ಪಿರಿಯಡ್ಸ್‌ ಬಗ್ಗೆ ಎಷ್ಟು ಗೊತ್ತಿದೆ? ಉತ್ತರ ಕೊಡದಿದ್ದರೆ ಪತ್ನಿ ಕುಡಿಸುತ್ತಾರೆ ಹಾಗಲಕಾಯಿ ಜ್ಯೂಸ್. ವೈರಲ್ ಆಯ್ತು ಇಶಿತಾ-ಮುರುಗಾ ವಿಡಿಯೋ....

ಕಿರುತೆರೆ ಸೆಲೆಬ್ರಿಟಿ ಕಪಲ್ ಇಶಿತಾ (Ishita) ಮತ್ತು ಮುರುಗಾ (Muruga) ತಮ್ಮ ಯುಟ್ಯೂಬ್‌ ಚಾನೆಲ್‌ನಲ್ಲಿ (Youtube Channel) ತುಂಬಾನೇ ವಿಭಿನ್ನವಾಗಿರುವ ವಿಚಾರದ ಬಗ್ಗೆ ಚರ್ಚಿಸಿದ್ದಾರೆ ಹಾಗೂ ಪ್ರಶ್ನೆ ಕೇಳಿದ್ದಾರೆ. ಸಾಮಾನ್ಯವಾಗಿ ಪಬ್ಲಿಕ್‌ನಲ್ಲಿ ಪೀರಿಯಡ್ಸ್‌ (Periods) ಬಗ್ಗೆ ಮಾತನಾಡುವುದಕ್ಕೆ ಈಗಲೂ ಅನೇಕರು ಮುಜುಗರ ಪಡುತ್ತಾರೆ. ಆದರೆ ಇವೆಲ್ಲಾ ಪಕ್ಕಕ್ಕಿಟ್ಟು ನಿಮಗೆ ಎಷ್ಟು ಗೊತ್ತಿದೆ, ಉತ್ತರ ಕೊಡಿ ಎಂದು ಇಶಿತಾ ಪತಿಗೆ ಪ್ರಶ್ನೆ ಮಾಡಿದ್ದಾರೆ. 

ಇಶಿತಾ: ಪಿರಿಯಡ್ಸ್‌ ಬಗ್ಗೆ ನಿಮಗೆ ಎಷ್ಟು ಗೊತ್ತು?
ಪತಿ: ತಿಂಗಳಿಗೊಮ್ಮೆ ಹುಡುಗಿಯರಿಗೆ 5 ದಿನ ಒಂದು ಪ್ರೊಸೆಸ್‌ ಇರ ಇರುತ್ತದೆ. ಕೆಲವರಿಗೆ ಅದು ಪ್ರಾಬ್ಲಂ. 
ಇಶಿತಾ: ಪಿರಿಯಡ್ಸ್‌ ಅಂತ ಡೈರೆಕ್ಟ್‌ ಆಗಿ ಹೇಳುವುದಿಲ್ಲ, ಅದಕ್ಕೆ ಕಲವೊಂದು ವರ್ಡ್‌ ಬಳಸುತ್ತಾರೆ ಏನದು?
ಪತಿ: ವಿಮೆನ್‌ ಪ್ರಾಬ್ಲಂ ಅಂತಾರೆ, 5 ದಿನ ನಾವು ಎಲ್ಲೂ ಹೋಗಂಗಿಲ್ಲ ಅಂತಾರೆ. ಕೆಲವರು ಪಿರಿಯಡ್ಸ್‌ ಅಂತಾನೇ ಬಳಸುತ್ತಾರೆ. 
ಇಶಿತಾ: ನೀವು ಯಾವತ್ತಾದ್ರೂ ಸ್ಯಾನಿಟರಿ ಪ್ಯಾಡ್ (Sanitary pad) ತಂದು ಕೊಟ್ಟಿದ್ದೀರಾ?

ಇಶಿತಾಗೆ ಎಷ್ಟು ಹುಡುಗರು ಮೆಸೇಜ್ ಮಾಡಿದ್ದಾರೆಂದು ಮೊಬೈಲ್ ಚೆಕ್ ಮಾಡಿದ ಪತಿ ಮುರುಗಾ

ಈ ಪ್ರಶ್ನೆಗೆ ಸರಿಯಾದ ಉತ್ತರ ಇಬ್ಬರಿಗೂ ಸಿಕ್ಕಿಲ್ಲ, ಪತಿ ಮುರುಗಾ ತಂದು ಕೊಟ್ಟಿದ್ದೀನಿ, ಅಂತ ಹೇಳಿದ್ದಾರೆ. ಇಶಿತಾ ಇಲ್ಲ ಎಂದು ವಾದ ಮಾಡಿದ್ದಾರೆ. ಯಾವಾಗ್ಲೋ ಒಂದು ಸಲ ತಂದಿದ್ದೀನಿ, ನೀವು ಮರೆತಿದ್ದೀರಾ ಎಂದಿದ್ದಾರೆ ಮುರುಗಾ. 

ಇಶಿತಾ: ಪಿರಿಯಡ್ಸ್‌ ಬಗ್ಗೆ ನೀವು ಕೇಳಿರುವ ವಿಚಿತ್ರ ಸಂಗತಿ ಅಥವಾ ಗೊತ್ತಾಗುವುದಕ್ಕೂ ಮುನ್ನ ನಿಮ್ಮ ತಲೆಯಲ್ಲಿದ್ದ ಯೋಚನೆ ಏನು?
ಪತಿ: ಇದರ ಬಗ್ಗೆ ನನಗೆ ಏನೂ ಗೊತ್ತಿರಲಿಲ್ಲ ಆದರೆ ಊರಿಗೆ ಹೋದಾಗ ಅಜ್ನೆ ಮನೆಯಲ್ಲಿ ಓಡಾಡಬೇಡಿ, ಸೈಡಿನಲ್ಲಿ ಇರಬೇಕು ಅಂತಿದ್ರು ನಾನು ದೊಡ್ಡವನಾದ ಮೇಲೆ ಎಲ್ಲಾ ಗೊತ್ತಾಗಿದ್ದು.
ಇಶಿತಾ: PMSing ಬಗ್ಗೆ ಕೇಳಿದ್ದೀರಾ?
ಪತಿ: ಹಾಗಂದ್ರೆ ಏನು? ಎಂದು ಕೇಳಿ ಹಾಗಲಕಾಯಿ ಜ್ಯೂಸ್‌ ಕುಡಿದಿದ್ದಾರೆ. 
ಇಶಿತಾ: ಗೂಗಲ್‌ನಲ್ಲಿ (Google Periods) ಪೀರಿಯಡ್ಸ್‌ ಬಗ್ಗೆ ಯಾವತ್ತಾದರೂ ಹುಡುಕಿದ್ದೀರಾ?
ಪತಿ: ದೇವರ ಆಣೆ ನಾನು ಸರ್ಚ್‌ ಮಾಡಿಲ್ಲ. ಯಾರ ಜೊತೆಯೂ ಇದರ ಬಗ್ಗೆ ಮಾತನಾಡಿಲ್ಲ. ನಿನ್ನ ಜೊತೆಯೇ ಇದೇ ಮೊದಲು ನಾನು ಮಾತನಾಡುತ್ತಿರುವುದು.

RajaRani Jodi: ನಟಿ ಇಶಿತಾ ಬ್ಯಾಗಲ್ಲೇನಿದೆ ಎಂದು ರಿವೀಲ್ ಮಾಡಿದ ಪತಿ!

'ನೀವು ಅವಾಗ ಅವಾಗ ಟೆನ್ಶನ್ (Tension) ಆಗ್ತೀರಾ ಅಲ್ವಾ ಇದು ಇದಕ್ಕೆನೇ ಅಂತಾ ಈಗ ಗೊತ್ತಾಗಿದ್ದು. ಇನ್ಮೇಲೆ ನಾನು ಕೂಲ್ ಆಗಿ ಇದೆಲ್ಲಾ ಹ್ಯಾಂಡಲ್ ಮಾಡ್ಬೇಕು ಸರಿಯಾಗಿ ಮ್ಯಾನೇಜ್‌ ಮಾಡಬೇಕು ಅದೆಲ್ಲಾ ಈಗ ಟ್ರೈ ಮಾಡ್ತೀನಿ. ಇದರ ಬಗ್ಗೆ ಈಗ ಹೆಚ್ಚಿಗೆ ತಿಳಿದುಕೊಂಡೆ. ನಾನು ಅಂತಲ್ಲ ಎಲ್ಲರೂ ವೈಫ್‌ (Wife), ಅಮ್ಮ ಅಥವಾ ತಂಗಿಗೆ ಸಪೋರ್ಟ್ ಮಾಡಬೇಕು. ಪೀರಿಯಡ್ಸ್‌ ಟೈಮಲ್ಲಿ ಸಹಾಯ ಮಾಡಿದರೆ ಅವರಿಗೂ ಖುಷಿ ಆಗುತ್ತದೆ ಈ ಟೈಮಲ್ಲಿ ನಮಗೆ ಕೇರ್ ಮಾಡುವವರು ಇದ್ದಾರೆ ಅಂತ' ಎಂದು ಮುರುಗಾ ಮಾತನಾಡಿದ್ದಾರೆ.

ಮಗಳಿಗೆ ಮಾತ್ರವಲ್ಲ, ಮಗನಿಗೂ ಗೊತ್ತಿರಲಿ ಮುಟ್ಟಿನ ಈ ಗುಟ್ಟು!

'ನಿಮಗೆ ಇಷ್ಟು ಗೊತ್ತಿದೆ ಅನ್ನೋದೆ ನನಗೆ ಗೊತ್ತಿರಲಿಲ್ಲ. ಈ ವಿಡಿಯೋ ಮೂಲಕ ಇವರು ಏನಂದುಕೊಂಡಿದ್ದಾರೆ ಅಂತ ಈಗ ಗೊತ್ತಾಗಿದೆ. ಸದಾ ತಮಾಷೆ ವಿಡಿಯೋ ಬೇಡ ಒಳ್ಳೆಯ ಸಂಗತಿಗಳನ್ನು ತಿಳಿದುಕೊಳ್ಳಲಿ, ಎಂದು ಈ ವಿಡಿಯೋ ಮಾಡಿದ್ದು' ಎಂದು ಇಶಿತಾ ಹೇಳಿದ್ದಾರೆ.