Asianet Suvarna News Asianet Suvarna News

ವರುಣ್ ಆರಾಧ್ಯ ನಾಲಿಗೆಗೆ 6 ಸ್ಟಿಚ್; ಆಕಾಶ್ ತೊದ್ಲು ಎಂದು ಟೀಕೆ, ಖಡಕ್ ಉತ್ತರ ಕೊಟ್ಟ ತಾಯಿ

ಆಕಾಶ್ ಸ್ಪಷ್ಟವಾಗಿ ಮಾತನಾಡಲ್ಲ ಎಂದು ಪದೇ ಪದೇ ಕಾಮೆಂಟ್ ಮಾಡುತ್ತಿರುವವರಿಗೆ ಸತ್ಯ ತಿಳಿಸಿದ ತಾಯಿ.  ಘಟನೆ ಕೇಳಿ ಎಲ್ಲರು ಶಾಕ್... 

Colors Kannada Brundhavan Akarsh Varun Aradhya tongue cut story goes viral vcs
Author
First Published Mar 12, 2024, 11:17 AM IST

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬೃಂದಾವನ ಧಾರಾವಾಹಿಯಲ್ಲಿ ಆಕಾರ್ಶ್‌ ಉರ್ಫ್‌ ವರುಣ್ ಆರಾಧ್ಯ ಸ್ಪಷ್ಟವಾಗಿ ಮಾತನಾಡುವುದಿಲ್ಲ ಎಂದು ಅನೇಕರು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಮಾಡುತ್ತಿರುವ ಟೀಕೆ ಪೋಷಕರ ಕಿವಿ ಮುಟ್ಟಿದೆ. ಹೀಗೆ ವರುಣ್ ಯುಟ್ಯೂಬ್ ಚಾನೆಲ್ ವಿಡಿಯೋ ಮಾಡುತ್ತಿರುವಾಗ ಈ ಘಟನೆ ಬಗ್ಗೆ ಪೋಷಕರು ಸತ್ಯ ಬಿಚ್ಚಿಟ್ಟಿದ್ದಾರೆ.

'ವರುಣ್ ಸ್ಕೂಲ್‌ನಿಂದ ಬಂದಾಗ ಮನೆಯಲ್ಲಿ ಲಾಕ್ ಮಾಡಿ ಬಿಡುತ್ತಿದ್ದೆ. ಹಂಗೂ ಒಮ್ಮೆ ಯಾಮಾರಿಸಿ ಆಟವಾಡಲು ಓಡಿ ಹೋಗಿಬಿಟ್ಟ. ಕುವೆಂಪು ಮೈದಾನದಲ್ಲಿ ಕಬಡಿ ಅಟ ಇತ್ತು ಅಲ್ಲಿ ಆಟವಾಡಿ ನಾಲಿಗೆ ಅರ್ಧ ಕಟ್ ಮಾಡಿಕೊಂಡು ಬಂದಿದ್ದೆ' ಎಂದು ಘಟನೆ ಬಗ್ಗೆ ವರುಣ್ ತಾಯಿ ಮಾತನಾಡಿದ್ದಾರೆ.

ವರುಣ್ ಆರಾಧ್ಯ ಮನೆ ಟೆರೇಸ್ ಮೇಲೆ ಪುಷ್ಪಾ?; ಬ್ರೇಕಪ್ ಕಾರಣ ಹುಡುಕಿದ ನೆಟ್ಟಿಗರು!

'ಖುಷಿಯಲ್ಲಿ ಆಟವಾಡುತ್ತಿದ್ದೆ ಆಗ ನನ್ನ ನಾಲಿಗೆಗೆ ಏಟು ಬಿಟ್ಟು ಅರ್ಧ ನಾಲಿಗೆ ಕಟ್ ಆಯ್ತು. ನಾಲಿಗೆ ನೇತಾಡುತ್ತಿತ್ತು ಕೈಯಲ್ಲಿ ಹಿಡಿದುಕೊಂಡು ಓಡಿ ಬಂದೆ. ಮೈದಾನ ಸುತ್ತ ರಕ್ತ ಇತ್ತು. ಮನೆಗೆ ಬಂದು ಹೇಳಿದಾಗ ಅಮ್ಮ ತಲೆ ಮೇಲೆ ಹೊಡೆದು ರೂಮಿಗೆ ಹೋಗುವಂತೆ ಹೇಳಿದರು ಅರ್ಧ ಗಂಟೆ ನಂತರ ಬಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸ್ಟಿಚ್ ಹಾಕಿಸಿದ್ದರು. ಒಟ್ಟು 6 ಸ್ಟಿಚ್ ಹಾಕಿಸಿದರು' ಎಂದು ವರುಣ್ ಹೇಳಿದ್ದಾರೆ.

'ಯಾಕೆ ನನ್ನ ಮಗನನ್ನು ತಕ್ಷಣ ಕರೆದುಕೊಂಡು ಹೋಗಿಲ್ಲ ಅಂದ್ರೆ ಅವನು ಮಾಡಿರುವುದು ತಪ್ಪು ಎಂದು ತಿಳಿಯಬೇಕು ಅಂತ. ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ 6 ಸ್ಟಿಚ್ ಹಾಕಿಸಲಾಗಿತ್ತು. ಡಾಕ್ಟರ್ ಸ್ಟಿಚ್ ಹಾಕಬೇಕಾದ್ರೆ ನಾನು ಅವನ ನಾಲಿಗೆಯನ್ನು ಕೈಯಲ್ಲಿ ಹಿಡಿದುಕೊಂಡಿದ್ದೆ. ಆಗ ಅವನಿಗೆ ಇಂಜೆಕ್ಷನ್ ಕೊಟ್ಟಿದ್ದರು ಅದಿಕ್ಕೆ ಹೊಲಿಗೆ ಹಾಕುವಾಗ ಅಷ್ಟು ನೋವು ಗೊತ್ತಾಗಿಲ್ಲ' ಎಂದಿದ್ದಾರೆ ವರುಣ್ ತಾಯಿ.

ಮಧ್ಯರಾತ್ರಿ 12 ಗಂಟೆಗೆ ಆಡಿಷನ್, 2.30ಗೆ ಸೆಲೆಕ್ಟ್‌; ಅವಕಾಶ ಗಿಟ್ಟಿಸಿಕೊಂಡ ಘಟನೆ ಬಿಚ್ಚಿಟ್ಟ 'ಬೃಂದಾವನ' ನಟ

'ಕರೆಕ್ಟ್‌ ಆಗಿ ನನಗೆ ಒಂದು ವರ್ಷ ಮಾತನಾಡಲು ಬರುತ್ತಿರಲಿಲ್ಲ. 8ನೇ ತರಗತಿಯಲ್ಲಿ ಈ ಘಟನೆ ನಡೆದಿದ್ದು 9ನೇ ತರಗತಿಯ ಕೊನೆಯಲ್ಲಿ ಮಾತನಾಡಲು ಶುರು ಮಾಡಿದ್ದು. 10ನೇ ತರಗತಿಯಲ್ಲಿ ಮಾತನಾಡಲು ಸುಲಭವಾಗಿತ್ತು.ಅಲ್ಲಿಂದ ಇಷ್ಟು ಮಾತನಾಡಲು ಶುರು ಮಾಡಿದ್ದೀನಿ ಇನ್ನು ಮುಂದೆ ಚೆನ್ನಾಗಿ ಮಾತನಾಡಲು ಶುರು ಮಾಡುತ್ತೀನಿ. ಕಲಿಯುತ್ತೀನಿ. ' ಎಂದು ವರುಣ್ ಕ್ಲಾರಿಟಿ ಕೊಟ್ಟಿದ್ದಾರೆ. 

'ಎಲ್ಲರೂ ಹೇಳುತ್ತೀನಿ ಅವನಿಗೆ ಮಾತನಾಡಲು ಬರಲ್ಲ ಅಂತ. ಈ ಕಾರಣದಿಂದ ಅವನು ಸ್ಪಷ್ಟವಾಗಿ ಮಾತನಾಡಲು ಆಗಲ್ಲ. ಕಷ್ಟ ಪದಗಳನ್ನು ಹೇಳುವಾಗ ನಾಲಿಗೆ ಹಿಡಿಯುತ್ತದೆ ಆದರೂ ಪ್ರಯತ್ನ ಪಟ್ಟಿ ಮಾತನಾಡುತ್ತಿದ್ದಾರೆ' ಎಂದು ವರುಣ್ ತಾಯಿ ಕ್ಲಾರಿಟಿ ಕೊಟ್ಟಿದ್ದಾರೆ.

Follow Us:
Download App:
  • android
  • ios