Asianet Suvarna News Asianet Suvarna News

BB7:ಮಧ್ಯರಾತ್ರಿ ಮನೆಯಿಂದ ಹೊರಟು ಇದ್ದದ್ದನ್ನೆಲ್ಲಾ ಮಾರಿಕೊಂಡ 'ದುನಿಯಾ' ನಟಿ!

 

'ದುನಿಯಾ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ರಶ್ಮಿ ಜೀವನದಲ್ಲಿ ಎದುರಿಸಿದ ತೊಂದರೆ ಒಂದಾ? ಎರಡಾ? ಯಾರೊಂದಿಗೂ ಹೇಳಿಕೊಳ್ಳದ ಸತ್ಯವನ್ನು ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳೊಂದಿಗೆ ಹಂಚಿಕೊಂಡಿದ್ದಾರೆ.

Colors Kannada Dhunya Rashmi breakdown for family struggle
Author
Bangalore, First Published Oct 19, 2019, 4:06 PM IST

 

ಇದೇನಪ್ಪಾ ದುನಿಯಾ ರಶ್ಮಿ ಇಷ್ಟೊಂದು ಸಣ್ಣ ಆಗಿದ್ದಾರೆ? ಸಿನಿಮಾದಲ್ಲಂತೂ ಕಾಣಿಸಿಕೊಂಡಿಲ್ಲ. ಆದರೆ ನಿಜ ಜೀವನದಲ್ಲಿ ಏನಾದ್ರೂ ಆಯ್ತಾ? ರಶ್ಮಿ ಫ್ಯಾಮಿಲಿಯಲ್ಲಿ ಆದ ಪ್ರಾಬ್ಲಂನಿಂದ ಯೋಚಿಸಿ ಯೋಚಿಸಿ ಸೊರಗಿ ಹೋಗಿದ್ದಾರಾ? ಎಮಬ ಅನುಮಾನ ಮೂಡಿದೆ.

 

ತಮ್ಮ ಜೀವನದಲ್ಲಿ ಬೆನ್ನೆಲುವಾಗಿ ನಿಂತ ಪೋಷಕರಿಗೆ ಥ್ಯಾಂಕ್ಸ್ ಹೇಳುವ ಟಾಸ್ಕ್‌ನಲ್ಲಿ ದುನಿಯಾ ರಶ್ಮಿ ತಾಯಿ ಜೊತೆ ಎದುರಿಸಬೇಕಾದ ಕಷ್ಟಗಳನ್ನು ನೆನೆದು ಕಣ್ಣೀರಿಟ್ಟಿದ್ದಾರೆ.

ಬಿಗ್ ಬಾಸ್‌ ಮನೆಯಲ್ಲಿ ಮಸಾಜ್; ಇದು ಬಾತ್ರೂಂ ಬಾಯ್ಸ್ ಕೈವಾಡ!

 

ರಶ್ಮಿ ಅವರದು ಸಣ್ಣ ಕುಟುಂಬ. ತಂದೆ, ತಾಯಿ, ಅಣ್ಣ ಹಾಗೂ ತಮ್ಮ ಇರುವ ಪುಟಾಣಿ ಸಂಸಾರ. ರಾಜಕೀಯದ ಗಂಧ ಗಾಳಿಯೇ ಗೊತ್ತಿಲ್ಲದ ರಶ್ಮಿ ತಾಯಿಗೆ ಗಂಡನೇ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯಿಸುತ್ತಾರೆ. ಅವರ ಮಾತಿನಂತ ನಿಂತು ಗೆಲುವು ಸಾಧಿಸುತ್ತಾರೆ. ಗೆದ್ದ ನಂತರ ಕೆಲಸ ಹೆಚ್ಚಾಗಿ ಓಡಾಟ ಜಾಸ್ತಿಯಾದ ಕಾರಣ ಸಣ್ಣದಾಗಿ ಅನುಮಾನ ಶುರುವಾಗುತ್ತದೆ. ಅಲ್ಲಿಂದ ಕುಟುಂಬದಲ್ಲಿ ಬಿರುಕು ಕಾಣಿಸಿಕೊಂಡಿತು.

BB7: ಸಿನಿಮಾ ಇಲ್ಲದೇ ಕ್ಯಾಂಟೀನ್ ತೆರೆದ ಶಂಕರ್ ನಾಗ್, ಸತ್ಯಕಥೆ ಬಿಚ್ಚಿಟ್ಟ ಜೈ ಜಗದೀಶ್!

ರಶ್ಮಿ ತಾಯಿ ಆಸ್ತಮಾ ರೋಗಿ. ಯಾವಾಗಲೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಒಂದು ದಿನ ತಂದೆ, ತಾಯಿಯ ತಾಳಿ ಎಳೆದು ತೊಂದರೆ ನೀಡುತ್ತಾರೆ. ಅಂದೇ ರಶ್ಮಿ ಹಾಗೂ ಅವರ ತಾಯಿ ಏನೂ ತೆಗೆದುಕೊಳ್ಳದೇ ಉಟ್ಟ ಬಟ್ಟೆಯಲ್ಲೇ ರಾತ್ರೋರಾತ್ರಿ ಮನೆ ಬಿಟ್ಟು ಹೊರಡುತ್ತಾರೆ. ಅಲ್ಲಿಂದ ಬಂದದ್ದು ಬೆಂಗಳೂರಿಗೆ. ತಮ್ಮ ಬಳಿ ಇದ್ದ ಒಡವೆಗಳನ್ನು ಮಾರಿ ಜೀವನ ನಡೆಸುತ್ತಾರೆ ಕೊನೆಗೆ ಎಷ್ಟು ಕಷ್ಟವಾಯಿತು ಎಂದರೆ ಊಟಕ್ಕೂ ಹಣ ಇಲ್ಲದಂತಾಗಿತ್ತು. ಆ ವೇಳೆ ಸಹಾಯಕ್ಕೆಂದು ಚಿಕ್ಕಮ್ಮನ ಮನೆಗೆ ತೆರಳುತ್ತಾರೆ. ಅಲ್ಲಿಂದ ಇಲ್ಲಿಯವರೆಗೂ ರಶ್ಮಿ ತನ್ನ ತಾಯಿಯನ್ನು ದೇವರಂತೆ ನೋಡಿಕೊಂಡಿದ್ದಾರೆ. ತಾಯಿಗೆ ಯಾವ ಕೊರತೆಯೂ ಬಾರದಂತೆ ಉಸಿರಿರೋವರೆಗೂ ನೋಡಿಕೊಳ್ಳುವೆ ಎಂದು ಹೇಳಿಕೊಂಡಿದ್ದಾರೆ.

ಲವ್,ಡ್ರಾಮಾ ಮಾಡೋವ್ರನ್ನ ಮಾತ್ರ ಫೋಕಸ್ ಮಾಡ್ತಿದ್ಯಾ ಬಿಗ್ ಬಾಸ್?

'ಹಾಯ್ ಬೆಂಗಳೂರು' ಮುಖ್ಯ ಸಂಪಾದಕ ರವಿ ಬೆಳಗೆರೆ ಈ ಹಿಂದೆ ತಮ್ಮ ಪತ್ರಿಕೆಯಲ್ಲಿ ರಶ್ಮಿ ಕುಟುಂಬದ ಬಗ್ಗೆ ನೆಗೆಟಿವ್ ಆಗಿ ಬರೆದಾಗ ರಶ್ಮಿಗೆ ತುಂಬಾ ನೋವುಂಟಾಗಿತ್ತು. ಆದರೆ ಈಗ ಅವರೊಂದಿಗೆ ಬಿಗ್ ಬಾಸ್ ಮನೆಯಲ್ಲಿ ಇರುವುದಕ್ಕೆ ಹಾಗೂ ಅವರಿಗಿರುವ ಜ್ಞಾನದ ಬಗ್ಗೆ ಫುಲ್ ಫಿದಾ ಆಗಿದ್ದಾರೆ. ಕಾಲ ಬದಲಾಗುತ್ತಿದ್ದಂತೆ ಎಲ್ಲವೂ ಬದಲಾಗುತ್ತದೆ ಎನ್ನುವುದಕ್ಕೆ ಇದೇ ಉದಾಹರಣೆ ಅಲ್ಲವೇ?

Follow Us:
Download App:
  • android
  • ios