ವೀಕೆಂಡ್ ಬಂತೆಂದರೆ ಬಿಗ್ ಬಾಸ್ ಮನೆಯಲ್ಲಿ ವಾರದ ಜೊತೆ ಕಿಚ್ಚನ ಜೊತೆ ಸಂಭ್ರಮ ಶುರುವಾಗುತ್ತದೆ.  ಕಂಟೆಸ್ಟಂಟ್ಸ್ ಗಳ ಜೊತೆ ಸುದೀಪ್ ಮಾತನಾಡುತ್ತಾರೆ. ಇಂಟರೆಸ್ಟಿಂಗ್ ವಿಚಾರಗಳನ್ನು ಹೇಳುತ್ತಾರೆ. 

ಈ ವಾರ ಬಿಗ್ ಬಾಸ್ ಮನೆಯೊಳಗಿರುವವರಿಗೆ ಒಂದು ಟಾಸ್ಕ್ ನೀಡಲಾಗಿತ್ತು. ಅಲ್ಲಿನ ಸ್ಪರ್ಧಿಗಳ ಬಗ್ಗೆ ಒಂದೊಂದು ಇಂಟರೆಸ್ಟಿಂಗ್ ವಿಚಾರಗಳನ್ನು ಎನ್ವಲೋಪ್ ಮೇಲೆ ಬರೆಯಲಾಗಿತ್ತು. ಅದು ಯಾರಿಗೆ ಸಂಬಂಧಿಸಿದ್ದು ಎಂದು ಹೇಳಬೇಕಿತ್ತು. ಅದರಲ್ಲೊಂದು ಪ್ರಶ್ನೆ ಹೀಗಿತ್ತು, 'ಕಾರನ್ನು ಮೊದಲನೇ ಗೇರ್ ನಲ್ಲಿ ಡ್ರೈವ್ ಮಾಡ್ತಾ ಎದುರಿಗೆ ಗಾಡಿಗಳು ಬಂದರೆ ನಿಲ್ಲಿಸಿ ಮತ್ತೆ ಮುಂದೆ ಹೋಗುತ್ತಿದ್ದರು ಇವರು, ಯಾರಿವರು'? ಎಂದು ಕೇಳಲಾಗಿತ್ತು. ಇದಕ್ಕೆ ಸರಿ ಉತ್ತರ ಗುರುಲಿಂಗ ಸ್ವಾಮೀಜಿ. 

BB7: ರಾತ್ರಿಯೆಲ್ಲಾ ಎಕ್ಸಾಮ್ ಗೆ ಓದಿ ಮಾರನೇ ದಿನ ಬಸ್ ನಲ್ಲಿ ನಿದ್ದೆ ಮಾಡಿದ ಕಿಲಾಡಿ!

ಹಾವೇರಿ ಅಗಡಿ ಅಕ್ಕಿ ಮಠದ ಗುರುಲಿಂಗ ಸ್ವಾಮಿ ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಬಂದಿದ್ಧಾರೆ. ಇವರು ಒಮ್ಮೆ ಹೊರಗಡೆ ಕಾರ್ಯಕ್ರಮಕ್ಕೆ ಹೋಗಿದ್ದಾಗ ಕಾರು ಡ್ರೈವರ್ ಅನಿವಾರ್ಯ ಕಾರಣಗಳಿಂದಾಗಿ ಊರಿಗೆ ಹೋಗಬೇಕಾಯಿತು. ಇನ್ನೊಂದು ಕಡೆ ತುರ್ತು ಕಾರ್ಯಕ್ರಮ ಇದ್ದಿದ್ದರಿಂದ ಅನಿವಾರ್ಯವಾಗಿ ಇವರೇ ಕಾರು ಡ್ರೈವ್ ಮಾಡಬೇಕಾಯಿತು. ಡ್ರೈವಿಂಗ್ ಬಗ್ಗೆ ಅಷ್ಟಾಗಿ ಗೊತ್ತಿಲ್ಲದಿದ್ದರೂ ಧೈರ್ಯ ಮಾಡಿದರು. ಮೊದಲನೇ ಗೇರ್ ನಲ್ಲಿ ಹೋಗಲು ಶುರು ಮಾಡಿದರಂತೆ! ಎದುರಿಗೆ ಯಾವುದಾದರೂ ವಾಹನಗಳು ಬಂದರೆ ನಿಲ್ಲಿಸಿ ಮತ್ತೆ ಮುಂದೆ ಹೋಗುತ್ತಿದ್ದರಂತೆ. 15 ಕಿಮೀ ಹೋಗಲು ಒಂದೂವರೆ ಗಂಟೆ ತೆಗೆದುಕೊಂಡು ಕಡೆಗೂ ಹೋಗಬೇಕಾದ ಸ್ಥಳ ತಲುಪಿದರಂತೆ! 

BB7: ಕಿರುತೆರೆ ನಟ ರಸ್ತೆಯಲ್ಲಿ ದೋಸೆ ಮಾರಿ ಜೀವನ ಮಾಡುತ್ತಿದ್ದಾರೆ!

ಇದನ್ನು ಒಂದು ಚಾಲೆಂಜ್ ಆಗಿ ತೆಗೆದುಕೊಂಡು ಕೇವಲ ಎರಡು ದಿನಗಳಲ್ಲಿ ಕಾರು ಡ್ರೈವಿಂಗ್ ಕಲಿತರಂತೆ. ಇಂದು ಅವರೊಬ್ಬ ಎಕ್ಸ್ ಪರ್ಟ್ ಡ್ರೈವರ್!