Asianet Suvarna News Asianet Suvarna News

ಅವ್ನು ದುಡಿದು ಶೋಕಿ ಮಾಡ್ತಿದ್ದಾನೆ ಬೇರೆ ಅವರ ದುಡ್ಡಲ್ಲ; ಫಸ್ಟ್‌ ಟೈಂ ವಿಮಾನ ಏರಿದ ವರುಣ್ ಆರಾಧ್ಯ ತಾಯಿ

ಮೊದಲ ಸಲ ತಾಯಿಯನ್ನು ವಿಮಾನದಲ್ಲಿ ಕರೆದುಕೊಂಡು ಹೋದಾ ವರುಣ್ ಆರಾಧ್ಯ. ಟ್ರೋಲಿಗರಿಗೆ ಖಡಕ್ ಉತ್ತರ......
 

Colors Kannada Brundavana Akash aka Varun Aradhya takes first flight with mom vcs
Author
First Published Apr 24, 2024, 12:17 PM IST

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬೃಂದಾವನ ಧಾರಾವಾಹಿಯಲ್ಲಿ ಆಕಾಶ್‌ ಪಾತ್ರದಲ್ಲಿ ಮಿಂಚುತ್ತಿರುವ ವರುಣ್ ಆರಾಧ್ಯ ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಸ್ಪೆಷಲ್ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಮೊದಲ ಸಲ ತಮ್ಮ ತಾಯಿಯನ್ನು ವಿಮಾನದಲ್ಲಿ ಕರೆದುಕೊಂಡು ಹೋಗುತ್ತಿದ್ದಾರೆ. ಮನೆಯಿಂದ ಹೊರಟು ತಮ್ಮ ಜಾಗ ತಲುಪುವವರೆಗೂ ಅವರ ಅನುಭವ ಹೇಗಿತ್ತು ಎಂದು ಅಪ್ಲೋಡ್ ಮಾಡಿದ್ದಾರೆ. 

'ವರುಣ್ ತಂದೆ ದುಡ್ಡಿನಲ್ಲಿ ಶೋಕಿ ಮಾಡುತ್ತಿಲ್ಲ. ಸ್ವಂತ ದುಡ್ಡಿನಲ್ಲಿ ದುಡಿದು ಹಣ ಮಾಡಿ ಅದರಲ್ಲಿ ಎಂಜಾಯ್ ಮಾಡುತ್ತಿದ್ದಾನೆ. ಯಾವತ್ತೂ ಕೈಗೆ ನಾನು ದುಡ್ಡು ಕೊಟ್ಟು ಮಜಾ ಮಾಡು ಎಂದು ಹೇಳಿಲ್ಲ. ಜೀವನದಲ್ಲಿ ಒಳ್ಳೆ ಸ್ಥಾನ ಪಡೆಯಲು ಕಷ್ಟ ಪಟ್ಟಿದ್ದಾರೆ ಹೀಗಾಗಿ ಅವನ ದುಡ್ಡಿನಲ್ಲಿ ಶೋಕಿ ಮಾಡುತ್ತಿದ್ದಾನೆ ಮತ್ತೊಬ್ಬರ ದುಡ್ಡಿನಲ್ಲಿ ಅಲ್ಲ' ಎಂದು ವರುಣ್ ತಾಯಿ ವಿಡಿಯೋ ಆರಂಭದಲ್ಲಿ ಟ್ರೋಲ್‌ಗಳಿಗೆ ಉತ್ತರ ಕೊಟ್ಟಿದ್ದಾರೆ. 

ವರುಣ್ ಆರಾಧ್ಯ ನಾಲಿಗೆಗೆ 6 ಸ್ಟಿಚ್; ಆಕಾಶ್ ತೊದ್ಲು ಎಂದು ಟೀಕೆ, ಖಡಕ್ ಉತ್ತರ ಕೊಟ್ಟ ತಾಯಿ

ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ವರುಣ್ ಖಾಸಗಿ ಕಂಪನಿಗಳನ್ನು ಪ್ರಮೋಷನ್ ಮಾಡುತ್ತಾರೆ. ಸೂರತ್‌ನಲ್ಲಿರುವ ಸೀರೆ ಅಂಗಡಿ ಪ್ರಮೋಷನ್ ಮಾಡಲು ಹೋಗುವ ತಾಯಿ ಮತ್ತು ಸ್ನೇಹಿತನನ್ನು ಕರೆದುಕೊಂಡು ಹೋಗಿದ್ದಾರೆ. ಏರ್‌ಪೋರ್ಟ್‌ನಲ್ಲಿ ಏನೆಲ್ಲಾ ಇದೆ ಅದರ ಬೆಲೆಗಳು ಎಷ್ಟು ಎಂದು ಕೇಳಿ ಶಾಕ್ ಆಗಿದ್ದಾರೆ. ವಿಮಾನ ಏರುವ ಮುನ್ನ ಎಲ್ಲಿಗೆ ಹೋಗುತ್ತಿರುವುದು ಎಂದು ವರುಣ್ ಹೇಳಿದ ಮೇಲೆ 'ಸ್ವಾಮಿ ಕಾರ್ಯ ಸ್ವಕಾರ್ಯ ಎರಡೂ ಮುಗಿಸಿಕೊಳ್ಳುತ್ತಿದ್ದಾನೆ ನನ್ನನ್ನು ಎಲ್ಲಿಗೋ ಕರೆದುಕೊಂಡು ಹೋಗುತ್ತಿದ್ದಾನೆ ಅಂದುಕೊಂಡೆ' ಎಂದು ತಾಯಿ ಹೇಳುತ್ತಾರೆ. 

ಮಧ್ಯರಾತ್ರಿ 12 ಗಂಟೆಗೆ ಆಡಿಷನ್, 2.30ಗೆ ಸೆಲೆಕ್ಟ್‌; ಅವಕಾಶ ಗಿಟ್ಟಿಸಿಕೊಂಡ ಘಟನೆ ಬಿಚ್ಚಿಟ್ಟ 'ಬೃಂದಾವನ' ನಟ

ವರ್ಷ - ವರುಣ್ ಬ್ರೇಕಪ್‌ ನಂತರ ಇಬ್ಬರ ಜೀವನ ಸಖತ್ ಬದಲಾಗುತ್ತದೆ. ಸೀರಿಯಲ್‌ನಲ್ಲಿ ಅವಕಾಶ ಗಿಟ್ಟಿಸಿಕೊಂಡ ವರುಣ್ ಆರಾಧ್ಯ ಲೆಕ್ಕವಿಲ್ಲದಷ್ಟು ಅಭಿಮಾನಿಗಳನ್ನು ಸಂಪಾದಿಸುತ್ತಾರೆ. ತಂದೆ ತೀರಿಕೊಂಡ ನಂತರ ಆಟೋ ಓಡಿಸುತ್ತಿದ್ದ ವರುಣ್ ಈಗ ಕಾರಿನಲ್ಲಿ ಓಡಾಡಲು ಶುರು ಮಾಡಿದ್ದಾರೆ. ಈಗ ತಾಯಿಯನ್ನು ವಿಮಾನದಲ್ಲಿ ಕರೆದುಕೊಂಡು ಹೋಗುತ್ತಿದ್ದಾರೆ. ಆಕಾರ್ಶ್‌ ಉರ್ಫ್‌ ವರುಣ್ ಆರಾಧ್ಯ ಬೆಳವಣಿಗೆಯನ್ನು ಜನರು ಹೊಗಳುತ್ತಿದ್ದಾರೆ.

Follow Us:
Download App:
  • android
  • ios