BBK9 ನಕ್ಕರೆ ಬೈಯುತ್ತಿದ್ದರು, ಆಗ ತಾಯಿಗೆ ಆಗೋ ನೋವು ಅಷ್ಟಿಷ್ಟಲ್ಲ: ವಿನೋದ್ ಗೊಬ್ಬರಗಾಲ
ಮನೆಯಲ್ಲಿ ಟಿವಿ ಇದ್ದರೆ ಅವರೇ ದೊಡ್ಡವರು. ಬಾಗಿಲು ಬಳಿ ಕುಳಿತು ಟಿವಿ ನೋಡಬೇಕಿತ್ತು....ಆ ದಿನಗಳನ್ನು ನೆನಪಿಸಿಕೊಂಡ ವಿನೋದ್.....
ಕಲರ್ಸ್ ಕನ್ನಡ ಬಿಗ್ ಬಾಸ್ ಸೀಸನ್ 9ರಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಗಿತ್ತು. ಆಗ ವಿನೋದ್ ಗೊಬ್ಬರಗಾಲ ತಾಯಿ ಬಗ್ಗೆ ಮಾತನಾಡಿದ್ದಾರೆ. ಕಷ್ಟ ದಿನಗಳ ಬಗ್ಗೆ ನೆನಪಿಸಿಕೊಂಡಿದ್ದಾರೆ.
'ನನಗೆ ಹೊಸ ಪ್ರಪಂಚ ತೋರಿಸಿಕೊಟ್ಟಿದ್ದು ತಾಯಿ. ತಂದೆ ದುಡಿಯಲು ಹೋದಾಗ ಮಕ್ಕಳನ್ನು ಇಲ್ಲ ಪ್ರಪಂಚ ಹೀಗಿದೆ ಈ ರೀತಿ ಇರಬೇಕು ಈ ರೀತಿ ಬದುಕಬೇಕು ಎಂದು ತೋರಿಸಿ ಕೊಡುವುದೇ ತಾಯಿ. ಮನೆಗೆ ಬಂದಾಗ ಸ್ಲೇಟು ಬಳಪ ಹಿಡಿಯಲು ಹೇಳಿಕೊಟ್ಟಿದ್ದು ತಾಯಿ. ಮಜಾ ಏನೆಂದರೆ ಶನಿವಾರ ಮತ್ತು ಭಾನುವಾರ ಅಂದ್ರೆ ಕವಲೆಗೆ ಕರೆದುಕೊಂಡು ಹೋಗುವವರು. ಕವಲೆ ಏನೆಂದರೆ ಸಣ್ಣದಾಗಿ ನೀರು ಹರಿಯುತ್ತಿತ್ತು. ಬಟ್ಟೆ ಒಗೆಯುವ ಕಾರ್ಯಕ್ರಮ ಇತ್ತು ಅವತ್ತು ಸೋಪ್ ಹಾಕಿಕೊಡು ಅಂದ್ರೆ ನಾವು ಮೂರು ಜನ - ಅಣ್ಣ, ತಂಗಿ ಮತ್ತು ನಾನು. ಮೂರು ಜನಕ್ಕೂ ಸೋಪ್ ಹಾಕಿ ಬಡೀರಿ ಅಂತ ಹೇಳುತ್ತಿದ್ದರು. ತಾಯಂದಿರು ಕೆಲಸ ಮಾಡುವಾಗ ಒಂದು ಸೌಂಡ್ ಮಾಡುತ್ತಾರೆ...ಶ್ ಶ್ ಶ್ ಅಂತ. ಅದು ಬಟ್ಟೆ ಒಗೆಯುವ ಟ್ರೈನಿಂಗ್ ಇರಬೇಕು ಎಂದು ನಾವು ಹಾಗೇ ಮಾಡುತ್ತಿದ್ದೆವು. ನಮ್ಮದೊಂದು ಫನ್ನಿ ಜೀವನ ..ಈ ರೀತಿ ಕಾಲವನ್ನು ಕಳೆಯುವುದು ಹೇಗೆ ಎಂದು ತಾಯಿ ಹೇಳಿಕೊಡುತ್ತಿದ್ದಳು' ಎಂದು ಬಾಲ್ಯದ ದಿನಗಳಲ್ಲಿ ವಿನೋದ್ ನೆನಪಿಸಿಕೊಂಡಿದ್ದಾರೆ.
'ಒಂದು ಸಮಯದಲ್ಲಿ ಟಿವಿ ಜಗತ್ತು ಶುರುವಾಯ್ತು. ಆಗ ಯಾರ ಮನೆಯಲ್ಲಿ ಟಿವಿ ಇತ್ತು ಅವರನ್ನು ದೊಡ್ಡವರ ಮನೆ ಎಂದು ಕರೆಯುತ್ತಿದ್ದರು. ಸೈಕಲ್ ಇದ್ದವರ ಮನೆ ದೊಡ್ಡವರ ಮನೆ ಎಂದು ಹೇಳುತ್ತಿದ್ದರು. ನಾವು ಮಕ್ಕಳ ಒಬ್ಬರ ಮನೆಯಲ್ಲಿ ಟಿವಿ ನೋಡಬೇಕು ಅಂದ್ರೆ ಅವರ ಮನೆ ಬಾಗಿಲು ಇರುತ್ತೆ ಅಲ್ವಾ ಅಲ್ಲಿ ಕೂರಬೇಕಿತ್ತು. ನಾವು ಜೋರಾಗಿ ನಗುವಂತಿಲ್ಲ ಅಪ್ಪಿ ತಪ್ಪಿ ನಕ್ಕಿದ್ದರೂ ಅವರಿಗೆ ತೊಂದರೆ ಆಗುತ್ತೆ ಅವರಿನಿಂದ ಒಂದು ಮಾತು ಹೇಳಿದ್ದರೆ ಅಥವಾ ಬೈದರೆ ಅಲ್ಲಿ ತಾಯಿಗೆ ತುಂಬಾ ನೋವಾಗುತ್ತದೆ. ಏನು ನನ್ನ ಮಕ್ಕಳು ನಕ್ಕರೆ ಬೈಯುತ್ತಾರೆ ಅಂತ. ಎಲ್ಲಾ ರೀತಿ ಅವಮಾನಗಳು ಇರುತ್ತೆ ಅದನೆಲ್ಲಾ ಮೌನವಾಗಿ ಸಹಿಸಿಕೊಂಡು ಅನುಭವಿಸುತ್ತಾಳೆ ತಾಯಿ' ಎಂದು ಮಾತನಾಡಿದ್ದಾರೆ.
BBK9; ಅವನ ಮನೆ ಆಳಾ, ಕಪಿ, ಬಿಗ್ ಮನೆಯಲ್ಲಿ ತಾರಕಕ್ಕೇರಿದ ಮರ್ಯಾದೆ ಜಗಳ, ಕಣ್ಣೀರಿಟ್ಟ ಕಾವ್ಯಶ್ರೀ
'ನನ್ನ ತಾಯಿಗಾಗಿ ಒಂದೇ ಒಂದು ಸಾಲು ಹೇಳಬೇಕು. ಹುಟ್ಟಿದ್ದಾಗ ಹೆಚ್ಚು ಖುಷಿ ಪಟ್ಟವಳು ಅವ್ವ, ನಾನು ಅತ್ತಾಗ ಹೊಟ್ಟೆ ಹಸಿದಾಗ ಎದೆಹಾಲು ಉಣಿಸಿದವಳು ಅವ್ವ, ನಾನು ಬಿದ್ದಾಗ ನೋವು ಮರೆಸಿದವಳು ಅವ್ವ, ನಾನು ಸೋತಾಗ ಜೊತೆಗೆ ನಿಲ್ಲುವವಳು ಅವ್ವ. ನಾನು ಅವಳಗಿಂತ ಮೊದಲು ಸತ್ತರೆ ಬೇಗ ಅಳುವುವಳು ನನ್ನ ಅವ್ವ . ಅವ್ವ ಇರೋ ಜಗತ್ತು ಸುಂದರವಾಗಿರುವ ಜಗತ್ತು. ಎಷ್ಟೋ ಜನಕ್ಕೆ ಅವ್ವನ ಪ್ರೀತಿ ಸಿಕ್ಕಿರುವುದಿಲ್ಲ ತಂದೆ ಪ್ರೀತ ಸಿಗುವುದಿಲ್ಲ. ಎರಡೂ ಪ್ರೀತಿ ಪಡೆಯುತ್ತಿರುವವರು ಆದಷ್ಟು ಪ್ರೀತಿ ಕೊಟ್ಟು ನೋಡಿಕೊಳ್ಳಿ' ಎಂದು ಹೇಳಿದ್ದಾರೆ.
ಈ ವಾರ ವಿನೋದ್ ಆರೋಗ್ಯದಲ್ಲಿ ಏರುಪೇರು ಕಂಡಿತ್ತು. ವಿಪರೀತ ಜ್ವರ ಇದ್ದ ಕಾರಣ ವೈದ್ಯರನ್ನು ಸಂಪರ್ಕಿಸಿ ವಿನೋದ್‌ಗೆ ಚಿಕಿತ್ಸೆ ನೀಡಲಾಗಿತ್ತು.