ಬಿಗ್ ಬಾಸ್ ಮನೆಯಲ್ಲಿ ಹೆಣ್ಣು ಮಕ್ಕಳ ಈ ಲಿಪ್ ಲಾಕ್ ನೋಡಿ ಕಂಗಾಲಾಗಿದ್ದು ಗಾಯಕಿ ವಾಸುಕಿ ವೈಭವ್.  ನಾಗಿಣಿ ದೀಪಿಕಾ ದಾಸ್ ಹಾಗೂ ಭೂಮಿ ಲಿಪ್ ಲಾಕ್ ಮಾಡಿದ್ದಾರೆ. ಇದನ್ನು ನೋಡಿದ ವಾಸುಕಿ ವೈಭವ್ ಶಾಕ್ ಆಗಿದ್ದಾರೆ. ದೀಪಿಕಾ ಹಾಗೂ ಭೂಮಿ ಬೆಳಗ್ಗೆ ಎದ್ದ ತಕ್ಷಣ ಪರಸ್ಪರ ಲಿಪ್ ಕಿಸ್ ಮಾಡಿದ್ದು ಇದನ್ನು ಕಂಡ ವಾಸುಕಿ ಒಂದ ಕ್ಷಣ ಸ್ಥಬ್ದರಾಗಿ ಹೋಗಿದ್ದಾರೆ.

ಬಿಗ್ ಬಾಸ್ ಮನೆ ಮಂದಿಗೆ ಗಾಳಿ ಗೋಪುರ ಟಾಸ್ಕ್ ನೀಡಿದ್ದರು. ಬಾವುಟಗಳನ್ನು ಕಿತ್ತು ಸಂಪಾದನೆ ಮಾಡಬೇಕಾಗಿತ್ತು. ಮನೆಯಲ್ಲಿ ಸಿಡಿಲು ಮತ್ತು ಸಪ್ತಾಶ್ವ ತಂಡಗಳ ನಡುವೆ ಬಿಗ್ ಫೈಟ್ ನಡೆಯುತ್ತಲೇ ಇದೆ.  ಒಂದು ತಂಡಕ್ಕೆ ಭೂಮಿ ಶೆಟ್ಟಿ ನಾಯಕಿಯಾದರೆ ಇನ್ನೊಂದು ತಂಡಕ್ಕೆ ದೀಪಿಕಾ ದಾಸ್ ನಾಯಕಿ.

ಚಂದನಾಳ ಕೆನ್ನೆಗೆ ಡ್ಯಾನ್ಸರ್ ಕಿಶನ್ ಕಿಸ್!

ಬೆಳಬೆಳಗ್ಗೆ ತುಟಿಗೆ ತುಟಿ ಕೊಟ್ಟು ಕಿಸ್ ಮಾಡಿದ್ದನ್ನು ಕಂಡ ವಾಸುಕಿ ಅದನ್ನು ಹರೀಶ್ ರಾಜ್ ಅವರ ಬಳಿ ಹೇಳಲು ಬಂದಿದ್ದಾರೆ. ಏನು ಸಾರ್ ಇವರೆಲ್ಲಾ? ಅಂದುಕೊಂಡು ಬಂದಾಗ ಮತ್ತೆ ದೀಪಿಕಾ ಹತ್ತಿರಕ್ಕೆ ಬಂದ ಭೂಮಿ ಶೆಟ್ಟಿ ದೀಪಿಕಾರ ತುಟಿಗೆ ಮುತ್ತಿಟ್ಟಿದ್ದಾರೆ, ಬೇಕಾದರೆ  ನೀವು ಅಂದರೆ ಹರೀಶ್ ರಾಜ್ ಮತ್ತು ವಾಸುಕಿ ಕಿಸ್ ಮಾಡಿಕೊಳ್ಳಿ ಎಂಬ ಪುಕ್ಕಟೆ ಸಲಹೆಯನ್ನು ನೀಡಿದ್ದಾರೆ.

ಒಟ್ಟಿನಲ್ಲಿ ಮನೆಯಲ್ಲಿ ಮಾತ್ರ ಮುತ್ತಿನ ಮತ್ತೇ ಗಮ್ಮತ್ತು ಎಂಬ ಸ್ಥಿತಿ ನಿರ್ಮಾಣವಾಗಿದ್ದು ಇದೀಗ ಕಿರುತೆರೆಯ ನಟಿಯರಿಬ್ಬರ ನಡವಳಿಕೆ ದೊಡ್ಡ ಸುದ್ದಿಗೆ ಆಹಾರವಾಗಿದೆ.