BBK9; ಅವನ ಮನೆ ಆಳಾ, ಕಪಿ, ಬಿಗ್ ಮನೆಯಲ್ಲಿ ತಾರಕಕ್ಕೇರಿದ ಮರ್ಯಾದೆ ಜಗಳ, ಕಣ್ಣೀರಿಟ್ಟ ಕಾವ್ಯಶ್ರೀ

ಬಿಗ್ ಬಾಸ್ ಮನೆಯಲ್ಲಿ ಕಾವ್ಯಶ್ರೀ ಮತ್ತು ವಿನೋದ್ ಗೊಬ್ಬರಗಾಲ ನಡುವೆ ಮಾತಿನ ವಾಗ್ವಾದ ನಡೆದಿದೆ. ವಿನೋದ್ ಮಾತಿನಿಂದ ಬೇಸರಗೊಂಡ ಕಾವ್ಯಶ್ರೀ ಕಣ್ಣೀರಿಟ್ಟಿದ್ದಾರೆ. 

Kavyashree and Vinod gobbaragala fighting in bigg boss kannada season 9 sgk

ಬಿಗ್ ಬಾಸ್ ಕನ್ನಡ ಸೀಸನ್ 9 ಮೊದಲ ವಾರ ಯಶಸ್ವಿಯಾಗಿ ಮುಕ್ತಾಯವಾಗಿ ಎರಡನೇ ವಾರಕ್ಕೆ ಕಾಲಿಟ್ಟಿದೆ. ಈ ಬಾರಿ ಒಟ್ಟು 18 ಮಂದಿ ಬಿಗ್ ಮನೆಗೆ ಎಂಟ್ರಿ ಕೊಟ್ಟಿದ್ದು ಈಗಾಗಲೇ ಒಬ್ಬರು ಎಲಿಮಿನೇಟ್ ಆಗಿ ಮನೆಯಿಂದ ಹೊರನಡೆದಿದ್ದಾರೆ. ಪ್ರತಿಯೊಬ್ಬರು ತಮ್ಮತಮ್ಮ ಅಸಲಿ ಆಟ ಪ್ರಾರಂಭ ಮಾಡದ್ದಾರೆ. ಟಾಸ್ಕ್ ಜೊತೆ  ಅಳು, ನಗು, ಕಿತ್ತಾಟ, ವಾಗ್ವಾದ ಬಿಗ್ ಮನೆಯಲ್ಲಿ ನಡೆಯುತ್ತಿದೆ. ಬಿಗ್ ಮನೆ ಎಂದ್ಮೇಲೆ ಸ್ಪರ್ಧಿಗಳ ನಡುವೆ ಕಿತ್ತಾಟ, ಜಗಳ ಜೋರಾಗೆ ಇರುತ್ತದೆ. ಈ ಬಾರಿ ಬಿಗ್ ಬಾಸ್ ನಲ್ಲಿ ಏನು ಹೊರತಾಗಿಲ್ಲ. ಇಂದು ಬಿಗ್ ಬಾಸ್ ಮನೆಯಲ್ಲಿ ಕಾವ್ಯಶ್ರೀ ಮತ್ತು ವಿನೋದ್ ಗೊಬ್ಬರಗಾಲ ನಡುವೆ ಮಾತಿನ ವಾಗ್ವಾದ ನಡೆದಿದೆ. ವಿನೋದ್ ಮಾತಿನಿಂದ ಬೇಸರಗೊಂಡ ಕಾವ್ಯಶ್ರೀ ಸರಿಯಾಗಿ ಉಗಿಯುತ್ತಲೆ ಕಣ್ಣೀರಿಟ್ಟಿದ್ದಾರೆ. 

ಊಟ ಮಾಡುವಾಗ ಕಾವ್ಯಾಶ್ರೀಗೆ ವಿನೋದ್ ಗೊಬ್ಬರಗಾಲ ಬಂದು ಅಲ್ಲಿ ಹಾಕು ಎಂದು ಹೇಳಿದರು. ಇದರಿಂದ ಕೋಪಗೊಂಡ ಕಾವ್ಯಶ್ರೀ ನಾನೇನು ಅವರ ಮನೆ ಆಳಾ, ಬಂದು ಹಾಕು ಅಂತ ಆರ್ಡರ್ ಮಾಡುತ್ತಿದ್ದಾನೆ ಎಂದು ರಾಕೇಶ್ ಬಳಿ ದೂರಿದರು. ಇತ್ತ ಊಟ ಮಾಡುತ್ತಾ ಕುಳಿತಿದ್ದ ಗೊಬ್ಬರಗಾಲ ನನಗೇನು ಬೆಲೆನೇ ಇಲ್ವಾ ಎನ್ನುತ್ತಾರೆ. ಬಳಿಕ ತನ್ನ ಹಿಂದೆಯೇ ಹೋಗಿ ಕುಳಿತಿದ್ದ ವಿನೋದ್‌ಗೆ ನನಗೆ ಇಷ್ಟವಿಲ್ಲದೆ ಕಪಿ ನನ್ನ ಹಿಂದೆ ಬಿದ್ದೆದೆ ಎಂದು ವ್ಯಂಗ್ಯವಾಡಿದರು. ಬಳಿಕ ಮರ್ಯಾದೆ ವಿಚಾರಕ್ಕೆ ಇಬ್ಬರು ಕಿತ್ತಾಡಿದ್ದಾರೆ. ಅರುಣ್ ಸಾಗರ್ ಮುಂದೆ ಇಬ್ಬರ ಮಾತಿನ ಜಕಮಕಿ ಜೋರಾಗಿತ್ತು. ಬಳಿಕ ಕಾವ್ಯಾಶೀ ಜೋರಾಗಿ ಅಳುತ್ತಾ ನಾವು ಅರ್ಟಿಸ್ಟ್  ಹಾಗೆಲ್ಲ ಮಾಡಲ್ಲ ಎಂದು ದೀಪಿಕಾ ಬಳಿ ಹೇಳಿದರು. ಸದ್ಯ ಇವತ್ತಿನ ಎಪಿಸೋಡ್‌ನ ಪ್ರೋಮೋ ರಿಲೀಸ್ ಆಗಿದ್ದು ಸಂಪೂರ್ಣ ಎಪಿಸೋಡ್ ರಾತ್ರಿ ಪ್ರಸಾರವಾಗಲಿದೆ. 

ಗೊಬ್ಬರಗಾಲ ಬಗ್ಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. 'ಗೊಬ್ಬರಗಾಲ ನಿನ್ನದು ಅತಿಯಾಯಿತು' ಎಂದು ಅನೇಕರು ಹೇಳುತ್ತಿದ್ದಾರೆ. 'ಗೊಬ್ಬರಗಾಲ ಓವರ್ ಆಕ್ಟಿಂಗ್' ಎನ್ನುತ್ತಿದ್ದಾರೆ. ಕಾವ್ಯಶ್ರೀ ಮತ್ತು ವಿನೋದ್ ನಡುವಿನ ಕಿತ್ತಾಟ ಎಲ್ಲಿವರೆಗೂ ಬಂದಿದೆ ಎಂದು ನೋಡಲು ರಾತ್ರಿ ಎಪಿಸೋಡ್ ಪ್ರಸಾರವಾಗುವವರೆಗೂ ಕಾಯಲೇ ಬೇಕು.

BBK9: ಕಿಚ್ಚನ ಮೊದಲನೇ ಪಂಚಾಯಿತಿಯಲ್ಲಿ ಅರುಣ್ ಸಾಗರ್ ಗೆ ಕ್ಲಾಸ್!

 

ಅಂದಹಾಗೆ ಬಿಗ್‌ಬಾಸ್ 9 ಸೆಪ್ಟೆಂಬರ್ 24ರಿಂದ ಆರಂಭವಾಗಿದೆ. ಈ ಬಾರಿಯ ಬಿಗ್ ಬಾಸ್‌ನಲ್ಲಿ ಅರುಣ್ ಸಾಗರ್, ಅಶ್ವಿನ ನಕ್ಷತ್ರದ ಮೂಲಕ ಮನೆ ಮಾತಾಗಿದ್ದ ನಟಿ ಮಯೂರಿ, ದೀಪಿಕಾ ದಾಸ್, ನವಾಜ್,  ದಿವ್ಯಾ ಉರುಡುಗ, ದರ್ಶ್ ಚಂದ್ರಪ್ಪ, ಪ್ರಶಾಂತ್ ಸಂಬರಗಿ, ಅಮೂಲ್ಯ ಗೌಡ, ಸನ್ಯಾ ಅಯ್ಯರ್, ರೂಪೇಶ್ ಶೆಟ್ಟಿ, ವಿನೋದ್ ಗೊಬ್ರಗಾಲ (ಕಾಮಿಡಿ ಕಿಲಾಡಿಗಳು), ಲಕ್ಷ್ಮಿ ಬಾರಮ್ಮ ಸೀರಿಯಲ್ ಖ್ಯಾತಿಯ ನೇಹಾ ಗೌಡ,  ನಾನು ಅಂದ್ರೆ ನಂಬರ್, ನಂಬರ್ ಅಂದ್ರೆ ನಾನು ಎನ್ನುವ ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ, ಐಶ್ವರ್ಯಾ(ಬೈಕ್ ರೈಡರ್), ರೂಪೇಶ್ ರಾಜಣ್ಣ, ಮಂಗಳ ಗೌರಿಯ ಕಾವ್ಯಶ್ರೀ, ನಿರೂಪಕಿ ಅನುಪಮಾ ಗೌಡ ಸ್ಪರ್ಧಿಗಳಾಗಿ ಭಾಗಿಯಾಗಿದ್ದರು. 

BBK9 ಐಶ್ವರ್ಯ ಪಿಸ್ಸೆ ದಯವಿಟ್ಟು ನನ್ನ ಪ್ರೀತ್ಸೆ ಎಂದ ಪ್ರಪೋಸ್ ಮಾಡಿದ ನವಾಜ್!

ಈ ಬಿಗ್ ಬಾಸ್ ಆವೃತ್ತಿಯಲ್ಲಿ ಈಗಾಗಲೇ ಒಮ್ಮೆ ಪಾಲ್ಗೊಂಡಿದ್ದ ಸ್ಪರ್ಧಿಗಳು ಹಾಗೂ ಇತ್ತೀಚೆಗೆ ಒಟಿಟಿ ಬಿಗ್ ಬಾಸ್‌ನಲ್ಲಿ ಗೆದ್ದ ನಾಲ್ಕು ಸ್ಪರ್ಧಿಗಳು ಹಾಗೂ ಕೆಲವು ಹೊಸ ಮುಖಗಳು ಸೇರಿರುವುದು ವಿಶೇಷ. ಎಂದಿನಂತೆ ಸ್ಯಾಂಡಲ್‌ವುಡ್ ಚಕ್ರವರ್ತಿ ಕಿಚ್ಚ ಸುದೀಪ್ ನಿರೂಪಣೆ ಮಾಡುತ್ತಿದ್ದು, ಅಭಿಮಾನಿಗಳು ವಾರದ ಕಥೆ ಕಿಚ್ಚನ ಜೊತೆ ನೋಡಲು ಕಾತುರರಾಗಿರುತ್ತಾರೆ. ಮೊದಲ ವಾರ ಐಶ್ವರ್ಯಾ ಪಿಸೆ ಮನೆಯಿಂದ ಹೊರಹೋಗಿದ್ದು ಸದ್ಯ 17 ಮಂದಿ ಬಿಗ್ ಬಾಸ್ ಮನೆಯಲ್ಲಿದ್ದಾರೆ. ಎರಡನೇ ವಾರ ಯಾರ ಹೊರಹೋಗುತ್ತಾರೆ ಎಂದು ಕಾದುನೋಡಬೇಕಿದೆ. 

Latest Videos
Follow Us:
Download App:
  • android
  • ios