Asianet Suvarna News Asianet Suvarna News

ತುಂಬಾ ಕಮಿಟ್ಮೆಂಟ್‌ ಇದೆ ಮನೆ ಲೋನ್ ತೀರಿಸಬೇಕು: ಗಿಚ್ಚಿ ಗಿಲಿಗಿಲಿ ಜಾನ್ವಿಗೆ ತಲೆ ಬಿಸಿ!

ಸಣ್ಣ ಪುಟ್ಟ ಪಾತ್ರ ಮಾಡಿಕೊಂಡು ಗಿಚ್ಚಿ ಗಿಲಿಗಿಲಿ ಟ್ರೋಫಿ ಹಿಡಿದುಕೊಂಡ ಜಾನ್ವಿ. ತೆರೆ ಹಿಂದೆ ಎಷ್ಟು ಕಷ್ಟ ಇದೆ ಎಂದು ಹಂಚಿಕೊಂಡ ಜಾನ್.... 

Colors Kannada Gicchi giligili Jhanvi says work is worship vcs
Author
First Published Jun 29, 2023, 11:23 AM IST

ಕಲರ್ ಕನ್ನಡ ವಾಹಿನಿಯಲ್ಲಿ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ನಂತರ ಜಾನ್ವಿ ಗಿಚ್ಚಿ ಗಿಲಿಗಿಲಿ ಸೀಸನ್ 2ರಲ್ಲಿ ಸ್ಪರ್ಧಿಸಿದರು. ಆರಂಭದಲ್ಲಿ ಸಣ್ಣ ಪುಟ್ಟ ಪಾತ್ರ ಮಾಡಿಕೊಂಡು ಸುಮ್ಮನಿದ್ದ ಜಾನ್ವಿ ಕೊನೆಯಲ್ಲಿ ಎರಡನೇ ಸ್ಥಾನ ಪಡೆದು ಟ್ರೋಫಿ ಹಿಡಿದಿರುವುದು ದೊಡ್ಡ ವಿಚಾರವೇ. ಕೆಲಸ ಎಷ್ಟು ಮುಖ್ಯ, ರಿಯಾಲಿಟಿ ಶೋ ಒಪ್ಪುವ ಮುನ್ನ ತಲೆಯಲ್ಲಿ ಏನೆಲ್ಲಾ ಯೋಚನೆ ಇತ್ತು ಎಂದು ಹಂಚಿಕೊಂಡಿದ್ದಾರೆ.  

'ಗಿಚ್ಚಿ ಗಿಲಿ ಗಿಲಿ ಅಫರ್‌ ಬಂದಾಗ ಆರಂಭದಲ್ಲಿ ನಾನು ತುಂಬಾನೇ ಸೈಲೆಂಟ್ ಅಗಿಬಿಟ್ಟೆ ಶೋಗೆ ಹೋಗಲು ಆಸೆ ಆದರೆ ಅದು ಮುಗಿದ ಮೇಲೆ ಮುಂದಕ್ಕೆ ಏನು ಅನ್ನೋ ಐಡಿಯಾ ಇಲ್ಲ. ಕೆಲಸ ಮಾಡಬೇಕು ಕಾರಣ ನನಗೆ ಕಮಿಟ್‌ಮೆಂಟ್‌ ಇದೆ ಮನೆ ಲೋನ್‌ ಕಟ್ಟುತ್ತಿರುವೆ. ಒಂದು ರಿಯಾಲಿಟಿ ಶೋ ಸುಮಾರು ನಾಲ್ಕೈದು ತಿಂಗಳು ಆಗುತ್ತದೆ ಆಮೇಲ ಏನು ಅನ್ನೋ ಪ್ರಶ್ನೆ ಬಂದೇ ಬರುತ್ತೆ. ಖಾಸಗಿ ಸಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದರೆ ಸ್ವಲ್ಪ ಹೈಕ್ ಕೊಡುತ್ತಾರೆ ಒಂದಷ್ಟು ಪ್ರೋಗ್ರಾಮ್ ಮಾಡಬಹುದು ಅಷ್ಟೆ...ರಿಸ್ಕ್‌ ತೆಗೆದುಕೊಂಡಿಲ್ಲ ಅಂದ್ರೆ ಏನೂ ಮಾಡಲಾಗದು...ರಿಸ್ಕ್‌ ತೆಗೆದುಕೊಂಡಿಲ್ಲ ಅಂದ್ರೆ ರಸ್ಕ್‌ ತಿನ್ನೋಕೆ ಆಗಲ್ಲ ಅಂತಾರೆ ಹಾಗೆ ಧೈರ್ಯ ಮಾಡಿ ಮಾಡಲೇ ಬೇಕು ಮುಂದೆ ನಡೆದೆ. ಇದಾದ ಮೇಲೆ ಮತ್ತೊಂದು ಕಂಪನಿಯಲ್ಲಿ ನನಗೆ ಕೆಲಸ ಸಿಕಿದೆ ಶೋ ಮಾಡುವುದರಿಂದ ಕಲರ್ಸ್‌ನಲ್ಲಿ ಮತ್ತೊಮ್ಮೆ ಕೆಲಸ ಮಾಡಲು ಅವಕಾಶ ಸಿಗುತ್ತದೆ ಎಂದು ನಂಬಿರುವೆ' ಎಂದು ಜಾನ್ವಿ ಖಾಸಗಿ ಯುಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.  

ಮದ್ವೆಯಾಗಿ 12 ವರ್ಷ ಆದ್ಮೇಲೆ ಡಿವೋರ್ಸ್‌; ನೋವು ಹಂಚಿಕೊಂಡ ಗಿಚ್ಚಿ ಗಿಲಿಗಿಲಿ ಜಾನ್ವಿ!

'ಗಿಚ್ಚಿ ಗಿಲಿಗಿಲಿ ರನ್ನರ್ ಟ್ರೋಫಿ ನಾನು ಹಿಡಿಯುವೆ ಎಂದುಕೊಂಡಿರಲಿಲ್ಲ. ಆರಂಭದಲ್ಲಿ ನಮಗೆ ಕಡಿಮೆ ಡೈಲಾಗ್‌ ಇರುತ್ತಿತ್ತು ಕಾದು ಕಾದು ಮಾಡಬೇಕಿತ್ತು ಆಗ ಶ್ರುತಿ ಮೇಡಂ ಡೈರೆಕ್ಷನ್ ಡಿಪಾರ್ಟ್‌ಮೆಂಟ್ ಜೊತೆ ಮಾತನಾಡಿ ಹೆಣ್ಣು ಮಕ್ಕಳಿಗೆ ಒಂದು ಸ್ಕಿಟ್ ಕೊಡಬೇಕು ಎಂದರು. ಪಾತ್ರದ ಮಹತ್ವ ಏನೆಂದು ಅರ್ಥ ಆಗಲು ಈ ರೀತಿ ಮಾಡಿದ್ದು ಖುಷಿ ಆಯ್ತು. ಒಂದು ಸ್ಕಿಟ್‌ನಲ್ಲಿ ನನಗೆ ಚಿಕ್ಕ ಡೈಲಾಗ್ ಅಥವಾ ಎಂಟ್ರಿ ಇದ್ರೆ ಮತ್ತೊಂದು ತಂಡದ ಬಳಿ ಹೋಗಿ ನನಗೆ ಪಾತ್ರ ಕೊಡಿ ಸಣ್ಣ ಡೈಲಾಗ್ ಕೊಡಿ ಎಂದು ಕೇಳಬೇಕಿತ್ತು. ಅಜ್ಜಿ ಮೊಮ್ಮಗಳ ಸ್ಕಿಟ್‌ನಲ್ಲಿ ಹೆಚ್ಚಿಗೆ ಮೆಚ್ಚುಗೆ ಬಂತು ಸತ್ತಿರುವವರ ಪಾತ್ರ ಮಾಡಿದಕ್ಕೆ ದೃಷ್ಠಿ ತೆಗೆಸಿಕೊಳ್ಳಬೇಕು ಎಂದು ಹೇಳಿದರು. ಆನಂತರ ಬ್ಯಾಕ್ ಟು ಬ್ಯಾಕ್ ಒಳ್ಳೆ ಸ್ಕಿಟ್‌ ಆಫರ್‌ಗಳು ಬಂತು' ಎಂದು ಜಾನ್ವ ಹೇಳಿದ್ದಾರೆ. 

ಬಸ್ ಬೇಡ ಫ್ಲೈಟ್ ಬೇಕು, ಐರಾಷಾಮಿ ರೆಸಾರ್ಟ್‌ನಲ್ಲೇ ರೂಮ್ ಬೇಕು: 'ಗಾಳಿಪಟ' ಭಾವನಾ ಹೈ ಫೈ ಕಥೆ ಬಿಚ್ಚಿಟ್ಟ ಫ್ರೆಂಡ್ಸ್

ವೈಯಕ್ತಿಕ ಜೀವನದಲ್ಲಿ ಬಿರುಕು?

'ನಾನು ತುಂಬಾ ಸ್ಟ್ರಾಂಗ್ ವ್ಯಕ್ತಿ. ಸಿಂಗಲ್ ಪೇರೆಂಟ್ ಆಗಿ ನಾನು ಸ್ಟ್ರಾಂಗ್ ಆಗಿದ್ದರೆ ಮಾತ್ರ ಅವರು ಕೂಡ ಸ್ಟ್ರಾಂಗ್ ಆಗಿರುತ್ತಾರೆ. ನಾನು ಯೋಚನೆ ಮಾಡಿಕೊಂಡು ಏನೋ ಆಯ್ತು ಅಂದ್ರೆ ಅವ್ರು ಕೂಡ ಯೋಚನೆ ಮಾಡುತ್ತಾರೆ. 12 ವರ್ಷದಿಂದ ಏಳು ಬೀಳುಗಳನ್ನು ನೋಡಿ ನೋಡಿ ಗಟ್ಟಿಯಾಗಿದ್ದೆ ಅಭ್ಯಾಸ ಆಗಿತ್ತು ಬಿಟ್ಟೋದ ವ್ಯಕ್ತಿಗಳೇ ನಮ್ಮನ್ನು ಸ್ಟ್ರಾಂಗ್ ಮಾಡಿಬಿಟ್ಟರು. ಮದ್ವೆ ಆದ್ಮೇಲೆ ಫುಲ್ ಶಾಕ್ ಆಗಿತ್ತು ಈ ರೀತಿ ಜನನೂ ಇರ್ತಾರಾ ಬೇರೆ ರೀತಿ ಲೈಫ್‌ಸ್ಟೈಲ್ ಎಲ್ಲವೂ. ಪ್ರಪಂಚ ಹೀಗೆ ಇರುವುದು ಎಂದು ಅಜೆಸ್ಟ್‌ ಮಾಡಿಕೊಂಡೆ ಆದರೆ ಹಾಗೆ ಇರಲಿಲ್ಲ ಈಗ ನನ್ನ ಜೀವನ ನೆನಪಿಸಿಕೊಂಡು ನಾನು ನಗುವೆ' ಎಂದಿದ್ದಾರೆ ಜಾನ್ವಿ. 

Follow Us:
Download App:
  • android
  • ios