24 ಕ್ಯಾರೆಟ್ ಗೋಲ್ಡ್‌ನ ಐಸ್‌ ಕ್ರೀಮ್‌ಗೆ ಹಾಕಿಕೊಂಡು ತಿಂದ ನಿವೇದಿತಾ ಗೌಡ; ಐಷಾರಾಮಿ ಜೀವನ ಎಂದ ನೆಟ್ಟಿಗರು

ದುಬಾರಿ ಐಸ್‌ ಕ್ರೀಮ್ ಸೇವಿಸಿದ ನಿವೇದಿತಾ ಗೌಡ. ಚಿನ್ನ ಧರಿಸುವುದು ಕೇಳಿದ್ದೀರಿ ಆದರೆ ನಿವಿ ಅದನ್ನು ಐಸ್‌ ಕ್ರೀಮ್‌ಗೆ ಹಾಕಿಕೊಂಡು ತಿಂದಿದ್ದಾರೆ...ಹೇಗೆ ನೋಡಿ.... 
 

Colors Kannada Gicchi Giligili Niveditha Gowda taste 24 carat gold ice cream vcs

ಕನ್ನಡ ಕಿರುತೆರೆ ಬಾರ್ಬಿ ಡಾಲ್ ನಿವೇದಿತಾ ಗೌಡ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವಿಭಿನ್ನವಾಗಿರುವ ವಿಡಿಯೋಗಳನ್ನು ಅಪ್ಲೋಡ್ ಮಾಡುವ ಮೂಲಕ ತಮ್ಮ ಫಾಲೋವರ್ಸ್‌ನ ಮನೋರಂಜಿಸುತ್ತಾರೆ. ಈ ಸಲ ನಿವಿ 24 ಕ್ಯಾರೆಟ್ ಗೋಲ್ಡ್ ಐಸ್‌ ಕ್ರೀಮ್‌ನ ಬೆಂಗಳೂರಿನಲ್ಲಿ ರುಚಿ ನೋಡಿದ್ದಾರೆ. ಅತಿ ದುಬಾರಿ ಐಸ್‌ ಕ್ರೀಮ್ ಇದಾಗಿತ್ತು ರುಚಿ ಹೇಗಿದೆ ಎಂದು ವಿಡಿಯೋ ಮಾಡಿದ್ದಾರೆ. 

'ಗೋಲ್ಡ್‌ ಐಸ್‌ ಕ್ರೀಮ್‌ ತಿನ್ನಬೇಕು ಎಂದುಕೊಂಡಿರುವೆ. ಐಸ್‌ ಕ್ರೀಮ್‌ ಅಂದ್ರೆ ತುಂಬಾನೇ ಇಷ್ಟ. ಬೇಸಿಗೆ ಕಾಲ ಆಗಿರುವುದರಿಂದ ನಮ್ಮ ಮನೆಯ ಫ್ರಿಡ್ಜ್‌ನಲ್ಲಿ ಐಸ್‌ ಇದ್ದೇ ಇರುತ್ತದೆ. ತುಂಬಾ ಇಷ್ಟ ಪಟ್ಟು ತಿನ್ನುವುದು ಮ್ಯಾಂಗೋ ಐಸ್‌ ಕ್ರೀಮ್‌ನ ಮಾತ್ರ ಏಕೆಂದರೆ ಅದು ಮಾತ್ರ ನಿಜವಾದ ಹಣ್ಣ ತಿಂದ ರುಚಿ ನೀಡುತ್ತದೆ. ಹಲವು ವರ್ಷಗಳ ಹಿಂದೆ ನಾನು ಸ್ಟ್ರಾಬೆರಿ ತುಂಬಾ ಇಷ್ಟ ಪಟ್ಟು ನಿನ್ನುತ್ತಿದ್ದೆ ನೋಡಲು ಪಿಂಕ್ ಬಣ್ಣ ಇರುತ್ತೆ ಅಂತ. ಆ ನಂತರ ಬ್ಲ್ಯಾಕ್ ಕರೆಂಟ್‌ನಲ್ಲಿ  ರುಚಿ ಚೆನ್ನಾಗಿರುತ್ತೆ. ಸದ್ಯಕ್ಕೆ ಮ್ಯಾಂಗೋ ಕಡೆ ಇರುವೆ. ಈ ಸಲ ಗೋಲ್ಡ್‌ ಐಸ್‌ ಕ್ರೀಮ್ ರುಚಿ ನೋಡಬೇಕು ಅಂದುಕೊಂಡಿರುವೆ, ಇಷ್ಟು ದಿನ ಅದರ ಬಗ್ಗೆ ಕೇಳಿದ್ದೆ ಇಂದು ರುಚಿ ನೋಡುವೆ. ಹೀಗಾಗಿ ಗೋಲ್ಡ್‌ ಔಟ್‌ ಫಿಟ್‌ ಧರಿಸಿರುವೆ. ವೈಟ್‌ ಶರ್ಟ್‌ಗೆ ಗೋಲ್ಡ್ ಸ್ಕರ್ಟ್‌ ಮತ್ತು ಗೋಲ್ಡ್‌ ಬಣ್ಣದ ಓಲೆ ಧರಿಸಿರುವೆ. ರುಚಿ ಹೇಗಿರುತ್ತೆ ಗೊತ್ತಿಲ್ಲ' ಎಂದು ನಿವೇದಿತಾ ಗೌಡ ವಿಡಿಯೋ ಆರಂಭಸಿದ್ದಾರೆ. 

ಕಣ್ಣು ಬಿಟ್ಕೊಂಡು ಮಾಡಿದ್ರೆನೇ ಸರಿಯಾಗಲ್ಲ; ನಿವೇದಿತಾ ಗೌಡ ಬಿರಿಯಾನಿ ತಿಂದು ಹೊಸ ಹೆಸರಿಟ್ಟ ಚಂದನ್ ಶೆಟ್ಟಿ

ಗೋಲ್ಡ್‌ ಐಸ್‌ ಕ್ರೀಮ್‌ಗೆ 16 ರೀತಿಯ ಟಾಪಿಂಗ್ ಹಾಕಲಾಗುತ್ತದೆ. ಐಸ್‌ ಕ್ರೀಮ್‌ ಕೋನ್‌ ಒಳಗೆ 5 ರೀತಿ ಟಾಪಿಂಗ್ ಇರುತ್ತದೆ. ನೋಡಲು ಚೆನ್ನಾಗಿರುವ ರೀತಿ ಅಲಂಕಾರ ಮಾಡಲಾಗುತ್ತದೆ. ಯಾರು ಯಾವುದು ಇಷ್ಟ ಅದನ್ನು ಆಯ್ಕೆ ಮಾಡಿಕೊಳ್ಳಬಹುದು. ಡಾರ್ಕ್‌ ಚಾಕೋಲೆಟ್‌ನ ಮಾತ್ರ ಬಳಸಲಾಗುತ್ತದೆ ಹಾಗೂ 8 ಸ್ಕೂಪ್‌ ಐಸ್‌ ಕ್ರೀಮ್‌ ಇರುತ್ತದೆ ಅದರ ಮೇಲೆ ಗೋಡಂಬಿ ಅಥವಾ ಬಾದಾಮಿಯನ್ನು ಹಾಕಲಾಗುತ್ತದೆ ಎಂದು ಗೋಲ್ಡ್‌ ಐಸ್‌ ಕ್ರೀಮ್‌ ಬಗ್ಗೆ ಅಂಗಡಿ ಮಾಲೀಕರು ಮಾಹಿತಿ ನೀರಿದ್ದಾರೆ. 

ನನಗೆ ಅವಾರ್ಡ್‌ ಕೊಡಬೇಕು ಅದ್ರೆ ಯಾರೂ ಗುರುತಿಸುತ್ತಿಲ್ಲ: ನಿವೇದಿತಾ ಗೌಡ ಮತ್ತೊಂದು ವಿಡಿಯೋ ವೈರಲ್

'ಐಸ್‌ ಕ್ರೀಮ್‌ನ ಅಂಡಗಿಯನ್ನು ಒಂದು ನಿಮಿಷ ಓನರ್ ಕಾಲಿ ಮಾಡಿದರೆ ನಾನು ಫುಲ್ ಕಾಲಿ ಮಾಡುವೆ. ಪುಟ್ಟ ಹುಡುಗಿ ರೀತಿ ಅನಿಸುತ್ತಿದೆ. ನನ್ನ ಬಾಯಲ್ಲಿ ಆಗಲೇ ನೀರು ಬರುತ್ತಿದೆ. ನಿಜವಾದ ಚಿನ್ನದ ಲೇಯರ್‌ನ ಮುಂಬೈನಿಂದ ತರಿಸಿಕೊಳ್ಳುತ್ತಾರೆ. 24 ಕ್ಯಾರೆಟ್‌ ಸರ್ಟಿಫೈಡ್‌ ಗೋಲ್ಡ್‌ ಆಗಿದ್ದು ತಿನ್ನುವ ರೀತಿಯಲ್ಲಿ ಸಣ್ಣ ಲೇಯರ್ ಮಾಡುತ್ತಾರೆ. ಇದು ನಿಜವಾದ ಚಿನ್ನ ಎಂದು ಸರ್ಟಿಫಿಕೇಟ್‌ ಬೇಕಿದ್ದರೂ ಕೊಡುತ್ತಾರೆ. ನಿಜವಾದ ಅಂಗಡಿಗೆ ತೆಗೆದುಕೊಂಡು ಹೋದರ ಹಣ ಕೊಡುತ್ತಾರೆ. ನೀವು ಯಾರೂ ಇದನ್ನು ಪ್ರಯತ್ನ ಮಾಡಬೇಡಿ. ಮನೆಯಲ್ಲಿರುವ ಗೋಲ್ಡ್‌ನ ಐಸ್‌ಗೆ ಹಾಕಿಕೊಂಡು ತಿನ್ನಬೇಡಿ' ಎಂದು ನಿವಿ ಹೇಳಿದ್ದಾರೆ.

' ಹೊರಗಿರುವ ಬಿಸಿಲಿಗೆ ಐಸ್‌ ಕ್ರೀಮ್ ರುಚಿ ಚೆನ್ನಾಗಿದೆ. ಕೋನ್‌ ಒಳಗಿರುವ ಪ್ರತಿಯೊಂದು ಫ್ಲೇವರ್‌ ಚೆನ್ನಾಗಿದೆ. ಸ್ವಲ್ಪ ದುಬಾರಿ ಬೆಲೆ ಆದರೆ ಒಮ್ಮೆ ಟ್ರೈ ಮಾಡಿ' ಎಂದಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಿಚ್ಚಿ ಗಿಲಿಗಿಲಿ ಸೀಸನ್ 1ರ ಎರಡನೇ ಸ್ಥಾನವನ್ನು ನಿವಿ ಸ್ವೀಕರಿಸಿದ್ದಾರೆ. ಸೀಸನ್ ಎರಡಲ್ಲಿ ಸ್ಪರ್ಧಿಸುತ್ತಿದ್ದಾರೆ. 

 

Latest Videos
Follow Us:
Download App:
  • android
  • ios