ಕನ್ನಡ ಚಿತ್ರರಂಗದಲ್ಲೇ ಅಪರೂಪ ವ್ಯಕ್ತಿತ್ವವುಳ್ಳ ರಂಗಭೂಮಿ ಕಲಾವಿದ, ನಿರ್ದೇಶಕ ಹಾಗೂ ನಟ ಶಂಕರ್ ನಾಗ್ ಹೆಸರು ಒಮ್ಮೆ ಕೇಳಿದರೆ ಮೈ ಜುಮ್ ಎನಿಸುತ್ತದೆ. ರಂಗಭೂಮಿಗೆ ಹಾಗೂ ಚಿತ್ರರಂಗಕ್ಕೆ ಅವರು ನೀಡಿರುವ ಕೊಡುಗೆ ಅಪಾರ.

 

ದಾವಣಗೆರೆ ಬಳಿ ಚಲಿಸುವಾಗ ಅಪಘಾತದಲ್ಲಿ ಇಹಲೋಕ ತ್ಯಜಿಸಿದ ಶಂಕರ್‌ ನಾಗ್‌ರನ್ನು ಬಿಗ್‌ ಬಾಸ್‌ ಮನೆಯಲ್ಲಿರುವ ಹಿರಿಯ ಸ್ಪರ್ಧಿ ಜೈ ಜಗದೀಶ್ ನೆನಪಿಸಿಕೊಂಡು ಯಾರಿಗೂ ಗೊತ್ತಿಲ್ಲದ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

380 ರೂ ಜೇಬಲ್ಲಿಟ್ಟುಕೊಂಡು ಕೋಟ್ಯಾಧೀಶ್ವರನಾದ ರವಿ ಬೆಳೆಗೆರೆ; ಹಿಂದಿದೆ ರೋಚಕ ಕಹಾನಿ!

 

ಹೈ ಡಿಮ್ಯಾಂಡ್ ನಟನಾಗಿ 80 ರ ದಶಕದಲ್ಲಿ ಚಿತ್ರರಂಗವನ್ನು ಆಳಿದ ಶಂಕರ್‌ ನಾಗ್ ಗೆ ಒಂದು ಸಮಯದಲ್ಲಿ ಅವಕಾಶವೇ ಇಲ್ಲದಂತಾಗಿತ್ತು. ಇದನ್ನು ಯಾರೊಂದಿಗೂ ಹೇಳಿಕೊಳ್ಳಲಾಗದೇ ತನ್ನ ಕಷ್ಟವನ್ನು ತಾನೇ ಎದುರಿಸಬೇಕೆಂದು ಕ್ಯಾಂಟೀನ್ ನಡೆಸುತ್ತಿದ್ದರಂತೆ. ಆ ನಂತರ ಅವಕಾಶ ಸಿಕ್ಕಿ ಹಿಂತಿರುಗಿ ನೋಡಲೇ ಇಲ್ಲ. ಮಾಡಿದ ಸಿನಿಮಾಗಳೆಲ್ಲಾ ಸೂಪರ್ ಹಿಟ್. ಕನ್ನಡ ಚಿತ್ರರಂಗವನ್ನು ಆಳಿದರು.

ಲವ್,ಡ್ರಾಮಾ ಮಾಡೋವ್ರನ್ನ ಮಾತ್ರ ಫೋಕಸ್ ಮಾಡ್ತಿದ್ಯಾ ಬಿಗ್ ಬಾಸ್?

'ಒಬ್ಬ ಫೇಮಸ್‌ ಕನ್ನಡ ಚಿತ್ರರಂಗದ ನಟ, ಸಿನಿಮಾದಲ್ಲಿ ಮಾರ್ಕೆಟ್ ಇಲ್ಲದೇ ಕ್ಯಾಂಟೀನ್ ಇಟ್ಟುಕೊಂಡಿದ್ದರು. ಯಾರು ಹೇಳಿ ನೋಡೋಣ? ಎಂದು ಜಗದೀಶ್ ಕೇಳಿದಾಗ....ಯಾರು ಯಾರು? ಎಂದು ಪ್ರಶ್ನಿಸುತ್ತಾರೆ. ಅದಕ್ಕೆ 'ಶಂಕರ್ ನಾಗ್' ಎಂದು ಜೈ ಜಗದೀಶ್ ಉತ್ತರಿಸುತ್ತಾರೆ.