ಬಿಗ್‌ ಬಾಸ್‌ ಮನೆಗೆ ಹೋದ್ಮೇಲೆ ಬೇಡ ಅಂದ್ರೂ ಗೇಮ್‌ ಸ್ಟ್ರಾಟಜಿ ಶುರುವಾಗುತ್ತೆ, ಆದರೆ ಎಲಿಮಿನೇಟ್ ಆದ್ರೇನೆ ಗೇಮ್‌ ಪ್ಲಾನ್ ಹೊರ ಬರುವುದು ಎಂಬುವುದು ಕಿಚ್ಚ ವಾರದ ಕಥೆಯಲ್ಲಿ ಮಾತನಾಡಿದ್ದಾಗಲೇ ಗೊತ್ತಾಗಿದ್ದು, ಏನ್ ಹೇಳ್ತಿದ್ದೀವಿ ಅಂತಾನಾ? ಇಲ್ಲಿದೆ ನೋಡಿ..

ಬಿಗ್ ಬಾಸ್ ಸೀಸನ್‌-7ನ್ನು ವಿಭಿನ್ನವಾಗಿ ಮಾಡಬೇಕೆಂದು ಸೆಲೆಬ್ರಿಟಿಗಳನ್ನು ಕರೆದುಕೊಂಡು ಬಂದು ಒಂದು ಮನೆಯಲ್ಲಿ ಕೂರಿಸಿದಂಗಿತ್ತು.ಕೆಲವರು ಕಿರುತೆರೆಯಲ್ಲಿ ಹೆಸರು ಮಾಡಿದವರು ಇನ್ನು ಕೆಲವರು ಬೆಳ್ಳೆ ತೆರೆಯಲ್ಲಿ ನಟಿಸಿದವರು. ಕೆಲವರು ಹಾಡು ಹೇಳುತ್ತಾ ಹೆಸರು ಮಾಡಿದವರು. ಯಾರೂ ಎಷ್ಟು ದೊಡ್ಡ ಸೆಲೆಬ್ರಿಟಿ ಆದ್ರೂ ಅಲ್ಲಿ ಹೋದ್ಮೇಲೆ ಅವರ ನಿಜ ಗುಣಗಳ ಹೊರ ಬರುತ್ತದೆ.

'ನನ್ನ ಕಂಡರೆ ನಿಮಗೆ ಏನನಿಸುತ್ತೆ?BB ಮನೆಯಲ್ಲಿ ಶುರುವಾಯ್ತು ಲವ್ ಸ್ಟೋರಿ! .

ಈ ಸೀಸನ್‌ ಶುರುವಾಗಿ ಮೂರು ವಾರಗಳೇ ಆಗಿದೆ, ಇದುವರೆಗೂ ಬಿಗ್ ಬಾಸ್‌ ಮನೆಯಲ್ಲಿ ದೊಡ್ಡ ಮಟ್ಟಕ್ಕೆ ಸೌಂಡ್ ಮಾಡಿದ ಸ್ಪರ್ಧಿಗಳೆಂದರೆ ಪತ್ರಕರ್ತ ರವಿ ಬೆಳಗೆರೆ ಹಾಗೂ ನಟಿ ಚೈತ್ರಾ ಕೋಟೂರ್.

ಒಂದು ವಾರ ಬಿಗ್‌ ಬಾಸ್‌ ಮನೆಯಲ್ಲಿ ಗೆಸ್ಟ್ ಆಗಿದ್ದ ರವಿ ಬೆಳಗೆರೆ ಜನರಿಗೆ ಗೊತ್ತಿರದ ಕೆಲವೊಂದು ವಿಚಾರಗಳನ್ನು ಹಂಚಿಕೊಂಡರು, ಅವರು ಮನೆಯಲ್ಲಿ ಇದ್ದಷ್ಟು ದಿನ ಯಾವ ಜಗಳ ತಕರಾರು ಆಗಿರಲಿಲ್ಲ. ಅವರು ಹೊರ ಬಂದಿದ್ದೇ ತಡ ಸಣ್ಣ ಪುಟ್ಟ ವಿಚಾರಕ್ಕೂ ಜಗಳ ಶುರುವಾಯಿತು. ಇನ್ನು ಮೊದಲನೇ ವಾರದಲ್ಲೇ ಪ್ರೀತಿ ಪ್ರೇಮ ವಿಚಾರದಲ್ಲಿ ಸೌಂಡ್ ಮಾಡಿದವರು ಚೈತ್ರಾ ಕೋಟೂರ್.

ಚೈತ್ರಾ ಲಕ್ ಬದಲಾಯಿಸ್ತು ಆ್ಯಪಲ್; BB7 ಮನೆಯಲ್ಲಿ ಎಲ್ಲವೂ ತಲೆಕೆಳಗಾಯ್ತು!

ಕಿರುತೆರೆ ನಟ ಶೈನ್ ಶೆಟ್ಟಿ ಜೊತೆ ಲವ್ ಆಂಗಲ್ ಕೊಟ್ಟು ಮಾತನಾಡುತ್ತಾ ಒಂದು ವಾರ ಕಳೆದರೆ ಎರಡನೇ ವಾರ ಆಪಲ್ ಗಲಾಟೆ ಮಾಡಿಕೊಂಡು ಸೌಂಡ್ ಮಾಡಿದರು. ಆದರೆ ಕಾಕತಾಳಿಯ ಏನೆಂದರೆ ಈ ಎರಡು ವಾರಗಳು ಚೈತ್ರಾ ನಾಮಿನೇಟ್ ಆಗಿದ್ದರು. ಮೂರನೆ ವಾರ ನಾಮಿನೇಷನ್‌ನಿಂದ ದೂರ ಉಳಿದ ಚೈತ್ರಾ ಯಾವ ಕ್ಯಾಮೆರಾಗೂ ಕಾಣಿಸಿಕೊಳ್ಳದೆ ಸೈಲೆಂಟ್‌ ಆಗಿ ಉಳಿದರು......

ಇದನ್ನು ಗಮನಿಸಿದ ಕಿಚ್ಚ ಸುದೀಪ್ ವಾರದ ಕಥೆ ಕಿಚ್ಚನ ಜೊತೆಯಲ್ಲಿ ಚೈತ್ರಾಗೆ ಪ್ರಶ್ನಿಸುತ್ತಾರೆ, ' ಕಳೆದ ವಾರ ಒಳ್ಳೆ ಎನರ್ಜಿ ಇತ್ತು ಆದರೆ ಈ ವಾರ ತುಂಬಾ ಸೈಲೆಂಟ್ ಆದ್ರೀ. ಮುಂಚೆ ಇದ್ದ ಚೈತ್ರಾ ಈ ವಾರ ಇರಲಿಲ್ಲ, ನೀವು ಅಕ್ಟಿವ್ ಆಗಿರಬೇಕು ಅಂದ್ರೆ ನಾಮಿನೇಟ್‌ ಆಗಿರಬೇಕಾ? ' ಇದಕ್ಕೆ ಚೈತ್ರಾ ಕೊಟ್ಟ ಉತ್ತರವೇನು ಗೊತ್ತಾ?

ಬಿಗ್ ಬಾಸ್ ಮನೆಯಿಂದ ಚೈತ್ರಾ ಕೊಟ್ಟೂರು ಔಟ್? ಶೈನ್ ಶೆಟ್ಟಿ ಒಂಟಿಯಾದ್ರಾ?

'ಎರಡು ವಾರಗಳು ಯಾವುದೋ ವಿಚಾರಕ್ಕೆ ನಾಮಿನೇಟ್ ಆದೆ, ಆಗ ನನಗೆ ಆಸೆ ಹುಟ್ಟಿತು. ಒಂದು ವಾರ ಆದ್ರೂ ನಾಮಿನೇಟ್ ಆಗದೆ ಮನೆಯಲ್ಲಿ ಇರಬೇಕು ಎಂದು. ಆ ಆಸೆ ಈಗ ನನಸಾಗಿದೆ. ಈ ವಾರ ನನ್ನ ನಾನು ತೊಡಗಿಸಿಕೊಳ್ಳುವುದಕ್ಕಿಂತ ಎಲ್ಲರನ್ನೂ ಹೆಚ್ಚಾಗಿ ಗಮನಿಸುತ್ತಿದ್ದೆ' ಎಂದು ಉತ್ತರಿಸಿದರು.

ನವೆಂಬರ್ 3ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: