ಬಿಗ್ ಬಾಸ್ ಸೀಸನ್‌-7ರಲ್ಲಿ ಸೈಲೆಂಟ್ ಆಗಿ ಬುಸುಗುಡುತ್ತಿರುವ ನಾಗಿಣಿ ಅಲಿಯಾಸ್ ದೀಪಿಕಾ ದಾಸ್ ಈಗ ಮನೆ-ಮನ ಗೆದ್ದಿರುವ ಸ್ಪರ್ಧಿ. ಹೈ ಫೀವರ್ ಇದ್ದರೂ ಛಲ ಬಿಡದೇ ಆಟ ಶುರುಮಾಡಿದ ದೀಪಿಕಾ ದಾಸ್ ದಿನೇ ದಿನೇ ಶೈನ್ ಶೆಟ್ಟಿಯಿಂದ ದೂರವಾಗುತ್ತಿದ್ದಾರಾ? ಏಕೆ ಹಾಗೆನುಸುತ್ತಿದೆ, ನೋಡಿ...

ಬಿಗ್ ಬಾಸ್ ಪ್ರಿಯಾಂಕಾ ರಿಯಲ್ ಲೈಫ್‌ ಬ್ಯಾಕ್‌ಗ್ರೌಂಡ್ ಗೊತ್ತಾ? ಇಲ್ಲಿದೆ ನೋಡಿ

'ಕಳ್ಳ ಪೊಲೀಸ್‌' ಟಾಸ್ಕ್‌ನಲ್ಲಿ ಶೈನ್ ಪೊಲೀಸ್ ಆಗಿ ದೀಪಿಕಾ ಕಳ್ಳಿಯಾಗಿ ಕಾಣಿಸಿಕೊಂಡರು. ಕಳ್ಳಿಯನ್ನು ಹಿಡಿಯುವುದರಲ್ಲಿ ಯಶಸ್ವಿಯಾದ ಶೈನ್ ಅಂದಿನಿಂದ ದೀಪಿಕಾ ಕ್ಲೆವರ್ ಗೇಮ್ ಅರ್ಥ ಮಾಡಿಕೊಂಡರು.  

ದೀಪಿಕಾಗೆ 500 ಪಾಯಿಂಟ್ಸ್ ಲಕ್ಷುರಿ ಬಜೆಟ್‌ ಟಾಸ್ಕ್‌ ನೀಡಲಾಗಿತ್ತು . ಶೈನ್ ಗಡ್ಡ ಬೋಳಿಸಿದರೆ ಮನೆಯವರಿಗೆಲ್ಲಾ ಆಕೆಯಿಂದ 500 ಪಾಯಿಂಟ್ಸ್‌ ಸಿಗುತ್ತಿತ್ತು. ಇದನ್ನು ಮಾಡುವುದರಲ್ಲಿ ಯಶಸ್ವಿಯಾದ ದೀಪಿಕಾಗೆ ಶೈನ್ ಜೊತೆ ಉತ್ತಮ ಸ್ನೇಹವೂ ಬೆಳೆದಿತ್ತು. ಅಂದಿನಿಂದ ಇನ್ನಿತರೆ ಸ್ಪರ್ಧಿಗಳು ಅವರ ನಡುವೆ ಏನೋ ಇದೆ ಎಂದು ಗುಸು ಗುಸು ಮಾತನಾಡಲು ಶುರುವಿಟ್ಟುಕೊಂಡಿದ್ದರು. 

BB7: ಸಿನಿಮಾ ಇಲ್ಲದೇ ಕ್ಯಾಂಟೀನ್ ತೆರೆದ ಶಂಕರ್ ನಾಗ್, ಸತ್ಯಕಥೆ ಬಿಚ್ಚಿಟ್ಟ ಜೈ ಜಗದೀಶ್!

ಇನ್ನು ಕೆಲವೇ ದಿನಗಳ ಹಿಂದೆ ದೀಪಿಕಾ ತಮ್ಮ ಫೇವರೆಟ್‌ ಕಡಗವನ್ನು ಶೈನ್‌ಗೆ ಗಿಫ್ಟ್‌ ಆಗಿ ನೀಡಿದ್ದರು. ಬಟ್ಟೆ ಜೋಡಿಸುವಾಗ ದೀಪಿಕಾಗೆ ಕಡಗ ಸಿಕ್ಕಿದ ತಕ್ಷಣವೇ ಅದನ್ನು ದೀಪಿಕಾ ಶೈನ್‌ಗೆ ನೀಡಿರುವುದನ್ನು ನಿರ್ಲಕ್ಷ್ಯದಿಂದ ಕಳೆದುಕೊಂಡಿದ್ದಾರೆಂದು ಆರೋಪಿಸಿ, ಮುನಿಸಿಕೊಂಡರು. ಈ ವಿಚಾರವಾಗಿಯೇ ಈ ಉಭಯ ಸ್ಪರ್ಧಿಗಳ ನಡುವೆ ಮಾತಿನ ಚಕಮಕಿಯೂ ನಡೆದಿತ್ತು.

ದೀಪಿಕಾ ಅಮ್ಮ ಬಿಗ್‌ಬಾಸ್ ಮನೆಗೆ ಬಂದಾಗ ಕ್ರ್ಯಾಬ್ ತಂದಿದ್ದರು. ಶೈನ್ ಅದನ್ನು ತೆಗೆದುಕೊಳ್ಳಲು ಬಂದಾಗ ಅವರಮ್ಮ ದೂರ ತಳ್ಳುವಂತೆ ಮಾಡಿದ್ದರು. ಅಲ್ಲದೇ ಮಗಳಿಗೆ ಒಬ್ಬಳೇ ತಿನ್ನೆಂದು ಹೇಳಿಯೂ ಹೋಗಿದ್ದರು. ಈ ಘಟನೆ ನಡೆದಂದಿನಿಂದ ಶೈನ್, ದೀಪಿಕಾ ನಡುವೆ ತುಸು ಅಂತರ ಸೃಷ್ಟಿಯಾಗಿತ್ತು. ಒಬ್ಬರಿಗೊಬ್ಬರು ಅವೈಯ್ಡ್ ಮಾಡಲು ಶುರು ಮಾಡಿದ್ದರು. ನಂತರ ನಡೆದ ಈ ಕಡಗದ ವಿಷಯವಾಗಿಯೂ ಇಬ್ಬರ ನಡುವಿನ ವೈಮನಸ್ಯ ಮುಂದುವರಿಯಿತು. ಮತ್ತೆ ಮುರಿದ ಮನಸ್ಸು ಸರಿ ಹೋಗಲೇ ಇಲ್ಲ. 

'ದುನಿಯಾ' ರಶ್ಮಿ ದರ್ಬಾರ್; ಇಷ್ಟೊಂದು ಸಣ್ಣ ಆಗಲು ಕಾರಣವೇನು?

ಒಟ್ಟಿನಲ್ಲಿ ಸೀಸನ್ 7ರ ಬಿಗ್‌ಬಾಸ್ ಮನೆಯಲ್ಲಿ ಇಬ್ಬರೂ ಕೈ ಕೈ ಹಿಡ್ಕೊಂಡು ಅಲ್ಲೇ ಪ್ರೇಮ ಆರಂಭವಾಗುತ್ತಿದೆ ಎನ್ನುವಂತೆ ಶೈನ್ ಮತ್ತು ದೀಪಿಕಾ ನಡೆದುಕೊಳ್ಳುತ್ತಿದ್ದರು. ದಿನ ಕಳೆದಂತೆ ಇದೀಗ ನಾನೊಂದು ತೀರಾ, ನೀನೊಂದು ತೀರ... ಎನ್ನುವಂತೆ ದೂರ ದೂರವಾಗುತ್ತಿದ್ದಾರೆ.