ಬಿಗ್ ಬಾಸ್‌ ಮನೆಯಲ್ಲಿ ಮೊದಲ ವಾರದಿಂದಲೇ ಹುಡುಗಿಯರ ನೋಟೆಡ್‌ ಲಿಸ್ಟ್‌ ಸೇರಿರುವ ಶೈನ್‌ ಶೆಟ್ಟಿ ಕ್ರಶ್ ಪಟ್ಟಿ ಕೇಳಿದ್ರೆ ನೀವೇ ಶಾಕ್ ಆಗ್ತಿರಾ! ಯಾಕಂದ್ರೆ ಮೊದಲ ವಾರ ಶೈನ್‌ ಮೇಲೆ ಚೈತ್ರಾಗೆ ಲವ್ ಆಗಿತ್ತು. ಆದರೆ ಎರಡು ಮೂರು ವಾರದಿಂದ ಶೈನ್‌ಗೆ ಒಬ್ಬೊಬರ ಮೇಲೆ ಕ್ರಶ್ ಆಗುತ್ತಿದೆ.

 

ಮನೆ ಅಂದ್ಮೇಲೆ ಲವ್ವೂ ಆಗುತ್ತೆ ವಾರೂ ಆಗುತ್ತೆ ಆದರೆ ಇದೆಲ್ಲಾ ಶುರು ಆಗೋಕೆ ಟೈಂ ತೆಗೆದುಕೊಳ್ಳುತ್ತೆ. ಶೈನ್‌ ಹಿಂದೆ ಚೈತ್ರಾ ಕೊಟ್ಟೂರು ಲವ್ -ಲವ್ ಎಂದು ಹಿಂದೆ ಹೋದರೂ ತಿರುಗಿ ನೋಡದ ಶೈನ್ ಶೆಟ್ಟಿ ಬಿದ್ದಿದ್ದು ಮಾತ್ರ ಪ್ರಿಯಾಂಕಾ, ಚಂದನ್ ಹಾಗೂ ದೀಪಿಕಾ ದಾಸ್ ಹಿಂದೆ.

ಎಲ್ಲರೆದುರೆ ದೀಪಿಕಾ-ಭೂಮಿ ಲಿಪ್ ಲಾಕ್, ಇದು ಮೊದಲೇನಲ್ವಂತೆ!

 

ಮೊದಲ ದಿನಗಳಲ್ಲಿ ಪ್ರಿಯಾಂಕಾಳನ್ನು ಮದುವೆ ಆಗಿದ್ದೀನಿ ಎಂದು ಹೇಳಿಕೊಂಡು ಓಡಾಡುತ್ತಿದ್ದರು. ಆನಂತರ ಅವರ ಗುಂಪಿನಲ್ಲಿದ್ದ ಚಂದನ್‌ ಮೇಲೆ ಲೈಟ್‌ ಆಗಿ ಮನಸೋತರು. ಆ ನಂತರ ನೋಡೋಕೆ ಸೈಲೆಂಟ್‌ ಆಗಿದ್ದರೂ ಟಾಸ್ಕ್‌ ಮೂಲಕ ಬುಸುಗುಡುತ್ತಿರುವ ನಾಗಿಣಿ ಮೇಲೆ ಲವ್ ಆಗಿದೆ.

BB7: ಕಿರುತೆರೆಯ ರಾಣಿ ಚಂದನ ಅನಂತಕೃಷ್ಣಗೆ ನಿಜ್ವಾಗ್ಲೂ ಲವ್‌ ಆಗಿದ್ಯಾ? ..

 

ಕನ್ನಡಿ ಮುಂದೆ ಗಂಟೆಗಟ್ಟಲೇ ನಿಲ್ಲುತ್ತಾರೆ ಎಂಬ ಆರೋಪ ಇವರ ಮೇಲಿದ್ದರೂ ಮಾಡಬೇಕಾದ ಕೆಲಸವನ್ನು ಮೊದಲು ಮಾಡಿ ಆನಂತರ ಇನ್ನಿತರ ಕೆಲಸಕ್ಕೆ ಟೈಂ ಕೊಡುತ್ತಾರೆ. ಟಾಸ್ಕ್‌ನಲ್ಲಿ ಜಯಶಾಲಿಯಾಗಿ, ಅಡುಗೆ ಮನೆಯಲ್ಲಿ ರುಚಿ-ರುಚಿಯಾಗಿ ಅಡುಗೆ ಮಾಡುತ್ತಾ, ತನ್ನ ವಸ್ತ್ರವನ್ನು ಡಿಸೈನ್ ಮಾಡಿಕೊಳ್ಳುತ್ತಾ ಸ್ವಲ್ಪ ಡಿಫರೆಂಟ್‌ ಆದ್ರೂ ಲೈಫ್‌ ಪಾರ್ಟನರ್ ಆಗೋಕೆ ಪುಲ್‌ ಪ್ಯಾಕೇಜ್‌ ಎಂದು ಮನೆ ಮಂದಿಯೆಲ್ಲಾ ಮಾತನಾಡಿಕೊಳ್ಳಲು ಶುರು ಮಾಡಿಕೊಂಡಿದ್ದಾರೆ.

BB7: ರಾಣಿಯಾಗಿ ನೆಗೆಟಿವ್ ಇಮೇಜ್ ಕಳೆದುಕೊಂಡ ಪ್ರಿಯಾಂಕ!

ಇದೆಲ್ಲಾ ನಿಜಾನೋ ಅಥವಾ ಮನೆಯಲ್ಲಿ ಉಳಿದುಕೊಳ್ಳಲು ಮಾಡುವ ಸ್ಟ್ರಾಟರ್ಜಿನಾ ಗೊತ್ತಾಗ್ತಿಲ್ಲ. ಯಾರನ್ನ ಬೇಕಾದರೂ ಶೈನ್‌ ಜೊತೆ ರೇಗಿಸಬಹುದು ಆದರೆ ಚೈತ್ರಾ ಏನಾದ್ರೂ ಪ್ರೀತಿ-ಪ್ರೇಮ ಅಂದ್ರೆ ಒಂದು ಮೈಲಿ ದೂರ ಹೋಗುತ್ತಾರೆ ಶೈನ್!