ಬಿಗ್ ಬಾಸ್‌ ಮನೆಯೊಳಗೆ ಸಣ್ಣ ಸಣ್ಣ ಗುಂಪುಗಳಾಗುತ್ತದೆ. ಅಲ್ಲಲ್ಲೇ ಗುಸುಗುಸು ನಡೆಯುತ್ತದೆ. ಅವರೊಳಗೆ ಗಾಸಿಪ್ ನಡೆಯುತ್ತದೆ.

 

'ಬಿಗ್ ಬಾಸ್‌ ದರ್ಬಾರ್' ಎಂದು ನೀಡಿದ ಚಟುವಟಿಕೆಯಲ್ಲಿ ಗಾಯಕ ವಾಸುಕಿ ವೈಭವ್‌ಗೆ ಹಾಗೂ ರಾಯಲ್‌ ಶೆಟ್ಟಿ ಅಲಿಯಾಸ್ ಭೂಮಿ ಶೆಟ್ಟಿಗೆ ಸ್ವಯಂವರ ಮಾಡಿಸಲಾಗಿತ್ತು. ಟಾಸ್ಕನ್ನು ಟಾಸ್ಕ್ ರೀತಿಯಲ್ಲಿ ನೋಡಿ ಅದನ್ನು ಸ್ಪೋರ್ಟಿವ್ ಆಗಿ ತೆಗೆದುಕೊಂಡವರು ವಾಸುಕಿ ಹಾಗೂ ಭೂಮಿ. ಹಾಗಾದ್ರೆ ಮತ್ತೇನು ಪ್ರಾಬ್ಲಂ?

ಏನೂ ತಿಳಿಯದೆ ಎರಡನೇ ಮದುವೆಯಾದ ಜೈಜಗದೀಶ್; ವಿಜಯಲಕ್ಷ್ಮಿ ಧೈರ್ಯಕ್ಕೆ ಜೈ!

 

'ವಾರದ ಕಥೆ ಕಿಚ್ಚನ ಜೊತೆ'ಯಲ್ಲಿ ಕಿಚ್ಚ ಸುದೀಪ್ ವಾರದಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆ ಮಾತನಾಡುತ್ತಾರೆ. ಈ ವೇಳೆ ವಾಸುಕಿಗೆ ಹಾಡೊಂದನ್ನು ಹೇಳುವಂತೆ ವಿನಂತಿಸುತ್ತಾರೆ.

 

'ಸುಮಾರು 19 ವರ್ಷ ಆಗಿರಬಹುದು ಇಲ್ಲ ಅದಕ್ಕಿಂತ ಕಮ್ಮಿ ಆಗಿರಬಹುದು. ಪ್ರೇಮ್‌ ನಿಮಗೆಂದೇ ಹಾಡೊಂದನ್ನು ಬರೆದಿದ್ದಾರೆ ಅದನ್ನು ಒಮ್ಮೆ ಹಾಡಿ. ಆ ಹಾಡು 'ಪ್ರೀತಿ ಏಕೆ ಭೂಮಿ ಮೇಲಿದೆ'ಎಂದು ಹೇಳುತ್ತಾರೆ. ಯಾವುದಕ್ಕೂ ತಪ್ಪು ಅರ್ಥ ತಿಳಿದುಕೊಳ್ಳದೇ ವಾಸುಕಿ ಹಾಡನ್ನು ಹಾಡುತ್ತಾರೆ ಅದಕ್ಕೆ ಕೊಂಚ ತಮಾಷೆ ಮಾಡಬೇಕೆಂದು ಕಿಚ್ಚ ಅಲ್ಲಿ ಇಲ್ಲಿ ನೋಡಬೇಡಿ ನಿಮ್ಮ ಪಕ್ಕದಲ್ಲಿ ನೋಡಿ ಹಾಡಿ 'ಎಂದು ರೇಗಿಸುತ್ತಾರೆ.

'ದುನಿಯಾ' ರಶ್ಮಿ ದರ್ಬಾರ್; ಇಷ್ಟೊಂದು ಸಣ್ಣ ಆಗಲು ಕಾರಣವೇನು?

ಬಿಗ್‌ ಬಾಸ್‌ ಮನೆಯಲ್ಲಿ ವಾಸುಕಿಗೆ ಆತ್ಮೀಯವಾದ ಗೆಳೆಯ ಅಂದ್ರೆ ಶೈನ್ ಶೆಟ್ಟಿ, ಸ್ನೇಹದ ಸಲುಗೆಯಲ್ಲಿ ಶೈನ್‌ ವಾಸುಕಿಯನ್ನು ನೋಡಿದ ತಕ್ಷಣವೇ 'ನೋಡೋ ಏನೋ ನಡಿತಾಯಿದೆ' ಎಂದು ಗೇಲಿ ಮಾಡುತ್ತಾರೆ. ಈ ಮಾತುಗಳನ್ನು ಕೇಳಿಸಿಕೊಂಡ ವಾಸುಕಿ ಚಟುವಟಿಕೆಗಳ ಬಗ್ಗೆ ಸ್ವಲ್ಪ ಬೇಸರ ಮಾಡಿಕೊಳ್ಳುತ್ತಾರೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಕಿಚ್ಚ 'ಶೈನ್‌ ಶೆಟ್ಟಿ ಈ ಹಾಡು ಬಂದು ಸುಮಾರು 16 ವರ್ಷವಾಗಿದೆ. ಈಗ ಭೂಮಿಗೆ 21 ವರ್ಷ. ಇದು ಅವರಿಗಾಗಿಯೇ ಎಂದ ಕೂಡಲೇ ಏನೇನೋ ತಿಳಿದುಕೊಳ್ಳಬೇಡಿ. ನೀವು ಮಾಡಿರುವ ತಮಾಷೆಗಳನ್ನು ನಾವು ತಮಾಷೆಯಾಗಿಯೇ ತೆಗೆದುಕೊಳ್ಳುತೇವೆ. ಆದ್ದರಿಂದ ನೀವು ಓವರ್ ಆಗಿ ಯೋಚನೆ ಮಾಡಬೇಡಿ' ಎಂದು ಟಾಂಗ್ ಕೊಡುತ್ತಾರೆ.

BB7: ಸ್ಕ್ರಿಪ್ಟೆಡ್? ಮನೆಯೊಳಗಿನ ಗುಟ್ಟು ರವಿ ಬೆಳಗೆರೆ ಬಾಯಲ್ಲಿ ರಟ್ಟು!