ್ನು ಬಿಂದು ತನ್ನ ಅಕ್ಕ ಭುವಿಗೆ ಹೇಳಿದ್ದಾಳೆ. ಅಲ್ಲೀವರೆಗೆ ಈ ಹಣ ಯಾರು ಕೊಟ್ಟರು ಅಂತ ಅವಳಿಗೆ ತಿಳಿದಿರಲಿಲ್ಲ. ಹರ್ಷ, ಅಮ್ಮಮ್ಮ ಅವರನ್ನೆಲ್ಲ ಸ್ವಲ್ಪ ಹೆಚ್ಚೇ ವಿಚಾರಿಸಿ ಅವರ ಮನಸ್ಸಿಗೂ ಇರಿಸುಮುರಿಸಾಗುವಂತೆ ಮಾಡಿದ್ದಾಳೆ. ಕೊನೆಗೂ ತನಗೆ ಸಹಾಯ ಮಾಡಿದ್ದು ವರೂ ಅಂತ ಗೊತ್ತಾದಾಗ ಮನಸ್ಸು ಹಗುರವಾಗಿದೆ. ಆದರೆ ಇದನ್ನೇ ಅಡ್ವಾಂಟೇಜ್(Advantage) ಆಗಿ ತೆಗೆದುಕೊಳ್ಳೋ ರೀತಿ ವರೂಧಿಸಿ ನಡೆ ಇದೆ.
ಪ್ಯಾಂಟ್ ಜಿಪ್ ಹಾಕದೇ ಫೋಟೋಗೆ Nia Sharma ಪೋಸ್; ಟ್ರೋಲ್ ಆದ ನಟಿ
ಇನ್ನೊಂದೆಡೆ ಭುವಿಯ ಅತಿ ಒಳ್ಳೆತನದಿಂದ ಬೇಸತ್ತು ಸಿಟ್ಟು, ನೋವಲ್ಲಿ ಕೂತಿರುವ ಹರ್ಷನಿಗೆ ಅಣ್ಣ ದೇವ್, ತಮ್ಮ ಆದಿ ಚಿಂತೆಯಿಂದ ಹೊರಬರುವಂತೆ ಮಾಡಿದ್ದಾರೆ. ಹರ್ಷ ಮುಕ್ತವಾಗಿ ನಗುತ್ತಿರುವಾಗ ಇನ್ನೊಂದೆಡೆ ಡಾ ತಾಪ್ಸಿ ಅತ್ತೆಗೆ ತುಂಬ ಹುಷಾರಿಲ್ಲದಿರುವ ವಿಚಾರ ಹರ್ಷನಿಗೆ ತಿಳಿಸಲು ಧಾವಿಸಿ ಬರುತ್ತಾಳೆ. ಅವಳನ್ನು ತಡೆಯುವ ಅತ್ತೆ ರತ್ನಮಾಲಾ ಈ ವಿಚಾರ ಹರ್ಷನಿಗೆ ತಿಳಿಯಬಾರದು ಅಂತ ತಾಕೀತು ಮಾಡುತ್ತಾಳೆ.
Hitler Kalyanaದ ಎಡವಟ್ಟು ಲೀಲಾ ಈಗ ಹಾಸ್ಯ ನಟ ಚಿಕ್ಕಣ್ಣನ ಪ್ರೇಯಸಿ?
ಈ ವಿಚಾರವನ್ನು ತಾಪ್ಸಿ ತನ್ನ ಗಂಡ ದೇವ್‌ಗೆ ಹೇಳುತ್ತಾಳೆ. ಈ ವಿಚಾರ ಕೇಳಿ ದೇವ್ ಕಂಗಾಲಾಗಿದ್ದಾನೆ. ನಾಳೆ ಹರ್ಷ ಭುವಿ ಮದುವೆ, ಆದರೆ ಅಮ್ಮಮ್ಮ ರತ್ನಮಾಲಾಗೆ ಯಾವ ಪರಿ ಹುಷಾರಿಲ್ಲ ಅಂದರೆ ಅವರು ನಾಳೆ ಏಳೋದೇ ಡೌಟು.
ಸೀರಿಯಲ್ ಈ ಥರದಲ್ಲಿ ಸಾಗುತ್ತಿದೆ. ಹೊಸದಾಗಿ ದೇವ್ ಪಾತ್ರ ಮಾಡುತ್ತಿರುವ ಹೇಮಂತ್ ಪಾತ್ರವನ್ನೇನೋ ಚೆನ್ನಾಗಿ ಮಾಡುತ್ತಿದ್ದಾರೆ. ಆದರೆ ವಿಜಯ ಕೃಷ್ಣ ಅವರಂಥಾ ನಟನೆ ಅವರಿಂದ ನಿರೀಕ್ಷಿಸಲಾಗದು. ಬರು ಬರುತ್ತಾ ಈ ಪಾತ್ರವೂ ಅಡ್ಜೆಸ್ಟ್ ಆಗಬಹುದು. ಅಷ್ಟಕ್ಕೂ ವಿಜಯ ಕೃಷ್ಣ ಈ ಸೀರಿಯಲ್ ಬಿಡಲು ಕಾರಣ ಅವರು ಬ್ಯುಸಿನೆಸ್(Business) ನಲ್ಲಿ ಬ್ಯುಸಿ(Busy) ಆಗಿರೋದು. ಮುಂಬೈ(Mumbai)ಯಲ್ಲೆ ನೆಲೆಸಬೇಕಾದ ಒತ್ತಡದಲ್ಲಿರೋದು. ಈ ವಿಚಾರ ತಿಳಿಸಿಯೇ ಅವರು ಸೀರಿಯಲ್‌ನಿಂದ ಹೊರ ನಡೆದಿದ್ದಾರೆ.