10 ಲಕ್ಷ ಸಾಲಲ್ಲ 20 ಲಕ್ಷ ಆಗ್ಬೇಕು ಅನ್ನೋದು ನನ್ನ ಗುರಿ: 'ಬೃಂದಾವನ' ವರುಣ್ ಆರಾಧ್ಯ
ಒಂದು ಮಿಲಿಯನ್ ಫಾಲೋವರ್ಸ್ ಆದ ಸಂಭ್ರಮದಲ್ಲಿ ವರುಣ್ ಆರಾಧ್ಯ. ಕೇಕ್ ಕಟ್ ಮಾಡಿ ಸಂಭ್ರಮಿಸಿದ ಸ್ನೇಹಿತರು....
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬೃಂದಾವನ ಧಾರಾವಾಹಿಯಲ್ಲಿ ಮಿಂಚುತ್ತಿರುವ ಆಕಾಶ್ ಉರ್ಫ್ ವರುಣ್ ಆರಾಧ್ಯ ಈಗ ಇನ್‌ಸ್ಟಾಗ್ರಾಂನಲ್ಲಿ ಒಂದು ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.
ತುಂಬಾ ಕಷ್ಟ ಪಟ್ಟಿದ್ದೀನಿ ಫಾಲೋವರ್ಸ್‌ನ ಪಡೆಯುವುದಕ್ಕೆ. ಒಂದು ಮಿಲಿಯನ್ ಅಂದ್ರೆ 10 ಲಕ್ಷ ಅಷ್ಟು ಸುಲಭವಾಗಿ ಆಗುತ್ತಿರಲಿಲ್ಲ, ನನಗೆ ಇದು ದೊಡ್ಡ ಹೆಜ್ಜೆ.
ಅವರಿಂದ ಬೆಳೆಯುತ್ತಿರುವುದು ಇವರಿಂದ ಬೆಳೆಯುತ್ತಿರುವುದು ಎಂದು ಸುಮ್ಮನೆ ಕಾಮೆಂಟ್ ಮಾಡುತ್ತೀರಾ...ನಾನು ಏನೂ ಕಷ್ಟ ಪಡುತ್ತಿಲ್ವಾ? ಹೇಳಿ....
ಜನರ ಮಾತುಗಳನ್ನು ಹೇಗೆ ಹ್ಯಾಂಡಲ್ ಮಾಡುವುದು ಗೊತ್ತಿಲ್ಲ ಆದರೆ ದಿನಕ್ಕೆ ಒಂದು ವಿಡಿಯೋ ಅಂತ ನಾನು ಅಪ್ಲೋಡ್ ಮಾಡುತ್ತಲೇ ಇರುತ್ತಿದ್ದೀನಿ.
ಒಂದು ಮಿಲಿಯನ್ ಫಾಲೋವರ್ಸ್ ಆಗಿದ್ದಾರೆ ಈಗ ನನ್ನ ಗುರಿ ಏನಿದ್ದರೂ ಎರಡು ಮಿಲಿಯನ್ ಅಗುವುದು, ಯುಟ್ಯೂಬ್ ಚಾನೆಲ್‌ನ ಕೂಡ ಬೆಳೆಸಲು ಸಪೋರ್ಟ್ ಮಾಡಿ.
ನೀವು ನನ್ನ ಫಾಲೋವರ್ಸ್ ಯಾವ ರೀತಿ ವಿಡಿಯೋ ಬೇಕು ಎಂದು ಹೇಳಿದರೆ ಅದೇ ರೀತಿ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತೀನಿ ಎಂದು ವರುಣ್ ವಿಡಿಯೋ ಮಾಡಿ ಮಾತನಾಡಿದ್ದಾರೆ.
ಚಿಕ್ಕ ವಯಸ್ಸಿನಲ್ಲಿ ದೊಡ್ಡ ದೊಡ್ಡ ಸ್ಟಾರ್‌ಗಳು ಒಂದು ಮಿಲಿಯನ್ ಫಾಲೋವರ್ಸ್ ಹೊಂದಿರುವುದನ್ನು ನೋಡಿದ್ದೆ ಈಗ ನನಗೆ ಇರುವುದು ನೋಡಿ ಖುಷಿಯಾಗಿದೆ ಎಂದಿದ್ದಾರೆ ವರುಣ್.