ಅದ್ಧೂರಿಯಾಗಿ ತಾಯಿ ಹುಟ್ಟುಹಬ್ಬ ಆಚರಿಸಿದ ವರುಣ್ ಆರಾಧ್ಯ. ಗಿಫ್ಟ್‌ ಕೊಡುವ ವಿಡಿಯೋ ಅಪ್ಲೋಡ್ ಮಾಡಿದ್ದಕ್ಕೆ ಶೋಕಿ ಎಂದ ನೆಟ್ಟಿಗರು....

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬೃಂದಾವನಾ ಸೀರಿಯಲ್‌ನಲ್ಲಿ ಮಿಂಚುತ್ತಿರುವ ಆಕಾಶ್ ಉರ್ಫ್‌ ವರುಣ್ ಆರಾಧ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಯುಟ್ಯೂಬ್ ಚಾನೆಲ್ ಹೊಂದಿರುವ ವರುಣ್, ತಮ್ಮ ಜೀವನದ ಅಮೂಲ್ಯವಾದ ಕ್ಷಣಗನ್ನು ವ್ಲಾಗ್‌ ಮಾಡಿ ಅಪ್ಲೋಡ್ ಮಾಡುತ್ತಾರೆ. ಅದರಂತೆ ತಮ್ಮ ತಾಯಿ ಹುಟ್ಟುಹಬ್ಬವನ್ನು ಹೇಗೆ ಆಚರಿಸಿದರು ಎಂದು ವಿಡಿಯೋ ಮಾಡಿದ್ದಾರೆ. ಮೆಚ್ಚುಗೆಗಿಂತ ಟೀಕೆಗಳು ಹೆಚ್ಚಾಗಿ ಬರುತ್ತಿದೆ ಎನ್ನಬಹುದು. 

ಸಹೋದರಿ ಚೈತ್ರಾ ಜೊತೆ ಸೇರಿ ವರುಣ್ ಮನೆಯಲ್ಲಿ ಸರಳವಾಗಿ ಕೇಕ್ ಕಟ್ ಮಾಡಿದ್ದಾರೆ. ತಾಯಿಗೆ ಎನು ಕೊಡಿಸಬೇಕು ಅನ್ನೋ ಆಲೋಚನೆಯಲ್ಲಿ ಇರುವಾಗ ಮೂಗುತ್ತಿ ಅಥವಾ ಚಿನ್ನದ ಉಂಗುರ ಕೊಡಿಸಲು ಮುಂದಾಗುತ್ತಾರೆ. ಸರ್ಪ್ರೈಸ್‌ ಇದೆ ಎಂದು ತಾಯಿಗೆ ರೆಡಿಯಾಗಲು ಹೇಳುತ್ತಾರೆ. ದ್ವಿಚಕ್ರ ವಾಹದನಲ್ಲಿ ಮೊದಲು ಹೊಟ್ಟೆ ತುಂಬಾ ಊಟ ಮಾಡಿ ಆನಂತರ ಚಿನ್ನದ ಅಂಗಡಿಗೆ ಭೇಟಿ ನೀಡುತ್ತಾರೆ. ಮೊದಲು ಡೈಮೆಂಡ್ ಮೂಗುತ್ತಿ ನೋಡುತ್ತಾರೆ ಆಮೇಲೆ ಯಾವುದು ಚೆನ್ನಾಗಿಲ್ಲ ಆಯ್ಕೆ ಆಗಿಲ್ಲ ಅಂದಾಗ ಚಿನ್ನದ ಉಂಗುರ ಸೆಲೆಕ್ಟ್ ಮಾಡುತ್ತಾರೆ. 

10 ಲಕ್ಷ ಸಾಲಲ್ಲ 20 ಲಕ್ಷ ಆಗ್ಬೇಕು ಅನ್ನೋದು ನನ್ನ ಗುರಿ: 'ಬೃಂದಾವನ' ವರುಣ್ ಆರಾಧ್ಯ

ನನ್ನ ಜೀವನದಲ್ಲಿ ಇದೇ ಮೊದಲು ದುಬಾರಿ ಗಿಫ್ಟ್‌ ಕೊಟ್ಟಿರುವುದು. ಇದುವರೆಗೂ ನಾನು ಯಾರಿಗೂ ಕೊಟ್ಟಿಲ್ಲ, ಅಮ್ಮನೇ ಫಸ್ಟ್‌ ಎಂದು ವರುಣ್ ಆರಾಧ್ಯ ವಿಡಿಯೋದಲ್ಲಿ ಹೇಳಿದ್ದಾರೆ 'ಈ ವರ್ಷ ನನ್ನ ಹುಟ್ಟುಹಬ್ಬ ಸೂಪರ್ ಆಗಿತ್ತು, ಬಾಲ್ಯದಲ್ಲಿ ವರ್ಷಕ್ಕೆ ಒಂದು ಹೊಸ ಬಟ್ಟೆ ಬರುತ್ತಿತ್ತು ಅದು ಬಿಟ್ಟರೆ ಯಾವ ರೀತಿ ಆಚರಣೆ ಮಾಡುತ್ತಿರಲಿಲ್ಲ...ಮೂರೊತ್ತು ಊಟ ಅಷ್ಟೇ. ಈ ವರ್ಷ ನನ್ನ ಮಗ ನನ್ನ ಪುಟ್ಟ ಕೊಡಿಸಿರುವ ಗಿಫ್ಟ್‌ ನೋಡಿ ಖುಷಿಯಾಗಿದೆ. ಮದುವೆ ನಂತರ ಇದೇ ನನ್ನ ಮೊದಲ ಚಿನ್ನದ ಉಂಗುರ' ಎಂದು ವರುಣ್ ತಾಯಿ ಮಾತನಾಡಿದ್ದಾರೆ. 

ಅವ್ನು ದುಡಿದು ಶೋಕಿ ಮಾಡ್ತಿದ್ದಾನೆ ಬೇರೆ ಅವರ ದುಡ್ಡಲ್ಲ; ಫಸ್ಟ್‌ ಟೈಂ ವಿಮಾನ ಏರಿದ ವರುಣ್ ಆರಾಧ್ಯ ತಾಯಿ

ಚಿನ್ನ ಆದರೂ ಕೊಡ್ಸು ಡೈಮೆಂಡ್ ಆದರೂ ಕೊಡ್ಸು ಆದರೆ ವಿಡಿಯೋ ಮಾಡಿ ಅಪ್ಲೋಡ್ ಮಾಡುವ ಅಗತ್ಯ ಏನಿತ್ತು? ವರ್ಷ ಮುಂದೆ ಶೋಕಿ ಮಾಡುವ ಪ್ರಯತ್ನ ಮಾಡ್ಬೇಡ. ಒಂದು ಚೂರು ಶೋಕಿ ಕಡಿಮೆ ಆಗಿಲ್ಲ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.