ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ ಗಿಣಿರಾಮ ಅಂತ್ಯವಾಗಲಿದೆ ಎಂಬೊಂದು ಸುದ್ದಿ. ನಟನಿಗೆ ಬರುತ್ತಿವೆ ನಾನ್ ಸ್ಟಾಪ್ ಕರೆಗಳು ಮತ್ತು ಮೆಸೇಜಸ್. ಇದಕ್ಕೆ ಉತ್ತರಿಸಿದ್ದಾರೆ ಸೀರಿಯಲ್ ಹಿರೋ ರಿತ್ವಿಕ್.
ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಗಿಣಿರಾಮ' (Ginirama) ಅಂತ್ಯವಾಗಲಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ (Social Media) ಕೆಲವು ದಿನಗಳಿಂದ ಸುದ್ದಿಯೊಂದು ಹರಿದಾಡಿದ್ದು, ವೈರಲ್ ಆಗುತ್ತಿದೆ. ಯಾವ ಕಾರಣಕ್ಕೆ ಈ ರೀತಿಯ ಸುದ್ದಿ ಹರಿದಾಡುತ್ತಿದೆ ಎಂದು ಸ್ವತಃ ಧಾರಾವಾಹಿ ತಂಡಕ್ಕೇ ಗೊತ್ತಿಲ್ಲವಂತೆ. ಆದರೆ ಅಭಿಮಾನಿಗಳು ಮತ್ತು ಆಪ್ತರಿಂದ ನಾನ್ ಸ್ಟಾಪ್ ಕರೆಗಳು ಬರುತ್ತಿರುವ ಕಾರಣ ನಟ ರಿತ್ವಿಕ್ ಅವರೇ ಈ ಸುದ್ದಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ರಿತ್ವಿಕ್ ಮಾತು:
'ಗಿಣಿರಾಮ ಧಾರಾವಾಹಿ ಅಂತ್ಯವಾಗುತ್ತಿಲ್ಲ. ಮುಂಬರುವ ದಿನಗಳಲ್ಲಿ ವೀಕ್ಷಕರಿಗೆ ಹೆಚ್ಚಿನ ಮನೋರಂಜನೆ (Entertainment) ನೀಡಲಿದೆ. ಧಾರಾವಾಹಿ ಅಂತ್ಯವಾಗುತ್ತದೆ ಎಂಬ ಗಾಳಿ ಸುದ್ದಿ ಹರಿದಾಡಿದ್ದು ನನಗೆ ಗೊತ್ತಿಲ್ಲ. ಇದರ ಬಗ್ಗೆ ಮಾಹಿತಿ ಪಡೆದುಕೊಂಡು, ಸಾಕಷ್ಟು ಕಾಲ್ ಮತ್ತು ಮೆಸೇಜ್ ಬರುತ್ತಿವೆ. ನಾನು ಒಂದು ವಿಚಾರ ಹೇಳುವುದಕ್ಕೆ ಇಷ್ಟ ಪಡುವೆ, ಯಾವ ಕಾರಣಕ್ಕೂ ಧಾರಾವಾಹಿ ಅಂತ್ಯವಾಗುತ್ತಿಲ್ಲ,' ಎಂದು ರುತ್ವಿಕ್ (Ritvvik Mathad) ಇ-ಟೈಮ್ಸ್ ಜೊತೆ ಮಾತನಾಡಿದ್ದಾರೆ.
ಸೈಲೆಂಟ್ ಹುಡುಗ ಗಿಣಿರಾಮದ ರಿತ್ವಿಕ್‌ಗೆ ಇದೆಂಥಾ ಹವ್ಯಾಸ!
'ನಮ್ಮ ಗಿಣಿರಾಮ ತಂಡ ಈಗಾಗಲೆ ಮುಂಬರುವ ದಿನಗಳ ಎಪಿಸೋಡ್ ಚಿತ್ರೀಕರಣ ಮಾಡುತ್ತಿದ್ದೀವಿ. ಕೋವಿಡ್ ಮುಂಜಾಗೃತ ಕ್ರಮಗಳನ್ನು ಗಮನದಲ್ಲಿಟ್ಟುಕೊಂಡು, ಚಿತ್ರೀಕರಣ ಮಾಡಲಾಗುತ್ತಿದೆ. Exciting ಎಪಿಸೋಡ್‌ಗಳು ಬರಲಿವೆ, ಅದ್ಭುತ ಟ್ರಿಕ್ಸ್ ಆ್ಯಂಡ್ ಟರ್ನ್‌ಗಳ ಜೊತೆ ಗಿಣಿರಾಮ ನಿಮ್ಮ ಮುಂದೆ ಬರಲಿದ್ದಾನೆ. ಅದರ ಬಗ್ಗೆ ಅನುಮಾನವೇ ಬೇಡ,' ಎಂದಿದ್ದಾರೆ ರಿತ್ವಿಕ್.
![]()
ಧಾರಾವಾಹಿಯನ್ನೇ ಸಿನಿಮಾ ರೀತಿ ತೋರಿಸಬೇಕು ಎಂದು ಗಿಣಿರಾಮ ತಂಡ ಕೆಲವು ದಿನಗಳ ಹಿಂದೆ ರಿಷಿಕೇಶದಲ್ಲಿ (Rishikesh) ಚಿತ್ರೀಕರಣ ಮಾಡಿತ್ತು. 'ಬೆಳಗ್ಗೆ 4 ಗಂಟೆಯಿಂದ ರಾತ್ರಿ 8 ಗಂಟೆವರೆಗೂ ಗಿಣಿರಾಮ ಶೂಟಿಂಗ್ ನಡೆದಿತ್ತು. ಬೆಳಗಿನ ಜಾವವೇ ಧಾರಾವಾಹಿ ಶೂಟಿಂಗ್ ನಡೆಯುವ ಸ್ಥಳಕ್ಕೆ ಹೋಗಬೇಕಾಗಿತ್ತು. ಆಗ 10 ಡಿಗ್ರಿ ತಾಪಮಾನವಿತ್ತು. ಆ ಚಳಿಯಲ್ಲಿ ಡೈಲಾಗ್ ಹೇಳಲಾಗದೇ ಧಾರಾವಾಹಿಯ ಕಲಾವಿದರು ಕಷ್ಟ ಪಟ್ಟಿದ್ದಾರೆ. ಸಾಕಷ್ಟು ತುಯಾರಿ ಮಾಡಿಕೊಂಡು ಗಿಣಿರಾಮ ಶೂಟಿಂಗ್ ಮಾಡಿರುವುದು. ಯಾವ ಲೋಕೇಶ್‌ನಲ್ಲಿ ಏನ್ ಶೂಟ್ ಮಾಡಬೇಕು ಎಂಬ ಸ್ಪಷ್ಟತೆಯಿಂದ ಸೀರಿಯಲ್ ತಂಡ ಶೂಟಿಂಗ್ ಮಾಡಿದೆ. ಕೆಲವು ಕನ್ನಡಿಗರು ಗಿಣಿರಾಮ ಧಾರಾವಾಹಿ ತಂಡವನ್ನು ಮಾತನಾಡಿಸಿದ್ದರು,' ಎಂದು ರಿತ್ವಿಕ್ ಖಾಸಗಿ ಸಂದರ್ಶನದಲ್ಲಿ ಹೇಳಿದ್ದರು.
ನೀರೊಳಗೆ ಶೂಟಿಂಗ್ ಮಾಡಿದ ಕಷ್ಟ ಸುಖ ಹಂಚಿ ಕೊಂಡ 'ಗಿಣಿರಾಮ' ನಟಿ ನಯನಾ
ಅಂಡರ್‌ವಾಟರ್ ಚಿತ್ರೀಕರಣ:
ಕೆಲವು ದಿನಗಳ ಹಿಂದೆ ಇಡಿ ತಂಡ ಧಾರಾವಾಹಿಯ ಪ್ರಮುಖ ಸನ್ನಿವೇಶವೊಂದನ್ನು ಚಿತ್ರೀಕರಣ ಮಾಡಿತ್ತು. ಇದು ಅಂಡರ್‌ವಾಟರ್ ಚಿತ್ರೀಕರಣ (Underwater shooting) ಆಗಿದ್ದು, ಹೇಗಿತ್ತು ಎಂದು ನಾಯಕಿ ನಯನಾ (Nayana) ಹಂಚಿಕೊಂಡಿದ್ದರು.
'ಅಂಡರ್‌ವಾಟರ್ ಚಿತ್ರೀಕರಣ ಮಾಡುತ್ತೀವಿ ಎಂಬ ವಿಚಾರ ತಿಳಿಯುತ್ತಿದ್ದಂತೆ, ನಾನು ತುಂಬಾ ಖುಷಿಪಟ್ಟೆ. ನಾನು ಒಳ್ಳೆಯ ಸ್ವಿಮ್ಮರ್ ಅಲ್ಲ. ಹೀಗಾಗಿ ಸ್ವಲ್ಪ ಗಾಬರಿಯೂ ಆಯಿತು. ಆದರೆ ಸ್ವಿಮ್ಮಿಂಗ್ ಮ್ಯಾನೇಜ್ ಮಾಡುವೆ. ನಾವು ಸ್ವಿಮಿಂಗ್ ಪೂಲ್‌ನಲ್ಲಿ ಚಿತ್ರೀಕರಣ ಮಾಡಿದ್ದು. ಆದರೂ ಅಂಡರ್‌ವಾಟರ್ ಶೂಟಿಂಗ್ ಮಾಡುವುದು ದೊಡ್ಡ ಚಾಲೆಂಜ್,' ಎಂದು ಸಂದರ್ಶನದಲ್ಲಿ ನಯನಾ ಮಾತನಾಡಿದ್ದಾರೆ.
'ನೀರೊಳಗೆ ಇಳಿಯುವ ಮುನ್ನ ನಮಗೆ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳನ್ನು ಹೇಳಿಕೊಟ್ಟಿದ್ದರು. ನೀರೊಳಗೆ ಚಿತ್ರೀಕರಣ ಮಾಡುತ್ತಿರುವ ಪ್ರತಿಯೊಬ್ಬ ಕಲಾವಿದರ ಬಗ್ಗೆಯೂ ಧಾರಾವಾಹಿ ತಂಡ ಮುನ್ನೆಚ್ಚರಿಕೆ ವಹಿಸಿತ್ತು. ಸ್ಕೂಬಾ ಡೈವಿಂಗ್‌ಗೆ ಬಳಸುವ ಆಕ್ಷಿಜನ್, ಉಡುಪುಗಳನ್ನು ಪ್ರತಿಯೊಬ್ಬ ಕಲಾವಿದರಿಗೂ ನೀಡಿದ್ದರು. ನಾವು ಚಿತ್ರೀಕರಣ ಮಾಡುವ ಸಮಯದಲ್ಲಿ ಪ್ರೊಫೆಷನಲ್ ಸ್ಕೂಬಾ ಡೈವರ್‌ಗಳು ಜೊತೆಗಿದ್ದರು. ಇಡೀ ತಂಡಕ್ಕೆ ಧೈರ್ಯ ಬಂದ ನಂತರವೇ ಚಿತ್ರೀಕರಣ ಮಾಡಿದ್ದು,' ಎಂದು ನಯನಾ ಹೇಳಿದ್ದಾರೆ.
